ನಮಗೆಲ್ಲರಿಗೂ ಗೊತ್ತಿರುವ ಹಾಗೆ ನಿವೇದಿತ ಗೌಡ ಅವರು ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ನ ಮೂಲಕ ಎಲ್ಲರ ಗಮನವನ್ನು ಸೆಳೆದು ಸಾಕಷ್ಟು ಜನ ಅಭಿಮಾನಿಗಳನ್ನ ಮನೆಗೆದ್ದಿದ್ದಾರೆ. ನಿವೇದಿತ ಗೌಡ ಅವರು ಸದ್ಯ ಜೀವನದಲ್ಲಿ ತುಂಬಾ ಬ್ಯುಸಿಯಾಗಿರುವಂತಹ ನಟಿ ತಮ್ಮ ವೈಯಕ್ತಿಕ ಜೀವನ ನಟನೆ ಹಾಗೆಯೇ ಕೆಲವು ಪ್ರಾಜೆಕ್ಟ್ ಗಳ ಮೂಲಕ ತಮ್ಮನ್ನು ತಾವು ಬಿಸಿಯಾಗಿ ಇರಿಸಿಕೊಂಡಿದ್ದಾರೆ. ಬಿಗ್ ಬಾಸ್ ನ ಮೂಲಕ ತುಂಬಾನೇ ಫೇಮಸ್ ಆದಂತಹ ನಿವೇದಿತ ಗೌಡ ಅವರು ಚಂದನ್ ಶೆಟ್ಟಿ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟು ಇದೀಗ ಸುಖ ವಾದಂತಹ ಸಂಸಾರವನ್ನು ನಡೆಸುತ್ತಾ ಇದ್ದಾರೆ. ನಿವೇದಿತಾ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಮಿಲಿಯನ್ ಕಟ್ಟಲೆ ಫಾಲ್ಲೋರ್ಸ್ ಅನ್ನು ಹೊಂದಿದ್ದಾರೆ.
ಆದರೆ ಇವರು ಇದುವರೆಗೂ ಯಾವುದೇ ಸಿನಿಮಾಗಳನ್ನು ಮಾಡಿರಲಿಲ್ಲ ಆದರೆ ನಿವೇದಿತ ಗೌಡ ಅವರು ಮಿಸಸ್ ಇಂಡಿಯಾ ಪಟ್ಟವನ್ನು ತಮ್ಮ ಮುಡಿಗೆರಿಸಿಕೊಂಡ ನಂತರ ಇವರಿಗೆ ಸಿನಿಮಾ ಆಫರ್ ಗಳು ಮೇಲಿಂದ ಮೇಲೆ ಬರುತ್ತಲೇ ಇದೆ. ಇದೀಗ ನಿವೇದಿತಾ ಗೌಡ ಅವರು ಬೆಳ್ಳಿ ಪರದೆಯ ಮೇಲೆ ಮಿಂಚಲು ಸಜ್ಜಾಗಿದ್ದಾರೆ. ಇವರಿಗೆ ಅವಕಾಶಗಳು ಹೆಚ್ಚಾಗಿ ಬರುತ್ತಿರಲು ಕಾರಣ ಏನೆಂದರೆ ಇವರಿಗೆ ಮಿಸೆಸ್ ಇಂಡಿಯಾ ಪಟ್ಟ ಬಂದಿರುವುದೇ ಆಗಿದೆ, ಈ ಒಂದು ಅವಕಾಶ ಇವರ ಜೀವನವನ್ನೇ ಬದಲಿಸಿದೆ ಎಂದು ಹೇಳಿದರೆ ತಪ್ಪಾಗಲಾರದು. ಕನ್ನಡ ಸೇರಿದಂತೆ ತೆಲುಗು, ತಮಿಳು ಸಿನಿಮಾಗಳಲ್ಲಿ ಇವರಿಗೆ ಆಫರ್ಸ್ ಗಳು ಬರುತ್ತಲೇ ಇದೆ ಇವರು ಕೂಡ ಗ್ರೀನ್ ಸಿಗ್ನಲ್ ಅನ್ನು ಕೊಟ್ಟಿದ್ದಾರೆ.
ಟಾಲಿವುಡ್ ಚಿತ್ರರಂಗದಲ್ಲಿ ಮಿಂಚಲು ಇದೀಗ ಸಜ್ಜಾಗಿದ್ದಾರೆ. ತಮ್ಮ ಮೊದಲ ಸಿನಿಮಾದಲ್ಲಿಯೇ ಭಿನ್ನ ಪಾತ್ರದಲ್ಲಿ ಗಮನ ಸೆಳೆಯಲು ಇದೀಗ ನಿವೇದಿತ ಗೌಡ ರೆಡಿಯಾಗಿದ್ದಾರೆ. ನಿವೇದಿತಾ ಗೌಡ ಅವರು “ಗಿಚ್ಚಿ ಗಿಲಿ ಗಿಲಿ” ಎಂಬ ಕಾಮಿಡಿ ಶೋ ಮೂಲಕ ಜನರ ಮನಸ್ಸಿಗೆ ಇನ್ನಷ್ಟು ಹತ್ತಿರವಾದರು. ತಮ್ಮದೇ ಆದಂತಹ ಯುಟ್ಯೂಬ್ ಚಾನೆಲ್ ಅನ್ನು ತೆರೆದು ಜನರಿಗೆ ಸಾಕಷ್ಟು ರೀತಿಯಾದಂತಹ ಮಾಹಿತಿಗಳನ್ನು ಒದಗಿಸುತ್ತಾ ಇದ್ದಾರೆ. ಇವರು ತಮ್ಮ ಜೀವನದಲ್ಲಿ ಏನಾದರೂ ಒಂದು ಸಾಧಿಸಬೇಕು ಎನ್ನುವಂತಹ ಛಲವನ್ನು ಹೊಂದಿದ್ದಾರೆ ಹೌದು ಈಗ ಚಿಕ್ಕವಯಸ್ಸಿನಲ್ಲಿ ಇವರು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದು ಅಷ್ಟೇ ಅಲ್ಲದೆ ಸಾಕಷ್ಟು ರೀತಿಯಲ್ಲಿ ಹೆಸರು ಮಾಡಿದ್ದಾರೆ ಖಾಸಗಿ ಕಂಪನಿ ಒಂದರಲ್ಲಿ ಕೆಲಸವನ್ನು ಕೂಡ ಇವರು ನಿರ್ವಹಿಸುತ್ತಿದ್ದರು.
ನಿವೇದಿತಾ ಗೌಡ ಅವರು ಟ್ರೆಂಡಿಂಗ್ ನಲ್ಲಿ ಇರುವಂತಹ ಎಲ್ಲಾ ಹಾಡುಗಳಿಗು ಸ್ಟೆಪ್ ಹಾಕಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅದನ್ನು ಹಂಚಿಕೊಳ್ಳುತ್ತಾರೆ ಇದನ್ನು ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಅವರು ಚಂದನ್ ಶೆಟ್ಟಿ ಅವರ ಜೊತೆಯಲ್ಲೂ ಕೂಡ ಸಾಕಷ್ಟು ರೀಲ್ಸ್ ಮಾಡಿ ಅದನ್ನು ಹಂಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾ ಎನ್ನುವಂತಹದ್ದು ಸೇತುವೆ ಇದ್ದಹಾಗೆ ಇದರ ಮೂಲಕ ಸಾಕಷ್ಟು ಜನರು ಪ್ರಸಿದ್ಧಿಯನ್ನು ಪಡೆದುಕೊಂಡಿದ್ದಾರೆ ಇಲ್ಲಿ ನಾವು ನಮ್ಮ ಕಲೆಗಳನ್ನು ವ್ಯಕ್ತಪಡಿಸಲು ಒಂದು ಉತ್ತಮವಾದ ವೇದಿಕೆ ಎಂದು ಹೇಳಬಹುದು. ಅದೇ ಸಾಲಿನಲ್ಲಿ ನಿವೇದಿತ ಗೌಡ ಅವರು ಸಹ ತಮ್ಮ ಡಾನ್ಸ್ ಅನ್ನು ಹಾಗೆಯೇ ಡಾನ್ಸ್ ನ ಮೇಲಿರುವ ಅಭಿರುಚಿಯನ್ನು ವ್ಯಕ್ತಪಡಿಸುವ ಸಲುವಾಗಿ ತಮ್ಮ ವಿಡಿಯೋಸ್ ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟು ಜನರಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ.