ಈ ತಿಂಗಳಲ್ಲಿ ರಾಜ್ಯದ ಜನತೆಗೆ ಅನ್ನಭಾಗ್ಯ ಯೋಜನೆ ಜೊತೆ ಹಣ ಭಾಗ್ಯ ಕೂಡ, ಹೆಚ್ಚುವರಿ ಅಕ್ಕಿಯ ಹಣ ಯಾವ ದಿನಾಂಕ ಸಿಗುತ್ತದೆ ಗೊತ್ತಾ.?

ಕಳೆದ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಜುಲೈ ತಿಂಗಳಿನಿಂದ ಅನ್ನ ಭಾಗ್ಯ ಯೋಜನೆಯ ಪಡಿತರವನ್ನು 10Kg ನೀಡುತ್ತೇವೆ ಎಂದು ಮಾಡಿದ್ದ ಘೋಷಣೆಯ ಜಾರಿಗೆ ಇರುವ ಬದಲಿ ಮಾರ್ಗದ ಬಗ್ಗೆ ಚರ್ಚೆ ನಡೆದಿದೆ. ಬಳಿಕ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ K.H ಮುನಿಯಪ್ಪ ಮತ್ತು ಮಾನ್ಯ ಮುಖ್ಯಮಂತ್ರಿಗಳಾದ CM ಸಿದ್ದರಾಮಯ್ಯ ಅವರು ಮಾತನಾಡಿ ವಿಷಯ ಹಂಚಿಕೊಂಡಿದ್ದರು.

1Kgಗೆ 34 ರೂಪಾಯಿಯಂತೆ ಹಣ ಕೊಟ್ಟು ಕೇಂದ್ರದಿಂದ ಹೆಚ್ಚುವರಿ ಅಕ್ಕಿ ಖರೀದಿಸಲು ಪ್ರಯತ್ನ ಪಟ್ಟೆವು ಆದರೆ ಸಾಧ್ಯವಾಗಲಿಲ್ಲ, ಉಳಿದ ರಾಜ್ಯಗಳಿಂದ ಕೂಡ ಅಕ್ಕಿ ತರಿಸುವ ಪ್ರಯತ್ನ ನಡೆಯುತ್ತಿದೆ ಆದರೆ ಜುಲೈ ತಿಂಗಳಿಂದ ಅಕ್ಕಿ ಕೊಡುತ್ತೇವೆ ಎಂದು ಭರವಸೆ ನೀಡಿದ್ದೆವು ಜುಲೈ ತಿಂಗಳಿನಲ್ಲಿ ಅಕ್ಕಿ ನೀಡಲು ಸಾಧ್ಯವಾಗಿಲ್ಲ. ಅದಕ್ಕಾಗಿ 5 ಕೆಜಿ ಅಕ್ಕಿಯ ಬದಲು ಪ್ರತಿಸದಸ್ಯನಿಗೂ 170ರೂ.ಗಳನ್ನು ನೀಡುವ ನಿರ್ಧಾರ ಮಾಡಿದ್ದೇವೆ.

ರೇಷನ್ ಕಾರ್ಡ್ ಅಲ್ಲಿ ಎಷ್ಟು ಸದಸ್ಯರು ಇರುತ್ತಾರೆ ಅಷ್ಟು ಜನರ ಒಟ್ಟು ಮೊತ್ತವನ್ನು ಆ ಕುಟುಂಬದ ಯಜಮಾನ ಖಾತೆಗೆ DBT ಮೂಲಕ ವರ್ಗಾವಣೆ ಮಾಡುತ್ತೇವೆ ಎಂದು ಎಂದು ಮಾನ್ಯ ಮುಖ್ಯಮಂತ್ರಿಗಳು ತಿಳಿಸಿದ್ದರು. ಆ ಪ್ರಕಾರವಾಗಿ ಈಗ ಪ್ರತಿ ಸದಸ್ಯನಿಗೂ ಎಂದಿನಂತೆ ಅನ್ನ ಭಾಗ್ಯ ಯೋಜನೆ 5Kg ಅಕ್ಕಿ ಮತ್ತು ಗ್ಯಾರಂಟಿ ಕಾರ್ಡ್ ಯೋಜನೆಯ ಹೆಚ್ಚುವರಿ 5Kg ಅಕ್ಕಿ ಬದಲಿಗೆ 170ರೂ. ಬಡತನ ರೇಖೆಗಿಂತ ಕೆಳಗಿರುವ ಎಲ್ಲಾ ಕುಟುಂಬಗಳಿಗೂ ಜುಲೈ ತಿಂಗಳಿಂದ ಸಿಗುತ್ತದೆ ಎನ್ನುವುದು ಖಾತ್ರಿ ಆಗಿತ್ತು.

ಜುಲೈ 1 ನೇ ತಾರೀಖಿನಂದೇ ಹಣ ಜಮೆ ಆಗುತ್ತದೆ ಎಂದು ಎಲ್ಲೆಡೆ ಸುದ್ದಿ ಹರಡಿತ್ತು ಈಗ ಅದರ ಬಗ್ಗೆ ಮತ್ತೊಮ್ಮೆ ಮುಖ್ಯಮಂತ್ರಿಗಳು ಮಾತನಾಡಿದ್ದಾರೆ. ಜುಲೈ 1ನೇ ತಾರೀಖಿನಂದೇ ಹಣವನ್ನು ಜಮೆ ಮಾಡುತ್ತೇವೆ ಎಂದು ನಾನು ಎಲ್ಲೂ ಹೇಳಿಲ್ಲ, ಇದಕ್ಕೆ ಬೇಕಾದ ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಆಹಾರ ಸಚಿವರು ಮತ್ತು ಮುಖ್ಯಮಂತ್ರಿಗಳಾದ ನಾನು ಅನ್ನ ಭಾಗ್ಯ ಯೋಜನೆಯಡಿ ಎಲ್ಲರಿಗೂ 10Kg ಅಕ್ಕಿಯನ್ನೇ ಕೊಡಬೇಕು ಎಂದು ಬಹಳ ಶ್ರಮಿಸಿದೆ.

ಆದರೆ ಕೇಂದ್ರ ಸರ್ಕಾರದ ಸಹಕಾರ ಸಿಗದ ಕಾರಣ ಇದು ಸಾಧ್ಯವಾಗಲಿಲ್ಲ. ಅದಕ್ಕಾಗಿ ಅಕ್ಕಿ ಸಿಗುವವರೆಗೂ ಕೂಡ ಈ ಬದಲಿ ಮಾರ್ಗದಂತೆ ನಡೆದುಕೊಳ್ಳಲು ನಿರ್ಧರಿಸಿದ್ದೇವೆ. ಜುಲೈ 10 ನೇ ತಾರೀಖಿನಿಂದ ಈ ಪ್ರಕ್ರಿಯೆ ಆರಂಭ ಆಗಲಿದೆ. ಎಲ್ಲ ಅರ್ಹ ಪಡಿತರ ಚೀಟಿ ಫಲಾನುಭವಿಗಳಿಗೂ ಕೂಡ ಹಣ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಈ ಸಂಬಂಧವಾಗಿ ಉಪಮುಖ್ಯಮಂತ್ರಿಗಳಾದ DK ಶಿವಕುಮಾರ್ ಅವರು ಕೂಡ ಮಾತನಾಡಿ ಈಗಾಗಲೇ ಇದರ ಸಂಬಂಧಿತವಾಗಿ ಮಾಹಿತಿ ಕಲೆ ಹಾಕುತ್ತೇವೆ ಸರ್ಕಾರದಿಂದ 85% ಮಾಹಿತಿ ಪಡೆಯುವ ಕೆಲಸ ಪೂರ್ತಿ ಆಗಿದೆ, ಶೀಘ್ರವಾಗಿ ಉಳಿದ ಮಾಹಿತಿಯನ್ನು ಸಂಗ್ರಹಿಸಿ ಹಣ ಹಾಕುತ್ತೇವೆ ಎಂದು ಹೇಳಿ ಅವರು ಸಹ ಜುಲೈ 10 ರಿಂದ ಪ್ರಕ್ರಿಯೆ ಆರಂಭವಾಗುತ್ತದೆ ಎನ್ನುವ ಸುಳಿವು ಕೊಟ್ಟಿದ್ದಾರೆ.

ಈ ರೀತಿ ಹೆಚ್ಚುವರಿ ಅಕ್ಕಿಯ ಹಣವನ್ನು ಪಡೆಯಲು ಯಜಮಾನನ ಆಧಾರ್ ಕಾರ್ಡ್ ಆತನ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಆಗಿ NPCI ಮ್ಯಾಪಿಂಗ್ ಆಗಬೇಕಾಗಿರುವುದು ಕಡ್ಡಾಯ. ಈ ಕೂಡಲೇ ನೀವು ಕುಟುಂಬದ ಯಜಮಾನರಾಗಿದ್ದರೆ ಈ ಪ್ರಕ್ರಿಯೆಯನ್ನು ಪೂರ್ತಿಗೊಳಿಸಿ.

 

Leave a Comment

%d bloggers like this: