ಬಾಯಿಯ ಹುಣ್ಣು ಎನ್ನುವ ಸಮಸ್ಯೆ ಈಗ ಹೆಚ್ಚಾಗಿ ಎಲ್ಲರಿಗೂ ಕಾಣಿಸಿಕೊಳ್ಳುತ್ತಿದೆ. ಶಾಲೆಗೆ ಹೋಗುವ ಮಕ್ಕಳು, ವಯಸ್ಕರು ಮತ್ತು ವೃದ್ದರಲ್ಲೂ ಕೂಡ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಮುಖ್ಯ ಕಾರಣ ಪಿತ್ತ ವಿಕಾರ. ಹೆಚ್ಚು ಫಾಸ್ಟ್ ಫುಡ್, ಜಂಕ್ ಫುಡ್ಗಳ ಸೇವನೆ ಮತ್ತು ಮಸಾಲೆಯುಕ್ತ ಆಹಾರ ಪದಾರ್ಥಗಳ ಹೆಚ್ಚು ಸೇವನೆಯಿಂದ ಮಲಬದ್ಧತೆ ಹಾಗೂ ಅಜೀರ್ಣತೆ ಆಗಿ ನಂತರ ಅದು ಪಿತ್ತ ವಿಕಾರ ಆಗುತ್ತದೆ.
ದೇಹದಲ್ಲಿ ಉಷ್ಣತೆ ಯಾದಾಗ ಕೂಡ ಈ ರೀತಿ ಬಾಯಿಯಲ್ಲಿ ಹುಣ್ಣು ಕಾಣಿಸಿಕೊಳ್ಳುತ್ತದೆ. ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ನೀರನ್ನು ಸೇವಿಸದೆ ಇದ್ದಾಗ ಈ ರೀತಿ ದೇಹದಲ್ಲಿ ಉಷ್ಣತೆ ಹೆಚ್ಚಾಗುತ್ತದೆ, ಜೊತೆಗೆ ಹೆಚ್ಚು ಮಸಾಲೆ ಪದಾರ್ಥಗಳ ಸೇವನೆಯಿಂದಲೂ ಕೂಡ ಉಷ್ಣತೆ ಹೆಚ್ಚಾಗುತ್ತದೆ ವಿಟಮಿನ್ ಬಿ ಸೇರಿದಂತೆ ಕೆಲ ವಿಟಮಿನ್ ಗಳ ಕೊರತೆ ಉಂಟಾದಾಗ ಕೂಡ ಬಾಯಲ್ಲಿ ಹುಣ್ಣು ಕಾಣಿಸಿಕೊಳ್ಳುತ್ತದೆ.
ಈ ರೀತಿ ಬಾಯಲ್ಲಿ ಹುಣ್ಣು ಆದಾಗ ಅದನ್ನು ಪದೇ ಪದೇ ನಿರ್ಲಕ್ಷಿಸಿದರೆ ಅದು ಕ್ಯಾನ್ಸರ್ ಆಗಿ ಕೂಡ ಕಾಣಬಹುದು. ಹಾಗಾಗಿ ಪದೇಪದೇ ಈ ರೀತಿ ಬಾಯಲ್ಲಿ ಹುಣ್ಣುಗಳು ಆಗುತ್ತಿದ್ದರೆ ಅದನ್ನು ಗಂಭೀರವಾಗಿ ತೆಗೆದುಕೊಂಡು ಅದಕ್ಕೆ ಕೆಲ ಮನೆಮದ್ದುಗಳನ್ನು ಪಾಲಿಸುವ ಮೂಲಕ ಪರಿಹಾರ ಮಾಡಿಕೊಳ್ಳಬಹುದು. ಬಾಯಿ ಹುಣ್ಣಿನ ಸಮಸ್ಯೆ ಉಂಟಾದಾಗ ಹೆಚ್ಚಿನ ಜನರು ವೈದ್ಯರ ಬಳಿ ಹೋಗುವುದಿಲ್ಲ ಮನೆಯಲ್ಲಿ ಹಿರಿಯರು ಇದಕ್ಕಾಗಿ ಅನೇಕ ಮನೆಮದ್ದುಗಳನ್ನು ಅಥವಾ ಆಹಾರ ಪದಾರ್ಥಗಳನ್ನು ಸೂಚಿಸುತ್ತಾರೆ.
ಅವುಗಳನ್ನು ಲೇಪಿಸುವುದರಿಂದ ಅಥವಾ ಸೇವಿಸುವುದರಿಂದ ಶೀಘ್ರವಾಗಿ ಮತ್ತು ಪರಿಣಾಮಕಾರಿಯಾಗಿ ಈ ಸಮಸ್ಯೆ ಪರಿಹಾರ ಆಗುತ್ತದೆ. ಅದೇ ರೀತಿ ಆಯುರ್ವೇದದಲ್ಲೂ ಕೂಡ ಈ ಬಾಯಿ ಹುಣ್ಣುಗಳು ಉಂಟಾದಾಗ ಇದನ್ನು ಶಮನ ಮಾಡಲು ಕೆಲವು ಮನೆ ಮದ್ದುಗಳು ಇವೆ. ಅವುಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ.
ಈ ಮೊದಲೇ ಹೇಳಿದಂತೆ ಪಿತ್ತ ವಿಕಾರದಿಂದ ಹೀಗಾಗುವುದರಿಂದ ಪಿತ್ತ ವಿಕಾರ ನಿವಾರಣೆ ಮಾಡಿಕೊಂಡರೆ ಪದೇಪದೇ ಈ ಸಮಸ್ಯೆಯಿಂದ ನರಳುವುದು ತಪ್ಪುತ್ತದೆ. ಹಾಗಾಗಿ ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಮೂರು ದಿನಗಳು ಒಂದು ಲೋಟ ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ಪಿತ್ತದ ವಿಕಾರ ನಿವಾರಣೆ ಆಗುತ್ತದೆ ಮತ್ತು ಬಾಯಲ್ಲಿ ಹುಣ್ಣು ಆದ ಸಮಯದಲ್ಲಿ ದೇಹದಲ್ಲಿ ಉಷ್ಣತೆ ಹೆಚ್ಚಾಗಿರುವ ಕಾರಣ ಅದನ್ನು ಕಂಟ್ರೋಲ್ ಮಾಡಲು ಮಧ್ಯಾಹ್ನದ ವೇಳೆ ಪ್ರತಿದಿನವೂ ಕೂಡ ಎಳನೀರು ಕುಡಿಯಬೇಕು.
ಎಳನೀರಿನಲ್ಲಿ ದೇಹವನ್ನು ಶೀಘ್ರವಾಗಿ ತಂಪು ಮಾಡುವ ಗುಣ ಇದೆ ಹಾಗಾಗಿ ಹುಣ್ಣು ವಾಸಿಯಾಗುವವರೆಗೂ ಕೂಡ ಮಧ್ಯಾಹ್ನದ ವೇಳೆ ಎಳನೀರು ಸೇವಿಸಿ. ಮತ್ತೊಂದು ಮನೆ ಮದ್ದು ಏನೆಂದರೆ ಒಂದು ಚಮಚ ಶುದ್ಧ ಶ್ರೀಗಂಧದ ಪೇಸ್ಟ್ ಮತ್ತು ಒಂದು ಚಮಚ ಕೊಬ್ಬರಿ ಎಣ್ಣೆಯನ್ನು ಸ್ವಲ್ಪ ಕಲ್ಲು ಸಕ್ಕರೆ ಜೊತೆ ಚೆನ್ನಾಗಿ ಮಿಕ್ಸ್ ಮಾಡಿ ಆ ಮಿಶ್ರಣವನ್ನು ಹುಣ್ಣುಗಳಾಗಿರುವ ಜಾಗದಲ್ಲಿ ಇಟ್ಟು ಬಾಯಿಯನ್ನು ಓಪನ್ ಮಾಡಿ ಇಟ್ಟುಕೊಂಡು ಉಸಿರಾಡಿ.
ಈ ರೀತಿ ಮಾಡುವುದರಿಂದ ಆ ಲೇಪನ ಬಾಯಲ್ಲಿ ಉತ್ಪತ್ತಿ ಆಗುವ ಸೈಲವದ ಜೊತೆ ಮಿಕ್ಸ್ ಆಗುವುದಿಲ್ಲ. 5 ರಿಂದ 10 ನಿಮಿಷಗಳ ಕಾಲ ಈ ರೀತಿ ಬಾಯಿಯನ್ನು ಓಪನ್ ಮಾಡಿ ಇಟ್ಟುಕೊಂಡು ಉಸಿರಾಡುವುದರಿಂದ ಬಾಯಿ ಹುಣ್ಣಾಗಿರುವ ಜಾಗದಲ್ಲೆಲ್ಲ ಈ ಔಷಧಿ ವರ್ಕ್ ಆಗಿ ಬಾಯಿಯ ಹುಣ್ಣು ಶೀಘ್ರವಾಗಿ ಗುಣವಾಗುತ್ತದೆ.