ಮಹಿಳಾ ಆಸ್ತಿಯ ಹಕ್ಕು. ಪ್ರತಿಯೊಬ್ಬ ಹೆಣ್ಣು ಇದನ್ನು ತಿಳಿದುಕೊಳ್ಳಬೇಕು ತವರು ಮನೆ & ಗಂಡನ ಮನೆಯಲ್ಲಿ ಮಹಿಳೆಯರಿಗೆ ಇರುವ ಆಸ್ತಿಯ ಹಕ್ಕು.

ಸಾಮಾನ್ಯವಾಗಿ ನಿಮಗೆಲ್ಲರಿಗೂ ತಿಳಿದಿರುವಂತೆ 2005ರಲ್ಲಿ ಕೋರ್ಟ್ ಒಂದು ಆದೇಶವನ್ನು ಹೊರಡಿಸುತ್ತದೆ ಅದೇನೆಂದರೆ ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಕೂಡ ಸಮನಾದ ಪಾಲು ಬರಬೇಕು ಎಂದು. ಅದೇ ರೀತಿಯಾಗಿ ಕೆಲವೊಂದು ಕಡೆ ಈ ಒಂದು ವಿಷಯವಾಗಿ ಹೆಣ್ಣು ಮಕ್ಕಳು ಯಾವುದೇ ರೀತಿಯಾದಂತಹ ತಂದೆಯ ಆಸ್ತಿಯ ವಿಷಯದಲ್ಲಿ ಯಾವುದನ್ನು ಕೂಡ ಪಡೆದುಕೊಳ್ಳಲು ಇಷ್ಟ ಪಡುವುದಿಲ್ಲ.

WhatsApp Group Join Now
Telegram Group Join Now

 

ಬದಲಿಗೆ ಅವರ ತಂದೆಯ ಆಸ್ತಿಯನ್ನು ಅವರಿಗೆ ಹಾಗೂ ಅವರ ಅಣ್ಣ ತಮ್ಮಂದಿರಿಗೆ ಇರಲಿ ಎಂದು ಹೇಳುವುದರ ಮೂಲಕ ಅವರು ಬಾಯಿ ಮಾತಿನಲ್ಲಿ ಹೇಳಿದರೆ ಅದು ಸಾಧ್ಯವಾಗುವುದಿಲ್ಲ ಏಕೆಂದರೆ ಇತ್ತೀಚಿನ ದಿನಗಳಲ್ಲಿ ಎಷ್ಟೇ ಮಾತುಗಳನ್ನು ಹೇಳಿ ಒಪ್ಪಿಗೆಯನ್ನು ಕೊಟ್ಟಿದ್ದರು ಕೂಡ, ನಂತರ ಈ ವಿಷಯವಾಗಿ ಮತ್ತೆ ಬಂದು ನನಗೆ ಆಸ್ತಿ ಬೇಕು ಎಂದು ಹೇಳುವ ಸನ್ನಿವೇಶಗಳು ಬರುತ್ತಿದೆ.

ಆದ್ದರಿಂದ ಮನೆಯಲ್ಲಿರುವ ಹೆಣ್ಣು ಮಕ್ಕಳು ತಂದೆಯ ಆಸ್ತಿಯಲ್ಲಿ ಯಾವುದೇ ರೀತಿಯ ಪಾಲು ಬೇಡ ಎಂದು ಹೇಳಿದರೆ ಅವಳಿಂದ ಹಕ್ಕು ಬಿಡುಗಡೆ ಪತ್ರವನ್ನು ಮಾಡಿಸಿಕೊಂಡು ಅವಳ ಬಳಿ ಇನ್ನು ಮುಂದೆ ನನಗು ನನ್ನ ತಂದೆಯ ಆಸ್ತಿಗೂ ಯಾವುದೇ ರೀತಿಯ ಹಕ್ಕು ಇಲ್ಲ ಎಂದು ಒಂದು ಪತ್ರ ಮಾಡಿಸಿ ಅದಕ್ಕೆ ರಿಜಿಸ್ಟರ್ ಮಾಡಿಸಿಕೊಳ್ಳುವುದು ಬಹಳ ಉತ್ತಮ. ಇಲ್ಲವಾದಲ್ಲಿ ಇದರಿಂದ ಮುಂದಿನ ದಿನದಲ್ಲಿ ಹಲವಾರು ಸಮಸ್ಯೆಗೆ ಕಾರಣವಾಗಬಹುದು.

ಆದ್ದರಿಂದ ಈ ರೀತಿಯ ವಿಧಾನ ಅನುಸರಿಸುವುದು ಬಹಳ ಉತ್ತಮ ಅದರಲ್ಲೂ ಕೆಲವು ಹೆಣ್ಣು ಮಕ್ಕಳು ತಂದೆಯ ಆಸ್ತಿಯಲ್ಲಿ ಎಲ್ಲಾ ಆಸ್ತಿಯೂ ನನಗೆ ಸಮನಾದ ಪಾಲು ಬರಬೇಕು ಎಂದು ಹೇಳುತ್ತಿರು ತ್ತಾರೆ ಆದರೆ ಅದು ತಪ್ಪು, ಬದಲಿಗೆ ಅವರ ತಂದೆ ಸ್ವಂತವಾಗಿ ಸ್ವಯಾರ್ಜಿತವಾಗಿ ತಾನು ಹಣವನ್ನು ಸಂಪಾದನೆ ಮಾಡಿ ಆಸ್ತಿಯನ್ನು ಖರೀದಿ ಮಾಡಿದರೆ ಆ ಆಸ್ತಿ ಹೆಣ್ಣುಮಗಳಿಗೆ ಯಾವುದೇ ಕಾರಣಕ್ಕೂ ಹೋಗುವುದಿಲ್ಲ.

ಬದಲಿಗೆ ಈ ಆಸ್ತಿಯನ್ನು ಅವರು ಯಾರಿಗೆ ಬೇಕಾದರೂ ಕೊಡಬಹುದು ಹಾಗೂ ಕೊಡದೆ ತಮ್ಮ ಹೆಸರಿನಲ್ಲಿಯೇ ಇಟ್ಟುಕೊಳ್ಳಬಹುದು ಆದರೆ ಇದರ ಬಗ್ಗೆ ಯಾವುದೇ ರೀತಿಯ ಆಸ್ತಿ ನಮಗೂ ಬರಬೇಕು ಎಂದು ಕೇಳುವ ಹಕ್ಕು ಹೆಣ್ಣು ಮಕ್ಕಳಿಗಾಗಲಿ ಹಾಗೂ ಗಂಡು ಮಕ್ಕಳಿಗಾಗಲಿ ಇರುವುದಿಲ್ಲ ಅದು ಕೇವಲ ಅವನಿಗೆ ಹಾಗೂ ಅವನ ಹೆಂಡತಿಗೆ ಮಾತ್ರ ಮೀಸಲಿರುತ್ತದೆ.

ಹಾಗೇನಾದರೂ ಕಾಲ ನಂತರ ಅವನು ತೀರಿ ಹೋದರೆ ಆಸ್ತಿ ತನ್ನ ಹೆಂಡತಿಗೆ ಬರುತ್ತದೆ ಹೊರತು ಮಕ್ಕಳಿಗೆ ಬರುವುದಿಲ್ಲ ಹಾಗೇನಾದರೂ ಮಕ್ಕಳಿಗೆ ಕೊಡಬೇಕಾದರೆ ತಾಯಿ ಒಪ್ಪಿಗೆಯನ್ನು ಕೊಟ್ಟು ಅವಳು ಕೊಟ್ಟರೆ ಮಾತ್ರ ಅವರಿಗೆ ಹೋಗುತ್ತದೆ. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ಹೆಣ್ಣು ಮಕ್ಕಳಿಗೆ ಆಸ್ತಿಯ ಹಕ್ಕಿನಲ್ಲಿ 2005ರ ನಂತರ ಎಲ್ಲಾ ಪಿತ್ರಾರ್ಜಿತ ಆಸ್ತಿ ಹಾಗೂ ಸ್ವಯಾರ್ಜಿತ ಆಸ್ತಿ ಎಲ್ಲದರಲ್ಲಿಯೂ ಕೂಡ ಹಕ್ಕು ಇದೆ ಎಂಬ ಆದೇಶವನ್ನು ಹೊರಡಿಸಿದ.

ನಂತರ ಹೆಣ್ಣು ಮಕ್ಕಳು ತಮ್ಮ ತಂದೆಯಲ್ಲಿರುವ ಎಲ್ಲಾ ಆಸ್ತಿಗಳಲ್ಲಿಯೂ ಕೂಡ ಸಮನಾದ ಆಸ್ತಿಯನ್ನು ಹೊಂದಬಹುದು ಜೊತೆಗೆ ಈ ವಿಷಯವಾಗಿ ನಿಮಗೆ ನಿಮ್ಮ ಅಣ್ಣ ಅಥವಾ ತಮ್ಮ ಏನಾದರೂ ಆಸ್ತಿಯನ್ನು ಕೊಡುವುದಿಲ್ಲ ಎಂದು ಹೇಳುತ್ತಿದ್ದಾರೆ ಹಾಗೂ ಆ ಸಮಯದಲ್ಲಿ ನಿಮ್ಮ ತಂದೆ ಏನಾದರೂ ತೀರಿಹೋಗಿದ್ದರೆ ಆ ಸಮಯದಲ್ಲಿ ನೀವು ಕೋರ್ಟ್ ಮೂಲಕ ಅರ್ಜಿಯನ್ನು ಹಾಕಿ ಅವರ ಮೇಲೆ ಕೇಸ್ ಹಾಕುವುದರ ಮೂಲಕ ನಿಮ್ಮ ಆಸ್ತಿಯನ್ನು ನೀವು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now