ಕಾಂಗ್ರೆಸ್ ಸರ್ಕಾರವು ಘೋಷಿಸಿರುವ ಪಂಚಖಾತ್ರಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಬಗ್ಗೆ ಕರ್ನಾಟಕದ ಮಹಿಳೆಯರಿಗೆ ಬಾರಿ ನಿರೀಕ್ಷೆ ಇದೆ. ಕರ್ನಾಟಕದ ಎಲ್ಲಕ ಕುಟುಂಬಗಳ ಯಜಮಾನಿಗೂ ಕೂಡ ಪ್ರತಿ ತಿಂಗಳು 2000ರೂ. ಸಹಾಯಧನವನ್ನು ನೀಡುವುದಾಗಿ ಒಪ್ಪಿಕೊಂಡಿರುವ ರಾಜ್ಯ ಸರ್ಕಾರವು ಇದಕ್ಕಾಗಿ ಆದೇಶ ಪತ್ರವನ್ನು ಕೂಡ ಹೊರಡಿಸಿದೆ.
ಆದರೆ ಆದೇಶ ಪತ್ರದಲ್ಲಿ ಇರುವಂತೆ ಆಗಸ್ಟ್ 15ನೇ ತಾರೀಖಿನಂದು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಈ ಯೋಜನೆ ಲಾಂಚ್ ಆಗಲಿದ್ದು ಫಲಾನುಭವಿಗಳಾಗುವ ಎಲ್ಲರ ಖಾತೆಗಳಿಗೂ ಕೂಡ 2000ರೂ. DBT ಮೂಲಕ ಜಮೆ ಆಗಲಿದೆ. ಇದಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಜೂನ್ 15ರಿಂದ ಆರಂಭಿಸಲಾಗುವುದು ಜುಲೈ 15 ರವರೆಗೆ ಕಾಲಾವಕಾಶ ಇರುತ್ತದೆ ಎಂದು ಹೇಳಲಾಗಿತ್ತು.
ಆದರೆ ಬಳಿಕ ಅರ್ಜಿ ಆಹ್ವಾನ ಪ್ರಕ್ರಿಯೆಯನ್ನು ಕಾರಣಾಂತರಗಳಿಂದ ಮುಂದೂಡಲಾಯಿತು. ಅಂತಿಮವಾಗಿ ಜೂನ್ 27ರಿಂದ ಅರ್ಜಿ ಆಹ್ವಾನ ಮಾಡಲಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಜೂನ್ 27ರಂದು ಕೂಡ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಆಹ್ವಾನ ಪ್ರಕ್ರಿಯೆ ಆರಂಭ ಆಗುವುದಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಆಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕೊಟ್ಟ ಪತ್ರಿಕಾ ಹೇಳಿಕೆ ಪ್ರಕಾರ ಗೃಹಲಕ್ಷ್ಮಿ ಯೋಜನೆಗೆ ಆಪ್ ಒಂದನ್ನು ಸಿದ್ಧ ಪಡಿಸಲಾಗುತ್ತಿದೆಯಂತೆ.
ಈ ಮೂಲಕ ಎಲ್ಲ ಮಹಿಳೆಯರು ಅವರೇ ಅರ್ಜಿ ಸಲ್ಲಿಸಲು ಅನುಕೂಲಾಗುವಷ್ಟು ಇದು ಸರಳವಾಗಿದೆಯಂತೆ. ಜೊತೆಗೆ 1000 ಕ್ಕೆ ಇಬ್ಬರಂತೆ ಪ್ರಜಾಪ್ರತಿನಿಧಿಗಳನ್ನು ಕೂಡ ಆಯ್ಕೆ ಮಾಡಲಾಗುತ್ತದೆಯಂತೆ. ಆನ್ಲೈನ್ ಮತ್ತು ಆಫ್ಲೈನ್ ಅಲ್ಲಿ ಕೂಡ ಅರ್ಜಿ ಸಲ್ಲಿಸಲು ಅವಕಾಶ ನೀಡುವುದಾಗಿ ಹೇಳಿರುವ ಅವರು ಆನ್ಲೈನಲ್ಲಿ ಅರ್ಜಿ ಸಲ್ಲಿಸುವವರಿಗಾಗಿ ಈ ಆಪ್ ಸಿದ್ಧಪಡಿಸುವುದಾಗಿ ಒಪ್ಪಿಕೊಂಡಿದ್ದಾರೆ.
ಈಗಾಗಲೇ ಗೃಹಜ್ಯೋತಿ ಯೋಜನೆಗೆ ಒಂದೇ ಬಾರಿಗೆ ಒತ್ತಡ ಬಿದ್ದಿದ್ದರಿಂದ ಸರ್ವರ್ ಸಮಸ್ಯೆ ತಲೆದೋರಿದೆ. ಅದೇ ರೀತಿ ಗೃಹಲಕ್ಷ್ಮಿ ಯೋಜನೆಗೂ ಸಮಸ್ಯೆ ಆಗಬಾರದು ಎಂದು ಎಲ್ಲಾ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ ಇವರು ಬುಧವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಕಾರ್ಯಕಾರಿ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿಳಿಸಿ ಅವರ ಅನುಮತಿ ಪಡೆದು ಬಳಿಕ ಅರ್ಜಿ ಆಹ್ವಾನ ಪ್ರಕ್ರಿಯೆ ಯಾವಾಗ ಆರಂಭ ಆಗುತ್ತದೆ ಎಂದು ತಿಳಿಸಲಾಗುವುದು ಎಂದು ಹೇಳಿದ್ದಾರೆ.
ಮೊದಲಿಗೆ ಇಲಾಖೆಯ ಅಧಿಕಾರಿಗಳಿಗೆ ಈ ಮಾಹಿತಿ ಹೋಗುತ್ತದೆ, ಬಳಿಕ ಅನೌನ್ಸ್ ಮಾಡಲಾಗುವುದು ಎಂದು ಹೇಳಿರುವ ಅವರು ಜುಲೈ ತಿಂಗಳ ಆರಂಭದಲ್ಲಿ ಅರ್ಜಿ ಆಹ್ವಾನ ಪ್ರಕ್ರಿಯೆ ಆರಂಭವಾಗಬಹುದು ಎನ್ನುವ ಸುಳಿವನ್ನು ನೀಡಿದ್ದಾರೆ. ಜೊತೆಗೆ ಅವರು ಹೇಳಿದ ಅಂಶಗಳಲ್ಲಿ ಮತ್ತೊಂದು ಮುಖ್ಯವಾದ ವಿಷಯ ಏನೆಂದರೆ, ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ ಇಲ್ಲ ಎನ್ನುವುದು.
ಹಾಗಾಗಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ತಡವಾಗಿ ಆರಂಭವಾದರೂ ಗೃಹಲಕ್ಷ್ಮಿಯರು ಚಿಂತಿಸಬೇಕಾಗಿಲ್ಲ ಆದರೆ ಅರ್ಜಿ ಸಲ್ಲಿಕೆ ಆರಂಭವಾದ ಕೂಡಲೇ ಅರ್ಜಿ ಸಲ್ಲಿಸಲು ಬೇಕಾದ ಪ್ರಮುಖ ದಾಖಲೆಗಳಾದ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಆಧಾರ್ ಸೀಡಿಂಗ್ ಆಗಿರುವ ಬ್ಯಾಂಕ್ ಅಕೌಂಟ್, ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಇತ್ಯಾದಿ ದಾಖಲೆಗಳನ್ನು ಸಿದ್ಧಪಡಿಸಿಕೊಂಡರೆ ಅನುಕೂಲ.
ಅಂತಿಮವಾಗಿ ಜೂನ್ 28, ಬುಧವಾರದಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಗೃಹಲಕ್ಷ್ಮಿ ಯೋಜನೆ ಆ ಬಗ್ಗೆ ಚರ್ಚೆಯಾಗಿ ಕರ್ನಾಟಕದ ಮಹಿಳೆಯರಿಗೆ ಸಿಹಿ ಸುದ್ದಿ ಸಿಗಲಿದೆ. ಸರ್ಕಾರಿ ನೌಕರಿಯಲ್ಲಿ ಮಹಿಳೆ ಅಥವಾ ಪತಿ ಇದ್ದರೆ ಅಥವಾ ಮಹಿಳೆ ಅಥವಾ ಆಕೆಯ ಪತಿ ಟ್ಯಾಕ್ಸ್ ಕಟ್ಟುವವರಾಗಿದ್ದರೆ ಅವರಿಗೆ ಗೃಹಲಕ್ಷ್ಮಿ ಯೋಜನೆಯ ಸಹಾಯಧನ ಸಿಗುವುದಿಲ್ಲ.
ಅವರನ್ನು ಹೊರತುಪಡಿಸಿ APL ಸೇರಿದಂತೆ ಉಳಿದ ಎಲ್ಲಾ ಕುಟುಂಬಗಳ ಯಜಮಾನಿಯರಿಗೂ ಕೂಡ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗುವ ಅವಕಾಶ ಇದೆ. ಆದ್ದರಿಂದ ಈ ಯೋಜನೆ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.