ಪುನೀತ್ ರಾಜಕುಮಾರ್ ಅವರ ಜೀವಮಾನದಲ್ಲಿ ಕೊನೆಯ ಚಿತ್ರ ಎಂದರೆ ಅದು ಗಂಧದಗುಡಿ ಹೌದು ಪುನೀತ್ ರಾಜಕುಮಾರ್ ಅವರು ಹಗಲಿದ ನಂತರ ಬಿಡುಗಡೆಯಾಗುತ್ತಿರುವ ಮೂರನೇ ಚಿತ್ರ ಗಂಧದ ಗುಡಿ ಇದು ಅವರ ಕನಸಿನ ಕೂಸಾಗಿತ್ತು. ಈ ಒಂದು ಚಿತ್ರದ ಮೇಲೆ ಎಲ್ಲಿಲ್ಲದ ಪ್ರೀತಿಯನ್ನು ಇಟ್ಟುಕೊಂಡಿದ್ದರು. ನಮ್ಮ ಕರ್ನಾಟಕದ ಹೆಮ್ಮೆಯನ್ನು ಸಾರುವಂತಹ ಚಿತ್ರ ಇದಾಗಿದ್ದು ಇದೇ ತಿಂಗಳ 28ರಂದು ಚಿತ್ರ ಬಿಡುಗಡೆಯಾಗಲಿದೆ. ಈ ಒಂದು ಚಿತ್ರಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಾ ಕುಳಿತಿದ್ದಾರೆ ಕೆಲವು ದಿನಗಳ ಹಿಂದಷ್ಟೆ ಸಿನಿಮಾದ ಅದ್ಧೂರಿ ಪ್ರೀ ರಿಲೀಸ್ ಇವೆಂಟ್ ಬೆಂಗಳೂರಿನಲ್ಲಿ ನಡೆದಿದ್ದು, ಚಿತ್ರರಂಗದ ದಿಗ್ಗಜರೆಲ್ಲ ಒಟ್ಟು ಸೇರಿ ಅಪ್ಪುವನ್ನು ನೆನಪು ಮಾಡಿಕೊಂಡರಷ್ಟೆ ಅಲ್ಲದೆ, ಗಂಧದ ಗುಡಿ ಸಿನಿಮಾ ಎಲ್ಲ ದಾಖಲೆಗಳನ್ನು ಮುರಿಯಲೆಂದು ಹಾರೈಸಿದರು.
ಗಂಧದ ಗುಡಿ ಸಿನಿಮಾವು ಅಕ್ಟೋಬರ್ 28 ರಂದು ತೆರೆಗೆ ಬರಲಿದ್ದು, ಸಿನಿಮಾಕ್ಕೆ ಪ್ರೀ ಬುಕಿಂಗ್ ಈಗಾಗಲೆ ಆರಂಭವಾಗಿದೆ. ಸಿನಿಮಾ ನೋಡಲು ಅಭಿಮಾನಿಗಳು ಈಗಲೇ ಟಿಕೆಟ್ ಬುಕಿಂಗ್ ಮಾಡಿಕೊಳ್ಳಬಹುದಾಗಿದೆ. ಪ್ರಸ್ತುತ, ಬೆಂಗಳೂರಿನ ನರ್ತಕಿ ಚಿತ್ರಮಂದಿರದ ಪ್ರೀ ಟಿಕೆಟ್ ಬುಕಿಂಗ್ ಮಾತ್ರವೇ ಆರಂಭಗೊಂಡಿದೆ. ಬೆಂಗಳೂರಿನ ಇತರ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್‌ಗಳ ಟಿಕೆಟ್ ಬುಕಿಂಗ್ ಅಕ್ಟೋಬರ್ 25 ಯಿಂದ ಆರಂಭವಾಗಿದೆ. ರಾಜ್ಯ ಸರ್ಕಾರವು, ಗಂಧದ ಗುಡಿ ಸಿನಿಮಾಕ್ಕೆ ತೆರಿಗೆ ವಿನಾಯಿತಿ ಘೋಷಿಸಿರುವ ಕಾರಣ ಟಿಕೆಟ್ ಬೆಲೆ ಬಹಳ ಕಡಿಮೆ ಇರಲಿದೆ. ಈಗ ಪ್ರೀ ಬುಕಿಂಗ್ ಓಪನ್ ಆಗಿರುವ ನರ್ತಕಿ ಚಿತ್ರಮಂದಿರದಲ್ಲಿ ಗಂಧದ ಗುಡಿ ಸಿನಿಮಾದ ಟಿಕೆಟ್ ಬೆಲೆ ಕೇವಲ 100 ರುಪಾಯಿ ಇದೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ಸಹ ಇದೇ ಬೆಲೆ ಅಥವಾ ಇದಕ್ಕಿಂತ ತುಸು ಹೆಚ್ಚು ಬೆಲೆಗೆ ಗಂಧದ ಗುಡಿ ಸಿನಿಮಾ ವೀಕ್ಷಿಸಬಹುದಾಗಿದೆ. ನರ್ತಕಿ ಚಿತ್ರಮಂದಿರದ ಬಳಿ ಈಗಾಗಲೇ ಬಹಳ ದೊಡ್ಡದಾಗಿ ಪುನೀತ್ ರಾಜ್‌ಕುಮಾರ್ ಕಟೌಟ್ ನಿರ್ಮಿಸಿ, ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ.
ಅಪ್ಪು ಅಭಿಮಾನಿಗಳು, ಬೆಂಗಳೂರು ಮಾತ್ರವೇ ಅಲ್ಲದೆ ರಾಜ್ಯದಾದ್ಯಂತ ಗಂಧದ ಗುಡಿ ಸಿನಿಮಾವನ್ನು ಖುಷಿಯಿಂದ ಸ್ವಾಗತಿಸಲು ತಯಾರಾಗಿದ್ದಾರೆ. ಜಿಲ್ಲಾ ಕೇಂದ್ರಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಆ ದಿನದಂದು ಹಮ್ಮಿಕೊಳ್ಳಲಾಗಿದೆ. ಗಂಧದ ಗುಡಿ ಡಾಕ್ಯುಮೆಂಟರಿ ಸಿನಿಮಾವು ಸಾಮಾನ್ಯ ಸಿನಿಮಾ ಅಲ್ಲ. ಇದು ಪುನೀತ್ ರಾಜ್‌ಕುಮಾರ್ ಅವರ ಕನಸಿನ ಪ್ರಾಜೆಕ್ಟ್ ಆಗಿದ್ದು, ಕರ್ನಾಟಕದ ಮೂಲೆ ಮೂಲೆಗೆ ತೆರಳಿ ಅಲ್ಲಿನ ಪ್ರಕೃತಿ ಸೌಂದರ್ಯವನ್ನು, ಅಲ್ಲಿನ ಜನ ಜೀವನ, ಸಂಸ್ಕೃತಿಯನ್ನು ಸೆರೆ ಹಿಡಿದು ಅದನ್ನೆಲ್ಲ ಒಟ್ಟು ಮಾಡಿ ಕರ್ನಾಟಕದ ಸೌಂದರ್ಯವನ್ನು ತೆರೆ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ ಅಪ್ಪು. ಈ ಸಾಹಸದಲ್ಲಿ ಅವರಿಗೆ ಅಮೋಘವರ್ಷ ಸಹ ಜೊತೆಯಾಗಿದ್ದಾರೆ.
ಎಲ್ಲರೂ ಸಹ ಚಿತ್ರಮಂದಿರಗಳಿಗೆ ಹೋಗಿ ಸಿನಿಮಾವನ್ನು ವೀಕ್ಷಿಸಿ ಆ ಸಿನಿಮಾದಿಂದ ಬಹಳಷ್ಟು ಕಲಿತ ಕೊಳ್ಳಬಹುದು ಅಷ್ಟೇ ಅಲ್ಲದೆ ಅಪ್ಪು ಅವರ ಮೇಲಿರುವ ಅಭಿಮಾನವನ್ನು ಇದು ಇನ್ನಷ್ಟು ಹೆಚ್ಚಿಸುತ್ತದೆ. ಇದುವರೆಗೂ ಈ ರೀತಿಯಾದಂತಹ ಒಂದು ಚಿತ್ರವನ್ನು ಯಾರು ಸಹ ನೀಡಿರಲಿಲ್ಲ ಆದರೆ ಪುನೀತ್ ರಾಜ್‌ಕುಮಾರ್ ಅವರು ನಮ್ಮ ಕರ್ನಾಟಕದ ಹೆಮ್ಮೆಯನ್ನು ಸಾರುವಲ್ಲಿ ಕನ್ನಡಿಗನಾಗಿ ಒಂದು ಉತ್ತಮವಾದ ಕೆಲಸವನ್ನು ಮಾಡಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. ಗಂಧದಗುಡಿ ಸಿನಿಮಾ ತುಂಬಾ ಅದ್ಭುತವಾಗಿ ಇರುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಪ್ಪು ಅವರ ಈ ಸಿನಿಮಾಗೆ ನಿಮ್ಮ ಬೆಂಬಲ ಇದ್ದರೆ ನಮಗೆ ಕಮೆಂಟ್ಸ್ ಮೂಲಕ ತಿಳಿಸಿ.