ಭಾರತೀಯ ಅಂಚೆ ಇಲಾಖೆಯಲ್ಲಿ (Indian Postal Department) ಬೃಹತ್ ಉದ್ಯೋಗವಕಾಶವಿದೆ (jobs). ಕರ್ನಾಟಕ ವಿಭಾಗಕ್ಕೂ ಕೂಡ ಹಲವು ಹುದ್ದೆಗಳು ಲಭ್ಯವಿದ್ದು ಈ ಹುದ್ದೆಗಳಿಗೆ ಆಯಾ ಹುದ್ದೆಗಳಿಗನ್ನುಸಾರವಾಗಿ 10ನೇ ತರಗತಿ, 12ನೇ ತರಗತಿ ಮತ್ತು ಪದವಿ ವಿದ್ಯಾಭ್ಯಾಸ ಪೂರೈಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ರಾಜ್ಯದ ಯಾವುದೇ ಜಿಲ್ಲೆಗಳ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು ಆದರೆ ಕಡ್ಡಾಯವಾಗಿ ಅಧಿಸೂಚನೆಯಲ್ಲಿ ನೀಡಿರುವ ಮಾನದಂಡಗಳನ್ನು ಪೂರೈಸಬೇಕು. ಹಾಗಾಗಿ ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿ ಕೊಡುವ ಸಲುವಾಗಿ ಈ ಅಂಕಣದಲ್ಲಿ ನೇಮಕಾತಿಗೆ ಸಂಬಂಧಪಟ್ಟ ಕೆಲ ಪ್ರಮುಖ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದೇವೆ.
ನೇಮಕಾತಿ ಸಂಸ್ಥೆ:- ಭಾರತೀಯ ಅಂಚೆ ಇಲಾಖೆ.
ಒಟ್ಟು ಹುದ್ದೆಗಳ ಸಂಖ್ಯೆ:- 1899 ಹುದ್ದೆಗಳು.
ಹುದ್ದೆಗಳ ವಿವರ:-
* ಪೋಸ್ಟಲ್ ಅಸಿಸ್ಟೆಂಟ್ – 598
* ಸಾರ್ಟಿಂಗ್ ಅಸಿಸ್ಟೆಂಟ್ – 143
* ಪೋಸ್ಟ್ ಮ್ಯಾನ್ – 585
* ಮೇಲ್ ಗಾರ್ಡ್ – 03
* ಮಲ್ಟಿ ಟಾಸ್ಟಿಂಗ್ ಸ್ಟಾಫ್ – 570
ಉದ್ಯೋಗ ಸ್ಥಳ:- ಭಾರತದಾದ್ಯಂತ…
ವೇತನ ಶ್ರೇಣಿ:-
ಈ ಮೇಲ್ಕಂಡ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ರೂ.18,00 ದಿಂದ ರೂ.81,900 ವೇತನ ಸಿಗುತ್ತದೆ.
* ಪೋಸ್ಟಲ್ ಅಸಿಸ್ಟೆಂಟ್ – ರೂ.25,500 ರಿಂದ ರೂ.84,900
* ಸಾರ್ಟಿಂಗ್ ಅಸಿಸ್ಟೆಂಟ್ – ರೂ.25,500 ರಿಂದ ರೂ.84,900
* ಪೋಸ್ಟ್ ಮ್ಯಾನ್ – ರೂ.21,700 ರಿಂದ ರೂ.69,100
* ಮೇಲ್ ಗಾರ್ಡ್ – ರೂ.21,700 ರಿಂದ ರೂ.69,100
* ಮಲ್ಟಿ ಟಾಸ್ಟಿಂಗ್ ಸ್ಟಾಫ್ – ರೂ.18,000 ರಿಂದ ರೂ.56,900
ಶೈಕ್ಷಣಿಕ ವಿದ್ಯಾರ್ಹತೆ:-
ಆಯಾ ಹುದ್ದೆಗಳಿಗೆ ಸಂಬಂಧಿಸಿದ ಹಾಗೆ 10ನೇ ತರಗತಿ, ದ್ವಿತೀಯ ಪಿಯುಸಿ ಹಾಗೂ ಪದವಿ ವಿದ್ಯಾಭ್ಯಾಸವನ್ನು ಉತ್ತೀರ್ಣರಾಗಿರುವ ಅಥವಾ ಅದಕ್ಕೆ ತತ್ಸಮಾನವಾಗಿರುವ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ವಯೋಮಿತಿ:-
* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 27 ವರ್ಷಗಳು
ವಯೋಮಿತಿ ಸಡಿಲಿಕೆ:-
* OBC ವರ್ಗಕ್ಕೆ ಸೇರುವ ಅಭ್ಯರ್ಥಿಗಳಿಗೆ 3 ವರ್ಷಗಳು.
* SC/ST ಮತ್ತು ಪ್ರವರ್ಗ-1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ 5 ವರ್ಷಗಳು.
ಅರ್ಜಿ ಶುಲ್ಕ:-
* ಸಾಮಾನ್ಯ, OBC, EWS ಅಭ್ಯರ್ಥಿಗಳಿಗೆ ರೂ.100
* SC/ST ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
* ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಶುಲ್ಕ ಪಾವತಿ ಮಾಡಿ ತಪ್ಪದೇ
ಇ-ರಶೀದಿ ಪಡೆದುಕೊಳ್ಳಿ.
ಅರ್ಜಿ ಸಲ್ಲಿಸುವ ವಿಧಾನ:-
* ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ತೆರಳಿ ಅರ್ಜಿ ಸಲ್ಲಿಕೆ ಲಿಂಕ್ ಕ್ಲಿಕ್ ಮಾಡಿ.
* ಕೇಳಲಾಗಿರುವ ಎಲ್ಲಾ ವೈಯುಕ್ತಿಕ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ ಮತ್ತು ಶೈಕ್ಷಣಿಕ ವಿದ್ಯಾರ್ಹತೆ ಹಾಗೂ ವಯೋಮಿತಿ ದೃಢೀಕರಣಕ್ಕೆ ಸಂಬಂಧಪಟ್ಟ ಹಾಗೆ ಕೆಲವು ಪ್ರಮಾಣ ಪತ್ರಗಳನ್ನು ಸಲ್ಲಿಸಲು ಕೇಳಲಾಗಿರುತ್ತದೆ, ಆ ಪ್ರಮಾಣ ಪತ್ರಗಳ ಕಾಪಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
* ಅರ್ಜಿ ಶುಲ್ಕ ಪಾವತಿ ಮಾಡಲು ಇರುವ ಡೀಟೇಲ್ಸ್ ಕೂಡ ಅಪ್ಲೋಡ್ ಮಾಡಿ, ಅರ್ಜಿ ಸಲ್ಲಿಕೆ ಯಶಸ್ವಿ ಆದಮೇಲೆ ಅರ್ಜಿ ಸ್ವೀಕೃತಿ ಪ್ರತಿ ಪಡೆದುಕೊಳ್ಳಿ.
ಆಯ್ಕೆ ವಿಧಾನ:-
ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ ನೇರ ಸಂದರ್ಶನದ ಮೂಲಕ ಮೆರಿಟ್ ಲಿಸ್ಟ್ ಆದರದ ಮೇಲೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 10 ನವೆಂಬರ್, 2023
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 09 ಡಿಸೆಂಬರ್, 2023.