ಧ್ರುವ ಸರ್ಜಾ ಇವರು ಅಕ್ಟೋಬರ್ 6 1988 ರಲ್ಲಿ ಜನಿಸಿದರು ಇವರು ಮೊಟ್ಟ ಮೊದಲನೆಯದಾಗಿ 2012 ರಲ್ಲಿ ತೆರೆಕಂಡಂತಹ ಅದ್ದೂರಿ ಎಂಬ ಚಲನ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪಾದರ್ಪಣೆಯನ್ನು ಮಾಡಿದರು ಧ್ರುವ ಸರ್ಜಾ ಅವರ ಸಹೋದರ ಚಿರಂಜೀವಿ ಸರ್ಜಾ ಇವರು ಜೂನ್ 2020ರಲ್ಲಿ ಆಕಸ್ಮಿಕವಾಗಿ ಮರಣವನ್ನು ಹೊಂದಿದರು ಇವರ ತಾಯಿಯ ಚಿಕ್ಕಪ್ಪ ಅರ್ಜುನ್ ಸರ್ಜಾ ಇವರು ಕೂಡ ಕನ್ನಡ ತಮಿಳು ತೆಲುಗು ಹಿಂದಿ ಚಿತ್ರರಂಗದಲ್ಲಿ ಅನೇಕ ಚಿತ್ರಗಳನ್ನು ಮಾಡಿದ್ದು ಎಲ್ಲಾ ಕಡೆಯೂ ಕೂಡ ಹೆಚ್ಚು ಹೆಸರನ್ನು ಪಡೆದಂತಹ ನಟ ಎಂದೇ ಹೇಳಬಹುದಾ ಗಿದೆ ಧ್ರುವ ಸರ್ಜಾ ಅವರ ತಾತ ಶಕ್ತಿ ಪ್ರಸಾದ್ ಕೂಡ ಕನ್ನಡ ಚಿತ್ರರಂಗದಲ್ಲಿ ನಟ ರಾಗಿದ್ದವರು.ಧ್ರುವ ಸರ್ಜಾ ಅವರ ಅಣ್ಣ ತೀರಿಕೊಂಡ ನಂತರ ಅವರ ಪತ್ನಿಯಾದ ಮೇಘನಾ ರಾಜ್ ಅವರನ್ನು ತಮ್ಮ ತಾಯಿಯಷ್ಟೇ ಪ್ರೀತಿಯನ್ನು ತೋರಿಸುತ್ತಾ ಅವರ ಮೇಲೆ ಗೌರವ ವನ್ನು ಇಟ್ಟುಕೊಂಡಿದ್ದಾರೆ.
ಮೇಘನಾ ರಾಜ್ ಅವರಿಗೆ ರಾಯನ್ ಎಂಬ ಮಗ ನಿದ್ದು ಇವನನ್ನು ಧ್ರುವ ಸರ್ಜಾ ಅವರು ತಮ್ಮ ಅಣ್ಣನಿ ಗಿಂತ ಹೆಚ್ಚಿನ ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳುತ್ತಿ ದ್ದಾರೆ ಅತಿ ಚಿಕ್ಕ ವಯಸ್ಸಿಗೆ ಚಿರಂಜೀವಿ ಸರ್ಜಾ ಅವರ ನ್ನು ಕಳೆದು ಕೊಂಡದ್ದು ಭಾರತೀಯ ಚಿತ್ರರಂಗಕ್ಕೆ ಒಂದು ರೀತಿಯ ನಷ್ಟ ಸಂಭವಿಸಿದ ಹಾಗೆಯೇ ಎದುರಾಗಿತ್ತು ಇವರನ್ನು ಮೆಚ್ಚಿಕೊಂಡಿದ್ದಂತಹ ಎಷ್ಟೋ ಪ್ರೇಕ್ಷಕರು ಅಭಿಮಾನಿಗಳು ಅವರನ್ನು ಇಂದಿಗೂ ಕೂಡ ನೆನೆಯುತ್ತಾ ಭಾವುಕರಾಗುತ್ತಾರೆ ಕುಟುಂಬದಲ್ಲಿ ಪ್ರತಿಯೊಬ್ಬರಿಗೂ ಕೂಡ ಚಿರಂಜೀವಿ ಸರ್ಜಾ ಎಂದರೆ ಎಲ್ಲಿಲ್ಲದ ಪ್ರೀತಿ ಇವರು ಪ್ರತಿಯೊಬ್ಬ ರಿಗೂ ಪ್ರೀತಿ ವಿಶ್ವಾಸವನ್ನು ತೋರಿಸುತ್ತಿದ್ದರು ಚಿರು ಇಲ್ಲ ಎಂಬ ವಿಷಯವನ್ನು ಕೇಳಿದ ತಕ್ಷಣ ಮೌನವಾಗಿ ಇರುವಂತೆ ಮಾಡುತ್ತದೆ ಇವರ ಬಾಲ್ಯದ ಸ್ನೇಹಿತರಾಗಿ ದ್ದಂತಹ ಪ್ರಜ್ವಲ್ ದೇವರಾಜ್ ಪನ್ನಗಭರಣ ಹಾಗೂ ಇನ್ನೂ ಹಲವಾರು ಸ್ನೇಹಿತರು ಮೇಘನಾ ರಾಜ್ ಅವರನ್ನು ಚಿರು ಇಲ್ಲದೆ ಇದ್ದರೂ ಕೂಡ ಅವರನ್ನು ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳುತ್ತಿದ್ದಾರೆ.
ಧ್ರುವ ಸರ್ಜಾ ಅವರು 2012ರಲ್ಲಿ ಅದ್ದೂರಿ ಎಂಬ ಚಿತ್ರದಲ್ಲಿ ನಟನೆ ಮಾಡಿದ್ದು 2014ರಲ್ಲಿ ಬಹದ್ದೂರ್ ಹಾಗೂ 2017ರಲ್ಲಿ ಭರ್ಜರಿ ಮತ್ತು 2018ರಲ್ಲಿ ಪ್ರೇಮ ಬರಹ ಹಾಗೂ 2021 ರಲ್ಲಿ ಪೊಗರು ಮತ್ತು ಇತ್ತೀಚಿಗೆ ಯಷ್ಟೇ ಚಿತ್ರೀಕರಣ ಪ್ರಾರಂಭವಾಗಿರುವಂತಹ ಮಾರ್ಟಿನ್ ಎಂಬ ಸಿನಿಮಾದಲ್ಲಿ ಅಭಿನಯವನ್ನು ಮಾಡುತ್ತಿದ್ದಾರೆ. ಅದ್ದೂರಿ ಎಂಬ ಚಿತ್ರಕ್ಕೆ ಅತ್ಯುತ್ತಮ ಪುರುಷ ಚೊಚ್ಚಲ ಆಟಗಾರ ಎಂಬ ಪ್ರಶಸ್ತಿಯನ್ನು ಪಡೆದುಕೊಂಡಿದ್ದು ಬಹದ್ದೂರ್ ಮತ್ತು ಭರ್ಜರಿ ಚಿತ್ರ ಗಳಲ್ಲಿ ತಮ್ಮ ಅಭಿನಯವನ್ನು ಗುರುತಿಸಿ ಅತ್ಯುತ್ತಮ ನಟ ಎಂಬ ಪ್ರಶಸ್ತಿಯನ್ನು ಕೂಡ ತಮ್ಮದಾಗಿಸಿಕೊಂಡಿ ದ್ದಾರೆ.ಧ್ರುವ ಸರ್ಜಾ ಅವರನ್ನು ಅಭಿಮಾನಿಗಳು ಪ್ರೀತಿಯಿಂದ ಧ್ರುವ ಎಂಬ ಹೆಸರಿನಿಂದ ಕರೆಯುತ್ತಾರೆ.
ಚಿರಂಜೀವಿ ಸರ್ಜಾ ಅವರ ತಮ್ಮ ಧ್ರುವ ಸರ್ಜಾ ಇವರು ತಮ್ಮ ಬಾಲ್ಯ ಸ್ನೇಹಿತೆ ಯಾದಂತಹ ಪ್ರೇರಣಾ ಎಂಬುವವರನ್ನು ಡಿಸೆಂಬರ್ 9 2018ರಲ್ಲಿ ನಿಶ್ಚಿತಾರ್ಥ ವನ್ನು ಮಾಡಿಕೊಂಡಿದ್ದು 2019 ರಲ್ಲಿ ಮದುವೆಯಾ ಗಿದ್ದು ಇತ್ತೀಚಿಗೆಯಷ್ಟೇ ತಮ್ಮ ಸೋಶಿಯಲ್ ಮೀಡಿ ಯಾದಲ್ಲಿ ಸಿಹಿ ಸುದ್ದಿಯನ್ನು ಹಂಚಿಕೊಂಡಿರುವಂತಹ ಧ್ರುವ ಸರ್ಜಾ ಅವರು ಇನ್ನೇನು ಕೆಲವು ದಿನಗಳಲ್ಲೇ ತಾವು ತಂದೆಯಾಗುತ್ತಿರುವಂತಹ ಸುದ್ದಿಯನ್ನು ಎಲ್ಲೆಡೆ ಪ್ರಚಾರ ಮಾಡಿದ್ದಾರೆ ಇದು ಅವರ ಪ್ರತಿಯೊಬ್ಬ ಅಭಿಮಾನಿಗಳಿಗೂ ಕೂಡ ಸಂತೋಷದ ವಿಷಯ ವಾಗಿದ್ದು ಇದನ್ನು ಪ್ರತಿಯೊಬ್ಬರೂ ಕೂಡ ತಮ್ಮ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.