Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಈ ಬದುಕು ಎಂಬುದೇ ಹೀಗೆ ಯಾವಾಗ ಯಾರಿಗೆ ಏನು ಆಗುತ್ತದೆ ಎಂಬುದನ್ನು ಯಾರಿಂದಲೂ ಕೂಡ ಖಚಿತವಾಗಿ ಹೇಳುವುದಕ್ಕೆ ಸಾಧ್ಯವಾಗುವುದಿಲ್ಲ. ಇಂದು ಶ್ರೀಮಂತ ಆಗಿರುವ ವ್ಯಕ್ತಿ ನಾಳೆ ಬಡವನಾಗಬಹುದು, ಹಾಗೆಯೇ ನೆನ್ನೆ ಬಡವ ಆಗಿರುವಂತಹ ವ್ಯಕ್ತಿ ಇಂದು ಶ್ರೀಮಂತ ಕೂಡ ಆಗಬಹುದು. ಬದುಕಿನಲ್ಲಿ ಚಮತ್ಕಾರ ಮತ್ತು ಅದೃಷ್ಟ ಎಂಬುವುದು ಯಾವಾಗ ಬೇಕಾದರೂ ಕೂಡ ಒಲಿಯಬಹುದು ಈ ಕಾರಣಕ್ಕಾಗಿ ನಾವು ವ್ಯಕ್ತಿಯ ಪರಿಸ್ಥಿತಿಯನ್ನು ನೋಡಿ ಈ ಯಿಸಾಳಿಸಬಾರದು.
ಇದು ಒಂದು ಕಡೆಯಾದರೆ ಮತ್ತೊಂದು ಕಡೆಯಲ್ಲಿ ಸಹಾಯ ಮಾಡುವಂತಹ ಮನಸ್ಸು ಎಲ್ಲಾ ವ್ಯಕ್ತಿಗಳಿಗೂ ಕೂಡ ಇರುವುದಿಲ್ಲ ಹೌದು ಕೋಟ್ಯಾಧೀಶ್ವರನ ಬಳಿ ಸಾಕಷ್ಟು ಹಣ ಆಸ್ತಿ ಇರುತ್ತದೆ ಅದನ್ನು ಕೂಡ ಆತನಿಗೆ ಸಹಾಯ ಮಾಡಬೇಕು ಎಂಬ ಮನೋಭಾವನೆ ಬರುವುದಿಲ್ಲ. ಅದೇ ರೀತಿ ಸಾಮಾನ್ಯ ವ್ಯಕ್ತಿಯ ಮನಸ್ಸಿನಲ್ಲಿ ದಾನ ಧರ್ಮ ಮಾಡಬೇಕು ಎಂಬ ಮನೋಭಾವನೆ ಇರುತ್ತದೆ ಆದರೆ ದೇವರು ಆತನಿಗೆ ಸಹಾಯ ಮಾಡುವಂತಹ ಪರಿಸ್ಥಿತಿಯನ್ನು ಒದಗಿಸಿರುವುದಿಲ್ಲ.
ಹಣಕಾಸಿನ ಸಮಸ್ಯೆ ಆರ್ಥಿಕ ಮುಗ್ಗಟ್ಟು ಏನಾದರೂ ಒಂದಲ್ಲ ಒಂದು ಸಮಸ್ಯೆ ಇದ್ದೇ ಇರುತ್ತದೆ. ಇವೆಲ್ಲವೂ ಒಂದು ಕಡೆಯಾದರೆ ಮತ್ತೊಂದು ಕಡೆಯಲ್ಲಿ ನಮ್ಮ ಸ್ಯಾಂಡಲ್ವುಡ್ ನಲ್ಲಿ ಸಾಕಷ್ಟು ನಟ ನಟಿಯರು ಅಪಾರ ಆಸ್ತಿ ಸಿರಿ ಸಂಪತ್ತನ್ನು ಹೊಂದಿದ್ದಾರೆ. ಆದರೆ ಈ ಎಲ್ಲ ನಟರು ಕೂಡ ತಮ್ಮ ಹಣದಲ್ಲಿ ಅಥವಾ ಆಸ್ತಿ ಎಲ್ಲಿ ದಾನ ಮಾಡುವಂತಹ ಮನೋ ಇಚ್ಛೆಯನ್ನು ಒಳಗೊಂಡಿರುವುದಿಲ್ಲ.
ಕೇಲವೇ ಕೆಲವು ನಟರು ಮಾತ್ರ ತಮ್ಮ ಆದಾಯದ ಇಂತಿಷ್ಟು ಭಾಗವನ್ನು ಸಾರ್ವಜನಿಕ ಸೇವೆಗಾಗಿ ಬಡವ ಬಲ್ಲಿದರಿಗಾಗಿ ನೀಡಬೇಕು ಎಂಬ ಮನೋಭಾವನೆಯನ್ನು ಹೊಂದಿರುತ್ತಾರೆ. ಅಂತಹ ಖ್ಯಾತ ನಟರು ಯಾರು ಹಾಗೂ ಸ್ಯಾಂಡಲ್ವುಡ್ ನಲ್ಲಿ ಈವರೆಗೂ ಯಾವ ನಟರು ಹೆಚ್ಚು ದಾನವನ್ನು ಮಾಡಿದ್ದಾರೆ ಎಂಬುದನ್ನು ನೋಡುವುದಾದರೆ. ಆ ಸಾಲಿಗೆ ಮೊದಲಿಗೆ ಬರುವುದು ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಹೌದು ಕೋವಿಡ್ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಅವರು 50 ಲಕ್ಷ ಸಹಾಯ ಧನವನ್ನು ನೀಡಿದ್ದರು.
ಇದನ್ನು ಹೊರತು ಪಡಿಸಿದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ 50 ಲಕ್ಷ ಸಹಾಯ ಧನವನ್ನು ಒದಗಿಸಿದ್ದರು. ದರ್ಶನ್ ಅವರು ಕೇವಲ 50 ಲಕ್ಷ ಹಣವನ್ನು ನೀಡುವುದು ಮಾತ್ರವಲ್ಲದೆ ಮೈಸೂರಿನಲ್ಲಿ ಇರುವಂತಹ ಛತ್ರ ಒಂದರಲ್ಲಿ ನಿರ್ಗತಿಕರಿಗೆ ಮತ್ತು ಬಡವರಿಗೆ ಸುಮಾರು ಎರಡು ತಿಂಗಳಗಳ ಕಾಲ ವಸತಿ ಊಟ ಎಲ್ಲ ವ್ಯವಸ್ಥೆಯನ್ನು ಕೂಡ ಮಾಡಿಕೊಟ್ಟಿದ್ದರು. ತದನಂತರ ರಾಕಿಂಗ್ ಸ್ಟಾರ್ ಯಶ್ ಅವರು 25 ಲಕ್ಷ ಹಣದ ಚೆಕ್ ಒಂದನ್ನು ನೀಡಿದರು ನೀನು ಕಲಿಯುಗ ಕರ್ಣ ಅಂತಾನೆ ಹೆಸರು ಪಡೆದಂತಹ ಅಂಬರೀಶ್ ಅವರ ಪುತ್ರ ಅಭಿಷೇಕ್ ಅವರು 20 ಲಕ್ಷ ಸಹಾಯ ಧನವನ್ನು ಮಾಡಿದ್ದಾರೆ.
ಇದನ್ನು ಹೊರತುಪಡಿಸಿದರೆ ಡಾ. ಶಿವರಾಜ್ ಕುಮಾರ್ ಅವರು 5 ಲಕ್ಷ ಹಣ ಅರವಿಂದ್ ಹಾಗೂ ಪ್ರಜ್ವಲ್ ದೇವರಾಜ್ ಇನ್ನಿತರ ಕಲಾವಿದರು ಐವತ್ತು ಸಾವಿರ ಸಹಾಯ ಧನವನ್ನು ನೀಡಿದ್ದಾರೆ. ವಿನೋದ್ ರಾಜಕುಮಾರ್ ಮತ್ತು ಲೀಲಾವತಿ ಅಮ್ಮನವರು 18 ಲಕ್ಷ ಸಹಾಯ ಧನವನ್ನು ಮಾಡಿದ್ದಾರೆ ಇವೆಲ್ಲವನ್ನು ಕೂಡ ಕೋವಿಡ್ ಸಂದರ್ಭದಲ್ಲಿ ಸಾರ್ವಜನಿಕರಾಗಿ ಬಳಕೆ ಮಾಡಲಾಯಿತು. ಇಲ್ಲಿ ಇರುವಂತಹ ಎಲ್ಲ ಮಾಹಿತಿಯು ಕೂಡ ನಿಖರವಾದ ಮಾಹಿತಿ ಏಕೆಂದರೆ ಈ ಮಾಹಿತಿಯನ್ನು ಇತ್ತೀಚಿಗಷ್ಟೇ ಸೇವಾ ಭಾರತ್ ಎನ್ನುವ ಎನ್‌ಜಿಒ ಮಾಹಿತಿ ಒಂದನ್ನು ಪ್ರಕಟಿಸಿದೆ.
ಈ ಮಾಹಿತಿಯ ಪ್ರಕಾರ ಸರ್ಕಾರಕ್ಕೆ ಕೋವಿಡ್ ಫಂಡ್ ಗೆ ಸಹಾಯ ಮಾಡಿದ ಸ್ಯಾಂಡಲ್ವುಡ್ ನ ಅನೇಕ ನಟರ ಹೆಸರುಗಳನ್ನು ಬಹಿರಂಗ ಪಡಿಸಿದೆ. ಒಟ್ಟಾರೆಯಾಗಿ ಹೇಳುವುದಾದರೆ ಅತಿ ಹೆಚ್ಚು ದಾನ-ಧರ್ಮ ಮಾಡಿದಂತಹ ನಟರ ಪೈಕಿ ಮೊದಲಿಗೆ ಪುನೀತ್ ರಾಜಕುಮಾರ್ ದರ್ಶನ್ ಬಂದರೆ ಎರಡನೆಯದಾಗಿ ಕಿಚ್ಚ ಸುದೀಪ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರು ಬರುತ್ತಾರೆ. ನಿಮ್ಮ ನೆಚ್ಚಿನ ನಟ ಯಾರು ಎಂಬುದನ್ನು ಕಾಮೆಂಟ್ ಮುಖಾಂತರ ನಮಗೆ ತಿಳಿಸಿ.