ಹೆಣ್ಣು ಮಕ್ಕಳ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ಮಾಡುತ್ತಾರೆ. ಆದರೆ ಈಗಿನ ಬಿಸಿ ಲೈಫ್ ಸ್ಟೈಲ್ ನಲ್ಲಿ ಪ್ರತಿದಿನ ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವಷ್ಟು ಸಮಯ ಕಾಲೇಜಿಗೆ ಹಾಗೂ ಉದ್ಯೋಗಕ್ಕೆ ಹೋಗುವ ಹೆಣ್ಣು ಮಕ್ಕಳಿಗೆ ಇರುವುದಿಲ್ಲ. ಹಾಗಾಗಿ ಇವರು ಸೌಂದರ್ಯ ಹೆಚ್ಚಿಸಿಕೊಳ್ಳಲು ಪಾರ್ಲರ್ಗಳ ಕಡೆ ಹೋಗುತ್ತಾರೆ.
ಆದರೆ ನಮ್ಮ ಹಿರಿಯರು ಮನೆಯಲ್ಲೇ ಇದ್ದುಕೊಂಡು ಯಾವುದೇ ಪಾರ್ಲರ್ಗೆ ಹಣ ದುಂದು ವೆಚ್ಚ ಮಾಡದೆ ಬಿಡುವಾದಾಗ ಮನೆಯಲ್ಲಿಯೇ ಸಿಗುವ ಆಯುರ್ವೇದಿಕ್ ಪದಾರ್ಥಗಳನ್ನು ಬಳಸಿಕೊಂಡು ರೆಮಿಡಿ ಮಾಡಿಕೊಂಡು ಪಾರ್ಲರ್ ಗಿಂತ ಸರ್ವಿಸ್ ಗಿಂತ ಚೆನ್ನಾಗಿ ಮನೆಯಲ್ಲಿಯೇ ಸೌಂದರ್ಯ ಹೆಚ್ಚಿಸುವ ಮನೆ ಮದ್ದು ಮಾಡಿಕೊಳ್ಳುತ್ತಿದ್ದರು.
ಇವುಗಳ ಮೂಲಕ ತ್ವಚೆ ಕಾಂತಿಯನ್ನು ಹೆಚ್ಚಿಸುವುದು ಅಥವಾ ಕಲೆಗಳನ್ನು ತೆಗೆದು ಹಾಕುವುದು ಇವುಗಳನ್ನು ಮಾಡುತ್ತಿದ್ದರು. ಈ ಅಂಕಣದಲ್ಲೂ ಇದೇ ರೀತಿ ಒಂದು ಮನೆ ಮದ್ದನ್ನು ಬಳಸಿ ಕುತ್ತಿಗೆ, ಮೊಣ ಕೈ, ಮೊಣಕೈಗೆ ಕಾಲು, ಅಂಡರ್ ಆರ್ಮ್ ಮತ್ತು ಪ್ರವೇಟ್ ಪಾರ್ಟ್ ಅಲ್ಲಿ ಆಗಿರುವ ಕಪ್ಪು ಕಲೆಯನ್ನು ಹೋಗಿಸುವ ವಿಧಾನವನ್ನು ತಿಳಿಸಿ ಕೊಡುತ್ತಿದ್ದೇವೆ.
ದುಬಾರಿ ಕ್ರೀಮ್ ಗಳ ಮೊರೆ ಹೋಗದೆ ಮನೆಯಲ್ಲಿ ಸಿಗುವ ನಾಲ್ಕು ಪದಾರ್ಥಗಳನ್ನು ಬಳಸಿಕೊಂಡು ಈ ಸಿಂಪಲ್ ಟ್ರಿಕ್ ಮಾಡಬಹುದು. ಈ ರೆಮಿಡಿ ತಯಾರಿಸಿಕೊಳ್ಳುವುದು ಹಾಗೂ ಇದನ್ನು ಅಪ್ಲೈ ಮಾಡುವ ವಿಧಾನವನ್ನು ಸರಿಯಾಗಿ ತಿಳಿದುಕೊಂಡಿರಬೇಕು ಅಷ್ಟೇ. ಮೊದಲಿಗೆ ನಿಮ್ಮ ಮನೆಯಲ್ಲಿ ಬಳಸುವ ಯಾವುದೇ ಟೂಥ್ ಪೇಸ್ಟ್ ಅನ್ನು ತೆಗೆದುಕೊಳ್ಳಿ ನಂತರ ಅದಕ್ಕೆ ನ್ಯಾಚುರಲ್ ಆದ ಅಲೋವೆರಾ ಇದ್ದರೆ ತೆಗೆದುಕೊಳ್ಳಿ.
ಒಂದು ವೇಳೆ ಲಭ್ಯವಿಲ್ಲವೆಂದರೆ ಅಂಗಡಿಯಲ್ಲಿ ಸಿಗುವ ಅಲೋವೆರಾ ಜೆಲ್ ಅನ್ನು ತೆಗೆದುಕೊಳ್ಳಿ, ಸ್ವಲ್ಪ ಅಡುಗೆಗೆ ಬಳಸುವ ಪುಡಿ ಉಪ್ಪು ತೆಗೆದುಕೊಳ್ಳಿ. ಈಗ ಈ ಮೂರನ್ನು ನಿಮಗೆ ಎಷ್ಟು ಪ್ರಮಾಣದಲ್ಲಿ ರೆಮಿಡಿ ಬೇಕಾಗುತ್ತದೆ ಆ ಪ್ರಮಾಣದಲ್ಲಿ ಹಾಕಿಕೊಳ್ಳಿ. ಮೂರನ್ನು ಸಹ ಚೆನ್ನಾಗಿ ಮಿಕ್ಸ್ ಮಾಡಿ ನಂತರ ಇದನ್ನು ದೇಹದಲ್ಲಿ ಯಾವ ಭಾಗ ಕಪ್ಪಾಗಿದೇ ಜಡ್ಡು ಹಿಡಿದಿದೆ ಅಲ್ಲಿಗೆಲ್ಲಾ ಅಪ್ಲೈ ಮಾಡಬೇಕು ಅದಕ್ಕೂ ಮುನ್ನ ಬೆಚ್ಚಗಿನ ನೀರಿನಲ್ಲಿ ಒಂದು ಟವಲ್ ಅದ್ದಿ ಚೆನ್ನಾಗಿ ವಾಶ್ ಮಾಡಬೇಕು.
ನಂತರ ಈ ರೆಮಿಡಿಯನ್ನು ಒಂದು ಟೂತ್ ಬ್ರಷ್ ಸಹಾಯದಿಂದ ತೆಗೆದುಕೊಂಡು ಕಪ್ಪಾಗಿರುವ ಜಾಗಕ್ಕೆ ಅಪ್ಲೈ ಮಾಡಿ, ಚೆನ್ನಾಗಿ ರಬ್ ಮಾಡಬೇಕು. ಸ್ವಲ್ಪ ಹೊತ್ತು ಒಣಗಲು ಬಿಡಬೇಕು ಮತ್ತೆ ಮೊದಲನೇ ರೀತಿಯೇ ಟವಲ್ ಸಹಾಯದಿಂದ ತೊಳೆಯಬೇಕು. ಯಾವುದೇ ಕಾರಣಕ್ಕೂ ಬಿಸಿ ನೀರನ್ನು ಬಳಸಬಾರದು. ವಾರದಲ್ಲಿ ಒಂದು ಬಾರಿ ಅಥವಾ ಎರಡು ಬಾರಿ ಈ ರೀತಿ ಮಾಡುವುದರಿಂದ ನಿಧಾನವಾಗಿ ಇಲ್ಲೆಲ್ಲಾ ಕಪ್ಪು ಕಲೆಗಳು ಹೋಗಿ ಹಳೆಯ ಬಣ್ಣವೇ ಬರುತ್ತದೆ.
ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳು ಸ್ಲೀವ್ ಲೆಸ್ ಮತ್ತು ಫ್ಯಾಷನ್ ಬಟ್ಟೆಗಳನ್ನು ಹೆಚ್ಚಾಗಿ ಉಡುವುದರಿಂದ ಈ ರೀತಿ ಮೊಣಕೈ, ಮೊಣಕಾಲು, ಕುತ್ತಿಗೆ ಭಾಗ ಮತ್ತು ಅಂಡರ್ ಆರ್ಮ್ ಕಪ್ಪಾಗಿದ್ದರೆ ಅದು ಬಹಳ ಅಸಹ್ಯವಾಗಿ ಕಾಣುತ್ತದೆ. ಇದು ಅವರ ಕಾನ್ಫಿಡೆನ್ಸ್ ಅನ್ನು ಕಡಿಮೆ ಮಾಡಬಹುದು ಇನ್ನು ಮುಂದೆ ಇದರ ಬಗ್ಗೆ ಅವರು ಹೆಚ್ಚು ತಲೆ ಕೆಡಿಸಿಕೊಳ್ಳದೆ ಈ ಹೋಮ್ ರೆಮಿಡಿ ಮಾಡಿದರೆ ಸಾಕು ನಂತರ ಚರ್ಮದ ಎಲ್ಲಾ ಕಡೆಗೂ ಕೂಡ ಒಂದೇ ರೀತಿಯೇ ಬಣ್ಣ ಬರುತ್ತದೆ. ಒಮ್ಮೆ ನೀವು ಕೂಡ ಟ್ರೈ ಮಾಡಿ ಇದು ಯೂಸ್ಫುಲ್ ಅನಿಸಿದರೆ ನಿಮ್ಮ ಸ್ನೇಹಿತರು ಮತ್ತು ಕುಟುಂಬದವರಿಗೂ ಕೂಡ ಈ ಟಿಪ್ಸ್ ಅನ್ನು ಹೇಳಿ ಕೊಡಿ.