ಪುನೀತ್ ರಾಜ್ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ ನೆರವೇರಿದ್ದು ಪುನೀತ್ ರವರ ಪತ್ನಿ ಅಶ್ವಿನಿ ಅವರು ಅಪ್ಪು ಅವರ ಪರವಾಗಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಈ ಒಂದು ಸಮಾರಂಭಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಅವರು ಸಹ ಆಗಮಿಸಿದ್ದರು. ರಜನಿಕಾಂತ್ ಅವರು ಪಡೆದಿರುವಂತಹ ಸಂಭಾವನೆಯ ಬಗ್ಗೆ ಇದೀಗ ಎಲ್ಲಾ ಕಡೆ ಚರ್ಚೆಯಾಗುತ್ತಿದೆ. ನಮಗೆಲ್ಲರಿಗೂ ಗೊತ್ತಿರುವ ಹಾಗೆ ಸೂಪರ್ ಸ್ಟಾರ್ ರಜನಿಕಾಂತ್ ಇಂದು ಭಾರತೀಯ ಚಿತ್ರರಂಗದಲ್ಲಿ ಹೆಸರಾಂತ ನಟ ಇವರಿಗೆ ಸಾಕಷ್ಟು ಅಭಿಮಾನಿ ಬಳಗವೇ ಇದೆ. ಸ್ಟಾರ್ ಗಿರಿಯನ್ನು ಪಡೆದುಕೊಂಡಿರುವಂತಹ ರಜನಿಕಾಂತ್ ಅವರ ಸಿನಿ ಪಯಣವು ಅಷ್ಟೊಂದು ಸುಲಭವಾಗಿ ಇರಲಿಲ್ಲ ಪ್ರಾರಂಭದಲ್ಲಿ ಇವರು ತಮ್ಮ ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಎದುರಿಸಿ ನಂತರ ಚಿತ್ರರಂಗದಲ್ಲಿ ನೆಲೆಯೂರಿದರು.
ರಜನಿಕಾಂತ್ ಮೂಲತಃ ಮರಾಠಿ ಬಡ ಕುಟುಂಬದಿಂದ ಬಂದಂತಹವರು ರಜನಿಕಾಂತ್ ಅವರ ಮೂಲ ಹೆಸರು ಶಿವಾಜಿ ರಾವ್ ಗಾಯಕ್ವಾಡ್ ಎಂಬುದಾಗಿದ್ದು. ಇವರ ಜೀವನವನ್ನು ನಾವು ಒಮ್ಮೆ ಹಿಂತಿರುಗಿ ನೋಡಿದರೆ ಎಷ್ಟೋ ಜನರಿಗೆ ಸ್ಪೂರ್ತಿಯನ್ನು ಉಂಟುಮಾಡುತ್ತದೆ ಏಕೆಂದರೆ ಕೇವಲ ಒಬ್ಬ ಬಸ್ ಕಂಡಕ್ಟರ್ ಆಗಿ ಇದ್ದಂತಹ ರಜನಿಕಾಂತ್ ಇಂದು ಸೂಪರ್ ಸ್ಟಾರ್ ಎಂದೇ ಕರೆಸಿಕೊಳ್ಳುತ್ತಿದ್ದಾರೆ ಇದಕ್ಕೆ ಅವರಿಗೆ ಜೀವನದ ಮೇಲಿನ ಒತ್ತಡ ಹಾಗೆಯೇ ನೋವು, ಅವಮಾನ ಈ ಎಲ್ಲವೂ ಸಹ ಅವರನ್ನು ಈ ಮಟ್ಟಿಗೆ ತಂದಿದೆ ಎಂದರೆ ತಪ್ಪಾಗಲಾರದು.
ರಜನಿಕಾಂತ್ ಅವರು ಕಂಡಕ್ಟರ್ ಹುದ್ದೆಯನ್ನು ನಿರ್ವಹಿಸುವುದಕ್ಕಿಂತ ಮೊದಲೇ ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದರು ಹೌದು ಕೂಲಿಗಾರನಾಗಿ ಇವರು ಕಾರ್ಪೆಂಟರ್ ಕೆಲಸವನ್ನು ಸಹ ಮಾಡಿದ್ದಾರೆ. ನಂತರದಲ್ಲಿ ಇವರು ಬಿ ಟಿ ಎಸ್ ಬಸ್ ಕಂಡಕ್ಟರ್ ಆಗಿ ಸೇರ್ಪಡೆಯಾಗುತ್ತಾರೆ ಇವರಿಗೆ ನಟನೆಯ ಮೇಲೆ ಹೆಚ್ಚಿನ ಉತ್ಸಾಹ ಇರುತ್ತದೆ ಆದ್ದರಿಂದ ತಮ್ಮ ವೃತ್ತಿಯ ಜೊತೆಗೆ ಕೆಲವೊಂದು ಅಷ್ಟು ನಾಟಕಗಳನ್ನು ಸಹ ಮಾಡುತ್ತಾರೆ ಹೆಚ್ಚಿನ ಕಲೆಯ ಜ್ಞಾನಾರ್ಜನೆಗಾಗಿ ಇವರು ಮದ್ರಾಸಿಗೆ ಹೋಗಿ ನಟನೆಯಲ್ಲಿ ಡಿಪ್ಲೋಮೋ ಮುಗಿಸುತ್ತಾರೆ. 1975 ರಲ್ಲಿ ಕೆ ಬಾಲಚಂದಿರ್ ನಿರ್ದೇಶನದ ‘ಅಪೂರ್ವ ರಾಗಂಗಳ್’ ಎಂಬ ಸಿನಿಮಾದ ಮೂಲಕ ಪ್ರಪ್ರಥಮ ಬಾರಿಗೆ ಸಿನಿಮಾದಲ್ಲಿ ನಟಿಸುತ್ತಾರೆ. ಈ ಸಿನಿಮಾದಲ್ಲಿ ಇವರು ಹೀರೋ ಆಗಿ ಅಥವಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುವುದಿಲ್ಲ ಈ ಸಿನಿಮಾದ ಹೀರೋ ಕಮಲಹಾಸನ್ ಆಗಿರುತ್ತಾರೆ. ಇಲ್ಲಿಂದ ಪ್ರಾರಂಭವಾದಂತ ಇವರ ಸಿನಿ ಪಯಣ ನಂತರದಲ್ಲಿ ಇವರು ಕನ್ನಡ, ತಮಿಳು, ತೆಲುಗು ಚಿತ್ರರಂಗದ ಸಿನಿಮಾಗಳಲ್ಲಿ ನಟಿಸುತ್ತಾರೆ. ನಂತರದಲ್ಲಿ ಇವರು ತಮಿಳಿನಲ್ಲಿ ಶಾಶ್ವತವಾಗಿ ಪಯಣವನ್ನು ಮುಂದುವರಿಸಿಕೊಂಡು ಹೋಗುತ್ತಾರೆ.
ಸೂಪರ್ ಸ್ಟಾರ್ ಎಂದೇ ಕರೆದುಕೊಳ್ಳುವ ರಜನಿಕಾಂತ್ ರವರ ನೋಡಿದರೆ ಸಾಕಷ್ಟು ಕಲಾವಿದರಿಗೆ ಸ್ಪೂರ್ತಿಯನ್ನು ಉಂಟುಮಾಡುತ್ತದೆ. ಇನ್ನು ಕನ್ನಡದ ಮೇಲೆ ಒಲವನ್ನು ಇಟ್ಟುಕೊಂಡಿರುವಂತಹ ರಜನಿಕಾಂತ್ ರವರು ನಮ್ಮ ನಿಮ್ಮೆಲ್ಲರ ಪ್ರೀತಿಯ ನಟ ಪುನೀತ್ ರಾಜ್ಕುಮಾರ್ ಅವರಿಗೆ ‘ಕರ್ನಾಟಕ ರತ್ನ’ ಎಂಬ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಆಹ್ವಾನವನ್ನು ನೀಡಲಾಗುತ್ತದೆ ಅದಕ್ಕೆ ಎರಡು ಮಾತನಾಡದೆ ರಜನಿಕಾಂತ್ ರವರು ಸಮಾರಂಭಕ್ಕೆ ಬರಲು ಒಪ್ಪಿಕೊಳ್ಳುತ್ತಾರೆ ಅಷ್ಟೇ ಅಲ್ಲದೆ ಈ ಒಂದು ಸಮಾರಂಭಕ್ಕೆ ಬರಲು ಯಾವುದೇ ರೀತಿಯಾದಂತಹ ಸಂಭಾವನೆಯನ್ನು ಇವರು ಪಡೆದುಕೊಂಡಿಲ್ಲ, ಇದರಲ್ಲಿಯೇ ತಿಳಿಯುತ್ತದೆ ಕನ್ನಡದ ಮೇಲೆ ರಜನಿಕಾಂತ್ ಅವರಿಗೆ ಇರುವಂತಹ ಅಭಿಮಾನ. ಯಾವುದೇ ಸಂಭಾವನೆಯನ್ನು ಪಡೆದೆ ಸಮಾರಂಭಕ್ಕೆ ಬಂದು ತಮ್ಮ ದೊಡ್ಡತನವನ್ನು ಮೆರೆದಿದ್ದಾರೆ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ.