ರಾಕಿಂಗ್ ಸ್ಟಾರ್ ಯಶ್ ಅವರು ಈಗ ಕನ್ನಡದ ಸ್ಟಾರ್ ಆಗಿ ಮಾತ್ರ ಉಳಿದಿಲ್ಲ. ಕೆಜಿಎಫ್ ಸರಣಿಗಳ ಮೂಲಕ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಇಡೀ ದೇಶದಾದ್ಯಂತ ಗುರುತಿಸಿಕೊಂಡಿದ್ದಾರೆ. ರಾಖಿ ಬಾಯ್ ಹವಾ ದೇಶದ ಗಡಿ ದಾಟಿ ಪರದೇಶಗಳಲ್ಲೂ ಆವರಿಸಿದೆ. ಈಗ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಸಿನಿಮಾ ಮಾಡಲು ಹಾಲಿವುಡ್ ಅವರು ಕೂಡ ಆಸಕ್ತಿ ತೋರುತ್ತಿದ್ದಾರೆ. ಇತ್ತೀಚೆಗೆ ಅವರದೇ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡ ಫೋಟೋಗಳು ರಾಕಿಂಗ್ ಸ್ಟಾರ್ ಯಶ್ ಅವರು ಹಾಲಿವುಡ್ ಸಿನಿಮಾಗಳು ನಟಿಸಲು ತಾಲೀಮು ನಡೆಸುತ್ತಿದ್ದಾರ ಎನ್ನುವುದರ ಸುಳಿವು ಕೊಡುತ್ತದೆ. ಅಲ್ಲದೆ ಹಾಲಿವುಡ್ ನಿರ್ದೇಶಕರೊಂದಿಗೆ ಅವರು ತೆಗೆಸಿಕೊಂಡ ಫೋಟೋಗಳು ಕೂಡ ಅವರ ಸೋಶಿಯಲ್ ಮೀಡಿಯಾ ಖಾತೆಯಿಂದ ಶೇರ್ ಆಗಿರುವುದು ಇದಕ್ಕೆ ಪುಷ್ಠಿಯನ್ನು ನೀಡುತ್ತಿದ್ದೆ. ಇದೇ ರೀತಿ ಮತ್ತೋರ್ವ ನಟ ಕೂಡ ಭಾರತದ ಖ್ಯಾತಿಯನ್ನು ಇದೇ ಮಟ್ಟಕ್ಕೆ ಹೆಚ್ಚಿಸುವ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ.
ಆದರೆ ಇವರು ಭಾರತದ ಮಹನೀಯ ಜೀವನಗಾಥೆಯನ್ನು ತೆರೆ ಮೇಲೆ ಅದ್ಭುತವಾಗಿ ತಂದು ಆ ಸತ್ಯ ಕಥೆಗಳನ್ನು ಜನರ ಮನದಲ್ಲಿ ಶಾಶ್ವತವಾಗಿ ಉಳಿಸುವ ಕೆಲಸ ಮಾಡುತಿದ್ದಾರೆ. ಈ ನಿಟ್ಟಿನಲ್ಲಿ ನಟ ಸೂರ್ಯ ಅವರ ನಟಿಸಿರುವ ಸುರರೈಪಟ್ಟು ಮತ್ತು ಜೈ ಭೀಮ್ ಅಂತಹ ಸಿನಿಮಾಗಳನ್ನು ನೆನೆಸಿಕೊಳ್ಳಬಹುದು. ಇಂಥಹ ಸಿನಿಮಾಗಳ ಪಾತ್ರವಾಗಿ ಕಾಣಿಸಿಕೊಳ್ಳುತ್ತಿರುವ ಸೂರ್ಯ ಅವರಿಗೆ ಈಗ ದೇಶದಾದ್ಯಂತ ಅಭಿಮಾನಿಗಳು ಸೃಷ್ಟಿಯಾಗಿದ್ದಾರೆ. ಜನ ಇಂದು ಸೂರ್ಯ ಅವರನ್ನು ನೋಡುತ್ತಿರುವ ದೃಷ್ಟಿಯೇ ಬದಲಾಗಿದೆ. ಈ ಇಬ್ಬರೂ ನಟರೂ ಕೂಡ ದೇಶದ ಹೆಸರು ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ಇಬ್ಬರ ನಡುವೆ ಸಾಕಷ್ಟು ಸಾಮ್ಯತೆಗಳು ಕೂಡ ಇದೆ. ಸಿನಿಮಾ ರಂಗವನ್ನು ಹೊರತುಪಡಿಸಿ ಇವರಿಬ್ಬರು ಸಾಮಾಜಿಕ ಕಾರ್ಯಗಳಲ್ಲೂ ಕೂಡ ಅಷ್ಟೇ ಮಟ್ಟಿಗೆ ತೊಡಗಿಕೊಂಡಿದ್ದಾರೆ. ನಟ ಸೂರ್ಯ ಅವರು ತಮಿಳುನಾಡಲ್ಲಿ ಸಾಕಷ್ಟು ಜನ ಸೇವೆ ಮಾಡುತ್ತಿದ್ದರೆ ಕರ್ನಾಟಕದ ರೈತರಿಗೆ ನೆರವಾಗುವ ಕೆಲಸಗಳಲ್ಲಿ ರಾಧಿಕಾ ದಂಪತಿ ತೊಡಗಿಕೊಂಡಿದ್ದಾರೆ.
ಇವರಿಬ್ಬರು ಚಿತ್ರರಂಗದವರನ್ನೇ ಜೊತೆಗಾರನನ್ನಾಗಿ ಆಯ್ದುಕೊಂಡಿದ್ದಾರೆ ನಟ ಸೂರ್ಯ ಅವರು ತಮ್ಮ ಜೊತೆ ನಟಿಸಿ ಹಲವು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದ ಜ್ಯೋತಿಕಾ ಅವರನ್ನು ಸಂಗಾತಿಯಾಗಿ ಆಯ್ಕೆ ಮಾಡಿಕೊಂಡು ಇಬ್ಬರು ಮಕ್ಕಳೊಂದಿಗೆ ಸಂತೋಷವಾಗಿ ಜೀವನ ನಡೆಸುತ್ತಿದ್ದಾರೆ. ನಟಿ ಜ್ಯೋತಿಕಾ ಅವರ ತಮ್ಮ ಕೆರಿಯ ಜೊತೆ ಗಂಡನ ಸಕಲ ಏಳಿಗೆಗಾಗಿ ಜೊತೆ ನಿಂತು ಶ್ರಮಿಸುತ್ತಿದ್ದಾರೆ. ಸದ್ಯಕ್ಕೆ ಇವರು ತಮಿಳಿನ ಮಾಡಲ್ ಕಪಲ್ ಗಳಾಗಿದ್ದಾರೆ ಎಂದರೆ ತಪ್ಪಲ್ಲ. ಇತ್ತ ಕರ್ನಾಟಕದಲ್ಲಿ ಕೂಡ ರಾಧಿಕಾ ದಂಪತಿ ಮಾದರಿ ದಂಪತಿಗಳು ಎನಿಸಿದ್ದಾರೆ. ಇವರಿಬ್ಬರೂ ಸಹ ಕನ್ನಡ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿ ಯಶಸ್ವಿ ಜೋಡಿಗಳು ಎನಿಸಿಕೊಂಡಿದ್ದರು. ಒಂದೇ ಸಮಯದಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟ ಇವರು ಮೊದಲ ದಿನದಿಂದಲೂ ಒಬ್ಬರು ಮತ್ತೊಬ್ಬರಿಗೆ ನೆರವಾಗುತ್ತಾ ಇದೀಗ ಜೀವನಪೂರ್ತಿ ಜೊತೆಯಾಗಿರಲು ಒಂದಾಗಿದ್ದಾರೆ. ಇವರಿಬ್ಬರಿಗೂ ಮುದ್ದಾದ ಎರಡು ಮಕ್ಕಳಿದೆ ಮತ್ತು ರಾಧಿಕಾ ಪಂಡಿತ್ ಅವರು ಕೆರಿಯರ್ ಇಂದ ಕೊಂಚ ಬ್ರೇಕ್ ಪಡೆದಿತ್ತು ಮಕ್ಕಳ ಹಾರೈಕೆಯಲ್ಲಿ ಹಾಗೂ ಗಂಡನ ಕೆಲಸಗಳಲ್ಲಿ ನೆರವಾಗುತ್ತಿದ್ದಾರೆ.
ಈ ಇಬ್ಬರು ಲೆಜೆಂಡರೀ ಆಕ್ಟರ್ ಗಳು ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡರೆ ಹೇಗಿರುತ್ತದೆ ಎನ್ನುವ ಊಹಾಪೋಹ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಟ್ರಿಪಲ್ ಆರ್ ರೈಡರ್ ಸಖತ್ ಇನ್ನು ಮುಂತಾದ ಸಿನಿಮಾಗಳನ್ನು ಕೊಟ್ಟಿರುವ ಕೆವಿಎನ್ ಪ್ರೊಡಕ್ಷನ್ ನಿರ್ಮಾಪಕ ವೆಂಕಟ್ ನಾರಾಯಣ್ ಅವರ ಜೊತೆ ರಾಕಿ ಬಾಯ್ ಹಾಗೂ ಸೂರ್ಯ ಅವರ ನಿಂತಿಸಿ ತೆಗೆಸಿಕೊಂಡಿರುವ ಫೋಟೋ ಒಂದು ವೈರಲ್ ಆಗಿದ್ದು ಇದನ್ನು ನೋಡಿದ ಬಳಿಕ ಎಲ್ಲರೂ ಆ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಇದು ಅಪ್ಪು ಅವರ ಪುನೀತ ಪರ್ವ ಕಾರ್ಯಕ್ರಮದಲ್ಲಿ ಒಟ್ಟಿಗೆ ಸಿಕ್ಕಾಗ ತೆಗೆಸಿಕೊಂಡ ಫೋಟೋ ಆಗಿದೆ. ಇವರಿಬ್ಬರೂ ಅಧಿಕೃತವಾಗಿ ಸಿನಿಮಾ ಮಾಡುವ ಬಗ್ಗೆ ಯಾವುದೇ ಮಾತನ್ನು ಬಹಿರಂಗಪಡಿಸದೆ ಇದ್ದರೂ ಇಬ್ಬರನ್ನು ಒಂದೇ ಫ್ಲೆಮಿನಲ್ಲಿ ನೋಡಿದ ಬಳಿಕ ಇಂತಹ ಚರ್ಚೆಗಳು ಆರಂಭವಾಗಿದೆ.