Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ರಾಕಿಂಗ್ ಸ್ಟಾರ್ ಯಶ್ ಸದ್ಯಕ್ಕೆ ಇವರು ಕರ್ನಾಟಕದಲ್ಲಿ ಮಾತ್ರ ಹೆಸರುವಾಸಿಯಾಗಿರದೇ ಇಡೀ ಪ್ರಪಂಚದಾದ್ಯಂತ ಇವರ ಬಗ್ಗೆ ಮಾತನಾಡುತ್ತಿರುವುದನ್ನು ನಾವು ನೋಡಬಹುದಾಗಿದೆ. ಕೇವಲ ಒಂದೇ ಒಂದು ಸಿನಿಮಾದಲ್ಲಿ ನ್ಯಾಷನಲ್ ಸ್ಟಾರ್ ಆಗಿ ಬೆಳೆದಂತಹ ವ್ಯಕ್ತಿಯಂದರೆ ಅದು ರಾಕಿಂಗ್ ಸ್ಟಾರ್ ಯಶ್ ಅಂತಾನೇ ಹೇಳಬಹುದು. ಕೇವಲ ಒಂದು ಕಿರುತೆರೆ ಧಾರಾವಾಹಿಯಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿಕೊಂಡು ಇದ್ದಂತಹ ವ್ಯಕ್ತಿ ಇಂದು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ ಅಂದರೆ ಇವರ ಪರಿಶ್ರಮವನ್ನು ಖಂಡಿತವಾಗಿಯೂ ಕೂಡ ನಾವೆಲ್ಲರೂ ಮೆಚ್ಚಲೇ ಬೇಕಾಗುತ್ತದೆ.
ಇದೇ ರೀತಿಯಾಗಿ ನಟ ದರ್ಶನ್ ಅವರು ಕೂಡ ಹುಟ್ಟುತ್ತಾ ಆಗರ್ಭ ಶ್ರೀಮಂತರ ಏನೆಲ್ಲಾ ಮೂಲತಃ ರಂಗಕಲಾವಿದರು ಹಾಗೂ ಸಿನಿಮಾದ ಹಿನ್ನೆಲೆಯ ಕುಟಂಬದಲ್ಲಿ ಹುಟ್ಟಿದಂತಹ ಕಲಾವಿದ ಆಗಿದ್ದರೂ ಕೂಡ ಅವರು ಸಿನಿಮಾರಂಗಕ್ಕೆ ಬರುವುದಕ್ಕೆ ಪಟ್ಟ ಕ’ಷ್ಟ ಒಂದೆರಡಲ್ಲ ದರ್ಶನ್ ಅವರ ತಂದೆ ಖ್ಯಾತ ಖಳನಟ ಹಾಗೂ ಪೋಷಕ ನಟ ಆಗಿದ್ದರೂ ಕೂಡ ಅವರ ಅಂತಿಮ ದಿನದಲ್ಲಿ ಅವರು ಅನುಭವಿಸಿದಂತಹ ನೋ’ವು ಯಾವ ಕುಟುಂಬಸ್ಥರಿಗೆ ಕೂಡ ಬರದೇ ಇರಲಿ ಎಂಬುದು ದರ್ಶನ್ ಅವರ ಆಶಯವಾಗಿದೆ.
ಇನ್ನು ಅವರ ತಂದೆ ಅಗಲಿದ ನಂತರ ಕುಟುಂಬ ನಿರ್ವಹಣೆಗಾಗಿ ದರ್ಶನ್ ಅವರು ಎಷ್ಟು ಕ’ಷ್ಟಪಟ್ಟರೂ ಅಂದರೆ ಅದನ್ನು ಬರಿ ಮಾತಿನಲ್ಲಿ ಹೇಳುವುದಕ್ಕೂ ಕೂಡ ಸಾಧ್ಯವಾಗುವುದಿಲ್ಲ. ಮೊದಲ ಬಾರಿಗೆ ಲೈಟ್ ಬಾಯ್ ಆಗಿ ಕೆಲಸಕ್ಕೆ ಸೇರಿಕೊಳ್ಳುವ ಮೂಲಕ ತಮ್ಮ ಸಿನಿ ಜರ್ನಿಯನ್ನು ಆರಂಭಿಸುತ್ತಾರೆ. ನಂತರ ಮೆಜೆಸ್ಟಿಕ್ ಸಿನಿಮಾದಲ್ಲಿ ನಾಯಕನಟನಾಗುವ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡುತ್ತಾರೆ ಈ ಒಂದು ಸಿನಿಮಾದಲ್ಲಿ ಯಶಸ್ಸಿನ ನಂತರ ಒಂದೊಂದೇ ಮೆಟ್ಟಿಲನ್ನು ಏರುತ್ತಾ ಹೋಗುತ್ತರೆ.
ಈ ಕಾರಣಕ್ಕಾಗಿಯೇ ಕರ್ನಾಟಕದಲ್ಲಿ ಅತಿ ಹೆಚ್ಚು ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವಂತಹ ವ್ಯಕ್ತಿಯಂದರೆ ಅದು ದರ್ಶನ್ ಅಂತ ಹೇಳಿದರೂ ಕೂಡ ತಪ್ಪಾಗಲಾರದು. ಇನ್ನು ದರ್ಶನ್ ನೋಡುವುದಕ್ಕೆ ಗಂಭೀರವಾಗಿ ಕಂಡರೂ ಕೂಡ ಅವರ ಮಾತು ಒರಟಾಗಿದ್ದರೂ ಕೂಡ ಮನಸ್ಸಿನಲ್ಲಿ ಯಾವುದೇ ರೀತಿಯಾದಂತಹ ಕಲ್ಮಶ ಇರುವುದಿಲ್ಲ ಅಭಿಮಾನಿಗಳಿಗೆ ಅವರು ತೋರಿಸುವಂತಹ ಪ್ರೀತಿಯನ್ನು ವ್ಯಕ್ತಪಡಿಸಲು ಮಾತುಗಳಿಂದ ಸಾಧ್ಯವಿಲ್ಲ.
ಇನ್ನೂ ವಿಚಾರಕ್ಕೆ ಬರುವುದಾದರೆ ದರ್ಶನ್ ಅವರನ್ನು ಒಮ್ಮೆ ಸಂದರ್ಶನ ಮಾಡುವಂತಹ ಸಮಯದಲ್ಲಿ ನಿರೂಪಕರು ನೀವು ಯಶ್ ಜೊತೆ ಸಿನಿಮಾ ಮಾಡುತ್ತೀರಾ ಎಂಬ ಪ್ರಶ್ನೆಯನ್ನು ಕೇಳುತ್ತಾರೆ. ಈ ಪ್ರಶ್ನೆಯನ್ನು ಕೇಳಿದಾಗ ದರ್ಶನ್ ಅವರು ನಗುತ್ತಾ ಖಂಡಿತವಾಗಿಯೂ ಸರ್ ನನ್ನನ್ನು ಹಾಗೂ ಯಶ್ ಇಬ್ಬರನ್ನು ಕೂಡ ನಿಭಾಯಿಸುವಂತಹ ಡೈರೆಕ್ಟರ್ ಸಿಕ್ಕರೆ ಖಂಡಿತವಾಗಿಯೂ ಕೂಡ ನಾವಿಬ್ಬರೂ ಒಟ್ಟಾಗಿ ನಟಿಸುತ್ತೇವೆ ಅದರಲ್ಲಿ ಯಾವುದೇ ಅನುಮಾನ ಬೇಡ ಅಂತ ಹೇಳಿದ್ದಾರೆ.
ದರ್ಶನ್ ಅವರು ಈ ರೀತಿ ಸಂದರ್ಶನವೊಂದರಲ್ಲಿ ಹೇಳುವುದಕ್ಕಿಂತ ಮುಂಚೆ ಸ್ಯಾಂಡಲ್ ವುಡ್ ನಲ್ಲಿ ಹಲವಾರು ಗಾಸಿಪ್ಗಳು ಹರಿದಾಡುತ್ತಿದ್ದವು. ದರ್ಶನ್ ಹಾಗೂ ಯಶ್ ಇವರಿಬ್ಬರಿಗೂ ಕೂಡ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುವುದಿಲ್ಲ ಬದ್ದ ವೈರಿಗಳು ಎಂಬ ಮಾತುಗಳು ಕೇಳಿ ಬರುತ್ತಿತ್ತು. ಆದರೆ ಕಳೆದ ಮೂರು ವರ್ಷಗಳ ಹಿಂದೆ ಮಂಡ್ಯದಲ್ಲಿ ನಡೆದಂತಹ ಎಲೆಕ್ಷನ್ ನಲ್ಲಿ ಇಬ್ಬರೂ ಕೂಡ ಒಟ್ಟಿಗೆ ಕ್ಯಾನ್ವಾಸ್ ಮಾಡುವಂತಹ ಸಮಯದಲ್ಲಿ ಇವರಿಬ್ಬರ ನಡುವೆ ಯಾವುದೇ ರೀತಿಯಾದಂತಹ ಮನಸ್ತಾಪ ಅಥವಾ ಇಲ್ಲ ವೈರತ್ವ ಎಂಬುದು ಸಾಬೀತಾಗುತ್ತದೆ ಇಲ್ಲಿಂದ ಇವರಿಬ್ಬರ ನಡುವೆ ಇದ್ದ ಆತ್ಮೀಯತೆ ಇನ್ನು ಕೂಡ ಗಟ್ಟಿಯಾಗುತ್ತದೆ.
ದರ್ಶನ್ ಹಾಗೂ ಯಶ್ ಇವರಿಬ್ಬರನ್ನು ಕೂಡ ಒಟ್ಟಾಗಿ ನೋಡಿದಂತಹ ಅಭಿಮಾನಿಗಳು ಕೂಡ ತುಂಬಾನೇ ಸಂತೋಷ ಪಡುತ್ತದೆ ಇಷ್ಟು ದಿನಗಳ ಕಾಲ ಹರಿದಾಡುತ್ತಿದ್ದ ಗಾಸಿಪ್ ಗಳಿಗೆ ಬ್ರೇಕ್ ಬೀಳುತ್ತದೆ. ಒಂದು ಕಡೆ ದರ್ಶನ್ ವಿಚಾರವಾದರೆ ಮತ್ತೊಂದು ಕಡೆ ಯಶ್ ಅವರು ಕೂಡ ದರ್ಶನ್ ಅವರ ಬಗ್ಗೆ ಹೇಳಿರುವಂತಹ ಮಾತೊಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಯಶ್ ಅವರಿಗೆ ಕೆಜಿಎಫ್ ಸಿನಿಮಾದ ಯಶಸ್ಸಿನ ಪರವಾಗಿ ಸಂದರ್ಶನವೊಂದನ್ನು ನಡೆಸಲಾಗುತ್ತದೆ ಈ ಸಮಯದಲ್ಲಿ ನೀವು ದರ್ಶನ್ ಒಟ್ಟಿಗೆ ನಟಿಸುತ್ತೀರಾ ಅಂತ ಕೇಳುತ್ತಾರೆ.
ಆಗ ಯಶ್ ಅವರು ಖಂಡಿತವಾಗಿಯೂ ನಟಿಸುತ್ತೇನೆ ನಾನು ದರ್ಶನ್ ಅವರ ಸಿನಿಮಾಗಳನ್ನು ನೋಡಿಕೊಂಡು ಬೆಳೆದಂತಹ ಹುಡುಗ ದರ್ಶನ್ ಅವರ ಯಾವುದೇ ಸಿನಿಮಾ ಬಿಡುಗಡೆಯಾದರೂ ಕೂಡ ಮೈಸೂರಿನಲ್ಲಿ ಮೊದಲ ದಿನ ಮೊದಲ ಶೋ ನೋಡಿಕೊಂಡು ಬರುತ್ತಿದ್ದೆ ದರ್ಶನ್ ನನ್ನ ನೆಚ್ಚಿನ ನಟ ಅವರೊಟ್ಟಿಗೆ ಅಭಿನಯಿಸುವುದಕ್ಕೆ ಅವಕಾಶ ಸಿಕ್ಕರೆ ಖಂಡಿತವಾಗಿಯೂ ಕೂಡ ಅದು ನನ್ನ ಪುಣ್ಯ ಅಂತಾನೆ ಭಾವಿಸುತ್ತೇನೆ ಎಂದು ಯಶ್ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ದರ್ಶನ್ ಹಾಗೂ ಯಶ್ ಇಬ್ಬರೂ ಕೂಡ ಈ ರೀತಿ ಸಂದರ್ಶನದಲ್ಲಿ ಹೇಳಿಕೊಂಡಿರುವಂತಹ ವಿಚಾರವನ್ನು ಕೇಳಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಇಬ್ಬರು ಸ್ಟಾರ್ ನಟರನ್ನು ಒಂದೇ ಬಾರಿಗೆ ಬೆಳ್ಳಿತೆರೆಯ ಮೇಲೆ ನೋಡುವುದಕ್ಕೆ ಅಭಿಮಾನಿಗಳು ಕಾತುರದಿಂದ ಕಾದು ಕುಳಿತಿರುವುದನ್ನು ನಾವು ನೋಡಬಹುದಾಗಿದೆ. ಆದರೆ ಇವರಿಬ್ಬರಿಗೂ ಕೂಡ ಹೊಂದಾಣಿಕೆಯಾಗುವಂತಹ ಕಥೆ ಸಿದ್ಧವಾದರೆ ಖಂಡಿತವಾಗಿಯೂ ಕೂಡ ಸಿನಿಮಾ ಮಾಡುವುದಾಗಿ ಈ ನಾಯಕನಟರು ಹೇಳಿಕೊಂಡಿದ್ದಾರೆ.
ಬೇಗ ಈ ಜೋಡಿಗಳು ಬೆಳ್ಳಿತೆರೆಯ ಮೇಲೆ ರಾರಾಜಿಸಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ. ಸಧ್ಯಕ್ಕೆ ನಟ ದರ್ಶನ್ ಅವರು ಕ್ರಾಂತಿ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ ಇದು ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆಗಲಿದೆ ಸುಮಾರು ಐದು ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಮತ್ತೊಂದು ಕಡೆ ಯಶ್ ಅವರು ಕೂಡ ಕೆಜಿಎಫ್ ಚಪ್ಟರ್ 3 ಸಿನಿಮಾಗಾಗಿ ಎಲ್ಲಾ ರೀತಿಯಾದಂತಹ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ. ಪ್ರಶಾಂತ್ ನೀಲ್ ಅವರು ಸದ್ಯಕ್ಕೆ ಪ್ರಭಾಸ್ ಅವರ ಸಲಾರ್ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ ಸಿನಿಮಾ ಅಕ್ಟೋಬರ್ ತಿಂಗಳಿನಲ್ಲಿ ಸಂಪೂರ್ಣವಾಗಿದೆ.
ತದನಂತರ ಕೆಜಿಎಫ್ ಸಿನಿಮಾದ ಶೂಟಿಂಗ್ ಪ್ರಾರಂಭವಾಗುತ್ತದೆ ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ ವರ್ಷ ಅಂದರೆ 2023 ರಂದು ಕೆಜಿಎಫ್ ಚಾಪ್ಟರ್ ತ್ರೀ ಸಿನಿಮಾ ಪ್ರಪಂಚದಾದ್ಯಂತ ಬಿಡುಗಡೆ ಮಾಡುವಂತಹ ಯೋಜನೆಯನ್ನು ಹೊಂಬಾಳೆ ಸಂಸ್ಥೆಯವರು ಹಾಕಿಕೊಂಡಿದ್ದಾರೆ. ದರ್ಶನ್ ಹಾಗೂ ಯಶ್ ಅವರ ಈ ಆತ್ಮಿಯಥೆ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ನಿಮ್ಮ ಉತ್ತರವನ್ನು ತಿಳಿಸಿ ಧನ್ಯವಾದಗಳು ಸ್ನೇಹಿತರೆ.