ನಾಗರಿಕತೆ ಬೆಳೆಯುತ್ತಿದ್ದಂತೆ ಪೊಟರೆಗಳಲ್ಲಿ ಗುಹೆಗಳಲ್ಲಿ ವಾಸಿಸುತ್ತಿದ್ದ ಮನುಷ್ಯ ತನಗಾಗಿ ಮನೆಗಳನ್ನು ಬಂಗಲೆಗಳನ್ನು ಸೃಷ್ಟಿಸಿಕೊಳ್ಳಲು ಶುರು ಮಾಡಿದ. ಜೊತೆಗೆ ತಾನು ತನ್ನದು ಎಂದು ಕೆಲವು ಪ್ರದೇಶಗಳನ್ನು ಸ್ವಂತ ಮಾಡಿಕೊಳ್ಳಲು ಆರಂಭಿಸಿದ. ಹಾಗೇ ಬೆಳೆದ ಈ ಸಂಸ್ಕೃತಿ ಇಂದು ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಬಳಸಿಕೊಳ್ಳುವ ಕಾರಣಕ್ಕಾಗಿ ಹಾಗೂ ಅದನ್ನು ತನ್ನ ಉಳಿಕೆ ಅಥವಾ ಆಸ್ತಿ ಎನಿಸುವ ಸಲುವಾಗಿ ತನ್ನ ಹೆಸರಿಗೆ ಮನೆ ಜಮೀನು ಇರಬೇಕು ಎಂದು ಬಯಸುವ ತನಕ ತಲುಪಿದೆ.
ಆದರೆ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲೂ ಕೂಡ ಈ ರೀತಿ ಅವರು ವಾಸಿಸುತ್ತಿರುವ ಮನೆ ಹಾಗೂ ಅವರದ್ದು ಎಂದುಕೊಂಡಿರುವ ಜಮೀನು ಅಕ್ರಮದಾಗಿರುತ್ತದೆ. ಈ ಅಕ್ರಮ ಜಮೀನನ್ನು ಸಕ್ರಮ ಮಾಡಿಕೊಳ್ಳಲು ಕೂಡ ಸರ್ಕಾರದಲ್ಲಿ ಅನುಕೂಲ ಇದ್ದು ಅದರ ಬಗ್ಗೆ ಸರಿಯಾಗಿ ಮಾಹಿತಿ ಇಲ್ಲದ ಕಾರಣ ಮಧ್ಯವರ್ತಿಗಳು ದಾರಿ ತಪ್ಪಿಸಿ ಮುಗ್ಧರ ಹಣವನ್ನು ತೋಚುತ್ತಾ ಯಾಮರಿಸುತ್ತಾರೆ.
ಆದರೆ ಈ ಲೇಖನದಲ್ಲಿ ಅಕ್ರಮವಾಗಿ ಇರುವ ಆಸ್ತಿಯನ್ನು ಸಕ್ರಮ ಮಾಡಿಕೊಳ್ಳುವುದು ಹೇಗೆ ಎನ್ನುವುದರ ಸಂಪೂರ್ಣ ಮಾಹಿತಿ ಇದೆ. ಮೊದಲಿಗೆ ಅಕ್ರಮ ಮನೆಯನ್ನು ಸಕ್ರಮ ಮಾಡಿಕೊಳ್ಳುವುದು ಹೇಗೆ ಎಂದು ನೋಡುವುದಾದರೆ ಈ ರೀತಿ ಮಾಡಲು ಮೊದಲಿಗೆ ಮನೆಯಲ್ಲಿ ವಾಸಿಸುತ್ತ ಇರುವವರ ಆಧಾರ್ ಕಾರ್ಡ್ ಬೇಕು. ಜೊತೆಗೆ ನೀವು ವಾಸಿಸುತ್ತಿರುವ ನಿಮ್ಮ ಮನೆಯ ನಕ್ಷೆ ಕೂಡ ಬೇಕು, ಅದು ಸಹ ಒಂದು ಪ್ರಮುಖ ದಾಖಲೆ ಆಗಿದೆ.
ನೀವು ವಾಸಿಸುತ್ತಿರುವ ಮನೆ ಹಳೆಯದಾಗಿರಬಹುದು ಅಥವಾ ಹೊಸ ಮನೆ ಆಗಿರಬಹುದು ಅಥವಾ ಕಚ್ಚಾಮನೆ ಆಗಿರಬಹುದು ಅದರ ಫೋಟೋ ಕೂಡ ಬೇಕಾಗುತ್ತದೆ. ಮನೆ ಕರದ ರಶೀದಿಯನ್ನು ಗ್ರಾಮ ಸಭೆ ಅಥವಾ ನಗರಸಭೆಯಲ್ಲಿ ಸಲ್ಲಿಸಿರುವ ಪತ್ರ ಬೇಕಾಗುತ್ತದೆ. ಕೊನೆಗೆ ಸಾಕ್ಷಿಗಳ ರೂಪದಲ್ಲಿ ಮಾಡಿದ ಪರಿಚಿತ ಐದು ಜನರ ಪಂಚನಾಮೆ ಸಾಕ್ಷಿ ಕೂಡ ಬೇಕಾಗುತ್ತದೆ.
ಈ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ನಮೂನೆ ಫಾರಂ ಅರ್ಜಿ ಬರೆದು ಎಲ್ಲ ಅಗತ್ಯ ದಾಖಲೆಗಳನ್ನು ಕೂಡ ಲಗತ್ತಿಸಿ ನೆಮ್ಮದಿ ಕೇಂದ್ರಕ್ಕೆ ಸಲ್ಲಿಸಬೇಕು. ಅವರು ನಿಮಗೆ ಎಕ್ನೋಲೆಜ್ಮೆಂಟ್ ಲೆಟರ್ ಕೊಡುತ್ತಾರೆ. ನಂತರ ನೀವು ಸಲ್ಲಿಸಿರುವ ಅರ್ಜಿಯನ್ನು ವಿಲೇಜ್ ಅಕೌಂಟರ್ ಬಳಿ ಪರಿಶೀಲನೆಗೆ ಎಂದು ಕಳುಹಿಸುತ್ತಾರೆ. ನಂತರ ನಿಮ್ಮ ಗ್ರಾಮದ ಕಂದಾಯ ಅಧಿಕಾರಿಗಳು ಹಾಗೂ ಶಾನುಭೋಗರು ಬಂದು ಸ್ಥಳದ ಪರಿಶೀಲನೆ ಮಾಡುತ್ತಾರೆ.
ಅರ್ಜಿ ಸಲ್ಲಿಸಿರುವವರ ಮುಂದೆ, ಜೊತೆಗೆ ಪಂಚನಾಮೆ ಸಹಿ ಮಾಡಿರುವ ಸಾಕ್ಷಿದಾರರ ಮುಂದೆ ಮನೆಯ ನಕ್ಷೆಯನ್ನು ತಯಾರಿಸುತ್ತಾರೆ. ಈ ಎಲ್ಲಾ ಕ್ರಮಗಳು ಸರಿಯಾದ ರೀತಿಯಲ್ಲಿ ಪೂರ್ತಿಗೊಂಡಾಗ ನಿಮ್ಮ ಅಕ್ರಮ ಜಮೀನು ಸಕ್ರಮಗೊಳ್ಳುತ್ತದೆ. ಆದರೆ ಸರ್ಕಾರವು ಈ ರೀತಿ ಅಕ್ರಮ ಜಮೀನನ್ನು ಸಕ್ರಮ ಮಾಡಲು ಕೆಲವು ನಿರ್ಬಂಧನೆಗಳನ್ನು ಕೂಡ ಹೇರಿದೆ. ಅದೇನೆಂದರೆ ಸರ್ಕಾರದ ಎಲ್ಲಾ ನೀತಿ ಹಾಗೂ ನಿಯಮಗಳು ನಿಬಂಧಗಳನ್ನು ಒಪ್ಪಿಕೊಂಡ ಬಳಿಕ ಅಷ್ಟೇ ನಿಮಗೆ ಅಕ್ರಮ ಜಮೀನು ಸಕ್ರಮವಾಗಲಿದೆ.
ಸರ್ಕಾರದ ಮುಖ್ಯವಾದ ನಿಭಂಧನೆ ಏನು ಎಂದರೆ ಈ ರೀತಿ ಅಕ್ರಮ ಜಮೀನು ಮೂಲಕ ಸಕ್ರಮ ಮಾಡಿಕೊಂಡ ಮೇಲೆ ನೀವು ಅದನ್ನು ಯಾರಿಗೂ ಮಾರುವಂತಿಲ್ಲ, ಜೊತೆಗೆ ಯಾವುದೇ ವಾಣಿಜ್ಯ ಚಟುವಟಿಕೆನೂ ಕೂಡ ಅಲ್ಲಿ ನಡೆಸಬಾರದು ಎನ್ನುವ ನಿಯಮ ಕೂಡ ಇದೆ. ಈ ನಡುವೆ ಏನಾದರೂ ತಕರಾರು ಇದ್ದರೂ ಕೂಡ ಅಕ್ರಮ ಜಮೀನನ್ನು ಸಕ್ರಮ ಮಾಡದಂತೆ ತಾಲೂಕಿನ ತಹಶೀಲ್ದಾರರಿಗೆ ಅಥವಾ ಶಾಸಕರಿಗೆ 15 ದಿನದ ಒಳಗಡೆ ಅರ್ಜಿ ಸಲ್ಲಿಸಿ ಮನವಿ ಸಹ ಮಾಡಬಹುದು.