ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ನೇಮಕಾತಿ 2023, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ ವೇತನ 50,000/-

 

ಸರ್ಕಾರಿ ಉದ್ಯೋಗ (Government job) ಪಡೆಯಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ಆದರೆ ಸರ್ಕಾರಿ ಉದ್ಯೋಗ ಪಡೆಯುವುದಕ್ಕೆ ವಯಸ್ಸಿನ ಮಿತಿ ಇದೆ, ಆ ಬಳಿಕ ಆಸಕ್ತಿ ಬಂದವರು ಇನ್ನು ಮುಂದೆ ನಮಗೆ ಸರ್ಕಾರಿ ಉದ್ಯೋಗ ಪಡೆಯುವ ಅದೃಷ್ಟ ಇಲ್ಲ ಎಂದು ಬೇಸರ ಪಟ್ಟುಕೊಳ್ಳುವ ಅವಶ್ಯಕತೆ ಇಲ್ಲ.

ಯಾಕೆಂದರೆ ಕೆಲವೊಮ್ಮೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಕೆಲವು ಹುದ್ದೆಗಳಿಗೆ ಅನುಭವದ ಆಧಾರದ ಮೇಲೆ ವಯಸ್ಸಿನ ಮಿತಿಯಲ್ಲಿ ಸಡಿಲಗೊಳಿಸಿ ಅರ್ಜಿ ಕರೆಯುತ್ತಾರೆ. ಅಂತಹ ಅವಕಾಶ ಸಿಕ್ಕಾಗ ಸದುಪಯೋಗ ಪಡಿಸಿಕೊಂಡವರು ವಯಸ್ಸಿನ ಗಡಿ ದಾಟಿದ ನಂತರವೂ ಕೂಡ ಸರ್ಕಾರಿ ಹುದ್ದೆ ಹೊಂದುವ ಕನಸನ್ನು ನನಸು ಮಾಡಿಕೊಂಡು ಸರ್ಕಾರಿ ಸೇವೆ ಮಾಡುವ ಭಾಗ್ಯ ಪಡೆದುಕೊಳ್ಳಬಹುದು.

ಸರ್ಕಾರಿ ಜಾಗದಲ್ಲಿ ಮನೆ, ಅಂಗಡಿ ನಿರ್ಮಿಸಿಕೊಂಡಿದ್ದವರಿಗೆ ಹೊಸ ರೂಲ್ಸ್ ಜಾರಿ.!

ಈಗ ಈ ರೀತಿ ಅಂದುಕೊಳ್ಳುವವರಿಗೆಲ್ಲ ಒಂದು ಸುವರ್ಣವಕಾಶ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ (RDPR) ಹುದ್ದೆಗಳು ಖಾಲಿ ಇದ್ದು, ಆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಯಸ್ಸಿನ ಸಡಲಿಕೆ ಕೂಡ ನೀಡಿದ್ದಾರೆ. ಆಕರ್ಷಣೀಯ ವೇತನದ ಜೊತೆಗೆ ಯಾವುದೇ ಪರೀಕ್ಷೆ ಇಲ್ಲದೆ ಸಂದರ್ಶನದಿಂದ ಆರಿಸಿಕೊಳ್ಳಲು ಸರ್ಕಾರ ಸೂಚಿಸಿದೆ.

ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ಅಧಿಕೃತ ಅಧಿಸೂಚನೆ ಕೂಡ ಹೊರಬಿತ್ತಿದೆ. ಅದರ ಪ್ರಕಾರ ಯಾವ ಹುದ್ದೆಗೆ ಅರ್ಜಿ ಆಹ್ವಾನ ಮಾಡಲಾಗಿದೆ, ಎಷ್ಟು ವಯಸ್ಸಿನ ಸಡಿಲಿಕೆ ನೀಡಲಾಗಿದೆ, ಅರ್ಜಿ ಸಲ್ಲಿಸುವುದು ಹೇಗೆ, ಆಯ್ಕೆ ಪ್ರಕ್ರಿಯೆ ಯಾವ ರೀತಿ ಇರುತ್ತದೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏನು, ಶೈಕ್ಷಣಿಕ ವಿದ್ಯಾರ್ಹತೆ ಏನಿರಬೇಕು ಎನ್ನುವ ಎಲ್ಲಾ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತೇವೆ, ಪೂರ್ತಿ ಮಾಹಿತಿಗಾಗಿ ಕೊನೆವರೆಗೂ ಕೂಡ ಓದಿ.

ರೇಷನ್ ಕಾರ್ಡ್ ರದ್ದತಿ ಪ್ರಕ್ರಿಯೆ ಶುರುವಾಗಿದೆ. ಈ ಲಿಸ್ಟ್ ನಲ್ಲಿ ನಿಮ್ಮ ರೇಷನ್ ಕಾರ್ಡ್ ಇದಿಯೇ ಎಂದು ತಿಳಿಯುವ ಲಿಂಕ್ ಇಲ್ಲಿದೆ ನೋಡಿ.! ಈಗಲೇ ಚೆಕ್ ಮಾಡಿಕೊಳ್ಳಿ.!

ಉದ್ಯೋಗದ ವಿಧ:- ಕರ್ನಾಟಕ ಸರ್ಕಾರದ ಉದ್ಯೋಗಗಳು.
ಇಲಾಖೆ:- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ.
ಖಾಲಿ ಇರುವ ಹುದ್ದೆಗಳ ಸಂಖ್ಯೆ:- 01
ಹುದ್ದೆಯ ಹೆಸರು:- ಬಿಜಿನೆಸ್ ಅನಾಲಿಸ್ಟ್
ಉದ್ಯೋಗ ಸ್ಥಳ:- ಬೆಂಗಳೂರು

ವೇತನ ಶ್ರೇಣಿ:- ಈ ಮೇಲ್ಕಂಡ ಹುದ್ದೆಗೆ ಆಯ್ಕೆ ಆಗುವ ಅಭ್ಯರ್ಥಿಗೆ ಮಾಸಿಕವಾಗಿ 50 ಸಾವಿರ ವೇತನವನ್ನು ನಿಗದಿಪಡಿಸಲಾಗಿದೆ.

ಹೊಸ ರೇಷನ್ ಕಾರ್ಡ್ ಪಡೆಯಲು ಹಾಗೂ ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಪ್ರಕ್ರಿಯೆ ಆರಂಭ.! ಈ ದಾಖಲೆ ಇದ್ದರೆ ಮಾತ್ರ ಇನ್ಮುಂದೆ ರೇಷನ್ ಕಾರ್ಡ್ ಸಿಗೋದು

ಶೈಕ್ಷಣಿಕ ವಿದ್ಯಾರ್ಹತೆ:-

● ಈ ಮೇಲ್ಕಂಡ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ BE / B.Tec, MCA / MSc ಪದವಿ ಪಡೆದಿರಬೇಕು.
● MBA ಪಡೆದಶರು ಕೂಡ ಅರ್ಜಿ ಸಲ್ಲಿಸಬಹುದು.
● ಯಾವುದೇ ಕ್ಷೇತ್ರದಲ್ಲಿ ಮೂರು ವರ್ಷಗಳ ಕಾಲ ಕೆಲಸ ಮಾಡಿರುವ ಅನುಭವವನ್ನು ಹೊಂದಿರಬೇಕು.

ವಯೋಮಿತಿ:-

● ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 27 ವರ್ಷಗಳು
● ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 45 ವರ್ಷಗಳು.

ಆಯ್ಕೆ ವಿಧಾನ:-

● ಸಂದರ್ಶನ
● ದಾಖಲೆಗಳ ಪರಿಶೀಲನೆ.

ಅರ್ಜಿ ಸಲ್ಲಿಸುವ ವಿಧಾನ:-

● ನಿಗದಿತ ಅರ್ಜಿ ನಮೂನೆಯಲ್ಲಿ ವೈಯಕ್ತಿಕ ವಿವರಗಳನ್ನು ಸರಿಯಾಗಿ ತುಂಬಿಸಬೇಕು
● ಶೈಕ್ಷಣಿಕ ವಿದ್ಯಾರ್ಹತೆ ಮತ್ತು ಕೆಲಸದ ಅನುಭವ ಹಾಗೂ ವಯಸ್ಸಿನ ದೃಢೀಕರಣಕ್ಕಾಗಿ ಕೇಳಿರುವ ದಾಖಲೆಗಳ ಪ್ರತಿಗಳನ್ನು ಅರ್ಜಿ ಫಾರಂ ಜೊತೆ ಲಗತ್ತಿಸಿ ಈ ಕೆಳಗೆ ತಿಳಿಸಲಾಗುವ ಕಛೇರಿ ವಿಳಾಸಕ್ಕೆ ಕಳುಹಿಸಬೇಕು.

2ನೇ ಮದುವೆಗೆ ಡೈವೋರ್ಸ್ ಆಗ್ಲೇ ಬೇಕಾ.? ಡೈವೋರ್ಸ್ ಪಡೆಯದೆ ಮರು ಮದುವೆ ಆಗಬಹುದಾ.?

ವಿಳಾಸ:-

ನಿರ್ದೇಶಕರು ಇ-ಆಡಳಿತ,
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ,
ಎರಡನೇ ಮಹಡಿ ಮೂರನೇ ಹಂತ, ಬಹು ಮಹಡಿಗಳ ಕಟ್ಟಡ ಬೆಂಗಳೂರು – 01.

ಪ್ರಮುಖ ದಿನಾಂಕಗಳು:-

● ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:- 03.08.2023
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 14.09.2023.

Leave a Comment

%d bloggers like this: