ಮಾರ್ಕೆಟ್ ಅಲ್ಲಿ ಪ್ರತಿದಿನವೂ ಕೂಡ ಹೊಸ ಹೊಸ ಪ್ರಾಡಕ್ಟ್ಗಳು ಲಾಂಚ್ ಆಗುತ್ತಿರುತ್ತವೆ. ಜೊತೆಗೆ ಈಗಾಗಲೇ ಇರುವ ವಸ್ತುವೊದರ ಅಥವಾ ಅದೇ ಕಂಪನಿಯ ವಸ್ತುವಿನ ಬದಲಾದ ಆವೃತ್ತಿಗಳು ಹೊಸ ಹೊಸ ಫೀಚರ್ ಗಳ ಜೊತೆ ಗ್ರಾಹಕರ ನಿರೀಕ್ಷೆಗಳನ್ನು ಪೂರೈಸಲು ಬರುತ್ತಲೇ ಇರುತ್ತವೆ. ಇಂದು ಪ್ರಪಂಚದಾದ್ಯಂತ ಅತಿ ಹೆಚ್ಚು ಬಳಕೆಯಾಗುತ್ತಿರುವ ಹಾಗೂ ಬೇಡಿಕೆ ಇರುತ್ತಿರುವ ವಸ್ತುಗಳ ಪೈಕಿ ಮೊಬೈಲ್ ಗೆ ಅಗ್ರಸ್ಥಾನ.
ಈಗಾಗಲೇ ನೂರಾರು ಹೆಸರಿನ ಮೊಬೈಲ್ ಕಂಪನಿಗಳು ಸೃಷ್ಟಿ ಆಗಿದ್ದು ಹೊಸ ಹೊಸ ಮಾಡೆಲ್ ಮೊಬೈಲ್ ಗಳನ್ನು ಮಾರ್ಕೆಟ್ ಗೆ ತರುವ ಮೂಲಕ ಪ್ರಖ್ಯಾತ ಕಂಪನಿಗಳು ಪೈಪೋಟಿಯನ್ನು ನೀಡುತ್ತಿವೆ. ಗುಣಮಟ್ಟದಲ್ಲಿ ಮಾತ್ರವಲ್ಲದೆ ರಿಯಾಯಿತಿ ವಿಷಯದಿಂದಲೂ ಕೂಡ ಗ್ರಾಹಕರ ಆಸಕ್ತಿ ಬದಲಾಗುತ್ತದೆ. ಒಂದು ಉತ್ತಮ ಗುಣಮಟ್ಟದ ವಸ್ತುವು ಕಡಿಮೆ ಬೆಲೆಗೆ ಸಿಕ್ಕಾಗ ಅಥವಾ ಆಫರ್ ಬೆಲೆಗೆ ಸಿಕ್ಕಾಗ ಆ ಬ್ರಾಂಡಿನ ಬೇಡಿಕೆಯು ಹೆಚ್ಚಾಗುತ್ತದೆ.
ಜೊತೆಗೆ ಅದನ್ನು ಮಾರಾಟ ಮಾಡುವ ಮಧ್ಯವರ್ತಿ ಕಂಪನಿಯ ಆದಾಯವು ಹೆಚ್ಚಾಗುತ್ತದೆ. ಇಂತಹದೇ ಒಂದು ಸ್ಟ್ರಾಟರ್ಜಿ ಅನ್ನು ಅಮೆಜಾನ್ ಈ ಕಾಮರ್ಸ್ ವೇದಿಕೆ ಬಳಸಿಕೊಂಡು ಒಂದೊಳ್ಳೆ ಆಫರ್ ನೀಡಿದೆ. ಕಳೆದ ವರ್ಷವಷ್ಟೇ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಸ್ಯಾಮ್ಸಂಗ್ ಗ್ಯಾಲಕ್ಸಿ A73 5G ಸ್ಮಾರ್ಟ್ ಫೋನ್ ಅನ್ನು ಬರೋಬ್ಬರಿ 24% ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದೆ.
Samsung Galaxy A73 5G ಮೂಲಬೆಲೆಯು 49,999 ರೂ. ವಿಶೇಷ ಆಫರ್ ನ ಈ ಕೊಡುಗೆಯಲ್ಲಿ 38,188 ರೂ. ಗೆ ಈಗ ಇದನ್ನು ಖರೀದಿಸಬಹುದಾಗಿದೆ. ಇದನ್ನು ಖರೀದಿಸಲು ಬ್ಯಾಂಕ್ ಲೋನ್ ಸೌಲಭ್ಯ ಕೂಡ ಇದ್ದು ಮೊಬೈಲ್ ಎಕ್ಸ್ಚೇಂಜ್ ಗೂ ಅವಕಾಶ ನೀಡಿದೆ. ಬರೋಬ್ಬರಿ 108 ಮೆಗಾಪಿಕ್ಸೆಲ್ 108MP ಪ್ರೈಮರಿ ಕ್ಯಾಮೆರಾದ ಈ ಫೋನ್ ಇದಾಗಿದೆ ಇದರೊಂದಿಗೆ ಸಾಕಷ್ಟು ವಿಶೇಷತೆಗಳಿಂದ ಕೂಡಿದೆ.
ಸ್ಯಾಮ್ ಸಾಂಗ್ ಗ್ಯಾಲಕ್ಸಿ A73 5G ಡಸ್ಟ್ ಆಂಡ್ ವಾಟರ್ ಪ್ರೂಫ್‌ಗಾಗಿ IP67-ರೇಟಿಂಗ್ ಅನ್ನು ಹೊಂದಿವೆ. ಬಲಿಷ್ಠವಾದ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ ಪ್ರೊಸೆಸರ್ ಬಲವನ್ನು ಪಡೆದುಕೊಂಡಿವೆ. ಫೋನ್ ಕಲರ್ ಅಲ್ಲಿ ಮಿಂಟ್, ಗ್ರೆ ಹಾಗೂ ವೈಟ್ ಆಯ್ಕೆಯಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ A73 5G ಸ್ಮಾರ್ಟ್‌ಫೋನ್ 1,080×2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.7 ಇಂಚಿನ ಫುಲ್ HD+ ಡಿಸ್‌ಪ್ಲೇ ಹೊಂದಿದೆ.
ಈ ಡಿಸ್‌ಪ್ಲೇ 800 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಮತ್ತು 120Hz ರಿಫ್ರೆಶ್ ರೇಟ್ನಿಂದ ಕೂಡಿದ್ದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್ ಅನ್ನು ಒಳಗೊಂಡಿದೆ. ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 778G SoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 12 ನಲ್ಲಿ ಒಂದು UI 4.1 ಜೊತೆಗೆ ಕಾರ್ಯನಿರ್ವಹಿಸುತ್ತದೆ. ಈ ಸ್ಮಾರ್ಟ್ ಫೋನ್ ನ ಮುಖ್ಯ ವೈಶಿಷ್ಟತೆ ಕ್ಯಾಮೆರಾ ಎನ್ನಬಹುದು.
ಫೋಟೋ ಪ್ರಿಯರು ಮತ್ತು ರೀಲ್ಸ್ ಗಾರರು ಖರೀದಿಸಲು ಇದು ಬೆಸ್ಟ್ ಆಪ್ಷನ್. ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್, ಮೂರನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಸೆನ್ಸಾರ್ ಮತ್ತು ನಾಲ್ಕನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ಇನ್ನು ಈ ಸ್ಮಾರ್ಟ್‌ಫೋನ್ 25W ವೇಗದ ಚಾರ್ಜಿಂಗ್ ಬೆಂಬಲಿಸುವ 5,000mAh ಬ್ಯಾಟರಿಯನ್ನು ಕೂಡ ಇದೆ. ಇನ್ನು ಕನೆಕ್ಟಿವಿಟಿ ವಿಷಯದಲ್ಲಿ ಎಲ್ಲಾ ಫೋನ್ಗಳಂತೆ ಹಾಟ್‌ಸ್ಪಾಟ್, ಬ್ಲೂಟೂತ್, ವೈಫೈಯನ್ನು ಆಯ್ಕೆಯನ್ನು ಕೂಡ ಹೊಂದಿದೆ. ಹೊಸ ಮೊಬೈಲ್ ಕೊಳ್ಳುವ ಯೋಚನೆಯಲ್ಲಿದ್ದರೆ ಈ ಅವಕಾಶವನ್ನು ಉಪಯೋಗಿಸಿಕೊಳ್ಳಿ.