ಮಾರುಕಟ್ಟೆಯಲ್ಲಿ ನಾವು ವಿಧ ವಿಧವಾದ ಆಕಾರಗಳ ದೀಪದ ಹಣತೆಗಳು, ಬಣ್ಣ ಬಣ್ಣದ ಮೇಣದ ಬತ್ತಿಗಳನ್ನು ನಾವು ನೋಡಿರುತ್ತೇವೆ ಆದರೆ ನಾವು ನೀರಿನಿಂದ ಮಾಡಿದಂತಹ ದೀಪವನ್ನು ಯಾರು ಎಲ್ಲೂ ಸಹ ನೋಡಿರುವುದಿಲ್ಲ ನಾವು ಈ ವಿಡಿಯೋದಲ್ಲಿ ನೀರನ್ನು ಬಳಸಿ ಹೇಗೆ ದೀಪವನ್ನು ಹಚ್ಚಬಹುದು ಎಂದು ತಿಳಿಸುತ್ತಿದ್ದೇವೆ. ನಮ್ಮ ಮನೆಗಳಲ್ಲಿ ಹಬ್ಬಗಳ ಸಮಯದಲ್ಲಿ ಮನೆಯ ಮುಂದೆ ದೀಪವನ್ನು ಹಚ್ಚಿ ಇಡುತ್ತೇವೆ ಅದು ತುಂಬಾ ಸುಂದರವಾಗಿ ಕಾಣುತ್ತದೆ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲು ಸಹ ಮಣ್ಣಿನ ಹಣತೆಗಳು, ಮೇಣದಬತ್ತಿಗಳು ಹಾಗೆಯೇ ಎಣ್ಣೆಯಿಂದ ತಯಾರಿಸಿದ ದೀಪಗಳನ್ನು ಬಳಕೆ ಮಾಡುತ್ತಾರೆ ಆದರೆ ನೀರಿನ್ನು ಬಳಸಿ ಮಾಡಿದಂತಹ ಮೇಣದಬತ್ತಿಯು ತುಂಬಾ ಸುಂದರವಾಗಿ ಕಾಣುತ್ತದೆ. ನಮಗೆ ಬೇಕಾದಂತಹ ಗಾಜಿನ ಲೋಟ, ಬೌಲ್ ಅಥವಾ ಇನ್ನಿತರ ಯಾವುದೇ ಗ್ಲಾಸ್ ಐಟಂಗಳಲ್ಲಿ ನೀವು ಈ ಒಂದು ಕ್ಯಾಂಡಲ್ ಅನ್ನು ರೆಡಿ ಮಾಡಿಕೊಳ್ಳಬಹುದು.
ಹಾಗೆಯೇ ಈ ಒಂದು ಕ್ಯಾಂಡಲ್ ತುಂಬಾ ಸುಂದರವಾಗಿ ಕಾಣಬೇಕು ಎಂದರೆ ಕೆಲವೊಂದು ಟಿಪ್ಸ್ ಗಳನ್ನು ಸಹ ನೀವು ಉಪಯೋಗ ಮಾಡಬಹುದು. ಅಂದರೆ ಇದನ್ನು ಮಾಡಲು ಬೇಕಾಗಿರುವಂತಹ ಸಾಮಗ್ರಿಗಳು ಎಣ್ಣೆ, ನೀರು ಹಾಗೆ ಗಾಜಿನ ಬಟ್ಟಲು ಅಥವಾ ಲೋಟಗಳು. ಮೊದಲಿಗೆ ಎರಡು ಗಾಜಿನ ಲೋಟವನ್ನು ತೆಗೆದುಕೊಂಡು ಅದಕ್ಕೆ ನೀವು ಅರ್ಧಕ್ಕಿಂತ ಹೆಚ್ಚು ಭಾಗ ನೀರನ್ನು ಹಾಕಿ ನಂತರ ಒಂದು ಲೋಕಕ್ಕೆ ಎರಡು ಟೇಬಲ್ ಸ್ಪೂನ್ ನಷ್ಟು ಕೊಬ್ಬರಿ ಎಣ್ಣೆಯನ್ನು ಸೇರಿಸಿ ನಂತರ ಸ್ವಲ್ಪ ಬತ್ತಿಯನ್ನು ತೆಗೆದುಕೊಂಡು ಪ್ಲಾಸ್ಟಿಕ್ ಲೋಟದ ತಳವನ್ನು ಕಟ್ ಮಾಡಿ ತೆಗೆದುಕೊಂಡು ನೀವು ತೆಗೆದುಕೊಂಡಿರುವ ಪ್ಲಾಸ್ಟಿಕ್ ಲೋಟದ ತಳಭಾಗವನ್ನು ರೌಂಡ್ ಶೇಪ್ ನಲ್ಲಿ ಕಟ್ ಮಾಡಿಕೊಳ್ಳಿ.
ನಂತರ ಅದರ ಮಧ್ಯದಲ್ಲಿ ಒಂದು ಹೋಲನ್ನು ಮಾಡಿ ಬತ್ತಿಯನ್ನು ಸ್ವಲ್ಪ ಕೊಬ್ಬರಿ ಎಣ್ಣೆಯಲ್ಲಿ ಹದ್ದಿ ನಂತರ ಆ ಒಂದು ಹೊಲಿನಲ್ಲಿ ಸೇರಿಸಿ ಹೀಗೆ ಸೇರಿಸಿದ ನಂತರ ಅದನ್ನು ನೀವು ತೆಗೆದುಕೊಂಡಿರುವ ನೀರಿನ ಗ್ಲಾಸ್ ಅಥವಾ ಬೌಲ್ ನಲ್ಲಿ ಹಾಕಿ ಅದು ತೇಲುತ್ತದೆ ನಂತರ ದೀಪ ಹಚ್ಚಿದರೆ ತುಂಬಾ ಸುಂದರವಾಗಿ ದೀಪವು ಉರಿಯುತ್ತದೆ. ನೀವು ಲೋಟದಲ್ಲಿ ಹಾಕಿರುವಂತಹ ಎಣ್ಣೆ ಖಾಲಿ ಆಗುವ ತನಕ ಕ್ಯಾಂಡಲ್ ತುಂಬಾ ಸುಂದರವಾಗಿ ಉರಿಯುತ್ತದೆ. ಈ ಒಂದು ಕ್ಯಾಂಡಲನ್ನು ಇನ್ನಷ್ಟು ಸುಂದರಗೊಳಿಸಲು ಬಣ್ಣ ಬಣ್ಣದಿಂದ ಅಲಂಕಾರ ಮಾಡಲು ನಾವು ಆ ಒಂದು ಲೋಟಕ್ಕೆ ವಾಟರ್ ಪೈಂಟ್ ಅಥವಾ ಮನೆಯಲ್ಲಿ ಇರುವಂತಹ ಅರಿಶಿಣ ಪುಡಿ ಅಥವಾ ಇನ್ನಿತರ ಯಾವುದೇ ಕಲರ್ ಗಳನ್ನು ಬಳಕೆ ಮಾಡಿಕೊಳ್ಳಬಹುದು.
ಹಾಗೆಯೇ ಲೋಟಕ್ಕೆ ನಾವು ಯಾವುದೇ ಹೂಗಳನ್ನು ಸಹ ಕೆಳಗೆ ಇಟ್ಟು ಅದರ ಮೇಲೆ ನೀರನ್ನು ಹಾಕಿ ನಂತರ ದೀಪವನ್ನು ರೆಡಿ ಮಾಡಬಹುದು ಹೀಗೆ ನಾವು ನಾನಾ ರೀತಿಯಲ್ಲಿ ದೀಪಗಳನ್ನು ತಯಾರು ಮಾಡಬಹುದು ಅಷ್ಟೇ ಅಲ್ಲದೆ ಈ ದೀಪಗಳು ರಾತ್ರಿ ಸಮಯದಲ್ಲಿ ತುಂಬಾ ಚೆನ್ನಾಗಿ ಕಾಣಿಸುತ್ತದೆ ತುಂಬಾ ಕಲರ್ಫುಲ್ ಆಗಿ ಇರುವುದರಿಂದ ಮನೆಯಲ್ಲಿ ಯಾವುದೇ ಹಬ್ಬಗಳು ಫಂಕಫಂಕ್ಷನ್ ಗಳು ಇನ್ನಿತರ ಬರ್ತಡೆ ಪಾರ್ಟಿಗಳು ಈ ರೀತಿಯಾದಂತಹ ಒಂದು ಕಾರ್ಯಕ್ರಮಗಳಿಗೆ ಈ ದೀಪಗಳನ್ನು ಹಚ್ಚಿ ಇಟ್ಟರೆ ತುಂಬಾ ಸುಂದರವಾಗಿ ಕಾಣುತ್ತದೆ ಎಲ್ಲರ ಗಮನ ಅದರ ಮೇಲೆ ಇರುತ್ತದೆ ಎಂದು ಹೇಳಬಹುದು.