ದೇಶದ ಅತಿ ದೊಡ್ಡ ವಿಮೆ ಕಂಪನಿ ಎನ್ನುವ ಖ್ಯಾತಿಗೆ ಒಳಗಾಗಿರುವ LIC ಹೊಸ ಪಾಲಿಸಿಯೊಂದನ್ನು ತಂದಿದೆ. ಇದರ ವೈಶಿಷ್ಟ ಏನು ಎಂದರೆ ಅಂಚೆ ಕಛೇರಿಯಲ್ಲಿ ಪಿಂಚಣಿ ಯೋಜನೆಗಳಿರುವಂತೆ ಈಗ LIC ಯಲ್ಲೂ ಪಿಂಚಣಿ ಯೋಜನೆಯನ್ನು ತರಲಾಗುತ್ತಿದೆ ಅದೇ ರೀತಿಯ ಪಿಂಚಣಿ ಯೋಜನೆ ಇದಾಗಿದೆ.
ಇದರಲ್ಲಿ ತುಂಬಾ ಅನುಕೂಲಕರವಾದ ವಿಷಯ ಏನೆಂದರೆ, ಸಾಮಾನ್ಯವಾಗಿ 60 ವರ್ಷದ ಮೇಲೆ ಪಡೆಯುತ್ತಿದ್ದ ಪಿಂಚಣಿ ಯೋಜನೆಯನ್ನು ಇದರಲ್ಲಿ 40 ವರ್ಷಕ್ಕೆ ಪಡೆಯಬಹುದು ಎನ್ನುವುದೇ ಇದನ್ನು ಖರೀದಿಸಲು ಇರುವ ಪ್ಲಸ್ ಪಾಯಿಂಟ್. LIC ಸರಳ ಪೆನ್ಷನ್ ಯೋಜನೆ (LIC Saral Pension Scheme) ಎನ್ನುವ ಹೆಸರಿನ ಈ ಯೋಜನೆಯ ಗ್ರಾಹಕರಾದರೆ ಮಾಸಿಕವಾಗಿ 12,500 ರವರೆಗೂ ಕೂಡ ನೀವು ಗರಿಷ್ಠ ಪೆನ್ಷನ್ ಪಡೆದು ನಿವೃತ್ತಿ ಜೀವನವನ್ನು ನೆಮ್ಮದಿಯಾಗಿ ಕಳೆಯಬಹುದು.
ಎಲ್ಲಾ ವರ್ಗದವರು ಕೂಡ ಹೂಡಿಕೆ ಮಾಡಬಹುದಾದ ಸುಲಭ ಪ್ರೀಮಿಯಂಗಳನ್ನು ಹೊಂದಿರುವ ಈ ಯೋಜನೆ ಬಗ್ಗೆ ಮಾಹಿತಿ ಪಡೆಯಲು ಅಂಕಣವನ್ನು ಪೂರ್ತಿಯಾಗಿ ನೋಡಿ.
ಯೋಜನೆ ಹೆಸರು:- LIC ಸರಳ ಪಂಕ್ಷನ್ ಯೋಜನೆ.
ಸಂಸ್ಥೆ:- ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (LIC).
ಯೋಜನೆ ಜಾರಿಗೆ ಬಂದ ವರ್ಷ:- ಜುಲೈ 1, 2021.
ಯೋಜನೆಯ ಕುರಿತು ಪ್ರಮುಖ ಅಂಶಗಳು:-
● ಈ ಯೋಜನೆಯಲ್ಲಿ ನೀವು ಹಣ ಹೂಡಿಕೆ ಮಾಡುತ್ತಾ ಬಂದರೆ 40 ವರ್ಷ ತುಂಬಿದ ಬಳಿಕ 40 ವರ್ಷದಿಂದ 80 ವರ್ಷದವರೆಗೆ ನಿಮ್ಮ ಹೂಡಿಕೆಗೆ ಅನುಸಾರವಾಗಿ ಖಚಿತ ಪಿಂಚಣಿ ಪಡೆಯಲಿದ್ದೀರಿ.
● ಕನಿಷ್ಠ 1000 ದಿಂದ ಕೂಡ ನೀವು ಮಾಸಿಕ ಪಿಂಚಣಿಗೆ ಹೂಡಿಕೆ ಮಾಡುತ್ತಾ ಬರಬಹುದು. ಗರಿಷ್ಠ ಯಾವುದೇ ಮಿತಿ ಇಲ್ಲ.
● LIC ಸರಳ ಪಿಂಚಣಿ ಯೋಜನೆಯ ಅಡಿಯಲ್ಲಿ ಪ್ರೀಮಿಯಂಗಳನ್ನು ಪಾವತಿಸಲು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಮತ್ತು ವಾರ್ಷಿಕ ಕಂತಿನ ಆಯ್ಕೆಯನ್ನು ಆರಿಸಿಕೊಳ್ಳಬಹುದಾಗಿದೆ.
● 42 ವರ್ಷ ವಯಸ್ಸಿನ ವ್ಯಕ್ತಿಯು 30 ಲಕ್ಷ ರೂ. ವರ್ಷಾಶನವನ್ನು ತೆಗೆದುಕೊಂಡರೆ ಅವರು ಮಾಸಿಕ ಸುಮಾರು 12,388 ರೂ.ಗಳ ಪಿಂಚಣಿ ಪಡೆಯಬಹುದು.
● ಜಂಟಿಯಾಗಿ ಕೂಡ ನೀವು LIC ಸರಳ ಪೆನ್ಷನ್ ಯೋಜನೆಯನ್ನು ಖರೀದಿಸಬಹುದು. ಜಂಟಿಯಾಗಿ ಖರೀದಿಸಿದಾಗ ಒಬ್ಬ ವ್ಯಕ್ತಿ ಮೃ’ತ ಪಟ್ಟರೆ ಮತ್ತೊಬ್ಬರಿಗೆ ಅದರ ಪಿಂಚಣಿ ಹಣ ಸೇರುತ್ತದೆ. ಇಬ್ಬರು ಮೃ’ತಪಟ್ಟರೆ ಯಾರು ನಾಮಿನೇ ಆಗಿರುತ್ತಾರೋ ಅವರಿಗೆ ಹೂಡಿಕೆಯ ಮೊತ್ತ ವಾಪಸ್ ಸಿಗುತ್ತದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ನೇಮಕಾತಿ 2023, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ ವೇತನ 50,000/-
● 18 ವರ್ಷ ತುಂಬಿದ ಬಳಕೆ ಯಾರು ಬೇಕಾದರೂ ಈ ಯೋಜನೆಯಡಿ ಹಣ ಹೂಡಿಕೆ ಮಾಡುತ್ತಾ ಬರಬಹುದು.
● ಯೋಜನೆ ಆರಂಭಿಸಿದ ಆರು ತಿಂಗಳ ಒಳಗೆ ನಿಮಗೆ ಯಾವುದಾದರೂ ಅನಿವಾರ್ಯ ಪರಿಸ್ಥಿತಿ ಉಂಟಾದರೆ ಇದನ್ನು ಸೆರೆಂಡರ್ ಕೂಡ ಮಾಡಬಹುದು.
● ನೀವು ಖರೀದಿಸಿದ ಯೋಜನೆಗೆ 6 ವರ್ಷ ತುಂಬಿದ ಬಳಿಕ ನಿಮಗೆ ಅದರ ಆಧಾರದ ಮೇಲೆ ಸಾಲ ಸೌಲಭ್ಯ ಕೂಡ ಸಿಗುತ್ತದೆ.
● ಇನ್ನುಳಿದಂತೆ ಸಾಮಾನ್ಯ LIC ಪಾಲಿಸಿಗೆ ಇರುವ ಎಲ್ಲಾ ನಿಯಮಗಳು ಕೂಡ ಇದಕ್ಕೂ ಅನ್ವಯ ಆಗುತ್ತದೆ. ಅವುಗಳಿಗೆ ಕೇಳಲಾಗುವಂತೆ ಈ ಯೋಜನೆಗೂ ಕೂಡ ಅದೇ ದಾಖಲೆಗಳನ್ನು ಕೇಳಲಾಗುತ್ತದೆ.
ಸರ್ಕಾರಿ ಜಾಗದಲ್ಲಿ ಮನೆ, ಅಂಗಡಿ ನಿರ್ಮಿಸಿಕೊಂಡಿದ್ದವರಿಗೆ ಹೊಸ ರೂಲ್ಸ್ ಜಾರಿ.!
● ಈ ಯೋಜನೆಯನ್ನು ಆನ್ಲೈನ್ ಮತ್ತು ಆಫ್ಲೈನ್ 2 ವಿಭಾಗವಾಗಿ ಕೂಡ ಖರೀದಿಸಬಹುದು ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ನಿಮ್ಮ LIC ಏಜೆಂಟ್ ಭೇಟಿ ಮಾಡಿ ಅಥವಾ LIC ನ ಅಧಿಕೃತ ವೆಬ್ಸೈಟ್ www.licindia.in ಭೇಟಿ ಕೊಡಿ.