Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ನಮ್ಮ ಭಾರತೀಯ ಸಂಸ್ಕೃತಿಯೇ ಅಂತಹದ್ದು. ಹಾಗಾಗಿ ಇದನ್ನು ಸನಾತನ ಧರ್ಮ ಎಂದು ಕರೆಯುವುದು. ವಿಜ್ಞಾನಕ್ಕೆ ಸವಾಲು ಒಡ್ಡುವಂತಹ ಅನೇಕ ಚಮತ್ಕಾರಗಳು ಇದೆ. ಮನೆಯ ವಿಚಾರವನ್ನೇ ತೆಗೆದುಕೊಳ್ಳುವುದಾದರೂ ಇಂದಿಗೂ ಸಹ ನಮ್ಮಲಿ ಅನೇಕ ರೀತಿಯ ಚೌಕಟ್ಟು ಇದೆ.ಕೆಲವರು ಅದನ್ನು ಮೂಢನಂಬಿಕೆ ಎಂದುಕೊಂಡರೆ ಕೆಲವರು ಅದನ್ನು ಶಕುನ ಎಂದು ಕರೆಯುತ್ತಾರೆ. ಪ್ರತಿಯೊಂದು ವಿಷಯವನ್ನು ಕೂಡ ಸೂಕ್ಷ್ಮವಾಗಿ ಗಮನಿಸಿ ಅದರ ಬಗ್ಗೆ ಚೆನ್ನಾಗಿ ಅವಲೋಕಿಸಿ ಹಿರಿಯರು ಕೆಲವೊಂದು ಸೂಚನೆಗಳನ್ನು ತಿಳಿದುಕೊಂಡಿದ್ದಾರೆ.
ಮನೆಯಲ್ಲಿ ಪ್ರತಿದಿನ ಬೆಳಗ್ಗೆಯಿಂದ ಸಂಜೆವರೆಗೆ ನಡೆಯುವ ಅನೇಕ ಘಟನೆಗಳಲ್ಲಿ ಅನೇಕ ರೀತಿಯ ಶಕುನಗಳು ದೊರೆಯುತ್ತಾ ಇರುತ್ತವೆ. ಇದರಿಂದ ಆ ಮನೆಗೆ ಮುಂದೆ ಬರಲಿರುವ ಒಳಿತು ಹಾಗೂ ಕೆಡಕುಗಳ ಬಗ್ಗೆ ಭವಿಷ್ಯ ನುಡಿರಬಹುದು ಆದರೆ ಅದನ್ನೆಲ್ಲ ಸೂಕ್ಷ್ಮವಾಗಿ ಅವಲೋಕಿಸುವ ಮನಸ್ಸು ಇರಬೇಕು ಅಷ್ಟೇ. ದೇವರ ಮನೆಯಲ್ಲಿ ನಡೆಯುವ ಅನೇಕ ಘಟನೆಗಳು ಮನೆಯ ಮುಂದಿನ ವಿಷಯಗಳ ಬಗ್ಗೆ ಮುನ್ಸೂಚನೆ ಕೊಡುತ್ತವೆ.
ದೇವರ ಪೂಜೆ ಮಾಡುವುದು ಎಂದರೆ ಅದು ಸುಲಭದ ವಿಚಾರ ಅಲ್ಲ ದೇವರ ವಸ್ತುಗಳನ್ನು ಶುದ್ಧ ಮಾಡುವುದು, ದೇವರಿಗೆ ಹಾಕುವ ಹೂವು ಹಾಗೂ ಹಚ್ಚುವ ದೀಪದವರೆಗೂ ಕೂಡ ಶುದ್ಧತೆ ಕಾಪಾಡಿಕೊಂಡು ಶುದ್ಧ ಮನಸ್ಸಿನಿಂದ ಭಕ್ತಿಯಿಂದ ಪೂಜೆ ಮಾಡಬೇಕು. ಈ ರೀತಿ ಮಾಡಿದ ಪೂಜೆಯಲ್ಲಿ ನಾವು ಹಚ್ಚುವ ದೀಪ ಪೂಜೆಯ ಪ್ರಮುಖ ಭಾಗ. ಯಾಕೆಂದರೆ ಭಕ್ತರ ಎಲ್ಲಾ ಕೋರಿಕಗಳನ್ನು ದೇವರಿಗೆ ತಲುಪಿಸುವ ರಾಯಭಾರಿಯಾಗಿ ದೀಪದ ಬತ್ತಿ ಕೆಲಸ ಮಾಡುತ್ತಿರುತ್ತದೆ.
ಹೀಗಾಗಿ ದೀಪ ಉರಿಯುವ ರೀತಿಯನ್ನು ನೋಡಿಯೇ ದೇವರಿಗೆ ನಮ್ಮ ಮೇಲೆ ಕರುಣೆ ಉಂಟಾಗಿದೆಯಾ ಅಥವಾ ಕೋಪ ಬಂದಿದೆಯಾ ಅಥವಾ ಇನ್ಯಾವುದಾದರೂ ಕೆಟ್ಟ ಕಣ್ಣು ಮನೆಯ ಮೇಲೆ ಬಿದ್ದಿದ್ದೀಯಾ ಎಂದು ನಾವು ತಿಳಿದುಕೊಳ್ಳಬಹುದು. ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಸಹ ದೀಪದ ಎಣ್ಣೆ ಹಾಕಿ ಬತ್ತಿ ಇಟ್ಟು ದೀಪ ಹಚ್ಚುತ್ತಾರೆ. ಅನುಕೂಲಸ್ಥರ ಮನೆಯವರು ತುಪ್ಪದಲ್ಲಿ ಹಚ್ಚಬಹುದು.
ಈ ರೀತಿ ಯಾವುದೇ ಎಣ್ಣೆಯಲ್ಲಿ ಅಥವಾ ತುಪ್ಪದಲ್ಲಿ ಅಥವಾ ಬೆಳ್ಳಿ ಅಥವಾ ಹಿತ್ತಾಳೆ ಯಾವುದೇ ಲೋಹದ ದೀಪವನ್ನು ಹಚ್ಚಿದರೂ ಕೂಡ ದೇವರ ದೃಷ್ಟಿಯಲ್ಲಿ ಎಲ್ಲವೂ ಸಮಾನ. ದೇವರು ಭಕ್ತರಿಂದ ಶುದ್ಧ ಮನಸ್ಸಷ್ಟೇ ನೋಡುತ್ತಾರೆ. ಈ ರೀತಿ ಮನೆಯಲ್ಲಿ ದೀಪ ಹಚ್ಚಿದಾಗ ಅದು ಕೊಡುವ ಸೂಚನೆ ಏನೆಂದರೆ, ಪೂಜೆ ಮಾಡಿ ಕೋರಿಕೆ ಸಲ್ಲಿಸುವ ಸಮಯದಲ್ಲಿ ದೀಪ ಆರಿದರೆ ಅದು ಕೆಟ್ಟ ಸೂಚನೆ ಎಂದು ಅರ್ಥ.
ಇದರಿಂದ ಮುಂದೆ ಯಾವುದಾದರೂ ಸಂಕಷ್ಟಗಳು ಎದುರಾಗಬಹುದು ಎಂದು ಅರ್ಥ ಮಾಡಿಕೊಳ್ಳಬೇಕು. ಜೊತೆಗೆ ದೀಪ ಪದೇಪದೇ ಹಚ್ಚಿದರು ಕೆಟ್ಟು ಹೋಗುತ್ತಿದ್ದರೆ ಮತ್ತು ದೀಪ ಕಪ್ಪಾಗುತ್ತಿದ್ದರೆ ಒಮ್ಮೆ ಬತ್ತಿ ಹಾಗೂ ಎಣ್ಣೆಯನ್ನು ಬದಲಾಯಿಸಿ ನೋಡಬೇಕು ಆಗಲು ಸಹ ಅದೇ ರೀತಿ ಆಗುತ್ತಿದ್ದರೆ ಅದು ನೆಗೆಟಿವ್ ವೈಬ್ರೇಶನ್ ಎಂದು ಅಂದುಕೊಳ್ಳಬೇಕು ತಕ್ಷಣವೇ ಹಿರಿಯರ ಸಲಹೆ ತೆಗೆದುಕೊಂಡು ಮನೆ ವಾತಾವರಣ ಪಾಸಿಟಿವ್ ಆಗಲು ಏನು ಕ್ರಮ ಬೇಕು ಅದನ್ನು ಕೈಗೊಳ್ಳಬೇಕು.
ಜೊತೆಗೆ ದೀಪದ ಬತ್ತಿಯು ನಿಧಾನಕ್ಕೆ ಉರಿಯುತ್ತಿದ್ದು ಒಂದು ಬಾರಿ ಜೋರಾಗಿ ಉರಿಯಲು ಶುರು ಮಾಡಿದರೆ ಆಗ ದೇವರಿಗೆ ನಮ್ಮ ಕಷ್ಟ ಕೋರಿಕೆಗಳು ಕೇಳಿವೆ ತಲುಪಿದೆ ಎಂದು ಅರ್ಥ. ಜೊತೆಗೆ ನಾವು ಹಚ್ಚಿದ ದೀಪವು ಹೂವಿನ ಆಕಾರದಲ್ಲಿ ಉರಿಯುತ್ತಿದ್ದರೆ ದೇವರಿಗೆ ನಾವು ಮಾಡಿದ ಪೂಜೆ ಪ್ರಸನ್ನವಾಗಿದೆ, ಶೀಘ್ರದಲ್ಲೇ ಅವನ ಕೃಪೆ ಕಟಾಕ್ಷ ನಮಗೆ ದೊರೆಯಲಿದೆ ಎಂದು ಅರ್ಥ. ಇದಿಷ್ಟನ್ನು ಅರಿತುಕೊಂಡು ಇದಕ್ಕೆ ತಕ್ಕ ಹಾಗೆ ನಡೆದುಕೊಳ್ಳುವ ಮೂಲಕ ಬದುಕಲ್ಲಿ ಒಳಿತನ್ನು ಕಾಣಿ.