ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಪೂಜೆ ಮಾಡುವುದಕ್ಕೆ ಒಂದು ವಿಧಾನ ಇದೆ. ನಮ್ಮ ಸಂಪ್ರದಾಯದ ಪ್ರಕಾರ ಪೂಜೆ ಮಾಡುವವರಿಗೆ ಹಣ್ಣುಹಂಪಲು, ಊದುಗಡ್ಡಿ, ಕರ್ಪೂರ, ಧೂಪ, ದೀಪದ ಎಣ್ಣೆ ಅರಿಶಿನ ಕುಂಕುಮ ಇವೆಲ್ಲವೂ ಬೇಕೇ ಬೇಕು. ಇವುಗಳ ಜೊತೆಗೆ ಪೂಜೆಗೆ ಅರ್ಪಿಸುವ ಹೂಗಳಿಗೂ ಕೂಡ ಅಷ್ಟೇ ಮಹತ್ವದ ಸ್ಥಾನ ಇದೆ. ಈ ಹೂವುಗಳನ್ನು ದೇವರಿಗೆ ಅಲಂಕಾರ ಮಾಡಲು ಬಳಸುವುದಾದರೂ ಯಾವ ದೇವರಿಗೆ ಯಾವ ಹೂ ಇಷ್ಟ, ಯಾವ ದೇವರಿಗೆ ಯಾವ ಬಣ್ಣದ ಹೂವು ಇಷ್ಟ ಎಂದೆಲ್ಲ ತಿಳಿದುಕೊಂಡು ದೇವರಿಗೆ ಹೂವನ್ನು ಅರ್ಪಿಸುವುದು ಬಹಳ ಶುಭಕರ ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಹಿರಿಯರ ನಂಬಿಕೆಗಳ ಪ್ರಕಾರ ಶಿವನಿಗೆ ಬಿಲ್ವಪತ್ರೆ ಪುಷ್ಪ ಇಷ್ಟ ಆಗುವುದರಿಂದ ಅದನ್ನು ಅರ್ಪಿಸಿದರೆ ಬೇಗ ಪ್ರಸನ್ನ ರಾಗುತ್ತಾರೆ ಎಂದು ಹೇಳುವುದನ್ನು ಕೇಳಿದ್ದೇವೆ.
ಹಾಗೆಯೇ ಗುರುಗಳ ಪೂಜೆ ಮಾಡುವಾಗ ಹಳದಿ ಬಣ್ಣದ ಪುಷ್ಪಗಳಿಂದ ಪೂಜೆ ಮಾಡಿದರೆ ಅವರಿಗೆ ಇಷ್ಟ ಆಗುತ್ತದೆ ಎಂದು ಹೇಳಿದ್ದಾರೆ ಮತ್ತು ಲಕ್ಷ್ಮಿಗೆ ತಾವರೆ ಹೂವು ಹಾಗೂ ಗಣಪತಿಗೆ ಗರಿಕೆ ಮತ್ತು ಕೆಂಪು ಬಣ್ಣದ ಹೂವು ಮತ್ತು ಸರಸ್ವತಿಗೆ ಬಿಳಿ ಬಣ್ಣದ ಹೂವುಗಳನ್ನು ಅರ್ಪಿಸುವುದರಿಂದ ಇಷ್ಟಾರ್ಥಗಳು ಬೇಗನೆ ನೆರವೇರುತ್ತದೆ ಎಂದು ಹೇಳಿರುವುದಕ್ಕೆ ಉಲ್ಲೇಖಗಳಿವೆ. ಹೀಗೆ ದೇವರಿಗೆ ಹೂಗಳನ್ನು ಅರ್ಪಿಸುವುದರ ಜೊತೆಗೆ ಹೂವುಗಳನ್ನು ಇಟ್ಟು ನಾವು ನಮ್ಮ ಇಷ್ಟಾರ್ಥಗಳನ್ನು ಬೇಡಿಕೊಳ್ಳುವಾಗ ಅಥವಾ ನಮ್ಮ ಕಷ್ಟಗಳನ್ನು ಹೇಳಿಕೊಳ್ಳುವಾಗ ಆ ಹೂಗಳು ದೇವರ ಫೋಟೋ ಅಥವಾ ವಿಗ್ರಹದಿಂದ ಕೆಳಗೆ ಬಿದ್ದರೆ ಅದಕ್ಕೂ ಕೂಡ ಅರ್ಥಗಳಿವೆ. ಈ ರೀತಿ ಬಿದ್ದ ಹೂಗಳನ್ನು ಏನು ಮಾಡಬೇಕು ಮತ್ತು ಅದಕ್ಕೆ ಅರ್ಥ ಏನು ಎನ್ನುವುದನ್ನು ತಿಳಿದುಕೊಳ್ಳಲು ಪೂರ್ತಿ ಓದಿ.
ದೇವಸ್ಥಾನಗಳಲ್ಲೂ ಹಾಗೂ ಮನೆಗಳನ್ನು ಕೂಡ ಭಕ್ತಿಯಿಂದ ಹರಕೆ ಮಾಡಿಕೊಂಡು ಉಪವಾಸ ಇದ್ದು ಪ್ರಾರ್ಥನೆ ಮಾಡಿ ದೇವರ ಮುಂದೆ ವರ ಕೊಡು ಎಂದು ಬೇಡಿಕೊಳ್ಳುತ್ತ ಕೂರುವವರನ್ನು ನೋಡಿದ್ದೇವೆ. ಇದು ನಮ್ಮ ಪ್ರತಿ ಮನೆಗಳಲ್ಲೂ ಇರುವ ನಂಬಿಕೆ ಹಾಗೂ ಆಚರಣೆ ಯಾವುದೋ ವಿಷಯದ ಗೊಂದಲದಲ್ಲಿ ಮನಸ್ಸು ಇರುವಾಗ ದೇವರಿಗೆ ಹೂವುಗಳನ್ನು ಹಾಕಿ ಹೂವುಗಳನ್ನು ಬೀಳಿಸುವ ಮೂಲಕ ನೀನು ಸೂಚನೆ ಕೊಡು ಎಂದು ಕೇಳುತ್ತಾರೆ. ಹಾಗೂ ಕೆಲವೊಮ್ಮೆ ನಾವು ಕೇಳದೆ ಇದ್ದರೂ ಭಕ್ತಿಯಿಂದ ಪೂಜೆ ಮಾಡುವಾಗ ದೇವರೇ ಈ ರೀತಿ ಹೂವುಗಳನ್ನು ಬೆಳೆಸುವ ಮೂಲಕ ಶುಭವ ಇಲ್ಲವಾ ಎನ್ನುವ ಸೂಚನೆಯನ್ನು ಕೊಡುತ್ತಾರೆ. ಈ ನಂಬಿಕೆಗಳ ಪ್ರಕಾರ ಹೆಚ್ಚು ಜನ ದೇವರು ಬಲಗಡೆಯಿಂದ ಹೂವು ಕೊಟ್ಟರೆ ನಿಮ್ಮ ಕೋರಿಕೆ ದೇವರಿಗೆ ಕೇಳಿದೆ ಅಥವಾ ನೀವು ಕೇಳಿಕೊಳ್ಳುತ್ತಿರುವುದು ಆಗುತ್ತದೆ ಎನ್ನುವ ಸೂಚನೆ ಕೊಟ್ಟಿದ್ದಾರೆ ಎಂದು ನಂಬುತ್ತಾರೆ.
ಎಡಗಡೆ ಹೂವು ಬಿಡುವುದರಿಂದ ಸ್ವಲ್ಪ ಯೋಚನೆ ಮಾಡಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದುಕೊಳ್ಳುತ್ತಾರೆ. ಹೀಗೆ ದೇವರ ಒಳ್ಳೆಯ ಸೂಚನೆ ಇಂದ ಬಿದ್ದ ಹೂಗಳನ್ನು ಏನು ಮಾಡಬೇಕು ಎಂದರೆ ಅದು ಒಣಗುವವರೆಗೂ ನಾವು ಅದನ್ನು ನಮ್ಮ ಜೊತೆ ನಮ್ಮ ಜೇಬಿನಲ್ಲಿ ಅಥವಾ ಪರ್ಸಿನಲ್ಲಿ ಇಟ್ಟುಕೊಂಡು ಇರಬೇಕು. ಅದು ಒಣಗಿದ ಬಳಿಕ ಅವುಗಳನ್ನು ಹರಿಯುವ ನೀರಿನಲ್ಲಿ ಬಿಡಬೇಕು ಸಾಧ್ಯವಾಗದೇ ಇದ್ದ ಪಕ್ಷದಲ್ಲಿ ನಮ್ಮ ಮನೆಯಲ್ಲಿ ಅಥವಾ ಮನೆಯ ಬಳಿ ಇರುವ ಮರದ ಬುಡಗಳಿಗೆ ಹಾಕಬಹುದು ಯಾವುದೇ ಕಾರಣಕ್ಕೂ ಇವುಗಳನ್ನು ಕಾಲಿಗೆ ಸಿಗುವ ಹಾಗೆ ಬಿಸಾಕಬಾರದು. ದೇವರ ಮೇಲಿರುವ ಭಕ್ತಿಯಂತೆ ದೇವರಿಗೆ ಅರ್ಪಿಸುವ ಪ್ರತಿ ವಸ್ತುವನ್ನು ಅಷ್ಟೇ ಭಕ್ತಿ ಭಾವದಿಂದ ಕಾಣಬೇಕು.