ಅಂಚೆ ಇಲಾಖೆಯಿಂದ ವಿದ್ಯಾರ್ಥಿಗಳಿಗೆ 6,000 ವಿದ್ಯಾರ್ಥಿ ವೇತನ ನೀಡುತ್ತಿದ್ದಾರೆ ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮೆ ಆಗುತ್ತೆ.!

 

ಸರ್ಕಾರದ ಒಂದು ಪ್ರಮುಖ ಆರ್ಥಿಕ ಸಂಸ್ಥೆಯಾಗಿರುವ ಅಂಚೆ ಕಚೇರಿಯು ತನ್ನ ಗ್ರಾಹಕರಿಗೆ ಹಾಗೂ ದೇಶದ ನಾಗರಿಕರಿಗೆ ಹಣಕಾಸಿನ ವ್ಯವಹಾರ ಮಾತ್ರವಲ್ಲದೆ ಇನ್ನು ಅನೇಕ ವಿಚಾರಗಳ ಮೂಲಕ ನೆರವಾಗುತ್ತಿದೆ. ಹಣಕಾಸಿನ ವಿಚಾರವನ್ನೇ ಹೇಳುವುದಾದರೆ ಅಂಚೆ ಕಚೇರಿಯಲ್ಲಿ ಎಲ್ಲಾ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಹಲವಾರು ರೀತಿಯ ಯೋಜನೆಗಳನ್ನು ಜಾರಿಗೆ ತಂದಿದೆ.

ಹೆಣ್ಣು ಮಕ್ಕಳಿಗೆ ಸುಕನ್ಯಾ ಸಮೃದ್ಧಿ ಯೋಜನೆಯಿಂದ ಹಿಡಿದು ಹಿರಿಯರಿಗಾಗಿ ಇರುವ ಹಿರಿಯ ನಾಗರಿಕರ ಯೋಜನೆಗಳ ತನಕ ಸಾಕಷ್ಟು ಉಳಿತಾಯ ಹಾಗೂ ನಿಶ್ಚಿತ ಠೇವಣಿ ಯೋಜನೆಗಳು, ಪಿಂಚಣಿ ಯೋಜನೆಗಳ ಲಭ್ಯವಿವೆ. ಇದರ ಜೊತೆಗೆ ಸರ್ಕಾರದ ಹಲವಾರು ಸೇವೆಗಳು ಕೂಡ ಅಂಚೆ ಕಚೇರಿಯಲ್ಲಿ ಸಿಗುತ್ತದೆ. ಈಗ ಈ ಪಟ್ಟಿಗೆ ಹೊಸದೊಂದು ಸೌಲಭ್ಯ ಸೇರ್ಪಡೆ ಆಗಿದ್ದು ಇನ್ನು ಮುಂದೆ ಅಂಚೆ ಕಚೇರಿ ವಿದ್ಯಾರ್ಥಿವೇತನವನ್ನು ಕೂಡ ಪಡೆಯಬಹುದಾಗಿದೆ.

ಅಂಚೆ ಇಲಾಖೆಯಿಂದ ನೀಡಲಾಗುವ ಈ ವಿದ್ಯಾರ್ಥಿ ವೇತನ ಪಡೆಯಲು ದೇಶದ ಕೆಲವು ವಿದ್ಯಾರ್ಥಿಗಳು ಮಾತ್ರ ಅರ್ಹರಾಗಿರುತ್ತಾರೆ. ಅರ್ಹಮಾನದಂಡಗಳ ಮೂಲಕ ಅವರನ್ನು ಆರಿಸಿ ಅಂಚೆ ಇಲಾಖೆಯು ವಿದ್ಯಾರ್ಥಿ ವೇತನವನ್ನು ನೀಡುತ್ತದೆ. ಈ ಅಂಕಣದಲ್ಲಿ ನಾವು ಅರ್ಜಿ ಸಲ್ಲಿಸುವ ವಿಧಾನ ಕೇಳಲಾಗುವ ದಾಖಲೆಗಳು ಮತ್ತು ಅರ್ಜಿ ಸಲ್ಲಿಸಲು ವಿದ್ಯಾರ್ಥಿಗೆ ಇರಬೇಕಾದ ಅರ್ಹತೆಗಳು ಮತ್ತು ಎಷ್ಟು ವಿದ್ಯಾರ್ಥಿ ವೇತನ ಸಿಗುತ್ತದೆ ಎನ್ನುವ ಎಲ್ಲಾ ವಿಷಯದ ಬಗ್ಗೆ ತಿಳಿಸುತ್ತಿದ್ದೇವೆ.

ಈ ವಿದ್ಯಾರ್ಥಿವೇತನಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ನೀವು ತಿಳಿದುಕೊಳ್ಳಲು ಬಯಸಿದರೆ ನೀವು ಹಿರಿಯ ಅಂಚೆ ಅಧೀಕ್ಷಕ ಕಚೇರಿಯನ್ನು ಸಂಪರ್ಕಿಸಬೇಕು.  ಪೋಸ್ಟ್ ಆಫೀಸ್ ಇಮೇಲ್ ಐಡಿಗೆ ಇಮೇಲ್ ಕಳುಹಿಸುವ ಮೂಲಕವೂ ಮಾಹಿತಿ ಪಡೆಯಬಹುದು.

ಅಂಚೆ ಕಚೇರಿಯ ವಿದ್ಯಾರ್ಥಿ ವೇತನ ಪಡೆಯಲು ಇರಬೇಕಾದ ಅರ್ಹತೆಗಳು:-
● ವಿದ್ಯಾರ್ಥಿಯು ದೇಶದಲ್ಲಿ ಮಾನ್ಯತೆ ಪಡೆದ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರಬೇಕು.
● ಆ ಶಾಲೆಯು ಅಂಚೆಚೀಟಿಗಳ ಸಂಗ್ರಹ ಕ್ಲಬ್ ಅನ್ನು ಹೊಂದಿದ್ದರೆ ಮತ್ತು ವಿದ್ಯಾರ್ಥಿಯು ಕ್ಲಬ್‌ನ ಸದಸ್ಯರಾಗಿದ್ದರೆ, ಅವರು ಮಾತ್ರ ಈ ವಿದ್ಯಾರ್ಥಿವೇತನದ ಲಾಭವನ್ನು ಪಡೆಯಬಹುದು.
● ಯೋಜನೆಯು ಅಂಚೆಚೀಟಿಗಳ ಕ್ಲಬ್ ಅನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ಅಂದರೆ ಅಂಚೆ ಸ್ಟ್ಯಾಂಪ್ ಮತ್ತು ಅಂಚೆ ಇತಿಹಾಸವನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ನೀಡುತ್ತದೆ.

● ವಿದ್ಯಾರ್ಥಿಯ ಶೈಕ್ಷಣಿಕ ದಾಖಲೆಯು ಉತ್ತಮವಾಗಿರಬೇಕು.
● ವಿದ್ಯಾರ್ಥಿಯು ಕಳೆದ ಶೈಕ್ಷಣಿಕ ವರ್ಷದಲ್ಲಿ ಬರೆದ ಪರೀಕ್ಷೆಯಲ್ಲಿ ಕನಿಷ್ಠ 60 % ಅಂಕಗಳನ್ನು ಪಡಿದಿರಲೇಬೇಕು ಆದರೆ ದೀನದಯಾಳ್ ಸ್ಪರ್ಶ, SC/ST ವಿದ್ಯಾರ್ಥಿಗಳಂತಹ ಮೀಸಲಾತಿ ವರ್ಗದ ವಿದ್ಯಾರ್ಥಿಗಳು 5% ರಷ್ಟು ರಿಯಾಯಿತಿಯನ್ನು ಪಡೆಯುತ್ತಾರೆ.
● ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಅಂಚೆ ಇಲಾಖೆಯು ವಿದ್ಯಾರ್ಥಿ ವೇತನಕ್ಕಾಗಿ ಪರೀಕ್ಷೆ ನಡೆಸುತ್ತದೆ. ಇದರಲ್ಲಿ ಇತಿಹಾಸ, ಭೂಗೋಳ, ವಿಜ್ಞಾನ, ಕ್ರೀಡೆ, ಸಂಸ್ಕೃತಿ ಮತ್ತು ಅಂಚೆ ಚೀಟಿಗಳ ಸಂಗ್ರಹಣೆಗೆ ಸಂಬಂಧಪಟ್ಟ ಹಾಗೆ ಪ್ರಶ್ನೆಗಳಿರುತ್ತವೆ. ಅರ್ಹತಾ ಹಂತಗಳನ್ನು ಗಳಿಸಿದ ವಿದ್ಯಾರ್ಥಿಗಳಿಗಷ್ಟೇ ವಿದ್ಯಾರ್ಥಿ ವೇತನ ಸಿಗುತ್ತದೆ.

ಅಂಚೆ ಕಚೇರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
● ಶಾಶ್ವತ ನಿವಾಸಿ ಪ್ರಮಾಣಪತ್ರ
● ಆಧಾರ್ ಕಾರ್ಡ್
● ಬ್ಯಾಂಕ್ ಪಾಸ್‌ ಬುಕ್ ವಿವರ
● ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
● ಮೊಬೈಲ್ ಸಂಖ್ಯೆ
● ಶೈಕ್ಷಣಿಕ ಅರ್ಹತೆಯ ದಾಖಲೆಗಳು

ಅರ್ಜಿ ಸಲ್ಲಿಸುವ ವಿಧಾನ:-
● ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಇಚ್ಛಿಸುವವರು ಅಂಚೆ ಇಲಾಖೆಯ ಅಧಿಕೃತ ವೆಬ್ಸೈಟ್ ಆದ www.indiapost.gov.in ಗೆ ಭೇಟಿ ನೀಡಿ ಅರ್ಜಿ ಫಾರಂ ಭರ್ತಿ ಮಾಡಿ ಸಂಬಂಧಪಟ್ಟ ದಾಖಲೆಗಳ ಕಾಪೀಯಲ್ಲಿ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು.
● ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸಲು ಇಚ್ಛಿಸುವವರು ಹತ್ತಿರದಲ್ಲಿರುವ ಅಂಚೆ ಕಚೇರಿ ಶಾಖೆಗೆ ಹೋಗಿ ವಿದ್ಯಾರ್ಥಿ ವೇತನಕ್ಕಾಗಿ ಇರುವ ಫಾರಂ ಪಡೆದು ತುಂಬಿಸಿ ಸಂಬಂಧ ಪಟ್ಟ ದಾಖಲೆಗಳನ್ನು ಅದರ ಜೊತೆ ಲಗತ್ತಿಸಿ ಅಧಿಕಾರಿಗಳಿಗೆ ಸಲ್ಲಿಸಬಹುದು.

Leave a Comment

%d bloggers like this: