ಇತ್ತೀಚಿನ ದಿನಗಳಲ್ಲಿ ಕೋರ್ಟು, ಕೇಸ್, ಕಾನೂನು ಎನ್ನುವುದು ಸರ್ವೆ ಸಾಮಾನ್ಯವಾದ ವಿಷಯವಾಗಿ ಹೋಗಿದೆ. ಹಾಗಾಗಿ ಪ್ರತಿಯೊಬ್ಬ ನಾಗರಿಕನಿಗೂ ಕೂಡ ಕಾನೂನಿನಲ್ಲಿ (law) ಇರುವ ಕೆಲವು ಪ್ರಮುಖ ನಿಯಮಗಳ ಬಗ್ಗೆ ತಿಳಿದಿರಲೇಬೇಕು. ಅದೇ ಉದ್ದೇಶದಿಂದ ಈ ಅಂಕಣದಲ್ಲಿ ಕಾನೂನಿನ ಬಗ್ಗೆ ಕೆಲ ಮಾಹಿತಿಯನ್ನು ತಿಳಿಸುವ ಪ್ರಯತ್ನ ಪಡುತ್ತಿದ್ದೇವೆ.
ಅದರಲ್ಲೂ ಕೂಡ ವಿ’ಚ್ಛೇ’ದ’ನದ (Divorce) ಪ್ರಕರಣಗಳು ಇತ್ತೀಚಿಗೆ ಹೆಚ್ಚಾಗುತ್ತಿರುವುದರಿಂದ ವಿ’ಚ್ಛೇ’ದ’ನ’ದ ಬಳಿಕ ಆಗುವ ಪರಿಣಾಮಗಳಲ್ಲಿ ಮಕ್ಕಳು ಯಾರ ಸುಪರ್ದಿಗೆ ಸೇರುತ್ತಾರೆ ಎನ್ನುವುದರ ಬಗ್ಗೆ ಮಾಹಿತಿ ತಿಳಿಸುತ್ತೇವೆ. ಮಕ್ಕಳು ಯಾರ ಪಾಲು ಆಗುತ್ತಾರೆ ಎನ್ನುವುದನ್ನು ಪ್ರತಿಯೊಂದು ಪ್ರಕರಣದ ಅನುಸಾರವಾಗಿ ಪ್ರತ್ಯೇಕವಾಗಿ ಕೋರ್ಟ್ (Court) ನಿರ್ಧಾರ ಮಾಡುತ್ತದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ನೇಮಕಾತಿ 2023, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ ವೇತನ 50,000/-
ಲೀಗಲ್ ಕಸ್ಟಡಿ (legal custody), ಫಿಸಿಕಲ್ ಕಸ್ಟಡಿ (Physical custody), ಸೋಲ್ ಕಸ್ಟಡಿ (Soul custody), ಜಾಯಿಂಟ್ ಕಸ್ಟಡಿ (joint custody) , ಮೂರನೇ ವ್ಯಕ್ತಿ ಕಸ್ಟಡಿ (third party custody) ಈ ರೀತಿಯಾಗಿ ಐದು ವಿಭಾಗಗಳಲ್ಲಿ ಮಗುವಿನ ಜವಾಬ್ದಾರಿ ಯಾರಿಗೆ ಕೊಡಬೇಕು ಎನ್ನುವುದನ್ನು ಕೋರ್ಟ್ ನಿರ್ಧಾರ ಮಾಡುತ್ತದೆ.
ಅದರಲ್ಲಿ ಲೀಗಲ್ ಕಸ್ಟಡಿ ಎನ್ನುವ ವಿಷಯ ಬಂದಾಗ ಕೋರ್ಟು ಮಗುವಿನ ವಯಸ್ಸಿನ ಆಧಾರದ ಮೇಲೆ ತೀರ್ಪನ್ನು ಹೇಳುತ್ತದೆ. ಐದು ವರ್ಷಕ್ಕಿಂತ ಒಳಗಿರುವ ಮಗು ತಾಯಿಯೊಂದಿಗೆ ಹೆಚ್ಚಿನ ಬಾಂಧವ್ಯವನ್ನು ಹೊಂದಿರುವ ಕಾರಣ ಮಗುವಿನ ಪಾಲನೆ ಪೋಷಣೆ ಜವಾಬ್ದಾರಿ ತಾಯಿಗೆ ಇರಬೇಕಾದ ಕಾರಣ ಲೀಗಲ್ ಕಸ್ಟಡಿ ಮೂಲಕ ಮಗುವನ್ನು ತಾಯಿಯ ಸುಪರ್ದಿಗೆ ನೀಡಲಾಗುತ್ತದೆ.
2ನೇ ಮದುವೆಗೆ ಡೈವೋರ್ಸ್ ಆಗ್ಲೇ ಬೇಕಾ.? ಡೈವೋರ್ಸ್ ಪಡೆಯದೆ ಮರು ಮದುವೆ ಆಗಬಹುದಾ.?
ಫಿಸಿಕಲ್ ಕಸ್ಟಡಿ ವಿಚಾರ ಬಂದಾಗ 9 ವರ್ಷಕ್ಕಿಂತ ಮೇಲ್ಪಟ್ಟ ಮಗು ಇಬ್ಬರಲ್ಲಿ ಯಾರ ಜೊತೆ ಹೆಚ್ಚು ಅನ್ಯೋನ್ಯವಾಗಿದೆ ಎನ್ನುವುದನ್ನು ನಿರ್ಧಾರ ಮಾಡಿ ಕೋರ್ಟ್ ಅಲ್ಲಿ ಮಗುವಿಗೆ ಪ್ರಶ್ನೆ ಕೇಳಿ ನಿರ್ಧಾರ ಮಾಡುತ್ತದೆ. ಮಗು ಯಾರ ಬಳಿ ಹೋಗಲು ಇಚ್ಛಿಸುತ್ತದೆ ಆ ಬಗ್ಗೆ ಕೋರ್ಟ್ ತೀರ್ಮಾನ ಕೈಗೊಂಡು ಆದೇಶ ಹೊರಡಿಸುತ್ತದೆ.
ಸೋಲ್ ಕಸ್ಟರ್ಡಿ ವಿಚಾರ ಬಂದಾಗ ಮಗು ಯಾರ ಜೊತೆ ಇದ್ದರೆ ಚೆನ್ನಾಗಿರುತ್ತದೆ ಎನ್ನುವುದನ್ನು ನಿರ್ಧಾರ ಮಾಡಿ ಕೋರ್ಟ್ ಈ ರೀತಿಯ ಅನೌನ್ಸ್ಮೆಂಟ್ ನೀಡುತ್ತದೆ. ಪತಿ ಅಥವಾ ಪತ್ನಿ ಇಬ್ಬರಲ್ಲಿ ಒಬ್ಬರ ಸುಪರ್ದಿಗೆ ಮಗುವನ್ನು ಒಪ್ಪಿಸಿದಾಗ ಅವರು ಮಗುವನ್ನು ಸರಿಯಾಗಿ ನೋಡಿಕೊಳ್ಳದೆ ಹೋದಾಗ ಅವರ ದುಶ್ಚಟಗಳಿಗೆ ಒಳಗಾಗಿದ್ದಾಗ ಅಥವಾ ಅವರಿಗೆ ಮಗು ನೋಡಿಕೊಳ್ಳಲು ಸಾಮರ್ಥ್ಯ ಇಲ್ಲದೆ ಇದ್ದಾಗ.
ಸರ್ಕಾರಿ ಜಾಗದಲ್ಲಿ ಮನೆ, ಅಂಗಡಿ ನಿರ್ಮಿಸಿಕೊಂಡಿದ್ದವರಿಗೆ ಹೊಸ ರೂಲ್ಸ್ ಜಾರಿ.!
ಮಗುವಿನ ಮುಂದಿನ ಭವಿಷ್ಯ ಅಥವಾ ಮಗುವಿನ ಶೈಕ್ಷಣಿಕ ಖರ್ಚನ್ನು ಯಾರು ಚೆನ್ನಾಗಿ ನಿಭಾಯಿಸ ಬಲ್ಲರು ಎನ್ನುವುದರ ಆಧಾರದ ಮೇಲೆ ಮಗುವಿನ ಭವಿಷ್ಯದ ಕಾರಣಕ್ಕಾಗಿ ಮಗು ಯಾರ ಜೊತೆ ಇದ್ದರೆ ಸೂಕ್ತ ಎಂದು ನಿರ್ಧರಿಸಲಾಗುತ್ತದೆ. ಅದನ್ನು ಸೋಲ್ ಕಸ್ಟಡಿ ಎನ್ನುತ್ತಾರೆ. ಜಾಯಿಂಟ್ ಕಸ್ಟರ್ಡ್ ಎನ್ನುವ ವಿಚಾರ ಬಂದಾಗ ಸ್ವಲ್ಪ ದಿನ ತಂದೆಯ ಬಳಿ ಹಾಗೂ ಸ್ವಲ್ಪ ದಿನ ತಾಯಿಯ ಬಳಿ ಈ ರೀತಿ ಮಗುವಿಗೆ ಇಚ್ಛೆ ಆದಂತೆ ಎರಡು ಕಡೆ ಮಗುವಿಗೆ ಇರಲು ಅವಕಾಶ ಮಾಡಿಕೊಡಲಾಗುತ್ತದೆ.
ಥರ್ಡ್ ಪಾರ್ಟಿ ಕಸ್ಟರ್ಡ್ ಎನ್ನುವುದು ಮಕ್ಕಳನ್ನು ತಂದೆ ತಾಯಿಗಳ ರಕ್ತ ಸಂಬಂಧಿಕರಲ್ಲಿ ಯಾರಾದರೂ ಒಬ್ಬರು ಪೋಷಕರಾಗಿ ಮಕ್ಕಳನ್ನು ನೋಡಿಕೊಳ್ಳುವ ಬಗ್ಗೆ ಬರುತ್ತದೆ. ಗಂಡ ಹೆಂಡತಿ ಇಬ್ಬರೂ ಕೂಡ ಮಗು ನೋಡಿಕೊಳ್ಳಲು ವಿಫಲರಾದಲ್ಲಿ ಅಥವಾ ಮಗುವನ್ನು ನೋಡಿಕೊಳ್ಳಲಾಗದ ಸಂದರ್ಭದಲ್ಲಿ ಇದ್ದಾಗ ಮಗುವನ್ನು ತಂದೆ ತಾಯಿಯರ ರಕ್ತ ಸಂಬಂಧಿಗಳ ಸುಪರ್ದಿಗೆ ಒಪ್ಪಿಸುವುದಕ್ಕೆ ಥರ್ಡ್ ಪಾರ್ಟಿ ಕಸ್ಟಡಿ ಎನ್ನುತ್ತಾರೆ.