ಹಾಲಿನಲ್ಲಿ ಅಥವಾ ನೀರಿನಲ್ಲಿ ಇದು ಒಂದನ್ನು ಬೆರೆಸಿದರೆ ಸಾಕು ರಕ್ತನಾಳಗಳಲ್ಲಿ ಬ್ಲಾಕೇಜ್, ಕೊಲೆಸ್ಟ್ರಾ ಜಾಸ್ತಿ ಆಗುವುದು, ರಕ್ತದಲ್ಲಿಸಕ್ಕರೆ ಪ್ರಮಾಣ ಜಾಸ್ತಿಯಾಗುವುದು, ರಕ್ತ ದಪ್ಪವಾಗುವುದು, ವೆರಿಕೋಸ ಸಮಸ್ಯೆ, ಮಂಡಿ ಬಾವು, ಮಂಡಿಯಲ್ಲಿ ಜಾಯಿಂಟ್ ಪೈನ್ ಬರುವುದು, ಕೂತರೆ ಏಳುವುದಕ್ಕೆ ಆಗುವುದಿಲ್ಲ ಎದ್ದರೆ ಕೂರಲು ಆಗುವುದಿಲ್ಲ, ಸಣ್ಣ ಕೆಲಸ ಮಾಡೋದಕ್ಕು ಆಗುತ್ತಾ ಇರೋದಿಲ್ಲ ಇಂತಹದಕ್ಕೆಲ್ಲಾ ಪರಿಹಾರ ನೀಡುತ್ತದೆ. ಅಗಸೆ ಬೀಜದಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿ ಇರುವುದು, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವು ಕಡಿಮೆ ಆಗುವುದು. ಒಮೆಗಾ-3 ಕೊಬ್ಬಿನಾಮ್ಲಗಳು, ನಾರಿನಾಂಶ, ಪ್ರೋಟೀನ್ ಮತ್ತು ಇತರ ಕೆಲವು ಪ್ರಮುಖ ವಿಟಮಿನ್ ಗಳು ಹಾಗೂ ಖನಿಜಾಂಶಗಳು ಇದರಲ್ಲಿವೆ ಆಹಾರದ ನಾರಿನಾಂಶವು ಜೀರ್ಣಕ್ರಿಯೆ ನಿಧಾಣವಾಗಿಸುವುದು ಮತ್ತು ಇದು ಹಾರ್ಮೋನ್ ಗಳನ್ನು ನಿಯಂತ್ರಣದಲ್ಲಿಡುವುದು. ಈ ಬೀಜಗಳಲ್ಲಿ ಅತ್ಯಧಿಕ ಪ್ರಮಾಣದ ಆಂಟಿಆಕ್ಸಿಡೆಂಟ್ ಮತ್ತು ಈಸ್ಟ್ರೋಜನ್ ಇದೆ. ಇವೆರಡು ದೇಹದಲ್ಲಿ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವುದು. ಒಣಶುಂಠಿ ಪೋಷಕಾಂಶಗಳ ಉಗ್ರಾಣವಾಗಿದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದರ ಜೊತೆಗೆ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಶುಂಠಿಯ ಸೇವನೆಯು ತಲೆನೋವಿಗೆ ಚಿಕಿತ್ಸೆಯನ್ನು ನೀಡುತ್ತದೆ. ಕರುಳಿನ ಆರೋಗ್ಯವನ್ನು ಉತ್ತೇಜಿಸುತ್ತದೆ ಮತ್ತು ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಒಣ ಶುಂಠಿ ಮಲಬದ್ಧತೆ ನಿವಾರಿಸಲು ಉತ್ತಮವಾಗಿದೆ.
ಒಣ ಶುಂಠಿ ಕಫ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಶುಂಠಿ ಶೀತ ಮತ್ತು ಕೆಮ್ಮಿನ ಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಮತ್ತು ಸೋಂಕುಗಳ ವಿರುದ್ಧ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಪತಂಜಲಿ ಪ್ರಕಾರ, ಜೀರ್ಣಾಂಗ ವ್ಯವಸ್ಥೆಯ ಅಸ್ವಸ್ಥತೆಗಳು, ಹಲ್ಲುಗಳು ಮತ್ತು ತಲೆನೋವು , ಚರ್ಮ ರೋಗಗಳು, ಮುಟ್ಟಿನ ಸಮಸ್ಯೆಗಳನ್ನು ದಾಲ್ಚಿನ್ನಿ ಸೇವನೆಯಿಂದ ಗುಣಪಡಿಸಬಹುದು. ಇದರೊಂದಿಗೆ, ಇದರ ಬಳಕೆಯು ಅತಿಸಾರ ಮತ್ತು ಕ್ಷಯರೋಗದಲ್ಲಿ ಸಹ ಪ್ರಯೋಜನಕಾರಿಯಾಗಿದೆ. ದಾಲ್ಚಿನ್ನಿಯನ್ನು ಬಳಸುವುದರಿಂದ ಅನೇಕ ಪ್ರಯೋಜನಗಳಿವೆ ಎಂದು ನೀವು ತಿಳಿದಿರಲೇಬೇಕು, ಇದರಿಂದ ನೀವು ಸಮಯಕ್ಕೆ ದಾಲ್ಚಿನ್ನಿಯನ್ನು ಬಳಸುವುದರ ಪ್ರಯೋಜನವನ್ನು ಪಡೆಯಬಹುದು. ಅರಿಶಿನದಲ್ಲಿರುವ ಉರಿಯೂತ ಶಮನಕಾರಿ ಗುಣ ಮತ್ತು ಆ್ಯಂಟಿಆಕ್ಸಿಡೆಂಟ್ ಕ್ಯಾನ್ಸರ್ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಹೃದಯದ ಮೇಲಿನ ಒತ್ತಡವನ್ನು ಹೆಚ್ಚಿಸಿ ಹೃದಯ ಸಂಬಂಧಿ ಕಾಯಿಲೆಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಅರಿಶಿನದ ಸೇವನೆಯಿಂದ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಅಲ್ಲದೇ ಯಕೃತ್ ಅನ್ನು ನೈಸರ್ಗಿಕವಾಗಿ ಸ್ವಚ್ಛಗೊಳಿಸಲೂ ಅರಿಶಿನ ನೆರವಾಗುತ್ತದೆ.
ಇನ್ನು ಈ ಮನೆಮದ್ದನ್ನು ತಯಾರಿಸಲು ಅಗಸೆ ಬೀಜವನ್ನು ಒಂದು ಬಟ್ಟಲಲ್ಲಿ ತೆಗೆದುಕೊಳ್ಳಬೇಕು ಅದನ್ನು ಈ ಎಲ್ಲದರ ಜೊತೆ ಮಿಶ್ರಣಗೊಳಿಸಲು ಹದವಾಗಿ ಉರಿದು ಕೊಳ್ಳಬೇಕು ನಂತರ ಅದನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಬೇಕು ಅದಕ್ಕೆ ಒಂದು ಚಮಚ ಒಣಶುಂಠಿ ಪುಡಿಯನ್ನು ಹಾಕಬೇಕು, ಹಾಗೆ ಅರ್ಧ ಚಮಚ ದಾಲ್ಚಿನಿ ಅಥವಾ ಚಕ್ಕೆಪುಡಿಯನ್ನು ಹಾಕಬೇಕು, ಒಂದು ಚಮಚ ಅರಿಶಿನ ಪುಡಿಯನ್ನು ಹಾಕಿಕೊಳ್ಳಬೇಕು ಈ ಎಲ್ಲವನ್ನು ಮಿಶ್ರಣಗೊಳಿಸಿ ಒಂದು ಗ್ಲಾಸ್ ಹಾಲಿಗೆ ಅಥವಾ ಹಾಲು ಇಷ್ಟವಾಗದಿದ್ದಲ್ಲಿ ನೀರಿಗೆ ಒಂದು ಚಮಚ ಪುಡಿಯನ್ನು ಹಾಕಿ ಮಿಶ್ರಣ ಮಾಡಬೇಕು ಇದನ್ನು ರಾತ್ರಿಯ ಹೊತ್ತು ಮಲಗುವ ಮುನ್ನ ಊಟ ಆಗಿ ಅರ್ಧ ಗಂಟೆ ಆದ ನಂತರ ಕುಡಿಯಬೇಕು. ಇದನ್ನು ಒಂದು ವಾರದ ಮಟ್ಟಿಗೆ ಪ್ರತಿನಿತ್ಯ ಸೇವಿಸಬೇಕು ಆಗ ಇದರ ಪ್ರಯೋಜನವನ್ನು ನೀವು ಪಡೆಯಬಹುದು.