ಕಣ್ಣು ಎಷ್ಟು ಪ್ರಮುಖವಾದ ಅಂಗ ಎಂದು ಕಣ್ಣು ಕಳೆದುಕೊಂಡವರನ್ನೇ ಕೇಳಬೇಕು. ಯಾಕೆಂದರೆ ಕಣ್ಣಿಲ್ಲದ ಆ ಕತ್ತರಿನ ಬದುಕು ಹೇಗಿರುತ್ತದೆ ಎಂದು ಊಹಿಸಿಕೊಳ್ಳುವುದು ಕೂಡ ನಮಗೆ ಅಸಾಧ್ಯ. ಒಂದು ಕ್ಷಣ ರಾತ್ರಿ ಹೊತ್ತು ಕರೆಂಟ್ ಹೋಗಿ ಕತ್ತಲೆ ಆದರೆ ಮನುಷ್ಯ ಸಹಿಸುವುದಿಲ್ಲ ಅದಕ್ಕಾಗಿ ಎಷ್ಟೆಲ್ಲ ಬದಲಿ ವ್ಯವಸ್ಥೆಗಳ ಅನುಕೂಲತೆ ಮಾಡಿಕೊಂಡಿದ್ದಾನೆ. ಅಂತಹದರಲ್ಲಿ ಪ್ರಕಾಶಮಾನನಾದ ಆ ಸೂರ್ಯ ಹುಟ್ಟಿದರು ಕೂಡ ಅವನ ಬೆಳಕಲ್ಲೂ ದೃಷ್ಟಿ ಕಾಣಲಿಲ್ಲ ಎಂದರೆ ಅದು ಎಂತಹ ಶಾಪ ಎನಿಸದೇ ಇರದು.
ದೃಷ್ಟಿ ಹೀನ ಸಮಸ್ಯೆ ಮಾತ್ರ ಅಲ್ಲ ಕಣ್ಣಿಗೆ ಸಂಬಂಧ ಪಟ್ಟ ಹಾಗೆ ಇನ್ನು ಅನೇಕ ಕಾಯಿಲೆಗಳಿವೆ. ಇರುಳು ಕುರುಡು, ಸಮೀಪ ದೃಷ್ಟಿ ದೋಷ, ದೂರ ದೃಷ್ಟಿ ದೋಷ, ಕಣ್ಣು ಕೆಂಪಾಗುವುದು, ಯಾವಾಗಲೂ ಕಣ್ಣು ಉರಿಯುತ್ತಿರುವುದು, ಪಿಗ್ಮೆಂಟೇಷನ್ ಕೋಮ ಕಂಜಕ್ಟಿವಿಟೀಸ್, ರಕ್ತನಾಳಗಳು ಒಡೆದು ಕಣ್ಣು ಕೆಂಪಾಗಿರುವುದು ಇನ್ನು ಮುಂತಾದ ಅನೇಕ ಸಮಸ್ಯೆಗಳು ಕಣ್ಣಿನಲ್ಲಿ ಕಾಣಿಸಿಕೊಳ್ಳುತ್ತವೆ.
ಈ ಸಮಸ್ಯೆಗಳನ್ನು ಆಸ್ಪತ್ರೆ ಚಿಕಿತ್ಸೆಗಳಿಂದ ಪರಿಹಾರ ಮಾಡುವುದು ಸಲೀಸು ಎಂದುಕೊಂಡರೂ ಅಷ್ಟೇ ಪರಿಣಾಮಕಾರಿಯಾಗಿ ಅದು ವರ್ಕ್ ಆಗುವುದಿಲ್ಲ ಅಥವಾ ಸೈಡ್ ಎಫೆಕ್ಟ್ ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಹೆಚ್ಚಿನ ಜನರು ಆಯುರ್ವೇದ ಔಷಧಿಗಳ ಮೊರೆ ಹೋಗುತ್ತಾರೆ. ಕಣ್ಣಿಗೆ ಸಂಬಂಧಪಟ್ಟ ಯಾವುದೇ ಸಮಸ್ಯೆ ಬಂದರೂ ಆಯುರ್ವೇದದಲ್ಲಿ ಒಂದೊಂದು ಸಮಸ್ಯೆಗೂ ಒಂದೊಂದು ರೀತಿಯಲ್ಲಿ ಚಿಕಿತ್ಸೆ ಸಿಗುತ್ತದೆ.
ಅದರಿಂದ ಕಣ್ಣಿನ ದೋಷಗಳು ಪರಿಹಾರ ಆಗುವುದು ಮಾತ್ರವಲ್ಲದೇ ಕಣ್ಣಿನ ದೃಷ್ಟಿ ಇಂಪ್ರೂ ಆಗಬೇಕು ಎಂದರೆ ಅದಕ್ಕೆ ಕೂಡ ಟಿಪ್ಸ್ ಇದೆ. ಅದರ ಬಗ್ಗೆ ತಿಳಿಸಿಕೊಡುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ. ಕಣ್ಣಿನಲ್ಲಿರುವ ನರಗಳು ಬಹಳ ಸೂಕ್ಷ್ಮ. ಅವು ಹೊಡೆದುಹೋದಾಗ ಕಣ್ಣು ಕೆಂಪಗೆ ಕಾಣುತ್ತದೆ. ಈ ರೀತಿ ನರಗಳು ಉಳಿದುಕೊಳ್ಳಲು ಕಾರಣ ಆಲೋಚನೆ ಪಿತ್ತ ಮತ್ತು ತರ್ಪಕ ಕಫ ಇವುಗಳ ನಡುವೆ ಉದಾನ ವಾಯುವಿನ ಇಮ್ ಬ್ಯಾಲೆನ್ಸ್ ಆಗಿರುವುದು.
ಆಯುರ್ವೇದ ಚಿಕಿತ್ಸೆಯಲ್ಲಿ ಇದನ್ನು ಬ್ಯಾಲೆನ್ಸ್ ಮಾಡಿ ಉದಾನ ವಾಯುವನ್ನು ಕ್ರಿಯಾಶೀಲಗೊಳಿಸಲಾಗುತ್ತದೆ ಆ ಮೂಲಕ ಸಮಸ್ಯೆ ಪರಿಹಾರ ಆಗುತ್ತದೆ ಈ ರೀತಿ ಉದಾನ ವಾಯುವನು ಕ್ರಿಯಾಶೀಲಗೊಳಿಸಲು ಅಥವಾ ಕಣ್ಣಿನಲ್ಲಿ ವಿಕಾರಗಳು ಕಾಣದ ರೀತಿ ಮಾಡಲು ಇರುವ ಒಂದು ವಸ್ತು ಎಂದರೆ ಅದು ಶುದ್ಧವಾದ ಹಸುವಿನ ತುಪ್ಪ. ಶುದ್ಧವಾದ ಹಸುವಿನ ತುಪ್ಪ ಅಥವಾ ಹೆಮ್ಮೆ ತುಪ್ಪವನ್ನು ಪ್ರತಿದಿನ ರಾತ್ರಿ ಕಣ್ಣಿಗೆ ಹಚ್ಚಿಕೊಂಡು ಕನಿಷ್ಠ 20 ಬಾರಿಯಾದರೂ ಕಣ್ಣಿನ ರೆಪ್ಪೆಯನ್ನು ಬಡಿದು ಎಕ್ಸಸೈಜ್ ಮಾಡುವುದರಿಂದ ಕಣ್ಣಿನ ಸಂಪೂರ್ಣ ಎಲ್ಲಾ ದೋಷಗಳು ಕೂಡ ಶೀಘ್ರವಾಗಿ ನಿವಾರಣೆ ಆಗುತ್ತದೆ.
ಇಲ್ಲಿ ತುಪ್ಪದ ಬದಲು ಶುದ್ಧ ಅರಳಿ ಎಣ್ಣೆ ಅಥವಾ ಶುದ್ಧ ಕೊಬ್ಬರಿ ಎಣ್ಣೆಯನ್ನು ಕೂಡ ಬಳಸಬಹುದು ಮೊದಲನೇ ಹಂತದಲ್ಲಿ ಇದ್ದಾಗ ಈ ರೀತಿ ಚಿಕಿತ್ಸೆಗಳನ್ನು ಆಯುರ್ವೇದ ತಜ್ಞ ಸೂಚಿಸುತ್ತಾರೆ. ಮುಂದಿನ ದಿನಗಳಲ್ಲಿ ಕಣ್ಣಿನ ಕುರಿತು ಗಂಭೀರವಾದ ಸಮಸ್ಯೆ ಉಂಟಾದರೆ ತರ್ಪಣ ಚಿಕಿತ್ಸೆ ಪುಟಪಾಕ ಚಿಕಿತ್ಸೆ, ನೇತ್ರ ಪಿಂಡಿ ಸಮಸ್ಯೆ ನೇತ್ರ ಶೇಖ ಕೆಲಸ ಇನ್ನೂ ಮುಂತಾದ ಚಿಕಿತ್ಸೆಗಳ ಮೂಲಕ ಅದಕ್ಕೆ ಪರಿಹಾರ ನೀಡುತ್ತಾರೆ. ಹಾಗಾಗಿ ಕಣ್ಣಿನ ಆರೋಗ್ಯ ಚೆನ್ನಾಗಿರಬೇಕು ಎನ್ನುವುದು ಅದಕ್ಕೆ ಪೂರಕವಾದ ಆಹಾರ ಪದಾರ್ಥಗಳನ್ನು ಸೇವಿಸುವುದರ ಜೊತೆಗೆ ಹೊರಗಿನಿಂದಲೂ ಕೂಡ ಈ ರೀತಿ ಸಣ್ಣಪುಟ್ಟ ಮನೆ ಮದ್ದುಗಳನ್ನು ಮಾಡಿಕೊಂಡು ಕಣ್ಣಿನ ಆರೋಗ್ಯ ವೃದ್ಧಿಸಿಕೊಳ್ಳಬಹುದು.