ಸ್ನೇಹಿತರೆ ರಾಜ್ಯದ ಜನತೆಗೆ ಇಂದು ವಿಶೇಷವಾದ ಮಾಹಿತಿ ಒಂದನ್ನು ತಂದಿದ್ದೇವೆ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಜಮೀನಿನ ಮೇಲೆ ಆಗಲಿ ಅಥವಾ ಯಾವುದೇ ಆಸ್ತಿಗಳ ಮೇಲೆ ರಾಜ್ಯಗಳು ಸಾಮಾನ್ಯ ಯಾವ ಕುಟುಂಬದಲ್ಲೂ ವ್ಯಾಜ್ಯ ಇಲ್ವೇ ಇಲ್ಲ ಎನ್ನುವುದು ಇಲ್ಲ. ಹಾಗಾಗಿ ಸಾಮಾನ್ಯವಾಗಿ ನ್ಯಾಯಗಳಲ್ಲಿ ನಡೆಯುತ್ತಿರುವ ಕೇಸುಗಳೆ ಈ ಆಸ್ತಿ ವಿಷಯದ ಕುರಿತು ಹೌದು ಸ್ನೇಹಿತರೆ ಯಾರಿಗೆ ಹಣ ಆಸ್ತಿಯೋ ಬೇಕಾಗಿಲ್ಲ ಹೇಳಿ ಎಲ್ಲರಿಗೂ ಇದು ಅವಶ್ಯಕತೆ ಹಾಗೂ ಬೇಕಾಗಿದೆ ಹಾಗಾಗಿ ಯಾವುದೇ ಜನತೆಯು ಯಾವ ಆಸ್ತಿಯನ್ನು ಕೂಡ ಬಿಡದೆ ಕೇಸ್ ಗಳನ್ನು ಕಾನೂನಿನ ಮೂಲಕ ನ್ಯಾಯಾಲಯದಲ್ಲಿ ಪಡೆದುಕೊಳ್ಳುತ್ತಾರೆ.
ಹಾಗಾದರೆ ಇಂದು ಇದಕ್ಕೆ ಸಂಬಂಧಿಸಿದ ಒಂದು ವಿಷಯದ ಬಗ್ಗೆ ವಿಸ್ತಾರವಾಗಿ ಹೇಳುತ್ತಿದ್ದೇವೆ. ಸ್ನೇಹಿತರೆ ನೀವು ಯಾವುದೇ ಒಂದು ಪಿತ್ರಾರ್ಜಿತ ಆಸೆಯನ್ನು ಪಡೆದುಕೊಳ್ಳಲು ಮುನ್ನವೇ ನಾವು ವಂಶವೃಕ್ಷವನ್ನು ಪಡೆದುಕೊಳ್ಳುವುದು ಅವಶ್ಯಕವಾಗಿದೆ ಹಾಗಾಗಿ ನಾವು ಯಾವುದೇ ಒಂದು ಕೇಸನ್ನು ದಾಖಲಾಯಿಸುವ ಮುನ್ನ ವಂಶವೃಕ್ಷವು ಅವಶ್ಯಕವಾಗಿ ಅಗತ್ಯವಿದೆ ಹಾಗಾದರೆ ಸ್ನೇಹಿತರೆ ಈ ವಂಶವೃಕ್ಷವನ್ನು ಹೇಗೆ ಪಡೆಯುವುದು ಎಂಬುವುದೇ ಈ ಪುಟದ ವಿಶೇಷವಾಗಿದೆ.
ವಂಶವೃಕ್ಷವನ್ನು ಪಡೆದುಕೊಳ್ಳಲು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವುದಿಲ್ಲ ಈ ಇದನ್ನು ಸುಲಭವಾಗಿ ತಿಳಿದುಕೊಳ್ಳಲು ನಾವು ಈ ಪುಟವನ್ನು ಬರೆದಿದ್ದೇವೆ. ಇನ್ನು ಈ ವಂಶರುಕ್ಷವನ್ನು ಪಡೆದುಕೊಳ್ಳಲು ಅಥವಾ ವಂಶವೃಕ್ಷ ಪ್ರಮಾಣ ಪತ್ರವನ್ನು ಸ್ವೀಕರಿಸಲು ಬೇಕಾದ ದಾಖಲೆಗಳು, ಎಲ್ಲಿ ಯಾವತರ ಅರ್ಜಿಯನ್ನು ಸಲ್ಲಿಸಬೇಕು ಎಂಬುದೇ ನಮ್ಮ ಮೊದಲ ಪ್ರಶ್ನೆಯಾಗಿದೆ ? ಸದ್ಯ ನಾವು ಹೇಳುವ ಮಾಹಿತಿಯನ್ನು ನೀವು ಓದಿದರೆ ಸಾಕು ನಿಮಗೆ ಸುಲಭವಾಗಿ ವಂಶವೃಕ್ಷ ಪ್ರಮಾಣ ಪತ್ರವನ್ನು ಪಡೆದುಕೊಳ್ಳುವುದು ಹೇಗೆ ಎಂದು ಸಂಪೂರ್ಣವಾಗಿ ತಿಳಿಯುತ್ತದೆ.
ಇನ್ನೂ ಈ ವಂಶವೃಕ್ಷವನ್ನು ಪಡೆಯಬೇಕಾದರೆ ಬೇಕಾಗಿರುವ ದಾಖಲೆಗಳು ಯಾವುವು ಎಂದರೆ ವಂಶವೃಕ್ಷದಲ್ಲಿ ಸೇರಿಸಬೇಕಾದ ಸದಸ್ಯರ ಆಧಾರ್ ಕಾರ್ಡ್ ಹಾಗೂ ಪಡಿತರ ಚೀಟಿ ಅಲ್ಲದೆ 20 ರೂಪಾಯಿ ಸ್ಟ್ಯಾಂಪ್ ಪೇಪರ್ ಮೇಲೆ ವಂಶವೃಕ್ಷದಲ್ಲಿ ಇರುವಂತಹ ಸದಸ್ಯರ ಎಲ್ಲರ ಹೆಸರು ಇದನ್ನು ಟೈಪಿಂಗ್ ಸೆಂಟರ್ ಅಲ್ಲಿ ಹೋಗಿ ಟೈಪ್ ಮಾಡಿ ಪೇಪರ್ ಮೇಲೆ ಎಲ್ಲರ ಸಹಿಯನ್ನು ಹಾಕಿಸಬೇಕು. ಈ ಮೇಲೆ ಹೇಳಿರುವಂತಹ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ನೆಮ್ಮದಿ ಕೇಂದ್ರ ಬೆಂಗಳೂರು ಒಂದು, ಡಿಜಿಟಲ್ ಸೇವಾ ಕೇಂದ್ರ ಹಾಗೂ ಸಿ ಎಸ್ ಸಿ ಕೇಂದ್ರಗಳಲ್ಲಿ ಭೇಟಿ ನೀಡಬಹುದು.
ಅಥವಾ ಆನ್ಲೈನ್ ನಲ್ಲಿ ಈ ಎಲ್ಲಾ ದಾಖಲೆಗಳನ್ನು 2 ಎಂಬಿ ಇಂದ ಕಡಿಮೆ ಸೈಜ್ ನಲ್ಲಿ ಇಟ್ಟುಕೊಂಡು ನಾಡ ಕಚೇರಿಯ ವೆಬ್ಸೈಟ್ ಗೆ ಅಪ್ಲೋಡ್ ಮಾಡಬಹುದು. nadakacheri.karnataka.gov.in ge ಭೇಟಿ ನೀಡಿ ಅಲ್ಲಿ ಇರುವಂತಹ ಆನ್ಲೈನ್ ಅಪ್ಲಿಕೇಶನ್ ಎನ್ನುವ ಆಯ್ಕೆಯನ್ನು ಆರಿಸಿ ಅದರಲ್ಲಿ ಆಯ್ಕೆಯನ್ನು ಒತ್ತಬೇಕು. ಇನ್ನು ಅದರಲ್ಲಿ ವಂಶವೃಕ್ಷದ ಆಕೆಯನ್ನು ಆರಿಸಿ ಸಂಪೂರ್ಣ ನಮ್ಮ ಹಳ್ಳಿ ತಾಲೂಕು ಹಾಗೂ ಜಿಲ್ಲೆಯ ಸಂಪೂರ್ಣ ವಿವರವನ್ನು ಅಲ್ಲಿ ನೀಡಿ ನಂತರ ಮನೆಯವರ ಹೆಸರನ್ನು ಒಂದೊಂದಾಗಿ ಭರ್ತಿ ಮಾಡಬೇಕು.
ನಂತರ ಇಲ್ಲಿ ಬೇಕಾಗಿರುವಂತಹ ದಾಖಲೆಗಳನ್ನು ನಾವು ಅಪ್ಲೋಡ್ ಮಾಡಬೇಕಾಗಿದೆ ದಾಖಲೆಗಳು ಕಡ್ಡಾಯವಾಗಿ ಇರಲೇಬೇಕು ಇದಾದ ನಂತರ ಫೀಲ್ಡ್ ಟ್ರಾನ್ಸಾಕ್ಷನ್ ಗೆ ಹೋಗಿ ಆನ್ಲೈನ್ ಪೇಮೆಂಟ್ ನ ನಾವು ಮಾಡಬೇಕು ಮಾಡುವ ಮುನ್ನ ನಮ್ಮ ಅರ್ಜಿಯ ಸಂಖ್ಯೆಯನ್ನು ಹಾಕಿ 25 ರೂಪಾಯಿಗಳ ಸರ್ಕಾರ ನಿಗದಿತ ಹಣವನ್ನು ಕಟ್ಟಬೇಕು.ಇದಾದ ನಂತರ ಗ್ರಾಮ ಲೆಕ್ಕಿಗರು ಹಾಗೂ ಕಂದಾಯ ಅಧಿಕಾರಿಗಳು ಪರಿಶೀಲಿಸಿ ಒಪ್ಪಿಗೆಯನ್ನು ನೀಡಿದ ನಂತರ ಒಂದು ವಾರದ ಒಳಗೆ ನಿಮ್ಮ ವಂಶವೃಕ್ಷವು ತಯಾರಾಗುತ್ತದೆ ಇನ್ನು ಬೇಗವೇ ನಮಗೆ ಸುರಕ್ಷ ಪ್ರಮಾಣ ಪತ್ರವೂ ಸಿಗುತ್ತದೆ.