ಪುನೀತ್ ಫೋಟೋ ನೋಡಿ ಅಪ್ಪು ಅಪ್ಪು ಎಂದು ಕೂಗಿ ಕರೆದ ರಾಯನ್ ರಾಜ್ ಸರ್ಜಾ. ಈ ಕ್ಯೂಟ್ ವಿಡಿಯೋ ನೋಡಿ

ಸರ್ಜಾ ಕುಟುಂಬದಲ್ಲಿ ಇದೀಗ ಸಂತಸ ಮನೆ ಮಾಡಿದ್ದು ಎಲ್ಲರ ಮುಖದಲ್ಲಿಯೂ ಸಹ ಮಂದಹಾಸ ಎದ್ದು ಕಾಣುತ್ತಿದೆ. ಧ್ರುವ ಸರ್ಜಾ ಅವರು ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ ಪ್ರೇರಣ ಅವರು ಬೆಂಗಳೂರಿನ ಒಂದು ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನನ ನೀಡಿದ್ದಾರೆ ಈ ಒಂದು ಸಂತೋಷದ ವಿಷಯವನ್ನು ಸ್ವತಃ ಧ್ರುವ ಸರ್ಜಾ ಅವರೇ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಷಯ ತಿಳಿದ ನಂತರ ಸರ್ಜಾ ಕುಟುಂಬದವರು ಆಸ್ಪತ್ರೆಗೆ ಧಾವಿಸಿ ಮಗುವನ್ನು ನೋಡಿ ತುಂಬಾ ಖುಷಿಪಟ್ಟಿದ್ದಾರೆ. ಅಷ್ಟೇ ಅಲ್ಲದೆ ಧ್ರುವ ಸರ್ಜಾ ಅವರ ಅತ್ತಿಗೆ ಮೇಘನಾ ರಾಜ್ ಅವರು ಕೂಡ ತಮ್ಮ ಮಗ ರಾಯನ್ ರಾಜ್ ಸರ್ಜಾ ಅವರ ಜೊತೆಯಲ್ಲಿ ಆಸ್ಪತ್ರೆಗೆ ಧಾವಿಸಿ ಮಗುವನ್ನು ನೋಡಿ ತುಂಬಾ ಮುದ್ದಾಗಿದೆ ಎಂದು ಹೇಳಿದ್ದಾರೆ ಹಾಗೆಯೇ ಪ್ರೇರಣ ಮತ್ತು ಮಗು ಇಬ್ಬರು ಕ್ಷೇಮವಾಗಿದ್ದಾರೆ ಎಂದು ತಿಳಿಸಿದ್ದಾರೆ.

ಧ್ರುವ ಸರ್ಜಾ ಅವರಿಗೆ ಹೆಣ್ಣು ಮಗು ಎಂದರೆ ತುಂಬಾ ಇಷ್ಟ ಆದ್ದರಿಂದ ಹೆಣ್ಣು ಮಗು ಆಗಮನ ಆಗಿರುವುದರಿಂದ ಧ್ರುವ ಸರ್ಜಾ ಹಾಗೆ ಅವರ ಕುಟುಂಬಸ್ಥರಿಗೆ ತುಂಬಾ ಖುಷಿಯನ್ನು ತಂದುಕೊಟ್ಟಿದೆ. ರಾಯನ್ ರಾಜ್ ಸರ್ಜಾ ಗೆ ಇನ್ನೂ ಎರಡು ವರ್ಷಗಳು ಸಹ ತುಂಬಿಲ್ಲ ಮಾತನಾಡಲು ಎಲ್ಲವನ್ನು ಗುರುತಿಸಲು ಪ್ರಾರಂಭ ಮಾಡಿದ್ದಾರೆ. ಕೆಲವೊಂದು ಮಾತುಗಳು ರಾಯನ್ ಬಾಯಿಯಲ್ಲಿ ಬರುತ್ತಿದೆ ಹಾಗೆಯೆ ಧ್ರುವ ಸರ್ಜಾ ಅವರ ಮಗುವನ್ನು ನೋಡಲು ಬಂದಂತಹ ಮೇಘನಾ ರಾಜ್ ಹಾಗು ರಾಯನ್ ಅಲ್ಲಿ ಇದ್ದಂತಹ ಅಪ್ಪು ಅವರ ಫೋಟೋವನ್ನು ನೋಡಿ ರಾಯನ್ ರಾಜ್ ವಾವ್ ಹೇಳಿದ್ದಾರೆ ಹಾಗೆಯೇ ಅಪ್ಪು ಅಪ್ಪು ಎಂದು ಕೂಗಿ ಕರೆದಿದ್ದಾರೆ.

ವಿಡಿಯೋವನ್ನು ನೋಡಿದರೆ ತುಂಬಾ ಖುಷಿಯಾಗುತ್ತದೆ ರಾಯನ್ ತುಂಬಾ ಮುದ್ದಾಗಿ ಅಪ್ಪು ಅಪ್ಪು ಎಂದು ಕರೆಯುತ್ತಾನೆ. ಮೇಘನಾ ರಾಜ್ ರವರು ಇದೀಗ ತಮ್ಮ ಮಗನ ಲಾಲನೆ ಪಾಲನೆ ಪೋಷಣೆ ಎಲ್ಲದರ ಜೊತೆಯಲ್ಲಿ ತಮ್ಮ ಸಿನಿಮಾ ಕರಿಯರ್ ಸಹ ಜೊತೆಯಲ್ಲೇ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ತಮ್ಮ ಸ್ನೇಹಿತರಾದ ಪನ್ನಗಾಭರಣ ಮತ್ತು ಪ್ರಜ್ವಲ್ ಅವರ ಜೊತೆಯಲ್ಲಿ ಒಂದು ಸಿನಿಮಾ ಮಾಡಲು ಮುಂದಾಗಿದ್ದಾರೆ. ಚಿರಂಜೀವಿ ಸರ್ಜಾ ಅವರು ತಮ್ಮ ಸ್ನೇಹಿತರಾದ ಪನ್ನಗಭರಣ ಮತ್ತು ಪ್ರಜ್ವಲ್ ಅವರ ಜೊತೆಯಲ್ಲಿ ಸಿನಿಮಾ ಮಾಡಬೇಕು ಎನ್ನುವಂತಹ ಒಂದು ದೊಡ್ಡ ಕನಸನ್ನು ಇಟ್ಟುಕೊಂಡಿದ್ದರು.

ಆದರೆ ಅದು ಅವರು ಇದ್ದಾಗ ನೆರವೇರಲಿಲ್ಲ ಅದಕ್ಕೆ ಆ ಕನಸನ್ನು ಈಡೇರಿಸುವ ಸಲುವಾಗಿ ಪನ್ನಗಭರಣ ಅವರು ಮೇಘನಾ ರಾಜ್ ಹಾಗೆಯೇ ಪ್ರಜ್ವಲ್ ಅವರ ಜೊತೆಯಲ್ಲಿ ಒಂದು ಸಿನಿಮಾ ಮಾಡಬೇಕು ಎನ್ನುವಂತಹ ಆಸೆಯನ್ನು ನನಸು ಮಾಡುತ್ತಾ ಇದ್ದಾರೆ. ಮೇಘನಾ ರಾಜ್ ತಮ್ಮ ಮಗ ಚೆನ್ನಾಗಿ ಓದಬೇಕು ಎನ್ನುವಂತಹ ಆಸೆಯನ್ನು ಇಟ್ಟುಕೊಂಡಿದ್ದಾರೆ ಸಿನಿಮಾ ಇಂಡಸ್ಟ್ರಿಗೆ ಬರುವಂತಹದ್ದು ಮುಂದಿನ ವಿಚಾರ ಆದರೆ ಅವನ ಓದಿನ ವಯಸ್ಸಿನಲ್ಲಿ ಅವನು ಚೆನ್ನಾಗಿ ಓದಬೇಕು ಎಂದು ಮಾಧ್ಯಮದ ಮುಂದೆ ತಿಳಿಸಿದ್ದಾರೆ. ರಾಯನ್ ರಾಜ್ ಸರ್ಜಾ ನೋಡಲು ಎಷ್ಟು ಮುದ್ದಾಗಿದ್ದಾನೆ ಎಲ್ಲವನ್ನು ಬೇಗ ಅರ್ಥ ಮಾಡಿಕೊಳ್ಳುತ್ತಾನೆ ಹಾಗೆ ಏನೇ ಹೇಳಿದರು ಸಹ ಅವನು ಹಿಂತಿರುಗಿಸಿ ಹೇಳುತ್ತಾನೆ ಎನ್ನುವುದಕ್ಕೆ ಅಪ್ಪು ಅಪ್ಪು ಎಂದು ಕರೆದಿರುವಂತಹ ವಿಡಿಯೋ ಸಾಕ್ಷಿ. ಪುಟ್ಟ ರಾಯನ್ ಸರ್ಜಾ ಅವರು ಅಪ್ಪು ಎಂದು ಕರೆದಿರುವುದು ನಿಮಗೂ ಸಹ ಇಷ್ಟವಾದರೆ ತಪ್ಪದೆ ನಮಗೆ ಕಮೆಂಟ್ಸ್ ಮೂಲಕ ತಿಳಿಸಿ.

Leave a Comment

%d bloggers like this: