ಸದ್ಯಕ್ಕೆ ಇಂದಿನ ಕಾಲದಲ್ಲಿ ಪ್ರತಿಯೊಬ್ಬರ ಬದುಕು ಕೂಡ ಹಣದ ಹಿಂದೆಯೇ ಸುತ್ತುತ್ತಿದೆ ಎಂದರೆ ತಪ್ಪಾಗುವುದಿಲ್ಲ. ಹಾಗೆ ಪ್ರತಿದಿನ ಕೂಡ ಆರಂಭವಾಗುವುದು ಹಣದಿಂದಲೇ ಎಂದರು ಕೂಡ ಅದು ತಪ್ಪಾಗುವುದಿಲ್ಲ. ಇದು ಹಣಕ್ಕೆ ಹೆಚ್ಚು ಮಹತ್ವವಿರುವ ಕಾಲ, ಜೊತೆಗೆ ನಮ್ಮಲ್ಲಿ ಅವಶ್ಯಕತೆಗೆ ಬೇಕಾದಷ್ಟು ಹಣ ಇದ್ದಾಗ ಮಾತ್ರ ನಾವು ನಮ್ಮಿಷ್ಟದ ಬದುಕನ್ನು ಬದುಕಬೇಕು.
ಹಣದ ಹರಿವು ಹೆಚ್ಚಾಗುತ್ತಿದ್ದರೆ ಯಾರಿಗೂ ಬೇಡ ಎನಿಸುವುದೇ ಇಲ್ಲ ಒಳ್ಳೆಯ ಮಾರ್ಗದಲ್ಲಿ ಹಣ ಹೆಚ್ಚಾಗುತ್ತಿದೆ ಎಂದರೆ ಬರಲಿ ಬಿಡಿ ಎನ್ನುತ್ತಾರೆ ಮತ್ತು ಹಣದ ಆಕರ್ಷಣೆ ಹೆಚ್ಚಾಗಲು ಅವರ ಮನೆ ಅಭಿವೃದ್ಧಿ ಆಗಲು ವೈಯಕ್ತಿಕವಾಗಿ ಏಳಿಗೆ ಕಾಣಲು ಹಣದ ತೊಂದರೆಗಳಿಂದ ತಪ್ಪಿಸಿಕೊಳ್ಳಲು ಸದಾ ಸಂತೋಷದಿಂದಿರಲು ಹಲವು ಟಿಪ್ಸ್ ಗಳನ್ನು ಪಾಲಿಸುತ್ತಾರೆ. ಈ ಅಂಕಣದಲ್ಲಿ ನಾವು ಸಹ ಅಂತಹ ಕೆಲವು ಧನಾಕರ್ಷಣೆಯ ಟಿಪ್ಸ್ ಗಳ ಬಗ್ಗೆ ಹೇಳಿಕೊಡುತ್ತಿದ್ದೇವೆ.
ಹಣ ಖರ್ಚು ಮಾಡುವುದು ಸರ್ವೇಸಾಮಾನ್ಯ ಹಾಗೂ ಒಂದಲ್ಲ ಒಂದು ವಿಚಾರಕ್ಕಾಗಿ ನಾವು ನಮ್ಮ ಹಣವನ್ನು ಬೇರೆಯವರಿಗೆ ಕೊಡಲೇಬೇಕು. ಹಾಗೆ ನಾವು ಕೂಡ ಬೇರೆಯವರಿಂದ ಹಣ ತೆಗೆದುಕೊಳ್ಳಲೇಬೇಕು ಆದರೆ ಈ ರೀತಿ ಹಣ ಕೊಡುವಾಗ ಹಾಗು ತೆಗೆದುಕೊಳ್ಳುವಾಗ ಕೆಲವೊಂದು ತಪ್ಪುಗಳನ್ನು ಮಾಡಲೇಬಾರದು ಎನ್ನುವ ನಿಯಮ ಇದೆ. ಈ ರೀತಿ ಮಾಡುವುದರಿಂದ ಹಣದ ಪ್ಲೋ ಕಡಿಮೆ ಆಗಿ ಬಿಡುತ್ತದೆ.
ಮುಖ್ಯವಾಗಿ ಬೇರೆಯವರಿಗೆ ಹಣವನ್ನು ಕೈಯಿಂದ ತೆಗೆದು ಕೊಡುವಾಗ ಅದನ್ನು ಕತ್ತರಿ ಕೈನಲ್ಲಿ ಕೊಡಬಾರದು, ಅಂದರೆ ಸ್ಟೈಲ್ ಆಗಿ ಕೆಲವರು ಎರಡು ಬೆರಳುಗಳ ಮಧ್ಯೆ ತೆಗೆದು ಬೇರೆಯವರಿಗೆ ನೋಟ್ ಕೊಡುತ್ತಾರೆ ಅಥವಾ ಬೇರೆಯವರು ಆ ರೀತಿ ಕೊಟ್ಟಾಗ ಸ್ವೀಕರಿಸುತ್ತಾರೆ ಈ ರೀತಿ ಮಾಡಿದರೆ ನಿಮಗೆ ಬರುತ್ತಿರುವ ಹಣದ ಫ್ಲೋ ತುಂಡಾಗಿ ಹೋಗುತ್ತದೆ. ಹಿರಿಯರೆ ಎದುರು ಈ ರೀತಿ ಮಾಡಿದಾಗ ಅವರು ಬಯ್ಯುವುದನ್ನು ಕೂಡ ನಾವು ನೋಡಬಹುದು.
ಹಾಗಾಗಿ ಇನ್ನು ಮುಂದೆ ಯಾರಿಗೆ ನೋಟ್ ಕೊಡುವಾಗ ಅಥವಾ ಯಾರಿಂದಲಾದರೂ ತೆಗೆದುಕೊಳ್ಳುವಾಗ ಈ ರೀತಿ ತೋರುಬೆರಳು ಹಾಗೂ ಉಂಗುರದ ಮೇಲಿನ ಮಧ್ಯೆ ನೋಟ್ ಇಟ್ಟು ಕತ್ತರಿ ರೀತಿ ಮಾಡಿ ಕೊಡಬೇಡಿ, ಯಾರಾದರೂ ನಿಮಗೆ ಕೊಟ್ಟರೆ ಸ್ವೀಕರಿಸಬೇಡಿ. ನೋಟ್ ಕೊಡುವಾಗ ಅದನ್ನು ಸೀದಾ ಕೊಡುವುದಕ್ಕಿಂತ ನಿಮ್ಮ ಕಡೆ ಬರುವಂತೆ ಒಂದು ಫೋಲ್ಡ್ ಮಾಡಿ ಕೊಟ್ಟಾಗ ಅದು ಮರಳಿ ಯಾವುದಾದರು ರೂಪದಲ್ಲಿ ನಿಮಗೆ ಆದಾಯವಾಗಿ ಬರುತ್ತದೆ.
ಈ ರೀತಿ ನಿಮ್ಮ ಧನಾಕರ್ಷಣೆಯ ಶಕ್ತಿ ಹೆಚ್ಚಾಗುತ್ತದೆ. ಹಾಗಾಗಿ ಒಂದು ಬಾರಿ ಮಡಚಿ ಅದು ನಿಮ್ಮ ಕಡೆ ತಿರುಗುವಂತೆ ಇಟ್ಟುಕೊಂಡು ಹಣವನ್ನು ಕೊಡಿ. ಇನ್ನು ಸಹ ಹೆಚ್ಚು ಹಣದ ಆಕರ್ಷಣೆ ಆಗಬೇಕು ಎಂದರೆ ನಿಮ್ಮ ಪರ್ಸಲ್ಲಿ ಅಥವಾ ಹಣ ಇಡುವ ಬಾಕ್ಸ್ ಅಲ್ಲಿ ಧನಾಕರ್ಷಣೆ ಉಂಟುಮಾಡುವ ವಸ್ತುಗಳಾದ ಚಕ್ಕೆ ಪುಡಿ, ಏಲಕ್ಕಿ, ಪಲಾವ್ ಎಲೆ, ಜಿಂಬಾ ಕಾಯಿನ್ ಇನ್ನು ಮುಂತಾದ ಧನಾಕರ್ಷಣೆಯ ವಸ್ತುಗಳನ್ನು ಇಟ್ಟುಕೊಳ್ಳಿ.
ಮನೆಯಲ್ಲಿ ಸಹ ಸಕಾರಾತ್ಮಕ ವಾತಾವರಣ ಇರಬೇಕು ಮನೆಯಲ್ಲಿ ಹಣದ ಆಕರ್ಷಣೆ ಹೆಚ್ಚಾಗಬೇಕು ಮನೆಯ ಆರ್ಥಿಕ ಅಭಿವೃದ್ಧಿ ಆಗಬೇಕು ಎಂದರೆ ಶನಿವಾರದಂದು ಮನೆ ಸ್ವಚ್ಛಗೊಳಿಸಿ ಮತ್ತು ತಪ್ಪದೆ ಪ್ರತಿ ಅಮಾವಾಸ್ಯೆ ಹಾಗೂ ಹುಣ್ಣಿಮೆ ಹಿಂದಿನ ದಿನ ಅಥವಾ ಮರುದಿನ ಮತ್ತು ವಾರಕ್ಕೊಮ್ಮೆ ಮನೆಯಲ್ಲಿರುವ 27 ವಸ್ತುಗಳ ಜಾಗ ಬದಲಾಯಿಸಿ, ಬೇಡದ ವಸ್ತುಗಳನ್ನು ಬಿಸಾಕಿ, ಮನೆಯನ್ನು ಇಕ್ಕಟ್ಟಾಗಿ ಇಟ್ಟುಕೊಳ್ಳಬೇಡಿ ಈ ರೀತಿ ಮಾಡಿದರೆ ಹಣದ ಆಕರ್ಷಣೆ ಹೆಚ್ಚಾಗುತ್ತದೆ.