ನಮ್ಮ ಹಿಂದೂ ಧರ್ಮದಲ್ಲಿ ಅನೇಕ ತರ್ಕಕ್ಕೆ ನಿಲುಕದ ನಂಬಿಕೆಗಳಿವೆ. ನಮ್ಮ ಹಿಂದೂ ಪದ್ಧತಿಯಲ್ಲಿ ಅನೇಕ ಆಚರಣೆಗಳು ಇವೆ. ನಾವು ಹಿಂದೂ ಧರ್ಮದಲ್ಲಿ ದೇವರನ್ನು ನಮ್ಮ ಬದುಕಿನ ಅವಿಭಾಜ್ಯ ಬಾಗವಾಗಿಸಿಕೊಂಡಿದ್ದೇವೆ. ದೇವರ ಮೇಲೆ ನಾವು ಇಟ್ಟಿರುವ ನಂಬಿಕೆ ಬೆಲೆ ಕಟ್ಟಲಾಗದ್ದು ಕಷ್ಟದಲ್ಲಿರುವ ಪ್ರತಿಯೊಬ್ಬರೂ ಕೂಡ ಭಗವಂತನನ್ನೇ ನೆನೆಯುವುದು ಮತ್ತು ಕೆಲವೊಮ್ಮೆ ಚಮತ್ಕಾರದ ರೀತಿ ಭಕ್ತಿಯಿಂದ ಬೇಡಿಕೊಂಡ ಮೇಲೆ ಕಷ್ಟಗಳು ಕರಗಿದ ಕಾರಣ ಅದನ್ನು ಇನ್ನಷ್ಟು ಜನರಿಗೆ ತಿಳಿಸಿ ಅವರಿಗೂ ಒಳಿತಾಗಲಿ ಎಂದು ಬಯಸುವುದು ಮಾಮೂಲಿ.
ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಅನೇಕ ದೇವರು ಹಾಗೂ ದೇವತೆಗಳು ಇದ್ದಾರೆ. ಅದರಲ್ಲಿ ಕೆಲವೊಂದು ದೇವರಿಗೆ ವಿಶೇಷ ಶಕ್ತಿ ಇದ್ದು ಅಂತಹ ದೇವರ ವಿಶೇಷ ಸನ್ನಿಧಾನ ಕ್ಕೆ ಭೇಟಿ ಕೊಡುವುದರಿಂದ ಕೆಲವು ಚಮತ್ಕಾರಗಳು ನಡೆಯುತ್ತವೆ ಈಗಾಗಲೇ ನಾವು ವಿಜ್ಞಾನಕ್ಕೂ ಸವಾಲೊಡ್ಡುವಂತಹ ಈ ರೀತಿಯ ಅನೇಕ ಉದಾಹರಣೆಗಳ ಬಗ್ಗೆ ಕೇಳಿದ್ದೇವೆ. ಈಗ ನಮ್ಮ ಕರ್ನಾಟಕದಲ್ಲಿ ಅಂತಹ ಸುಪ್ರಸಿದ್ದವಾದ ತಾಣ ಒಂದಿದೆ. ಬೆಂಗಳೂರಿನ ಬಳಿ ಇರುವ ಈ ಲಕ್ಷ್ಮಿ ನರಸಿಂಹನ ದೇವಸ್ಥಾನಕ್ಕೆ ಭೇಟಿ ಕೊಡುವುದರಿಂದ ಮಕ್ಕಳಾಗದ ದಂಪತಿಗಳಿಗೆ ಮಕ್ಕಳಾಗುತ್ತದೆ.
ಇದು ಹೇಗೆ ಸಾಧ್ಯ ಎನ್ನುವ ವಿಷಯ ಇನ್ನೂ ರಹಸ್ಯವಾಗಿದ್ದು ಆದರೆ ಇಂತಹ ಒಂದು ಚಮತ್ಕಾರ ನಿಜ ಎನ್ನುವುದರ ಬಗ್ಗೆ ಯಾವುದೇ ಅನುಮಾನವಿಲ್ಲ. ಈ ಕಾರಣದಿಂದಲೇ ಪ್ರತಿನಿತ್ಯ ನೂರಾರು ಹಾಗೂ ವಿಶೇಷ ದಿನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಇಲ್ಲಿಗೆ ಹೋಗುತ್ತಾರೆ. ಮಕ್ಕಳಾಗದ ದಂಪತಿಗಳ ಪಾಲಿಗೆ ಉಗ್ರ ನರಸಿಂಹನು ಆಸರೆಯಾಗಿದ್ದು ಭೇಟಿ ಕೊಟ್ಟು ಭಕ್ತಿಯಿಂದ ಬೇಡಿಕೊಂಡವರಿಗೆ ಮಕ್ಕಳ ರೂಪದಲ್ಲಿ ಖಂಡಿತವಾಗಿಯೂ ಪ್ರಸಾದ ದೊರೆಯುತ್ತದೆ ಎನ್ನುವ ನಂಬಿಕೆ ಇಲ್ಲಿನ ಸ್ಥಳೀಯರಲ್ಲಿ ಅಗಾಧವಾಗಿದೆ.
ಬೆಂಗಳೂರಿಂದ ತುಮಕೂರಿಗೆ ಹೋಗುವ ರಸ್ತೆಯಲ್ಲಿ ಟೋಲ್ ಗೇಟ್ ಬಳಿ ಕೆಳಗೆ ಬಲ ತಿರುಗು ಪಡೆದು ಉಡಿಗೆರೆ ಮಾರ್ಗವಾಗಿ ಚಲಿಸಿದಾಗ ಸಿಗೋ ಬೆಟ್ಟವನ್ನು ಎಡ ದಾರಿಯಲ್ಲಿ ಕ್ರಮಿಸಿದರೆ ಈ ದೇವಾಲಯ ಸಿಗುತ್ತದೆ. ದೇವದುರ್ಗದ ಲಕ್ಷ್ಮಿನರಸಿಂಹ ಸ್ವಾಮಿ ಎಂದೆ ದೇವಾಲಯ ಪ್ರಸಿದ್ಧಿ ಹೊಂದಿದೆ. ಬೆಂಗಳೂರಿನಿಂದ ದೇವರಾಯ ದುರ್ಗಕ್ಕೆ 80 ಕಿಲೋಮೀಟರ್ ದೂರ ಆಗುತ್ತದೆ ಬೆಟ್ಟದ ಮೇಲೆ ಈ ದೇವಾಲಯ ಇದ್ದು ಗುಡ್ಡದ ಮೇಲಿರುವ ಈ ಕಲ್ಲಿನ ಮಂಟಪ ನೋಡುವುದಕ್ಕೆ ಎರಡು ಕಣ್ಣು ಸಾಲದು.
ಪುರಾತನ ದೇವಾಲಯವಾಗಿರುವ ಈ ದೇವಾಲಯ ಅನೇಕ ಕಾರಣಗಳಿಂದ ಪ್ರೇಕ್ಷಕರ ಮೆಚ್ಚಿನ ಪ್ರವಾಸಿ ತಾಣ ಎನಿಸಿಕೊಂಡಿದೆ. ಬೆಟ್ಟ ದಿಂದ ಇಳಿದು ಸ್ವಲ್ಪ ಚಲಿಸಿದರೆ ನಾಮದ ಚಿಲುಮೆ ಕೂಡ ಸಿಗುತ್ತದೆ. ಇಲ್ಲಿ ನಡೆಯುವ ಪವಾಡದಿಂದ ಅನೇಕರ ಕಷ್ಟ ದೂರವಾಗಿದೆ. ಮದುವೆ ಉದ್ಯೋಗ ವಿದ್ಯಾಭ್ಯಾಸ ಆರೋಗ್ಯ ಮುಂತಾದ ಯಾವುದೇ ಸಮಸ್ಯೆ ಇದ್ದರೂ ಭಕ್ತಿಯಿಂದ ಬಂದು ಇಲ್ಲಿ ಭಕ್ತಾದಿಗಳು ಬೇಡಿಕೊಳ್ಳುತ್ತಾರೆ.
ಹಾಗೂ ಯಾವುದೇ ಹಣಕಾಸಿನ ಉದ್ಯಮ ವ್ಯವಹಾರ ಶುರು ಮಾಡುವ ಮುನ್ನ ದೇವಾಲಯದಲ್ಲಿ ಬಂದು ಪೂಜೆ ಸಲ್ಲಿಸಿ ಆರಂಭಿಸಿದರೆ ಅದು ಶುಭ ಎನ್ನುವ ನಂಬಿಕೆಯೂ ಕೂಡ ಇದೆ. ನೀವು ಸಹ ಬೆಂಗಳೂರಿನ ಅಕ್ಕಪಕ್ಕದವರಾಗಿದ್ದರೆ ಅಥವಾ ಈ ಹತ್ತಿರದ ಸ್ಥಳಗಳಿಗೆ ಹೋದಾಗ ತಪ್ಪದೆ ದೇವರಾಯ ದುರ್ಗಕ್ಕೆ ಭೇಟಿಕೊಟ್ಟು ಲಕ್ಷ್ಮಿ ನರಸಿಂಹ ಸ್ವಾಮಿಯ ಕೃಪೆಗೆ ಪಾತ್ರರಾಗಿ ನಿಮ್ಮ ಸಮಸ್ಯೆಗಳಿಂದ ಮುಕ್ತಿ ಪಡೆದುಕೊಳ್ಳಿ.