ತುಟಿಯ ಮೇಲೆ ಇರುವ ಅನಗತ್ಯ ಕೂದಲು ತೆಗೆದು ಹಾಕಲು ಈ ಮನೆಮದ್ದು ಬಳಸಿ ಸಾಕು ಬೇಡವಾಗಿರುವ ಕೂದಲಿಗೆ ಹೇಳಿ ಇಂದೆ ಗುಡ್ಬೈ.

ಹೆಣ್ಣು ಮಕ್ಕಳ ಮುಖದ ಮೇಲೆ ಬೇಡವಾದಂತ ಕೂದಲು ಬೆಳೆಯುವುದು ಸರ್ವೇಸಾಮಾನ್ಯ ಹಾಗೂ ಅವುಗಳು ಹೆಣ್ಣು ಮಕ್ಕಳ ಸೌಂದರ್ಯವನ್ನೇ ಹಾಳು ಮಾಡುತ್ತದೆ ಎಂದು ಹೇಳಿದರೆ ತಪ್ಪಾಗಲಾರದು ಆದ್ದ ರಿಂದ ಎಷ್ಟೋ ಹುಡುಗಿಯರು ಇಂತಹ ಕೂದಲನ್ನು ಹೋಗಲಾಡಿಸಿಕೊಳ್ಳುವುದಕ್ಕೆ ವೈದ್ಯರ ಬಳಿ ಹೋಗಿ ಚಿಕಿತ್ಸೆಯನ್ನು ಕೂಡ ತೆಗೆದುಕೊಳ್ಳುತ್ತಾರೆ ಹಾಗೂ ಮಾರುಕಟ್ಟೆಗಳಲ್ಲಿ ಸಿಗುವಂತಹ ಹಲವಾರು ಪದಾರ್ಥ ಗಳನ್ನು ಕೂಡ ತಂದು ಹಚ್ಚುತ್ತಾರೆ ಮತ್ತು ಕೆಲವೊಂದ ಷ್ಟು ಮಾತ್ರೆಗಳನ್ನು ಕೂಡ ತೆಗೆದುಕೊಳ್ಳುತ್ತಾರೆ.

ಇದರಿಂದ ಯಾವುದೇ ರೀತಿಯಾದಂತಹ ಫಲಿತಾಂಶ ವನ್ನು ಕಾಣದೆ ಬೇಸತ್ತು ಹೋಗಿರುತ್ತಾರೆ ಕೇವಲ ದುಡ್ಡು ಮಾತ್ರ ಖಾಲಿಯಾಗುತ್ತದೆಯೇ ಹೊರತು ಅದರಿಂದ ಒಳ್ಳೆಯ ಫಲಿತಾಂಶವನ್ನು ಸಿಗುವುದಿಲ್ಲ ಇದರಿಂದ ಎಷ್ಟೋ ಹೆಣ್ಣುಮಕ್ಕಳು ಜೀವನವೇ ಸಾಕಾಗಿದೆ ಎನ್ನುವಷ್ಟು ಪರಿಸ್ಥಿತಿಗೆ ಹೋಗುತ್ತಾರೆ. ಕೆಲವೊಂದಷ್ಟು ಹುಡುಗಿಯರು ಮುಖದ ಮೇಲೆ ಇರುವ ಕೂದಲನ್ನು ಹೋಗಲಾಡಿಸಿಕೊಳ್ಳಲು ಟ್ರಿಮ್ ಕೂಡ ಮಾಡುತ್ತಾರೆ ಇದು ಕೇವಲ ತಕ್ಷಣಕ್ಕೆ ಹೋಗು ತ್ತದೆಯೇ ಹೊರತು ಶಾಶ್ವತವಾಗಿ ದೂರವಾಗುವುದಿಲ್ಲ ಬದಲಾಗಿ ಸ್ವಲ್ಪ ದಿನಗಳು ಕಳೆದ ತಕ್ಷಣ ಮತ್ತೆ ಮುಖದ ಮೇಲೆ ಕೂದಲು ಬೆಳೆಯುವುದಕ್ಕೆ ಪ್ರಾರಂಭವಾಗುತ್ತದೆ.

ಇದಕ್ಕೆ ಕಾರಣ ಏನು ಎಂದು ನೋಡುವುದಾದರೆ ಅವರಲ್ಲಿ ಹಾರ್ಮೋನ್ ಗಳ ವ್ಯತ್ಯಾಸದಿಂದ ಮುಖದ ಮೇಲೆ ಕೂದಲು ಹುಟ್ಟುತ್ತಿರುತ್ತದೆ ಮತ್ತು ಕತ್ತಿನ ಭಾಗದಲ್ಲಿ ಗಡ್ಡದ ಕೆಳಗಡೆ ಗಂಡು ಮಕ್ಕಳಿಗೆ ಬೆಳೆಯುವ ಹಾಗೆಯೂ ಕೂಡ ಕೆಲವೊಬ್ಬರಲ್ಲಿ ಬೆಳೆಯುತ್ತದೆ ಇದನ್ನು ವೈದ್ಯರ ಬಳಿ ಹೋಗಿ ತೋರಿಸಿದರೆ ಮೊದಲು ನಿಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳುವುದು ಮುಖ್ಯ ಮತ್ತು ನಿಮ್ಮ ದೇಹದಲ್ಲಿ ಆಗುತ್ತಿರುವಂತಹ ಹಾರ್ಮೋನ್ ಗಳ ವ್ಯತ್ಯಾಸವನ್ನು ಸರಿ ಮಾಡಿಕೊಳ್ಳುವುದು ಮುಖ್ಯ ಆನಂತರ ಇದು ಸರಿ ಹೋಗುತ್ತದೆ ಎಂದು ಹೇಳುತ್ತಾರೆ.

ಕೆಲವೊಬ್ಬರು ಈ ವಿಧಾನವನ್ನು ಅನುಸರಿಸಿ ಒಳ್ಳೆಯ ಚಿಕಿತ್ಸೆಗಳನ್ನು ಪಡೆದುಕೊಳ್ಳುತ್ತಾರೆ ಹಾಗೂ ಇನ್ನೂ ಕೆಲವರು ಇದರ ಬಗ್ಗೆ ನಿರ್ಲಕ್ಷವನ್ನು ತೋರುತ್ತಾರೆ ಹಾಗಾದರೆ ಇಂತಹ ಕೂದಲುಗಳನ್ನು ನಿಮ್ಮ ಮನೆಗಳ ಲ್ಲಿಯೇ ಹೇಗೆ ತೆಗೆದು ಹಾಕುವುದು ಹಾಗೂ ಅದಕ್ಕೆ ನಿಮ್ಮ ಮನೆಯಲ್ಲಿ ಸಿಗುವಂತಹ ಕೆಲವೊಂದು ಪದಾರ್ಥಗಳನ್ನು ಉಪಯೋಗಿಸಿಕೊಂಡು ಹೇಗೆ ಮನೆಯಲ್ಲಿಯೇ ಯಾವುದೇ ಹಾನಿಗೆ ಒಳಗಾಗದೆ ಇರುವ ಹಾಗೆ ಉಪಯೋಗವನ್ನು ಪಡೆದು ಕೊಳ್ಳುವುದು ಎಂದು ನೋಡುವುದಾದರೆ ಮೊದಲನೆಯದಾಗಿ ಇದನ್ನು ಮಾಡಲು ಬೇಕಾದಂತಹ ಪದಾರ್ಥಗಳು ಯಾವುವು ಎಂದು ನೋಡೋಣ.

ಮೊದಲನೇಯದಾಗಿ ಒಂದು ಮೊಟ್ಟೆಯನ್ನು ತೆಗೆದುಕೊಳ್ಳಬೇಕು ಮೊಟ್ಟೆಯ ಒಟ್ಳ ಭಾಗದಲ್ಲಿ ಇರುವಂತಹ ಬಿಳಿ ಭಾಗವನ್ನು ಒಂದು ಚಿಕ್ಕ ಬೌಲ್ ಗೆ ಹಾಕಿ ಅದಕ್ಕೆ ಕಾಲು ಚಮಚ ಅರಿಶಿಣ ಪುಡಿಯನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು. ನಂತರ ಕಲಸಿದಂತಹ ಮಿಶ್ರಣವನ್ನು ನಿಮ್ಮ ಮುಖದ ಮೇಲೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಬೇಕು ಹಾಗೂ ಮುಖದ ಮೇಲಿರುವಂತಹ ಕೂದಲನ್ನು ಹೋಗಲಾಡಿ ಸಿಕೊಳ್ಳುವುದಕ್ಕೆ ಮನೆಯಲ್ಲಿ ಸಿಗುವಂತಹ ಟಿಶ್ಯೂ ಪೇಪರ್ ಅನ್ನು ಮುಖಕ್ಕೆ ಹಾಕಿ ಅದರ ಮೇಲೆಯೂ ಕೂಡ ಈ ಒಂದು ಮೊಟ್ಟೆಯ ಮಿಶ್ರಣವನ್ನು ಟಿಶ್ಯೂ ಪೇಪರ್ ಮೇಲೆ ಹಚ್ಚಬೇಕು.

ಹೀಗೆ ಹಚ್ಚಿದ ಮೇಲೆ ಅದು ಸಂಪೂರ್ಣವಾಗಿ ಒಣಗುವ ತನಕ ಬಿಟ್ಟು ನಂತರ ಅದನ್ನು ಒಂದು ಕಡೆಯಿಂದ ತೆಗೆಯುತ್ತಾ ಬರಬೇಕು ಹೀಗೆ ಮಾಡುವುದರಿಂದ ಮುಖದ ಮೇಲೆ ಇರುವಂತಹ ಕೂದಲು ದೂರವಾಗುತ್ತದೆ ಹಾಗೂ ವಾರಕ್ಕೆ ಒಮ್ಮೆಯಾದರೂ ಈ ವಿಧಾನವನ್ನು ಅನು ಸರಿಸುವುದರಿಂದ ಈ ಸಮಸ್ಯೆಯಿಂದ ಮುಕ್ತಿಯನ್ನು ಹೊಂದಬಹುದಾಗಿದೆ ಪಾರ್ಲರ್ ಗೆ ಹೋಗದೆ ನಿಮ್ಮ ಮನೆಯಲ್ಲಿಯೇ ನೀವೇ ಮಾಡಿಕೊಳ್ಳಬಹುದಾಗಿರು ತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Comment

%d bloggers like this: