ಜಗತ್ತಿನ ಸರ್ವ ಶ್ರೇಷ್ಠ ಗುರುಗಳಾದ ಇಷ್ಟ ಗುರುಗಳಾದ ಶ್ರೀ ಗುರು ರಾಘವೇಂದ್ರ ತೀರ್ಥ ಗುರು ಸರ್ವಭೌಮರು ಮಂತ್ರಾಲಯದಲ್ಲಿ ನೆಲೆಸಿ ಈಗಾಗಲೇ ನೂರಾರು ವರ್ಷಗಳ ಕಾಲ ಕಳೆದರೂ ಅವರ ಪವಾಡಗಳು ಮಾತ್ರ ಇಂದಿಗೂ ಸಹ ಕಡಿಮೆ ಆಗಿಲ್ಲ. ಗುರು ರಾಘವೇಂದ್ರ ಸ್ವಾಮಿಗಳನ್ನು ನಂಬಿದ ಎಷ್ಟೋ ಜನರು ಇಂದು ಉನ್ನತ ಹುದ್ದೆಯಲ್ಲಿ ಇದ್ದಾರೆ ಅದೆಷ್ಟೋ ಕಷ್ಟಗಳು ಇದ್ದರೂ ಕೂಡ ಗುರು ರಾಘವೇಂದ್ರ ಸ್ವಾಮಿಗಳ ಮುಂದೆ ನಿಂತು ಭಕ್ತಿಯಿಂದ ಬೇಡಿದರೆ ಖಂಡಿತ ಆ ಸಮಸ್ಯೆಗಳಿಗೆ ಪರಿಹಾರ ಸಿಕ್ಕೇ ಸಿಗುತ್ತದೆ. ಸಾಕಷ್ಟು ಜನ ಮಂತ್ರಾಲಯದಲ್ಲಿ ವರ್ಷದ ನಿತ್ಯವೂ ಗುರುಗಳ ಸೇವೆ ಮಾಡಿ ತಮ್ಮ ಪಾಪವನ್ನು ಕಳೆದುಕೊಳ್ಳಲು ಪ್ರಯತ್ನ ಪಡುತ್ತಾ ಇದ್ದಾರೆ. ಒಮ್ಮೆ ಗುರುವಿನ ಅನುಗ್ರಹ ನಿಮ್ಮ ಮೇಲೆ ಬಿದ್ದರೆ ನಿಮ್ಮ ಇಡೀ ಜೀವನವೇ ಬದಲಾಗಿ ಹೋಗುತ್ತದೆ.
ಮಹಾ ಮಹಿಮಾ ಗುರುಗಳು ಮತ್ತು ಜೀವಂತ ದೇವರು ಗುರು ರಾಘವೇಂದ್ರ ಆರಾಧ್ಯ ದೈವ ಮೂಲ ರಾಮ ಎಂದರೆ ಮಹಾ ವಿಷ್ಣು ಜೀವನದಲ್ಲಿ ಎಂತಹ ಕಷ್ಟಗಳು ಬಂದರೂ ಕೂಡ ಶ್ರೀ ಗುರುರಾಯರ ಸ್ಮರಣೆ ಮಾಡಿದ ತಕ್ಷಣವೇ ಕಷ್ಟಗಳು ಮಂಜುಗಡ್ಡೆಯಂತೆ ಕರಗುತ್ತಿತ್ತಂತೆ. ಗುರುರಾಯರನ್ನು ನೆನೆಯಲು ಹಲವಾರು ಮಂತ್ರಗಳಿವೆ. ಅದರಲ್ಲಿಯೂ ರಾಘವೇಂದ್ರ ಗಾಯಿತ್ರಿ ಮಂತ್ರವು ತುಂಬಾ ಶ್ರೇಷ್ಠವಾದ ಮಂತ್ರವಾಗಿದೆ, ರಾಘವೇಂದ್ರ ಗಾಯಿತ್ರಿ ಮಂತ್ರವನ್ನು ದಿನಕ್ಕೆ 1 ಬಾರಿ ಅಥವಾ 3 ಬಾರಿ, 5 ಬಾರಿ 9 ಬಾರಿ, 21 ಬಾರಿ, 1008 ಬಾರಿ ಜಪಿಸಬಹುದು. ರಾಘವೇಂದ್ರ ಗಾಯತ್ರಿ ಮಂತ್ರವನ್ನು ಪಠಿಸಲು ಕೆಲವು ನೀತಿ ನಿಯಮಗಳಿವೆ ಅವುಗಳನ್ನು ನೀವು ಪಾಲಿಸಿದರೆ ಶ್ರೀ ಗುರುರಾಯರು ನಿಮ್ಮ ಕನಸಿನಲ್ಲಿ ಬಂದು ನಿಮಗೆ ಅನುಗ್ರಹಿಸಿ ನಿಮ್ಮ ಸಕಲ ಸಂಕಷ್ಟಗಳನ್ನು ಕಳೆಯುತ್ತಾರೆ.
ಆ ನಿಯಮಗಳು ಯಾವುವೆಂದರೆ ಶ್ರೀ ಗುರು ರಾಘವೇಂದ್ರ ಗಾಯತ್ರಿ ಮಂತ್ರವನ್ನು ಪಠಿಸಲು ದಿನವೂ ಆಗದೇ ಇದ್ದರೆ ಗುರುರಾಯರ ವಿಶೇಷವಾದ ದಿನವಾದ ಗುರುವಾರದಂದು ಪಠಿಸಬಹುದು. ನೀವು ಇದನ್ನೇ 48 ದಿನಗಳ ಕಾಲ ಪಠಿಸಿದರೆ ಈ ಕೆಳಗಿನಂತೆ ಪಾಲಿಸಬಹುದು. ಶ್ರೀ ರಾಘವೇಂದ್ರ ಗಾಯತ್ರಿ ಮಂತ್ರದ ವ್ರತವನ್ನು ಆರಂಭಿಸಲು ಗುರುವಾರ ಅಥವಾ ಶುಕ್ಲ ಪಕ್ಷ ಪುಷ್ಪ ನಕ್ಷತ್ರ ದಿನಗಳಲ್ಲಿ ತುಂಬಾ ವಿಶೇಷವಾದ ಶಕ್ತಿ ಇರುತ್ತದೆ ಈ ದಿನಗಳಲ್ಲಿ ನೀವು ಶುರು ಮಾಡಿದರೆ ನಿಮಗೆ ಒಳಿತಾಗುತ್ತದೆ. ದಿನಕ್ಕೆ ಸತತ 1008 ಬಾರಿ ಶ್ರೀ ರಾಘವೇಂದ್ರ ಗಾಯತ್ರಿ ಮಂತ್ರವನ್ನು 48 ದಿನಗಳ ವರೆಗೆ ಪಠಿಸುತ್ತಾ ಬಂದರೆ ಕಲಿಯುಗದ ಕಾಮಧೇನು ಕಲ್ಪವೃಕ್ಷ ಭಕ್ತರ ಪಾಲಿನ ಆಪತ್ಬಾಂಧವ ಶ್ರೀ ಗುರು ರಾಘವೇಂದ್ರರು ನಿಮ್ಮ ಕನಸಿನಲ್ಲಿ ಬರುವುದು ಖಚಿತ.
ಕನಸಿನಲ್ಲಿ ಅವರು ಬಂದರೂ ಎಂದರೆ ನಿಮ್ಮ ಸಕಲ ಸಂಕಷ್ಟಗಳು ಕೊನೆಗೊಳ್ಳುವುದು ಖಚಿತ ಆ ಮಂತ್ರ ಯಾವುದು ಎಂದರೆ “ಓಂ ವೆಂಕಟನಾಥಾಯ ವಿದ್ಮಹೇ, ಸಚಿದಾನಂಧಾ ಧೀಮಹಿ, ತನ್ನೋ ರಾಘವೇಂದ್ರ ಪ್ರಚೋದಯಾತ್.” “ಓಂ ವೆಂಕಟನಾಥಾಯ ವಿದ್ಮಹೇ, ತಿಮ್ಮಣ್ಣ ಪುತ್ರಾಯ ಧೀಮಹಿ, ತನ್ನೋ ರಾಘವೇಂದ್ರ ಪ್ರಚೋದಯಾತ್.” ಓಂ ಪ್ರಹಲಾದಾಯ ವಿದ್ಮಹೇ, ವ್ಯಾಸ ರಾಜಾಯ ಧೀಮಹಿ, ತನ್ನೋ ರಾಘವೇಂದ್ರ ಪ್ರಚೋದಯಾತ್.” ಈ ಮಂತ್ರವನ್ನು ಒಂದು ಪುಸ್ತಕದಲ್ಲಿ ಬರೆದಿಟ್ಟುಕೊಂಡು ಒಂದು ವಿಶೇಷವಾದ ಗುರುವಾರದಂದು ಈ ಮಂತ್ರವನ್ನು ಆರಂಭಿಸಿ. ಈ ವ್ರತವನ್ನು ಗುರುವಾರದ ದಿನ ಆರಂಭಿಸಿದರೆ ತುಂಬಾ ಒಳ್ಳೆಯದು.