ನಿರೂಪಕಿ ಅನುಶ್ರೀ ಅವರ ಈ ಮಸ್ತ್ ಡ್ಯಾನ್ಸ್ ಒಮ್ಮೆ ನೋಡಿ ದೇವತೆಯಂತೆ ಕಂಗೊಳಿಸುತ್ತಿದ್ದಾರೆ.

ಕಿರುತೆರೆಯ ನಿರೂಪಕಿಯಾಗಿ, ನಟಿಯಾಗಿ ಅನುಶ್ರೀ ಕನ್ನಡ ಮನೊರಂಜನಾ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತು ಸಂಪಾದಿಸಿಕೊಂಡಿದ್ದಾರೆ. ಟಿವಿ ರಿಯಾಲಿಟಿ ಶೋ ನಿರೂಪಣೆ, ಸಿನಿಮಾ ಸಂಬಂಧಿ ಕಾರ್ಯಕ್ರಮಗಳ ನಿರೂಪಣೆ, ನೃತ್ಯ, ನಟನೆ ಎಲ್ಲದರಲ್ಲೂ ಸೈ ಎನಿಸಿಕೊಂಡಿರುವ ಅನುಶ್ರೀ ಕನ್ನಡಿಗರ ಮೆಚ್ಚಿನ ನಿರೂಪಕಿಯೆಂದು ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಸರಿಗಮಪ ಹಲವಾರು ಸೀಸನ್ ಗಳನ್ನು ಮುಗಿಸಿದ್ದು, ಜನರಿಗೆ ತುಂಬಾ ಇಷ್ಟವಾದ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಇನ್ನು ಕಿರುತೆರೆಯಲ್ಲಿ ಯಾವುದೇ ರೀತಿಯ ಕಾರ್ಯಕ್ರಮಗಳು ಆದರೂ ಕೂಡ ನಿರೂಪಕಿಯಾಗಿ ಅನುಶ್ರೀ ಅವರಿಗೆ ಬೇಡಿಕೆ ಬಹಳವಿದೆ. ಹೌದು ಅನುಶ್ರೀ ಅವರು ಕಿರುತೆರೆಯಲ್ಲಿ ಪ್ರಸಾರವಾಗುವ ಹಲವಾರು ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಇನ್ನು ಇವರ ನಿರೂಪಣೆ ಪ್ರತಿಯೊಬ್ಬ ವೀಕ್ಷಕರಿಗೆ ತುಂಬಾ ಇಷ್ಟವಾಗುತ್ತದೆ. ಅನುಶ್ರೀ ಅವರು ಅದ್ಭುತವಾಗಿ ಮಾಡಿರುವಂತಹ ಡಾನ್ಸ್ ಈ ಕೆಳಗೆ ನೀವು ನೋಡಬಹುದು.

ಇವರು ಪಟಪಟನೆ ಮಾತನಾಡುವ ರೀತಿ ಹಾಗೂ ಇವರ ಹಾಸ್ಯ ಸಂಭಾಷಣೆ ಎಲ್ಲರಿಗೂ ಇಷ್ಟವಾಗಿದೆ. ಇವರು ಸರಿಗಮಪ ರಿಯಾಲಿಟಿ ಶೋನ ನಿರೂಪಕಿಯಾಗಿ ಕೂಡ ಕಾರ್ಯನಿರ್ವಹಿಸಿದ್ದಾರೆ. ಇನ್ನು ಕನ್ನಡವನ್ನು ಸಲಲಿತವಾಗಿ ಮಾತನಾಡುವಂತಹ ಅನುಶ್ರೀ ಅವರು ಮಾತಿನ ಮಲ್ಲಿ ಎಂದೇ ಗುರುತಿಸಿಕೊಂಡಿದ್ದಾರೆ ಹೌದು ತಮ್ಮ ಸ್ವಚ್ಛ ಕನ್ನಡ ಭಾಷೆಯ ಮುಖಾಂತರ ನಿರೂಪಕಿಯಾಗಿ ಗುರುತಿಸಿಕೊಂಡಿರುವ ಅನುಶ್ರೀ ಅವರು ಸರಿಗಮಪ ಶೋನಲ್ಲಿ ಅರ್ಜುನ್ ಜನ್ಯ ಮತ್ತು ಇವರ ಕಾಂಬಿನೇಶನ್ ನಲ್ಲಿ ನಡೆಯುವ ಕೆಲವೊಂದು ಸನ್ನಿವೇಶಗಳು ಎಲ್ಲರಿಗೂ ಸಹ ತುಂಬಾ ಇಷ್ಟವಾಗುತ್ತಿದೆ. ಆದ್ದರಿಂದಲೇ ಬಹಳಷ್ಟು ಜನರು ಸರಿಗಮಪ ಕಾರ್ಯಕ್ರಮವನ್ನು ವೀಕ್ಷಣೆ ಮಾಡುತ್ತಿದ್ದರು ಅನುಶ್ರೀ ಯಾವುದೇ ಒಂದು ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ ಎಂದು ತಿಳಿದರೆ ಸಾಕು ಬಹಳಷ್ಟು ಜನ ಅನುಶ್ರೀ ಅವರಿಗೋಸ್ಕರನೇ ಆ ಕಾರ್ಯಕ್ರಮವನ್ನು ವೀಕ್ಷಣೆ ಮಾಡುತ್ತಾರೆ.

ಅನುಶ್ರೀ ಅವರು ಟಿವಿ ಕಾರ್ಯಕ್ರಮಗಳು ಅಷ್ಟೇ ಅಲ್ಲದೆ ಸಿನಿಮಾದಲ್ಲಿಯೂ ಸಹ ನಟಿಸಿದ್ದಾರೆ ಹೌದು ಅನುಶ್ರೀ ಅವರು ಬೆರಳೆಣಿಕೆ ಸಿನಿಮಾ ಗಳಲ್ಲಿಯೂ ಸಹ ಕಾಣಿಸಿಕೊಂಡಿದ್ದಾರೆ ಆದರೆ ಇವರು ಹೆಚ್ಚಾಗಿ ಹೊತ್ತು ಕೊಡುವುದು ನಿರೂಪಣೆಗೆ, ಹೌದು ಇವರು ನಿರೂಪಣೆಯನ್ನು ತಮ್ಮ ವೃತ್ತಿಪರ ಕೆಲಸವನ್ನಾಗಿ ಮಾಡಿಕೊಂಡಿದ್ದಾರೆ. ಅನುಶ್ರೀ ಬಿಗ್ ಬಾಸ್ ಮನೆಗೆ ಹೋದ ನಂತರ ಇವರ ಬಗ್ಗೆ ಇನ್ನಷ್ಟು ವಿಷಯಗಳು ಜನರಿಗೆ ತಿಳಿಯಲು ಸಾಧ್ಯವಾಯಿತು ಅಲ್ಲಿ ಇವರ ಸರಳತೆ ಹಾಗೆಯೇ ಇವರು ಬೆರೆಯುವ ರೀತಿ ಎಲ್ಲರಿಗೂ ಇಷ್ಟವಾಗಿತ್ತು. ಅನುಶ್ರೀ ಅವರು ಯಾವುದೇ ಒಂದು ಕಾರ್ಯಕ್ರಮವನ್ನು ನಿರೂಪಣೆ ಮಾಡಬೇಕಾದರೂ ಯಾವುದೇ ಒಂದು ಅವಾರ್ಡ್ ಕಾರ್ಯಕ್ರಮಕ್ಕೆ ಹೋಗಬೇಕಾದರೂ ತುಂಬಾ ಚೆನ್ನಾಗಿ ರೆಡಿಯಾಗಿ ಹೋಗುತ್ತಾರೆ.

ಅನುಶ್ರೀ ಅವರಿಗೆ ಪುನೀತ್ ರಾಜ್‌ಕುಮಾರ್ ಎಂದರೆ ತುಂಬಾ ಇಷ್ಟ ಆದ್ದರಿಂದ ಪುನೀತ್ ನಮನ, ಹಾಗೆಯೇ ಪುನೀತ ಪರ್ವ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದಾರೆ. ಅನುಶ್ರೀ ಅವರ ನಿರೂಪಣೆ ಎಂದರೆ ಸ್ಟಾರ್ ನಟ ನಟಿಯರಿಂದ ಹಿಡಿದು ಸಾಮಾನ್ಯರು ತನಕ ಅವು ತುಂಬಾ ಇಷ್ಟಪಟ್ಟು ನೋಡುತ್ತಾರೆ. ಅನುಶ್ರೀ ಅವರು ನಿರೂಪಣೆ ಮಾಡುವುದಷ್ಟೇ ಅಲ್ಲದೆ ಒಳ್ಳೆಯ ನೃತ್ಯ ಗಾತಿ ಕೂಡ ಹೌದು ಇವರು ತುಂಬಾ ಚೆನ್ನಾಗಿ ಡ್ಯಾನ್ಸ್ ಕೂಡ ಮಾಡುತ್ತಾರೆ ಕೆಲವೊಂದಷ್ಟು ಡಾನ್ಸ್ ಕಾರ್ಯಕ್ರಮಗಳನ್ನು ಸಹ ಅನುಶ್ರೀ ಅವರು ನಿರೂಪಣೆ ಮಾಡಿದ್ದಾರೆ. ಯಾವುದಕ್ಕೂ ಕಡಿಮೆ ಇಲ್ಲದೆ ಎಲ್ಲವನ್ನು ಮಾಡಿ ಸೈ ಎನಿಸಿಕೊಳ್ಳುವಂತಹ ಶಕ್ತಿ ಅನುಶ್ರೀ ಅವರಲ್ಲಿ ಇದೆ. ಇದೀಗ ಜೀ ಕುಟುಂಬ ಅವಾರ್ಡ್ ವೇದಿಕೆಯಲ್ಲಿ ಅನುಶ್ರೀ ಅವರಿಗೆ ಉತ್ತಮ ನಿರೂಪಕಿ ಎಂಬ ಅವಾರ್ಡ್ ಸಿಕ್ಕಿದೆ ಇದು ಅವರಿಗೆ ತುಂಬಾ ಖುಷಿ ಕೊಟ್ಟಿದೆ. ಅದೇ ಡ್ರೆಸ್ ನಲ್ಲಿ ಅವರು ಒಂದು ಸಾಂಗೇ ನೃತ್ಯವನ್ನು ಸಹ ಮಾಡಿದ್ದಾರೆ. ಅನುಶ್ರೀ ಅವರ ಡ್ಯಾನ್ಸ್ ನಿಮಗೂ ಸಹ ಇಷ್ಟವಾದರೆ ತಪ್ಪದೇ ನಮಗೆ ಕಮೆಂಟ್ಸ್ ಮೂಲಕ ತಿಳಿಸಿ.

Leave a Comment

%d bloggers like this: