ಮಹಿಳೆಯರಿಗೆ ಗುಡ್ ನ್ಯೂಸ್ ಯಾವುದೇ ವ್ಯಾಪಾರ ಮಾಡಲು 3 ಲಕ್ಷ ರೂಪಾಯಿ ಸಹಾಯಧನ ಈಗಾಗಲೇ ಅರ್ಜಿ ಸಲ್ಲಿಸಿ 15 ದಿನದ ಒಳಗೆ ಹಣ ಸಿಗುತ್ತೆ. ಸ್ವಂತ ಉದ್ಯೋಗ ಮಾಡಲು ಇದು ಸುವರ್ಣವಕಾಶ

 

ಈಗಿನ ಪ್ರಪಂಚದಲ್ಲಿ ಮನೆಯಲ್ಲಿರುವಂತಹ ಪ್ರತಿಯೊಬ್ಬರೂ ಕೂಡ ಹಣವನ್ನು ಸಂಪಾದನೆ ಮಾಡಿದರೆ ಮಾತ್ರ ಎಲ್ಲಾ ರೀತಿಯಾದಂತಹ ಸೌಕರ್ಯಗಳನ್ನು ಪಡೆದುಕೊಂಡು ಜೀವನದಲ್ಲಿ ನೆಮ್ಮದಿಯಾಗಿ ಬದುಕಬಹುದು. ಆದರೆ ಮನೆಯಲ್ಲಿ ನಾಲ್ಕೈದು ಜನ ಇದ್ದು ಕೇವಲ ಒಬ್ಬರು ಮಾತ್ರ ಹೊರಗಡೆ ಹೋಗಿ ಹಣವನ್ನು ಸಂಪಾದನೆ ಮಾಡಿದರೆ. ಆ ಹಣ ಯಾವುದೇ ಕಾರಣಕ್ಕೂ ಎಲ್ಲದಕ್ಕೂ ಸಾಕಾಗುವುದಿಲ್ಲ.

ಅದೇ ರೀತಿಯಾಗಿ ಮನೆಯಲ್ಲಿರುವಂತಹ ಹೆಣ್ಣು ಮಕ್ಕಳು ಕೂಡ ಕೆಲವೊಂದಷ್ಟು ವಿಷಯಗಳನ್ನು ತಿಳಿದುಕೊಂಡು, ಜೊತೆಗೆ ತಾವು ಕೂಡ ತಮ್ಮ ಪತಿಗೆ ಹಣದ ಸಹಾಯವನ್ನು ಮಾಡುವುದರ ಮುಖಾಂತರವೂ ಕೂಡ ನೀವು ಹಣವನ್ನು ಸಂಪಾದನೆ ಮಾಡಬೇಕು. ಇತ್ತೀಚಿನ ದಿನದಲ್ಲಿ ಹೆಣ್ಣು ಮಕ್ಕಳು ಕೂಡ ಗಂಡು ಮಕ್ಕಳಂತೆ ಹೊರಗಡೆ ಹೋಗಿ ದುಡಿಯುವುದರ ಮುಖಾಂತರ

ತಮ್ಮ ಕಾಲಿನ ಮೇಲೆ ತಾವೇ ನಿಂತುಕೊಳ್ಳುತ್ತಿದ್ದಾರೆ. ಆದರೆ ಹಳ್ಳಿ ಪ್ರದೇಶಗಳಲ್ಲಿ ಕೆಲವೊಂದಷ್ಟು ಮಹಿಳೆಯರು, ಹೆಣ್ಣು ಮಕ್ಕಳು ಯಾವುದೇ ವಿಷಯದಲ್ಲೂ ಕೂಡ ಅಂದರೆ ಯಾವುದೇ ವಿಧದ ಕೆಲಸದಲ್ಲಿಯೂ ಕೂಡ ಮುಂದೆ ಬರುವುದಿಲ್ಲ. ಏಕೆಂದರೆ ಅವರಲ್ಲಿ ಹಣಕಾಸಿನ ತೊಂದರೆ ಇರುತ್ತದೆ ಹಾಗೂ ಮನೆಯಲ್ಲಿ ಕಷ್ಟದ ಪರಿಸ್ಥಿತಿಗಳು ಇರುವುದರಿಂದ, ಅವರು ಯಾವುದೇ ರೀತಿಯಾದಂತಹ ವಿಧಾನಗಳನ್ನು ಅನುಸರಿಸುವುದರ ಮುಖಾಂತರ ಅವರು ಮುಂದೆ ಬರಲು ಸಾಧ್ಯವಾಗುವುದಿಲ್ಲ.

ಆದರೆ ಇದೇ ವಿಷಯವಾಗಿ ಇಂಥ ಕಷ್ಟದಲ್ಲಿರುವಂತಹ ಹೆಣ್ಣು ಮಕ್ಕಳಿಗೆ ಹಣದ ಸಹಾಯವನ್ನು ಮಾಡುವುದರ ಮುಖಾಂತರ, ಆ ಹಣವನ್ನು ಮಹಿಳೆಯರು ಪಡೆದು ಕೆಲವೊಂದಷ್ಟು ಕೆಲಸವನ್ನು ಮಾಡುವುದರ ಮುಖಾಂತರ ಅಂದರೆ ಉದಾಹರಣೆಗೆ ಟೈಲರಿಂಗ್, ಕೆಲಸ ಚಿಕ್ಕ ಗಿರಣಿ ಅಂಗಡಿ, ತರಕಾರಿ ಅಂಗಡಿ, ಬ್ಯೂಟಿ ಪಾರ್ಲರ್, ಅಗರಬತ್ತಿ ತಯಾರಿಕೆ, ಡೈರಿ,ಹೀಗೆ ಯಾವ ಕೆಲಸಕ್ಕೆ ಹಣದ ಅವಶ್ಯಕತೆ ಇರುತ್ತದೆಯೋ ಅಂತಹ ಕೆಲಸಗಳಿಗೆ ಉಪಯೋಗವಾಗುವಂತೆ.

ಈ ದಿನ ಹೆಣ್ಣು ಮಕ್ಕಳಿಗೆ 3 ಲಕ್ಷ ಹಣವನ್ನು ಬಡ್ಡಿ ರಹಿತ ಬಂಡವಾಳವಾಗಿ ಕೊಡುತ್ತಿದ್ದು. ಉದ್ಯೋಗಿನಿ ಸ್ಕೀಮ್ ಮೂಲಕ ಈ ಒಂದು ಅವಕಾಶವನ್ನು ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ಕೂಡ ಮಾಡಿಕೊಡುತ್ತಿದ್ದಾರೆ. ಆದ್ದರಿಂದ ಪ್ರತಿಯೊಬ್ಬ ಹೆಣ್ಣು ಮಕ್ಕಳು ಕೂಡ ಈ ವಿಷಯವಾಗಿ ತಿಳಿದುಕೊಂಡು ಇದಕ್ಕೆ ಅರ್ಜಿಯನ್ನು ಹಾಕುವುದರ ಮೂಲಕ ಮೂರು ಲಕ್ಷ ಹಣವನ್ನು ಪಡೆದುಕೊಳ್ಳಬಹುದಾಗಿರುತ್ತದೆ. ಹಾಗೂ ಈ ಹಣಕ್ಕೆ ಯಾವುದೇ ವಿಧದಲ್ಲೂ ಬಡ್ಡಿಯನ್ನು ಹಾಕುವುದಿಲ್ಲ. ಬದಲಿಗೆ ಇಂತಿಷ್ಟು ಸಮಯವನ್ನು ಕೊಟ್ಟು ಆ ಸಮಯದಲ್ಲಿ ಹಣವನ್ನು ಪಡೆಯುತ್ತಾರೆ.

ಆದರೆ ಬೇರೆ ಕಡೆ ನೀವು ಮೂರು ಲಕ್ಷ ಹಣವನ್ನು ಪಡೆದುಕೊಳ್ಳಬೇಕು ಎಂದರೆ ಹೆಚ್ಚಿನ ಬಡ್ಡಿಯನ್ನು ಕಟ್ಟಬೇಕಾಗಿರುತ್ತದೆ ಆದರೆ ಅದು ಕಷ್ಟವಾಗುತ್ತದೆ ಎಂದು ಈ ವಿಧಾನವನ್ನು ಈ ಯೋಜನೆಯಡಿಯಲ್ಲಿ ಚಾಲ್ತಿ ಮಾಡಿದ್ದಾರೆ. ಹಾಗಾದರೆ ಈ ಅರ್ಜಿ ಹಾಕಬೇಕಾದರೆ ಯಾವೆಲ್ಲ ಅರ್ಹತೆ ಇರಬೇಕು ಎಂದರೆ 18 ವರ್ಷ ವಯಸ್ಸಿನ ಮೇಲೆ ಹಾಗೂ 55 ವರ್ಷ ವಯಸ್ಸಿನ ಒಳಗಿನ ಮಹಿಳೆಯರು ಇದಕ್ಕೆ ಅರ್ಜಿಯನ್ನು ಸಲ್ಲಿಸಬಹುದು.

ಹಾಗೂ ಆ ಮಹಿಳೆಯ ಕುಟುಂಬದವರ ವಾರ್ಷಿಕ ಆದಾಯ 1.5 ಲಕ್ಷಕ್ಕಿಂತ ಕಡಿಮೆ ಇರಬೇಕು. ಇದಕ್ಕೆ ಬೇಕಾಗುವ ದಾಖಲಾತಿಗಳು ಆಧಾರ್ ಕಾರ್ಡ್, ಜನನ ಪ್ರಮಾಣ ಪತ್ರ, ಬಿಪಿಎಲ್ ಕಾರ್ಡ್ ಪ್ರತಿ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ. ಅರ್ಜಿ ಸಲ್ಲಿಸುವ ವಿಧಾನ ದೇಶದ ಅನೇಕ ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಉದ್ಯೋಗಿನಿ ಯೋಜನೆಯಡಿ ಸಾಲವನ್ನು ನೀಡುತ್ತದೆ, ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Comment

%d bloggers like this: