ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೌಕರರನ್ನು ಭರ್ತಿ ಮಾಡಲು ರಾಜ್ಯ ಸರ್ಕಾರವು ಸಮಿತಿ ಒಂದನ್ನು ರಚಿಸಲು ಸಿದ್ಧತೆ ನಡೆಸುತ್ತಿದೆ. ಈ ಬಗ್ಗೆ ಪೌರಾಡಳಿತ ನಿರ್ದೇಶಕರ ಜಂಟಿ ನಿರ್ದೇಶಕ ಶಿವ ಸ್ವಾಮಿ ಅವರು ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. BBMP ಹೊರತುಪಡಿಸಿ ಉಳಿದ ನಗರ ಸ್ಥಳೀಯ ಸಂಸ್ಥೆಗಳಲ್ಲಿ 22,000 ಕ್ಕೂ ಹೆಚ್ಚು ಉದ್ಯೋಗಗಳು ಖಾಲಿ ಇವೆ.
ಇವೆಲ್ಲವೂ ಪೌರ ಕಾರ್ಮಿಕ ಸಂಬಂಧಿತ ಹುದ್ದೆಗಳಾಗಿದ್ದು ಜಿಲ್ಲಾ ಮಟ್ಟದಲ್ಲಿ ಪೌರಕಾರ್ಮಿಕರ ನೇಮಕಾತಿ ಮಾಡಿಕೊಳ್ಳಲು ನೇಮಕಾತಿ ನಿಯಮಗಳ ಮಾರ್ಗಸೂಚಿಯನ್ನು ಜಿಲ್ಲಾಧಿಕಾರಿಗಳ ಸಮಿತಿಯು ರಚಿಸುತ್ತಿದೆ. ವಿಶೇಷ ನೇಮಕಾತಿ ನಿಯಮಗಳ ಆಧಾರದ ಮೇಲೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸಮಿತಿ ನಿರ್ಧರಿಸಿದೆ ಎನ್ನುವ ಈ ಮಾಹಿತಿಯನ್ನು ಕೂಡ ಅಧಿಕಾರಿಗಳು ಹಂಚಿಕೊಂಡಿದ್ದಾರೆ.
ಈ ಬಗ್ಗೆ ಪ್ರಕಟಣೆಯು ಏಪ್ರಿಲ್ ತಿಂಗಳಿನಲ್ಲಿ ಹೊರಬಿದ್ದಿತ್ತು, ಈ ಹುದ್ದೆಗಳನ್ನು ಪಡೆಯಲು ಆಸಕ್ತಿ ಇರುವ ಅಭ್ಯರ್ಥಿಗಳಿಗೆ ಮಾಹಿತಿ ತಿಳಿಸುವ ಸಲುವಾಗಿ ಈ ನೋಟಿಫೀಶಿಯಲ್ ಕುರಿತಂತೆ ಇರುವ ಪ್ರಮುಖ ಅಂಶಗಳು ಮತ್ತು ಜಿಲ್ಲಾವಾರು ಎಷ್ಟು ಹುದ್ದೆಗಳು ಖಾಲಿ ಇದೆ ಮತ್ತು ಯಾವ ಸ್ಥಳೀಯ ಸಂಸ್ಥೆಗಳಲ್ಲಿ ಎಷ್ಟೆಷ್ಟು ಉದ್ಯೋಗಗಳು ಬಾಕಿ ಉಳಿದಿದೆ.
ಈ ಹುದ್ದೆಗಳನ್ನು ಪಡೆಯಲು ಬೇಕಾದ ಶೈಕ್ಷಣಿಕ ವಿದ್ಯಾರ್ಹತೆ ಮತ್ತು ವಯೋಮಿತಿ ಏನಿರಬೇಕು ಎನ್ನುವ ವಿವರಗಳನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೆ ತಪ್ಪದೆ ಹಂಚಿಕೊಳ್ಳಿ.
ಉದ್ಯೋಗಗಳು ಖಾಲಿ ಇರುವ ನಗರ ಸ್ಥಳೀಯ ಸಂಸ್ಥೆಗಳು:-
ರಾಜ್ಯದ 31 ಜಿಲ್ಲೆಗಳಲ್ಲಿ BBMP ಬಿಟ್ಟು ಇರುವ 10 ನಗರ ಪಾಲಿಕೆಗಳು, 61 ನಗರ ಪುರಸಭೆಗಳು, 121 ಪಟ್ಟಣ ಪುರಸಭೆಗಳು ಮತ್ತು 115 ಪಟ್ಟಣ ಪಂಚಾಯಿತಿಗಳು ಸೇರಿದಂತೆ 300 ಕ್ಕೂ ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹುದ್ದೆಗಳು ಖಾಲಿ ಇವೆ.
ಹುದ್ದೆಗಳ ವಿವರ:-
● ಕ್ಲೀನರ್
● ಲೋಡರ್
● ಪೌರಕಾರ್ಮಿಕ
ಜಿಲ್ಲಾವಾರು ಹುದ್ದೆಗಳ ವಿವರ:-
● ಬೆಂಗಳೂರು ನಗರ – 1,017
● ಬೆಂಗಳೂರು ಗ್ರಾಮಾಂತರ – 581
● ರಾಮನಗರ – 611
● ಕೋಲಾರ – 1,004
● ಚಿಕ್ಕಬಳ್ಳಾಪುರ – 773
● ತುಮಕೂರು – 583
● ದಾವಣಗೆರೆ – 337
● ಶಿವಮೊಗ್ಗ – 720
● ಹಾಸನ್ – 720
● ಚಿತ್ರದುರ್ಗ – 791
● ಚಾಮರಾಜನಗರ – 399
● ಚಿಕ್ಕಮಗಳೂರು – 483
● ಕೊಡಗು – 266
● ಮಂಡ್ಯ – 684
● ಉಡುಪಿ – 516
● ದಕ್ಷಿಣ ಕನ್ನಡ – 961
● ಹಾವೇರಿ – 674
● ಉತ್ತರ ಕನ್ನಡ – 1,001
● ವಿಜಯಪುರ – 597
● ಬೆಳಗಾವಿ – 1,741
● ಬಾಗಲಕೋಟ – 1,741
● ಬಾಗಲಕೋಟ – 6,91
● ಯಾದಗಿರಿ – 616
● ಕೊಪ್ಪಳ – 665
● ರಾಯಚೂರು – 890
● ವಿಜಯನಗರ – 635
ಶೈಕ್ಷಣಿಕ ವಿದ್ಯಾರ್ಹತೆ:-
8ನೇ ತರಗತಿ ಮತ್ತು 10ನೇ ತರಗತಿ ಉತ್ತೀರ್ಣರಾದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಪ್ರಮುಖ ಅಂಶಗಳು:-
● ಈ ಹುದ್ದೆಗಳ ನೇಮಕಾತಿ ಬಗ್ಗೆ ಹೆಚ್ಚಿನ ವಿವರ ಬೇಕಾಗಿದ್ದಲ್ಲಿ ನಿಮ್ಮ ಜಿಲ್ಲಾಧಿಕಾರಿಗಳ ಕಛೇರಿ ಅಥವಾ ಸ್ಥಳೀಯ ಸಂಸ್ಥೆಗಳ ಕಛೇರಿಗಳಲ್ಲಿ ಕೇಳಿ ಪಡೆದುಕೊಳ್ಳಬಹುದು.
● ಈ ನೋಟಿಫಿಕೇಶನ್ ಬಗ್ಗೆ ಸರ್ಕಾರದ ಅಧಿಕೃತ ವೆಬ್ಸೈಟ್ ಗಳಲ್ಲಿ ಸರ್ಚ್ ಮಾಡುವ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.
● ಶೀಘ್ರದಲ್ಲಿ ಇವುಗಳಿಗೆ ಇರುವ ಮಾರ್ಗಸೂಚಿ ಬಿಡುಗಡೆ ಆಗಲಿದ್ದು ಆಕಾಂಕ್ಷಿಗಳು ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಸಿಗಲಿದೆ.