ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ (Karnataka government guarantee Scheme) ಹಂತ ಹಂತವಾಗಿ ಚಾಲನೆ ಸಿಗುತ್ತಿದೆ. ಕರ್ನಾಟಕದ ಅರ್ಹ ನಾಗರಿಕರು ಇದುವರೆಗೆ ಶಕ್ತಿಯೋಜನೆ, ಗೃಹ ಜ್ಯೋತಿ ಮತ್ತು ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಇದೆ ಆಗಸ್ಟ್ ತಿಂಗಳಿನಲ್ಲಿ ಸರ್ಕಾರದ ಮಹತ್ವಕಾಂಕ್ಷೆ ಗ್ಯಾರಂಟಿ ಯೋಜನೆಯಿದ ಕರ್ನಾಟಕದ ಪ್ರತಿ ಕುಟುಂಬದ ಯಜಮಾನಿಯರಿಗೂ ಕೂಡ ಮಾಸಿಕವಾಗಿ 2,000ರೂ. ಸಹಾಯಧನ ನೀಡುವ ಯೋಜನೆಯಾದ ಗೃಹಲಕ್ಷ್ಮಿ ಯೋಜನೆ ಲಾಂಚ್ (Gruhalakshmi Scheme launch) ಆಗುತ್ತಿದೆ.
ಜುಲೈ 19 ರಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸ್ವೀಕರಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಸರ್ಕಾರ ಸೂಚಿಸಿರುವ ಸೇವಾ ಕೇಂದ್ರಗಳಾದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಗಅಥವಾ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಅರ್ಹ ಮಹಿಳಾ ಫಲಾನುಭವಿಗಳು ಹೋಗಿ ದಾಖಲೆಗಳಾಗಿ ಪಡಿತರ ಚೀಟಿ ಸಂಖ್ಯೆ ಆಧಾರ ಸಂಖ್ಯೆ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಕೊಟ್ಟು ಅರ್ಜಿ ಸಲ್ಲಿಸಬಹುದು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (Women and Child Welfare department) ನೀಡಿರುವ ಅಂಕಿ ಅಂಶಗಳ ಪ್ರಕಾರ ಇದುವರೆಗೂ ಒಂದು ಕೋಟಿಗಿಂತ ಹೆಚ್ಚು ಮಹಿಳೆಯರು ಈ ಯೋಜನೆಗೆ ನೋಂದಣಿಸಿಕೊಂಡಿದ್ದಾರಂತೆ. ಹಾಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವವರು ಕರ್ನಾಟಕ ಸರ್ಕಾರದ ವತಿಯಿಂದ ಗೃಹಲಕ್ಷ್ಮಿ ಯೋಜನೆ ಮಂಜೂರಾತಿ ಪತ್ರ (Aknowledgment for Gruhalakshmi) ಕೂಡ ಪಡೆದಿರುತ್ತಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ನೇಮಕಾತಿ 2023, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ ವೇತನ 50,000/-
ಫಲಾನುಭವಿಗಳ ಪಡಿತರ ಚೀಟಿ ಸಂಖ್ಯೆ, ಹಾಗೂ ಅವರ ಹೆಸರು ನಮೂದಿಸಿ ಅರ್ಜಿ ಸಲ್ಲಿಸಿದ ದಿನಾಂಕವನ್ನು ಬರೆದು ಆ ದಿನಾಂಕದಂದು ಒಪ್ಪಿ ಮಂಜೂರು ಮಾಡಲಾಗಿದೆ. ಈ ಫಲಾನುಭವಿಗಳ ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆ ಹಣ ವರ್ಗಾವಣೆ ಮಾಡಲಾಗುವುದು ಎನ್ನುವ ಘೋಷಣೆ ಇರುತ್ತದೆ. ನಿಮ್ಮ ಅರ್ಜಿ ಸಲ್ಲಿಕೆ ಸಂಖ್ಯೆ ಕೂಡ ಅದರಲ್ಲಿ ನಮೂದಿಸಿ QR Code ನೀಡಲಾಗಿರುತ್ತದೆ.
ಮುಂದಿನ ದಿನಗಳಲ್ಲಿ ಆ QR Code ಸ್ಕ್ಯಾನ್ ಮಾಡುವ ಮೂಲಕ ಅರ್ಜಿಯ ನೈಜತೆಯನ್ನು ನೀವು ಪರಿಶೀಲಿಸಬಹುದು. ಕೆಲವು ಕಡೆಗಳಲ್ಲಿ ಅರ್ಜಿ ಸ್ವೀಕಾರದ ವೇಳೆ ಸರ್ವರ್ ಸಮಸ್ಯೆಯಾಗಿ ಮಂಜೂರಿ ಪತ್ರ ವಿತರಣೆ ಆಗಿಲ್ಲ. ಜೊತೆಗೆ ಅರ್ಜಿ ಸಲ್ಲಿಸಿರುವುದಕ್ಕೆ ಯಾವುದೇ ರೀತಿಯ SMS ರಿಪ್ಲೈ ಕೂಡ ಬಂದಿಲ್ಲ. ಇಂತಹವರು ಅರ್ಜಿ ಸಲ್ಲಿಕೆ ಆಗಿದೆಯೋ ಇಲ್ಲವೋ ಎನ್ನುವ ಗೊಂದಲಕ್ಕೆ ಒಳಗಾಗಿರುತ್ತಾರೆ. ಈಗ ಮೊಬೈಲ್ ಮೂಲಕವೇ ಗೃಹಲಕ್ಷ್ಮಿ ಯೋಜನೆ ಅರ್ಜಿ ಸ್ಥಿತಿ (Gruhalakshmi Status check through SMS) ತಿಳಿದುಕೊಳ್ಳಬಹುದು.
ಸರ್ಕಾರಿ ಜಾಗದಲ್ಲಿ ಮನೆ, ಅಂಗಡಿ ನಿರ್ಮಿಸಿಕೊಂಡಿದ್ದವರಿಗೆ ಹೊಸ ರೂಲ್ಸ್ ಜಾರಿ.!
● ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವವರು ಅರ್ಜಿ ಸ್ಥಿತಿ ಚೆಕ್ ಮಾಡಿಕೊಳ್ಳಬೇಕು ಎಂದರೆ ಸರ್ಕಾರ ಅದಕ್ಕೆ ಅವಕಾಶ ಮಾಡಿಕೊಟ್ಟಿದೆ. ಪಡಿತರ ಚೀಟಿ ಸಂಖ್ಯೆಯನ್ನು 8147500500 ಈ ಸಹಾಯವಾಣಿ ಸಂಖ್ಯೆಗೆ SMS ಮಾಡುವ ಮೂಲಕ ನೀವು ನಿಮ್ಮ ಅರ್ಜಿ ಸ್ಥಿತಿಯನ್ನು ಪರೀಕ್ಷಿಸಿಕೊಳ್ಳಬಹುದು. ಫಲಾನುಭವಿಯ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯಿಂದ SMS ಕಳುಹಿಸಬೇಕು.
● ನಿಮ್ಮ ಅರ್ಜಿ ಸಲ್ಲಿಕೆ ಯಶಸ್ವಿಯಾಗಿದ್ದರೆ ನಿಮ್ಮ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಂಖ್ಯೆ ಯಶಸ್ವಿಯಾಗಿ ಸಲ್ಲಿಕೆ ಆಗಿದೆ ಎಂದು ಬರೆದು ನಿಮ್ಮ ಅರ್ಜಿ ಸಂಖ್ಯೆ ಜೊತೆ ಕರ್ನಾಟಕ ಸರ್ಕಾರದ ವತಿಯಿಂದ SMS ಗೆ ರಿಪ್ಲೈ ಬರುತ್ತದೆ.
● ಒಂದು ವೇಳೆ ನಿಮ್ಮ ಅರ್ಜಿ ಸಲ್ಲಿಕೆ ಯಶಸ್ವಿಯಾಗಿಲ್ಲ ಅಥವಾ ನೀವಿನ್ನು ಅರ್ಜಿ ಸಲ್ಲಿಸಿಲ್ಲ ಎಂದರೆ ನಿಮ್ಮ ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆ ಬಾಕಿ ಇದೆ ಕೂಡಲೇ ಹತ್ತಿರದ ಗ್ರಾಮ ಒನ್/ ಕರ್ನಾಟಕ ಒನ್ / ಬೆಂಗಳೂರು ಒನ್ ಅಥವಾ ಬಾಪೂಜಿ ಸೇವಾ ಕೇಂದ್ರಕ್ಕೆ ಭೇಟಿಕೊಡಿ. ಕರ್ನಾಟಕ ಸರ್ಕಾರ ಎಂದು ರಿಪ್ಲೈ ಬರುತ್ತದೆ.
● ಶೀಘ್ರದಲ್ಲಿಯೇ ಸೇವಾ ಸಿಂಧು ವೆಬ್ಸೈಟ್ ಮೂಲಕ ಕೂಡ ಅರ್ಜಿ ಸ್ಥಿತಿಯನ್ನು ಪರಿಶೀಲನೆ ಮಾಡುವ ಅವಕಾಶ ಸಿಗಲಿದೆ ಅದಕ್ಕಾಗಿ ಕೂಡ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಗೃಹಜ್ಯೋತಿ ಯೋಜನೆಯ ಅರ್ಜಿ ಸ್ಥಿತಿ ಪರೀಶೀಲನೆ ಮಾಡಿದಂತೆ ಗೃಹಲಕ್ಷ್ಮಿ ಯೋಜನೆಗೂ ಕೂಡ ಅರ್ಜಿಸ್ಥಿತಿ ಚೆಕ್ ಮಾಡಲು ಆಪ್ಷನ್ ಓಪನ್ ಆಗಲಿದೆ.