ಕಡಿಮೆ ಸಮಯದಲ್ಲಿ ಹಣ ಸಂಪಾದ್ನೆ ಮಾಡೋದು ಹೇಗೆ ಗೊತ್ತಾ.? ಶ್ರೀಮಂತರಾಗಬೇಕು ಅಂತ ಬಯಸೋರು ತಪ್ಪದೆ ಇದನ್ನು ನೋಡಿ.

 

ಪ್ರತಿಯೊಬ್ಬ ಮನುಷ್ಯನು ಕೂಡ ಕಷ್ಟಪಟ್ಟು ತನ್ನ ಜೀವನದಲ್ಲಿ ನಾನು ಈ ರೀತಿಯಾಗಿ ಬದುಕಬೇಕು ಎಂದು ಹಣವನ್ನು ಸಂಪಾದನೆ ಮಾಡುತ್ತಿರುತ್ತಾರೆ ಆದರೆ ಆ ವ್ಯಕ್ತಿ ತಾನು ಸಂಪಾದನೆ ಮಾಡಿದಂತಹ ಹಣದಲ್ಲಿ ತನ್ನ ಕೆಲಸ ಕಾರ್ಯಗಳಿಗೆ ಅಂದರೆ ಅವಶ್ಯಕತೆಗೆ ಎಷ್ಟು ಹಣ ಬೇಕೋ ಅಷ್ಟು ಹಣವನ್ನು ಮಾತ್ರ ಇಟ್ಟುಕೊಂಡು ಮಿಕ್ಕಂತಹ ಹಣವನ್ನು ಸೇವಿಂಗ್ಸ್ ಮಾಡುವುದರಿಂದ ಆ ವ್ಯಕ್ತಿ ಮುಂದಿನ ದಿನಗಳಲ್ಲಿ ಆ ಹಣದ ಅವಶ್ಯಕತೆಗೆ ತಕ್ಕಂತೆ ಬೇರೆ ಕೆಲಸವನ್ನು ಮಾಡಬಹುದು.

ಆದರೆ ಪ್ರತಿಯೊಬ್ಬರೂ ಕೂಡ ಇತ್ತೀಚಿನ ದಿನಗಳಲ್ಲಿ ಸಂಪಾದನೆ ಮಾಡಿದಂತಹ ಎಲ್ಲಾ ಹಣವನ್ನು ಕೂಡ ಬೇಡದೆ ಇರುವಂತ ಕೆಲಸ ಕಾರ್ಯಗಳಿಗೆ ಅನಗತ್ಯ ವಸ್ತುಗಳನ್ನು ಖರೀದಿ ಮಾಡುವುದರಲ್ಲಿ ಹೆಚ್ಚಾಗಿ ಹೊರಗಡೆ ಹೋಗಿ. ಬೇರೆಯವರಿಗೆ ಹಣ ಖರ್ಚು ಮಾಡುವುದರ ಮುಖಾಂತರ ತಾವು ಕಷ್ಟಪಟ್ಟು ಸಂಪಾದನೆ ಮಾಡಿದಂತಹ ಎಲ್ಲಾ ಹಣವನ್ನು ಕೂಡ ವ್ಯರ್ಥ ಮಾಡುತ್ತಿದ್ದಾರೆ ಇದರಿಂದ ಯಾವುದೇ ವ್ಯಕ್ತಿಯು ಕೂಡ ಮುಂದಿನ ದಿನಗಳಲ್ಲಿ ಹೆಚ್ಚು ಹಣವನ್ನು ಹೊಂದಿರುವಂತಹ ಶ್ರೀಮಂತನಾಗಲು ಸಾಧ್ಯವಾಗುವುದಿಲ್ಲ‌

ಆದ್ದರಿಂದ ಪ್ರತಿಯೊಬ್ಬರೂ ಕೂಡ ತಿಳಿದುಕೊಳ್ಳ ಬೇಕಾದoತಹ ಹಾಗೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಮುಖ್ಯ ಅಂಶಗಳು ಏನು ಎಂದರೆ ನೀವು ಎಷ್ಟೇ ಹಣವನ್ನು ಸಂಪಾದನೆ ಮಾಡಿದರು ಪರವಾಗಿಲ್ಲ ಬದಲಿಗೆ ಆ ಹಣದಲ್ಲಿ ನಿಮ್ಮ ಎಲ್ಲಾ ಖರ್ಚುಗಳನ್ನು ಕಳೆದು ಇಂತಿಷ್ಟು ಹಣವನ್ನು ಎತ್ತಿಡುವುದು ಬಹಳ ಮುಖ್ಯವಾಗಿರುತ್ತದೆ ಆಗ ಆ ಹಣವನ್ನು ನಿಮಗೆ ಯಾವಾಗ ಒಳ್ಳೆಯ ಸಮಯ ಬರುತ್ತದೆಯೋ ಅಂದರೆ ಆ ಹಣದಿಂದ ಮತ್ತೆ ಯಾವುದಾದರೂ ಕೆಲಸವನ್ನು ಪ್ರಾರಂಭ ಮಾಡಿ ಅದರಿಂದ ಮತ್ತೆ ಹೇಗೆ ಹಣವನ್ನು ಸಂಪಾದನೆ ಮಾಡಬಹುದು ಎನ್ನುವ ದಾರಿ ನಿಮಗೆ ಸಿಗುತ್ತದೆಯೋ ಆ ಸಮಯದಲ್ಲಿ.

ಆ ಹಣವನ್ನು ಹೂಡಿಕೆ ಮಾಡುವುದು ಮುಖ್ಯವಾಗಿರುತ್ತದೆ ನಂತರ ನೀವು ಮಾಡುವ ಕೆಲಸದಲ್ಲಿಯೂ ಕೂಡ ಹಣ ಬರುತ್ತದೆ ಹಾಗೂ ನೀವು ಹಣವನ್ನು ಕೂಡಿಟ್ಟಂತಹ ಹಣವನ್ನು ಮತ್ತೆ ಕೆಲಸಕ್ಕೆ ಹಾಕಿದರೆ ಅದರಲ್ಲಿಯೂ ಕೂಡ ನಿಮಗೆ ಲಾಭ ಎನ್ನುವುದು ಬರುತ್ತದೆ ಹೀಗೆ ಒಂದರಿಂದ ಮತ್ತೊಂದು ಮತ್ತೊಂದರಿಂದ ಮಗದೊಂದು ಹೀಗೆ ನಿಮ್ಮ ಹಣಕಾಸಿನ ವ್ಯವಹಾರವೂ ಕೂಡ ಬೆಳೆಯುತ್ತಾ ಹೋಗುತ್ತದೆ ಆದ್ದರಿಂದ ಈ ವಿಷಯಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ಅದರಲ್ಲೂ ನೀವು ಯಾವುದೇ ಹಣವನ್ನು ಉಳಿಸಿದ್ದರು ಕೂಡ ಆ ಹಣವನ್ನು ಬೇರೆ ವಿಷಯಗಳಿಗೆ ಅಂದರೆ ಬೇರೆ ಕೆಲಸ ಕಾರ್ಯಗಳಿಗೆ ಖರ್ಚು ಮಾಡುವುದರ ಬದಲು ಆ ಹಣದಿಂದ ಏನನ್ನಾದರೂ ಖರೀದಿಸಿದರೆ ಅದು ಎಷ್ಟೇ ವರ್ಷಗಳಾದರೂ ಕೂಡ ಮತ್ತೆ ಅದರ ಬೆಲೆ ದುಪ್ಪಟ್ಟಾಗುವಂತೆ ಅಂದರೆ ಅದರ ಬೆಲೆ ಹೆಚ್ಚಾಗುವಂತಹ ವಸ್ತುಗಳನ್ನು ಖರೀದಿಸುವುದು ಉತ್ತಮ.

ಆಗ ನೀವು ಮಾಡಿದಂತಹ ಹಣದಲ್ಲಿ ನಿಮಗೆ ಯಾವುದೇ ರೀತಿಯ ಮೋಸ ಆಗುವುದಿಲ್ಲ ಅಂದರೆ ಅದರಿಂದ ಎಷ್ಟೇ ವರ್ಷ ಕಳೆದರೂ ಕೂಡ ಹಣ ಎನ್ನುವುದು ನಿಮಗೆ ಬರುತ್ತಲೇ ಇರುತ್ತದೆ ಹೀಗೆ ನಮ್ಮ ಜೀವನ ದಲ್ಲಿ ಕೆಲವೊಂದು ವಿಷಯಗಳನ್ನು ತಿಳಿದುಕೊಳ್ಳುವುದರಿಂದ ನೀವು ಕೂಡ ಎಲ್ಲರಂತೆ ಶ್ರೀಮಂತರಾಗಬಹುದು ಹಾಗೂ ಹೆಚ್ಚಿನ ಹಣವನ್ನು ಕೂಡ ಪಡೆದುಕೊಳ್ಳಬಹುದು ಆದರೆ ಹೆಚ್ಚಿನ ಜನ ಈ ನಿಯಮಗಳನ್ನು ಅನುಸರಿಸುವುದಿಲ್ಲ.

ಎಲ್ಲಿಯ ತನಕ ಹಣ ಬರುತ್ತದೆಯೋ ಅಲ್ಲಿಯ ತನಕ ಎಲ್ಲಾ ಹಣವನ್ನು ಕೂಡ ಖರ್ಚು ಮಾಡಿ ಮುಂದಿನ ದಿನಗಳಲ್ಲಿ ಖಾಲಿ ಕೈಯಲ್ಲಿ ಕುಳಿತಿರುತ್ತಾರೆ. ಆದರೆ ಯಾರು ಕೂಡ ಆ ರೀತಿಯಾದ ತಪ್ಪು ಕೆಲಸವನ್ನು ಮಾಡಬೇಡಿ ಈ ರೀತಿಯ ಒಳ್ಳೆಯ ನಿಯಮಗಳನ್ನು ಅನುಸರಿಸಿ ನೀವು ಕೂಡ ಜೀವನದಲ್ಲಿ ಹೆಚ್ಚು ಹಣವನ್ನು ಸಂಪಾದನೆ ಮಾಡಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Comment

%d bloggers like this: