ಈ ಸ್ವತ್ತು ಪಡೆಯಲು ಏನು ಮಾಡಬೇಕು ಇದರ ಪ್ರಕ್ರಿಯೆ ಹೇಗೆ ಇರುತ್ತದೆ ಗೊತ್ತಾ.? ಕೇವಲ 50 ರೂಪಾಯಿ ಖರ್ಚು ಮಾಡಿದರೆ ಸಾಕು ಈ ಸ್ವತ್ತು ನಿಮ್ಮ ಮನೆ ಬಾಗಿಲಿಗೆ ಬಂದು ತಲುಪುತ್ತೆ.

ಹಳ್ಳಿಯಲ್ಲಿ ಆಗಲಿ ನಗರ ಪ್ರದೇಶಗಳೆ ಆಗಲಿ ಮನೆಯ ಹಕ್ಕುಪತ್ರ ಇಲ್ಲದೆ ಇರುವುದು ಬಹುದೊಡ್ಡ ಸಮಸ್ಯೆ ಆಗಿದೆ. ನೀವು ಏನಾದರೂ ಮನೆ ಹಕ್ಕುಪತ್ರ ಕಳೆದುಕೊಂಡಿದ್ದರೆ ಅದನ್ನು ನಿಮ್ಮ ಗ್ರಾಮ ಪಂಚಾಯಿತಿಯಲ್ಲಿ ಕೇಳಿ ಪಡೆಯುತ್ತೇವೆ ಎಂದುಕೊಂಡರೆ ಅದು ಸಾಧ್ಯವಾಗದ ಮಾತು. ಯಾಕೆಂದರೆ ಗ್ರಾಮ ಪಂಚಾಯತಿಯಲ್ಲಿ ಕೂಡ ನಿಮ್ಮ ಮನೆ ಹಕ್ಕು ಪತ್ರ ಕಳೆದು ಹೋಗಿರಬಹುದು ಅಥವಾ ತುಂಬಾ ಹಳೆಯದಾಗಿರುವ ಕಾರಣ ಅಕ್ಷರಗಳು ಮಾಸಿ ಹೋಗಿರಬಹುದು ಆ ಸಮಯದಲ್ಲಿ ಅವರು ನಿಮಗೆ ಅದನ್ನು ಕೊಡಲು ಆಗುವುದಿಲ್ಲ.

ಆಗ ನೀವು ಮನೆ ಹಕ್ಕು ಪತ್ರ ತೆಗೆದುಕೊಳ್ಳಲು ಬೇರೆ ರೀತಿಯಲ್ಲಿ ಪ್ರಯತ್ನ ಪಡಬೇಕಾಗುತ್ತದೆ. ಅದಕ್ಕೆ ಸರ್ಕಾರದಿಂದ ಮಾರ್ಗಸೂಚಿ ಕೂಡ ಇದೆ. ಇದನ್ನು ಇ ಸ್ವತ್ತು ಪತ್ರಗಳನ್ನು ಪಡೆಯುವುದು ಎಂದು ಕರೆಯುತ್ತಾರೆ. ಇದರಿಂದ ನಾನು ಉಪಯೋಗಗಳು ಇದೆ. ಮನೆ ಹಕ್ಕು ಪತ್ರ ಕಳೆದುಕೊಳ್ಳುವುದರಿಂದ ಮನೆಯಲ್ಲಿ ಆಸ್ತಿ ಭಾಗ ಮಾಡುವಾಗ ಕುಟುಂಬ ಕಲಹ ಉಂಟಾಗುತ್ತದೆ, ಹಾಗಾಗಿ ಅದನ್ನು ಜೋಪಾನವಾಗಿ ಕಾಪಾಡಿಕೊಳ್ಳಬೇಕು.

ಒಂದು ವೇಳೆ ಇಲ್ಲ ಎಂದರೆ ಈ ರೀತಿ ಮಾಡಿ. ನಿಮ್ಮ ಮನೆಯ ವಿದ್ಯುತ್ ಬಿಲ್ ಹಾಗೂ ನಿಮ್ಮ ಆಧಾರ್ ಕಾರ್ಡ್ ತೆಗೆದುಕೊಂಡು ಸ್ಥಳೀಯ ಸಿವಿಲ್ ಇಂಜಿನಿಯರ್ ಬಳಿ ಮನೆ ನಕ್ಷೆ ಹಾಕಿಸಿಕೊಳ್ಳಿ. ಇಂಜಿನಿಯರ್ ಹಾಕಿ ಕೊಟ್ಟ ಮನೆ ನಕ್ಷೆ, ಮೂಲಕ ಗ್ರಾಮ ಪಂಚಾಯಿತಿಗೆ ಹೋಗಿ ನಮೂನೆ 11 ಬಿ ಪಡೆಯಿರಿ. ಸಾಮಾನ್ಯ ಗ್ರಾಮ ಸಭೆ ಅಲ್ಲಿ ತೀರ್ಮಾನಿಸಿ ಗ್ರಾಮ ಪಂಚಾಯಿತಿ ಕಡೆಯಿಂದ ನಿಮಗೆ ನಮೂನೆ 11 ಬಿ ಅನ್ನು ಕೊಡುತ್ತಾರೆ. ಇದರೊಂದಿಗೆ ನಮೂನೆ 9 ಸಹ ಪಡೆಯಬೇಕು ನಮೂನೆ ಒಂಬತ್ತನ್ನು ಪಡೆಯಲು ಕೆಲವು ಅಗತ್ಯ ದಾಖಲಾತಿಗಳನ್ನು ಕೂಡ ನೀಡಬೇಕು.

ನಿಮ್ಮ ಮನೆಯ ವಿದ್ಯುತ್ ಬಿಲ್, ಆಧಾರ್ ಕಾರ್ಡ್, ಇಂಜಿನಿಯರ್ ನೀಡಿರುವ ಮನೆ ನಕ್ಷೆ, ನಿಮ್ಮ ಮನೆಯ ಫೋಟೋ, ಕರರಶೀದಿ ಮತ್ತು ಸದರಿ ಗ್ರಾಮ ನಕ್ಷೆ ಎಲ್ಲ ದಾಖಲೆ ಜೊತೆ ಅರ್ಜಿಯನ್ನು ತುಂಬಿ ಗ್ರಾಮ ಪಂಚಾಯಿತಿಯ ಗಣಕಯಂತ್ರ ವಿಭಾಗಕ್ಕೆ ನೀಡಬೇಕು. ಇ ಸ್ವತ್ತು ಪಡೆಯಲು ಈ ಮೇಲೆ ತಿಳಿಸಿದ ದಾಖಲೆಗಳೊಂದಿಗೆ ಗ್ರಾಮ ಪಂಚಾಯಿತಿ ಗೆ ಹೋಗಿ ಅರ್ಜಿ ಸಲ್ಲಿಸಬೇಕು. ನಂತರ ಪಿಡಿಒ ಇಂದ ಸ್ವೀಕೃತ ಪ್ರತಿಯನ್ನು ಪಡೆದುಕೊಳ್ಳಬೇಕು.

ಪಿಡಿಒ ದಾಖಲಾತಿಗಳೊಂದಿಗೆ ನಿಮ್ಮ ಮನೆಯ ನಕ್ಷೆ ಪರಿಶೀಲನೆ ಮಾಡಿ ಅದನ್ನು ಇ ಸ್ವತ್ತು ತಂತ್ರಾಂಶದಲ್ಲಿ ಅಪ್ಲೋಡ್ ಮಾಡುತ್ತಾರೆ, ಮೋಜಿನಿಗೆ ಆಸ್ತಿ ಪತ್ರ ಪಡೆಯಲು ವರ್ಗಾವಣೆ ಮಾಡುತ್ತಾರೆ. ನೀವು ನಾಡಕಚೇರಿಗೆ ಹೋಗಿ ಮೋಜಿನಿ ಆಗುವುದಕ್ಕೆ ಶುಲ್ಕ ಪಾವತಿಸಿ ಸ್ವೀಕೃತಿ ಪತ್ರವನ್ನು ಪಡೆಯಬಹುದು. 21 ದಿನಗಳ ನಂತರ ಅರ್ಜಿದಾರರು ಹಾಗೂ ಬಾಜುಗರ ಸಮ್ಮುಖದಲ್ಲಿ ಪಿಡಿಒ ಸ್ಥಳ ವೀಕ್ಷಣೆ ಮಾಡುತ್ತಾರೆ. ದ್ವಿತೀಯ ದರ್ಜೆ ಸಹಾಯಕರುಗಳು ಆಸ್ತಿ ನಕ್ಷೆಯನ್ನು ಪರಿಶೀಲಿಸಿ ಪಿಡಿಒ ಸಹಿಗೆ ಕಳುಹಿಸುತ್ತಾರೆ.

ಪಿಡಿಓ ಅದರ ಮೇಲೆ ಡಿಜಿಟಲ್ ಸಹಿ ಮಾಡಿ ನಿಮಗೆ ಅನುಮೋದಿಸುತ್ತಾರೆ. ಇಸ್ವತ್ತು ಮಾಡಿಸಲು ಸರ್ಕಾರದ ಶುಲ್ಕ ಕೇವಲ ರೂ.50ಗಳು ಜೊತೆಗೆ ಅರ್ಜಿ ಸಲ್ಲಿಸಿದ 45 ದಿನಗಳಂತೆ ನೀಡಬೇಕು ಎನ್ನುವ ನಿಯಮ ಸಹ ಇದೆ. ಕರ್ನಾಟಕ ಸರ್ಕಾರ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಯಾಕೆ ಅಭಿವೃದ್ಧಿ ಲಿಂಕ್ ಮೂಲಕ ಇದು ಇನ್ನು ಯಾವ ಸ್ಥಿತಿಯಲ್ಲಿ ಇದೆ ಎನ್ನುವುದನ್ನು ಪರೀಕ್ಷಿಸಿಕೊಳ್ಳಬಹುದು. ಪಿ ಡಿ ಓ ಡಿಜಿಟಲ್ ಸಹಿ ಇರುವುದರಿಂದ ಇದರಲ್ಲಿ ಯಾವುದೇ ಅಕ್ರಮ ಸಹ ಇರುವುದಿಲ್ಲ. ಜೊತೆಗೆ ಈಗ ಆಸ್ತಿಯನ್ನು ಮಾರಲು ಹಾಗೂ ಕೊಂಡುಕೊಳ್ಳಲು ಸಹ ಇಸ್ಪತ್ತು ಮಾಡಿಸುವುದು ಕಡ್ಡಾಯ ಎನ್ನುವ ನಿಯಮ ಸಹ ಇದೆ. ಈ ಅನುಕೂಲಕರ ಮಾಹಿತಿಯನ್ನು ಇತರರಿಗೂ ಸಹ ತಿಳಿಸಿ.

Leave a Comment

%d bloggers like this: