ಪಾದದ ಬಿರುಕು ಬಿಟ್ಟಿರುವವರಿಗೆ ಇಲ್ಲಿದೆ ಉತ್ತಮವಾದ ಮನೆ ಮದ್ದು!!
ಸ್ನೇಹಿತರೆ ಕೈಕಾಲು ಹೊಡೆಯುವುದು ಹಿಮ್ಮಡಿ ಹೊಡೆಯುವುದು ಸಾಮಾನ್ಯ. ನಮ್ಮ ಹಿಮ್ಮಡಿಯೂ ಹೊಡೆಯುವುದರಿಂದ ನಡೆಯುವುದಕ್ಕೂ ಆಗುವುದಿಲ್ಲ ಇನ್ನೂ ಕೆಲವರಿಗೆ ರಕ್ತವು ಬರುತ್ತಾ ಇರುತ್ತದೆ ಜೊತೆಗೆ ಇದನ್ನು ನೋಡಲು ಸುಂದರವಾಗಿಯು ಇರುವುದಿಲ್ಲ ಸಾಮಾನ್ಯವಾಗಿ ಹಿಮ್ಮಡಿ ಒಡೆಯುವುದು ತೇವಾಂಶವು ಕಡಿಮೆಯಾದ ಕಾರಣ. ನಿರ್ಲಕ್ಷ್ಯದಿಂದಾಗಿ, ವಿಶೇಷವಾಗಿ ಚಳಿಗಾಲದಲ್ಲಿ, ತೇವಾಂಶವು ನಿಮ್ಮ ಪಾದಗಳಿಂದ ಹೊರಬರುತ್ತದೆ. ಇದರಿಂದಾಗಿ ನೀವು ಬಿರುಕು ಬಿಟ್ಟ ಹಿಮ್ಮಡಿಗಳು ಮತ್ತು ಸುಲಭವಾಗಿ ಗುರಿಯಾಗುತ್ತೀರಿ.
ಜನರು ಮುಖದ ಆರೈಕೆಗೆ ಕೊಡುವ ಕಾಳಜಿಯನ್ನು ಪಾದದ ಕಾಳಜಿಗೆ ಕೊಡುವುದಿಲ್ಲ ಅವರಿಗೆ ಹೊಡೆದಿರುವ ಹಿಮ್ಮಡಿಯಿಂದ ನಿಂತಿಕೊಳ್ಳಲು ಕೂಡ ಕಷ್ಟವಾಗುತ್ತಾ ಇರುತ್ತದೆ. ಹಾಗಾಗಿ ನಮ್ಮ ಜನರು ಮುಖಕ್ಕೆ ಹೇಗೆ ಕಾಳಜಿ ಮಾಡಿಕೊಳ್ಳುತ್ತರೋ ಪಾದದ ಕಾಳಜಿ ಕೂಡ ಅದೇ ರೀತಿ ಮುಖ್ಯ ಎಂದು ಹೇಳಬಹುದು. ಅದಕ್ಕಾಗಿ ನಾವು ಇಂದು ಮನೆಯಲ್ಲೇ ತಯಾರಾಗುವ ಪೇಸ್ಟ್ ಒಂದರ ಕುರಿತು ತಿಳಿಸಲು ಮುಂದಾಗಿದ್ದೇವೆ ಈ ಪೇಸ್ಟ್ ನಮ್ಮ ಹಿಮ್ಮಡಿಯನ್ನು ಹೊಡೆಯುವುದರಿಂದ ತಡೆದು ಮತ್ತೆ ಸುಂದರವಾಗಿ ಮಾಡಲು ಉತ್ತಮವಾದ ಫಲಿತಾಂಶವನ್ನು ಇದರಿಂದ ಕಾಣಬಹುದಾಗಿದೆ.
ಜೊತೆಗೆ ಇದನ್ನು ಬಳಸುವುದರಿಂದ ನಮ್ಮ ಪಾದಗಳಲ್ಲಿ ಬಿರುಕಿನಲ್ಲಿ ಆಗುವ ವ್ಯತ್ಯಾಸಗಳನ್ನು ನೋಡಬಹುದು. ಮೊದಲನೆಯದಾಗಿ ನಾವು ಕೊಬ್ಬರಿ ಎಣ್ಣೆಯನ್ನು ತೆಗೆದುಕೊಳ್ಳಬೇಕು ನಂತರ ವ್ಯಾಸಲಿ ನನ್ನು ಒಂದು ಚಮಚ ತೆಗೆದುಕೊಳ್ಳಬೇಕು ಅದಕ್ಕೆ ಮೂರರಿಂದ ನಾಲ್ಕು ಹನಿ ನಿಂಬೆಹಣ್ಣನ್ನು ಕೂಡ ಹಾಕಬೇಕು.
ತೆಂಗಿನ ಎಣ್ಣೆಯು ವಿಟಮಿನ್ ಇ ಮತ್ತು ನೈಸರ್ಗಿಕ ಪ್ರೊಟೀನ್‌ಗಳ ಸಮೃದ್ಧ ಸಂಪನ್ಮೂಲವಾಗಿರುವುದರಿಂದ, ಹಾನಿಗೊಳಗಾದ ಚರ್ಮದ ಕೋಶಗಳನ್ನು ಸರಿಪಡಿಸಲು ಇದು ಸಹಾಯ ಮಾಡುತ್ತದೆ. ನಿಯಮಿತ ಎಣ್ಣೆ ಮಸಾಜ್ ನಿಮ್ಮ ಚರ್ಮದ ತೇವಾಂಶವನ್ನು ಲಾಕ್ ಮಾಡುತ್ತದೆ, ನಿಮ್ಮ ಹಿಮ್ಮಡಿಗಳು ಬಿರುಕು ಬಿಡುವುದನ್ನು ತಡೆಯುತ್ತದೆ ಮತ್ತು ನೀವು ಮೃದುವಾದ, ತೇವಭರಿತ ಪಾದಗಳನ್ನು ಹೊಂದಬಹುದು.
ವ್ಯಾಸಲೀನ್‌ನಲ್ಲಿನ ಮುಖ್ಯ ಅಂಶವೆಂದರೆ ಪೆಟ್ರೋಲಿಯಂ. ಚರ್ಮಕ್ಕೆ ಅನ್ವಯಿಸಿದಾಗ ಪೆಟ್ರೋಲಿಯಂ ಬಿಗಿಯಾದ ಜಲನಿರೋಧಕ ತಡೆಗೋಡೆಯನ್ನು ರೂಪಿಸುತ್ತದೆ. ಇದು ಚರ್ಮವು ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಒಣ ತ್ವಚೆಗೆ ಮನೆಯಲ್ಲಿ ಚಿಕಿತ್ಸೆಯಾಗಿ ಕಾರ್ಯನಿರ್ವಹಿಸುತ್ತದೆ. ನಿಂಬೆಹಣ್ಣುಗಳು ಪ್ರಬಲವಾದ ಜೀವಿರೋಧಿ ಗುಣಲಕ್ಷಣಗಳನ್ನು ಹೊಂದಿವೆ, ಇದು ಬ್ರೇಕ್ಔಟ್ ಉಂಟುಮಾಡುವ ಬ್ಯಾಕ್ಟೀರಿಯಾವನ್ನು ನಿವಾರಿಸಲು ಅವುಗಳನ್ನು ಪರಿಪೂರ್ಣವಾಗಿಸುತ್ತದೆ.ನಿಮ್ಮ ಚರ್ಮವನ್ನು ಹೈಡ್ರೇಟ್ ಮಾಡುತ್ತದೆ ಮತ್ತು ನಿಂಬೆ ಅದನ್ನು ತೆರವುಗೊಳಿಸುತ್ತದೆ ಮತ್ತು ಹೊಳಪು ನೀಡುತ್ತದೆ.
ಈ ಮೂರರ ಪೇಸ್ಟನ್ನು ಚೆನ್ನಾಗಿ ಮಾಡಿಕೊಂಡು ದಿನ ರಾತ್ರಿ ಮಲಗುವ ಮುನ್ನ ಪಾದಕ್ಕೆ ಚೆನ್ನಾಗಿ ಮಸಾಜ್ ಮಾಡಿಕೊಂಡು ನಂತರ ಕಾಲು ಚೀಲವನ್ನು ಧರಿಸಿಕೊಂಡು ಮಲಗಬೇಕು ಇದನ್ನು ಪಾದದ ಬಿರುಕು ಹೋಗುವ ತನಕ ಅನುಸರಿಸಬೇಕು, ಇನ್ನು ಈ ಪೇಸ್ಟ್ ಅನ್ನು ಯಾವುದಾದರೂ ಒಂದು ಡಬ್ಬಕ್ಕೆ ಹಾಕಿ ಶೇಖರಣೆ ಮಾಡಬಹುದು. ಇದರಿಂದ ಎಷ್ಟು ಜನಕ್ಕೆ ಉಪಯೋಗವಾಗಿದೆ ಹಾಗಾಗಿ ಇದನ್ನು ನೀವು ಒಮ್ಮೆ ಮನೆಯಲ್ಲಿ ಮಾಡಿ ನೋಡಿ.