ಸನ್ಮಾನ್ಯ ಡಾಕ್ಟರ್ ದಿವಂಗತ ಪುನೀತ್ ರಾಜ್‌ಕುಮಾರ್ ಅವರಿಗೆ ಇದೀಗ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ ನೆರವೇರಿದ್ದು ಪುನೀತ್ ರಾಜ್‌ಕುಮಾರ್ ಅವರ ಪತ್ನಿಗೆ ಪ್ರಶಸ್ತಿ ಪ್ರಧಾನ ಮಾಡುವ ಮೂಲಕ ಕಾರ್ಯಕ್ರಮವನ್ನು ಸುಸೂತ್ರವಾಗಿ ನೆರವೇರಿಸಲಾಗಿದೆ. 1992 ರಲ್ಲಿ ಅದೇ ವಿಧಾನಸೌಧದ ಮುಂದೆ ರಾಜ್‌ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲಾಗಿತ್ತು. ಇದೀಗ ಅವರ ಮಗನಾದಂತಹ ಪುನೀತ್ ರಾಜ್‌ಕುಮಾರ್ ಅವರಿಗೂ ಸಹ ಪ್ರಶಸ್ತಿಯನ್ನು ಕೊಟ್ಟು ಗೌರವಿಸಲಾಗಿದೆ ಇದೇ ಮೊದಲ ಬಾರಿಗೆ ತಂದೆ ಮಗನಿಗೆ ಅತ್ಯುನ್ನತ ಪ್ರಶಸ್ತಿ ದೊರಕಿರುವುದು. ಕರ್ನಾಟಕ ರತ್ನ ಪ್ರಶಸ್ತಿಯನ್ನು ಪಡೆದುಕೊಂಡಿರುವಂತಹ ಒಂಬತ್ತು ಜನರಲ್ಲಿ 10ನೆಯವರಾಗಿ ಡಾಕ್ಟರ್ ಪುನೀತ್ ರಾಜ್‌ಕುಮಾರ್ ಅವರು ಸೇರಿಕೊಂಡಿದ್ದಾರೆ. ದೊಡ್ಡಮನೆ ಕುಟುಂಬದ ಇಬ್ಬರು ಈಗ ಕರ್ನಾಟಕ ರತ್ನ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ ಚಿತ್ರರಂಗದ ಸೇವೆಗೆ ರಾಜ್‌ಕುಮಾರ್ ಗೆ ಕರ್ನಾಟಕ ರತ್ನ ಪ್ರಶಸ್ತಿ ದೊರಕಿತ್ತು, ಸಿನಿಮ ಮತ್ತು ಸಮಾಜ ಸೇವೆಗೆ ಅಪ್ಪು ಅವರಿಗೆ ದೊರಕಿದ ಗೌರವ ಎಂದೇ ಹೇಳಬಹುದು.
ಡಾಕ್ಟರ್ ರಾಜ್‌ಕುಮಾರ್ ಅವರು ಕರ್ನಾಟಕ ರತ್ನ ಪ್ರಶಸ್ತಿಯನ್ನು ಪಡೆದುಕೊಂಡ ಮೂರು ದಶಕಗಳ ಬಳಿಕ ಪುತ್ರನಿಗೆ ಅಂದರೆ ಅಪ್ಪು ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಒಲಿದು ಬಂದಿದೆ. ನವೆಂಬರ್ 28ರಂದು ನಡೆದ ಸಮಾರಂಭದಲ್ಲಿ ದೊಡ್ಡ ಮನೆ ಕುಟುಂಬದ ಸದಸ್ಯರು ಹಾಜರಿದ್ದು ಕಾರ್ಯಕ್ರಮವನ್ನು ನೋಡಿ ಕಣ್ಣು ತುಂಬಿಕೊಂಡಿದ್ದಾರೆ. ಅಪ್ಪು ಅವರು ಮಾಡಿರುವಂತಹ ಸಾಧನೆಯ ಬಗ್ಗೆ ಅವರ ಸಾವಿನ ನಂತರವೇ ಎಲ್ಲರಿಗೂ ತಿಳಿದು ಬಂತು, ಸಾವನ್ನಪ್ಪಿದ ದಿನದಿಂದಲೂ ಮುಖ್ಯಮಂತ್ರಿ ಬೊಮ್ಮಾಯಿಯವರು ಅಪ್ಪುವಿನ ಎಲ್ಲಾ ಕಾರ್ಯಕ್ರಮಗಳಿಗೆ ಭಾಗಿಯಾಗುತ್ತಲೇ ಬಂದಿದ್ದಾರೆ ಹೀಗಿರುವಾಗ ಅಪ್ಪು ನಮನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರು ಅಪ್ಪುವಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡುವುದಾಗಿ ಘೋಷಣೆ ಮಾಡಿದ್ದರು ಆದರೆ ಈ ವಿರುದ್ಧ ಸುಮಲತಾ ಅಂಬರೀಶ್ ಅವರು ಗರಂ ಆಗಿದ್ದಾರೆ.
ಹಾಗಾದರೆ ಅಪ್ಪು ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿರುವುದು ಸಮಲತ ಅವರಿಗೆ ಇಷ್ಟವಿಲ್ಲವೇ ಎಂದು ಹಲವರಲ್ಲಿ ಪ್ರಶ್ನೆ ಉಂಟಾಗುತ್ತಿದೆ. ಪುನೀತ್ ರಾಜ್‌ಕುಮಾರ್ ನಮನದ ದಿನದಂದು ಅಪ್ಪುವಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡುವುದಾಗಿ ಘೋಷಣೆ ಮಾಡಿದ್ದರು ಆದರೆ ಈ ಎಲ್ಲಾದರ ನಡುವೆ ಇದೀಗ ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಭಿಮಾನಿಗಳು ಅಂಬರೀಶ್ ಅವರಿಗೂ ಕೂಡ ಮರಣೋತ್ತರ ಪ್ರಶಸ್ತಿ ಸಿಗಬೇಕು ಎಂದು ಹೋರಾಟದಲ್ಲಿದ್ದಾರೆ ಈ ಎಲ್ಲಾ ಬೆಳವಣಿಗೆಯನ್ನು ಕಂಡಂತಹ ಸುಮಲತಾ ಅಂಬರೀಶ್ ಅವರು ಅಪ್ಪು ನಿಧನದ ನೋವಲ್ಲಿರುವಾಗಲೇ ಇದೆಲ್ಲ ಬೇಕಾ, ಅಪ್ಪು ಅಗಲಿಕ್ಕೆ ಚಿತ್ರರಂಗ ಹಾಗು ಅಭಿಮಾನಿಗಳಿಗೆ ತುಂಬಲಾರದಂತಹ ನಷ್ಟ ಉಂಟಾಗಿದ್ದು ಈ ಸಮಯದಲ್ಲಿ ಅಭಿಮಾನಿಗಳುಗಳು ಹೋರಾಟ ಮಾಡುವ ನಿರ್ಧಾರ ಮಾಡಬಾರದು ಎಲ್ಲರ ಹೃದಯದ ಮೇಲೆ ಬರೆ ಹಾಕಿದಂತಾಗುತ್ತದೆ.
ಇಂತಹ ಸಮಯದಲ್ಲಿ ಈ ವಿಷಯ ಪ್ರಸ್ತಾಪಿಸುವುದು ಸಮಂಜಯವಲ್ಲ ಎಂದು ಸುಮಲತಾ ಅಂಬರೀಶ್ ಅವರು ಅಭಿಮಾನಿಗಳ ಮೇಲೆ ಗರಂ ಆಗಿದ್ದಾರೆ. ಅಂಬರೀಶ್ ಅವರು ಹಗಲಿ ನಾಲ್ಕು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್ ಅವರ ಸಮಾಧಿಗೆ ತೆರಳಿ ಸುಮಲತಾ ಅಂಬರೀಶ್ ಹಾಗೂ ಮಗ ಅಭಿಷೇಕ್ ಅವರು ಸೇರಿ ಚಿತ್ರರಂಗದ ಹಲವು ಗಣ್ಯರು ಪೂಜೆ ಸಲ್ಲಿಸಿದರು ಪ್ರಶಸ್ತಿ ನೀಡುವ ವಿಚಾರವಾಗಿ ಮಾತನಾಡಿದ ಸಂಸದೆ ಪುನೀತ್ ಗೆ ಸಿಕ್ಕ ಗೌರವ ಅಂಬರೀಶ್ ಅವರಿಗೂ ಸಿಗುತ್ತದೆ ನನಗೆ ನಂಬಿಕೆ ಇದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಅಪ್ಪು ಕರ್ನಾಟಕ ರತ್ನ ಪ್ರಶಸ್ತಿ ಸಿಕ್ಕಿದ್ರೆ ಅಂಬರೀಶ್ ಅವರಿಗು ಸಿಕ್ಕಂತೆ ಅರ್ಥ ಅಂಬರೀಶ್ ಅವರಿಗೆ ಏನು ಗೌರವ ಸಿಗಬೇಕಿತ್ತು ಅದು ಸಿಕ್ಕೆ ಸಿಗುತ್ತದೆ ಎಂಬ ಭರವಸೆ ಇದೆ ಎಂದು ಮನದಾಳದ ಮಾತುಗಳನ್ನು ಹೊರಹಾಕಿದ್ದಾರೆ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ.