ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಕೃಷಿ ಕ್ಷೇತ್ರವನ್ನು ಮುನ್ನಡೆಗೆ ತಂದು ಕೃಷಿ ಆದಾಯವನ್ನು ಹೆಚ್ಚಿಸುವುದು ಮಾತ್ರವಲ್ಲದೆ ರೈತರ ಕ್ಷೇಮಾಭಿವೃದ್ದಿಗಾಗಿ ಅನೇಕ ರೀತಿಯಲ್ಲಿ ಶ್ರಮಿಸುತ್ತಿವೆ. ಈಗ ದೇಶದಾದ್ಯಂತ ಪ್ರಚಲಿತವಾದ ಅನೇಕ ರೈತ ಪರ ಯೋಜನೆಗಳನ್ನು ಜಾರಿಗೆ ತಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತನಿಗೆ ನೆರವಾಗಿವೆ.
ಇದರಲ್ಲಿ ಪ್ರಮುಖವಾಗಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆ, ಪಿಎಂ ಫಸಲ್ ಭೀಮಾ ಯೋಜನೆ ಇವುಗಳನ್ನು ಹೆಸರಿಸಬಹುದು. ಇದರ ಜೊತೆಗೆ ಸಹಕಾರಿ ಬ್ಯಾಂಕುಗಳ ಮೂಲಕ ಬಡ್ಡಿರಹಿತ ಸಾಲ ಅಥವಾ ಕಡಿಮೆ ಬಡ್ಡಿಗೆ ಸಾಲ ನೀಡುವುದು ಸಬ್ಸಿಡಿಯಲ್ಲಿ ಬಿತ್ತನೆ ಬೀಜ, ರಸಗೊಬ್ಬರಗಳ ವಿತರಣೆ ಮಾಡುವುದು ಕೃಷಿ ಪರಿಕರಗಳ ಖರೀದಿಗೆ ಸಬ್ಸಿಡಿ ರೂಪದಲ್ಲಿ ಸಾಲ ನೀಡುವುದು ಇನ್ನೂ ಮುಂತಾದ ಅನುಕೂಲತೆಯನ್ನು ನೀಡಿದೆ.
ಈಗ ರೈತನಿಗೆ ಪ್ರಯೋಜನವಾಗುವಂತಹ ಮತ್ತೊಂದು ಯೋಜನೆಯನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿದೆ. ನೀರಾವರಿ ಕೃಷಿ ಮಾಡುವ ಅಥವಾ ತೋಟಗಾರಿಕೆ ಕೃಷಿ ಮಾಡುವ ರೈತರಿಗೆ ಈಗಾಗಲೇ ರೈತ ಸೂರ್ಯ ಯೋಜನೆ ಮತ್ತು ಕೃಷಿಹೊಂಡ ನಿರ್ಮಿಸಲು ಸಹಾಯಧನ, ಟಾರ್ಪಲಿನ್ ಮತ್ತು ಪೈಪುಗಳ ವಿತರಣೆ ಇನ್ನೂ ಮುಂತಾದ ಪ್ರಯೋಜನಗಳನ್ನು ನೀಡಿದೆ.
ಇದೀಗ ರೈತನು ತನ್ನ ಜಮೀನಿನಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳುವುದಾದರೆ ಆತನಿಗೆ ಸಾಲವನ್ನು ಕೂಡ ನೀಡಲು ಮುಂದಾಗಿದೆ. ಯಾಕೆಂದರೆ ಹಲವು ರೈತರಿಗೆ ಜಮೀನಿನಲ್ಲಿ ವಾಸಕ್ಕೆ ಅನುಕೂಲತೆ ಇಲ್ಲದಿರುವುದರಿಂದ ಆ ಸಮಯದಲ್ಲಿ ಆತ ಪರಭಕ್ಷಕ ಪ್ರಾಣಿಗಳಿಗೆ ತುತ್ತಾಗುತ್ತಾನೆ ಅಥವಾ ಆತನ ಬೆಳೆಯು ಕಾವಲಿಲ್ಲದೆ ಹಾನಿಯಾಗಿ ಹೋಗುತ್ತದೆ.
ಇದೆಲ್ಲವನ್ನು ತಪ್ಪಿಸುವ ಉದ್ದೇಶದಿಂದ ಈ ರೀತಿ ಮನೆ ನಿರ್ಮಾಣ ಮಾಡಿಕೊಳ್ಳುವವರಿಗಾಗಿ ಹೊಸ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಈ ಬಗ್ಗೆ ಸರ್ಕಾರಿ ಕೇಂದ್ರ ಸಹಕಾರಿ ಬ್ಯಾಂಕ್ ಮ್ಯಾನೇಜಿಂಗ್ ಡೈರೆಕ್ಟರ್ ಯೋಗೇಶ್ ಶರ್ಮಾ ಅವರು ಮಾತನಾಡಿ ಯೋಜನೆ ಬಗ್ಗೆ ಮಾಹಿತಿ ತಿಳಿಸಿದ್ದಾರೆ. ಈ ಯೋಜನೆ ಕುರಿತು ವಿವರವನ್ನು ಈ ಅಂಕಣದಲ್ಲಿ ತಿಳಿಸುತ್ತೇವೆ.
ಯೋಜನೆ ಹೆಸರು:- ಸಹಕಾರ ಗ್ರಾಮ ಆವಾಸ್ ಯೋಜನೆ.
ಪ್ರಮುಖ ಅಂಶಗಳು:-
● ಭೂ ಮಾಲಿಕರು ರೈತರು ಮಾತ್ರ ಸಹಕಾರ ಗ್ರಾಮ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.
● ರೈತನ ಹೆಸರಿನಲ್ಲಿ ಕೃಷಿ ಯೋಗ್ಯ ಭೂಮಿ ಇರಬೇಕು.
● ರೈತನ ಜಮೀನಿನ ಡಿ ಎಲ್ ಸಿ ದರದ ಆಧಾರದ ಮೇಲೆ 2 – 50 ಲಕ್ಷದ ವರೆಗೂ ಸಾಲ ನೀಡಲಾಗುತ್ತದೆ.
● ಇದಕ್ಕಾಗಿ ಕೇಂದ್ರ ಸರ್ಕಾರವು ಕಳೆದ ಬಜೆಟ್ ಅಲ್ಲಿ 1500 ಕೋಟಿಯನ್ನು ಬಿಡುಗಡೆ ಮಾಡಿದೆ, ಇದರಿಂದ ದೇಶದ 200 ಕೋಟಿ ಜಿಲ್ಲೆಯ ರೈತರಿಗೆ ಅನುಕೂಲ ಆಗಲಿದೆ.
● ಈ ಯೋಜನೆಯ ಪ್ರಯೋಜನ ಪಡೆಯಲು ರೈತರು ಪುರಾವೆಗಳೊಂದಿಗೆ ಹತ್ತಿರದಲ್ಲಿರುವ ಕೇಂದ್ರ ಸಹಕಾರಿ ಬ್ಯಾಂಕ್ ಗೆ ಹೋಗಿ ಅರ್ಜಿ ಸಲ್ಲಿಸಬೇಕು.
● ಫಲಾನುಭವಿಗಳ ಖಾತೆಗೆ ಮೂರು ಕಂತಿನಲ್ಲಿ ಸಾಲದ ಮೊತ್ತವನ್ನು ವರ್ಗಾವಣೆ ಮಾಡಲಾಗುತ್ತದೆ.
● ಸಾಲದ ಮರು ಪಾವತಿಗೆ 15 ವರ್ಷಗಳ ಕಾಲಾವಕಾಶ ನೀಡಲಾಗಿದ್ದು ಅವಧಿಗೂ ಮುನ್ನ ಸಾಲ ಮರುಪಾವತಿ ಮಾಡುವವರಿಗೆ ಒಟ್ಟು ಬಡ್ಡಿಮೊತ್ತದಲ್ಲಿ 5% ರಿಯಾಯಿತಿ ನೀಡಲಾಗುತ್ತದೆ.
● ಈ ಗೃಹ ಸಾಲದ ಬಡ್ಡಿದರ 6%
● ಗೃಹಸಾಲ ಪಡೆಯುವ ರೈತರ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ಆಧಾರ್ ಲಿಂಕ್ ಆಗಿರಲೇಬೇಕು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
● ರೈತನ ಆಧಾರ್ ಕಾರ್ಡ್
● ರೈತನ ಕೃಷಿ ಭೂಮಿ ದಾಖಲೆಗಳು
● ಬ್ಯಾಂಕ್ ಖಾತೆ ವಿವರ
● ಮೊಬೈಲ್ ಸಂಖ್ಯೆ
● ಇನ್ನಿತರ ಪ್ರಮುಖ ದಾಖಲೆಗಳು