ಫೆಬ್ರವರಿ 27ರಂದು ಬೆಳಗಾವಿಯಲ್ಲಿ ನಡೆದ ಬಿಜೆಪಿ ಕಾರ್ಯಕ್ರಮಕ್ಕೆ ಬಂದಿದ್ದ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 13ನೇ ಕಂತಿನ ಹಣ ಬಿಡುಗಡೆ ಮಾಡಿ ಘೋಷಿಸಿದ್ದರು. ಆದರೆ ಈ ಬಾರಿ ಪಿಎಂ ಕಿಸಾನ್ ಯೋಜನೆಯಲ್ಲಿ ಭಾರಿ ಬದಲಾವಣೆ ಆಗಿದೆ. 12 ಕಂತುಗಳ ಹಣ ಪಡೆದು ಎಲ್ಲ ರೈತರಿಗೂ ಕೂಡ 13ನೇ ಕಂತಿನ ಹಣ ಕೈ ಸೇರಿಲ್ಲ.
11ನೇ ಕಂತಿನ ಫಲಾನುಭವಿಗಳ ಸಂಖ್ಯೆಗೆ ಹೋಲಿಸಿಕೊಂಡರೆ ಅದ್ಭುತ 25%ರಷ್ಟು ಜನರಿಗೆ ಈ ಹಣ ತಲುಪಿಲ್ಲ. ಅಂಕಿ ಅಂಶಗಳ ಪ್ರಕಾರ 11ನೇ ಕಂತಿನಲ್ಲಿ ಕೇಂದ್ರ ಸರ್ಕಾರ ಈ ಹಣಕ್ಕಾಗಿ 21,000 ಕೋಟಿ ಹಣ ಕೊಟ್ಟಿದ್ದರೆ, ಈ ಬಾರಿ 16,800 ಕೋಟಿ ಹಣ ಮಾತ್ರ ರೈತರ ಪಾಲಾಗಿದೆ. ಇದಕ್ಕೆ ಸರ್ಕಾರ ಕೊಟ್ಟಿರುವ ಕಾರಣಾದರೂ ಏನು ಗೊತ್ತಾ?
ಸರ್ಕಾರ ಈ ಬಗ್ಗೆ ಏನು ಉತ್ತರಿಸದಿದ್ದರೂ ಕೂಡ ಈ ಯೋಜನೆಯಲ್ಲಿ ಮಾಡಿರುವ ಹೊಸ ನಿಯಮವೇ ಇದಕ್ಕೆ ಕಾರಣ. ಈಗಾಗಲೇ ಸರ್ಕಾರ ಪಿಎಂ ಕಿಸಾನ್ ಸಮ್ಮನ್ ಯೋಜನೆ ದಾಖಲೆಗಳಲ್ಲಿ ಹಲವು ಲೋಪಗಳಿರುವುದನ್ನು ಗಮನಿಸಿ, ಅದನ್ನೆಲ್ಲ ಸರಿ ಮಾಡಿಸಬೇಕು ಎಂದು ಹೇಳಿತ್ತು. ಅದರ ಪ್ರಕಾರ ರೈತರ ಜಮೀನ ದಾಖಲೆಯನ್ನು ಮಾರ್ಕ್ ಮಾಡಿರಬೇಕ, ಪಿಎಂ ಕಿಶನ್ ಪೋರ್ಟಲ್ ಅಲ್ಲಿ ರೈತರ ಕೆವೈಸಿ ಅಪ್ಡೇಟ್ ಆಗಿರಬೇಕು.
ಫಲಾನುಭವಿ ರೈತರುಗಳು ಕೊಟ್ಟಿದ್ದ ಮಾಹಿತಿಯಲ್ಲಿದ್ದ ಬ್ಯಾಂಕ್ ಪಾಸ್ ಪುಸ್ತಕದ ಜೊತೆ ಆಧಾರ್ ಕಾರ್ಡ್ ಲಿಂಕ್ ಹಾಕಿರಬೇಕು, ಬ್ಯಾಂಕ್ ಖಾತೆಯು ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಗೂ ಕೂಡ ಲಿಂಕ್ ಆಗಿರಬೇಕು ಮತ್ತು ಕೊಟ್ಟಿರುವ ಎಲ್ಲಾ ದಾಖಲೆಗಳು ಕೂಡ ರೈತರ ಹೆಸರು ಇನ್ನಿತರ ಮಾಹಿತಿ ಎಲ್ಲವೂ ಹೊಂದಾಣಿಕೆ ಆಗಬೇಕು ಇಂದು ಈ ಹಿಂದೆಯೇ ಘೋಷಣೆ ಮಾಡಿತ್ತು.
ಅದನ್ನು ಸರಿಪಡಿಸದ ರೈತರಿಗೆ ಈ ಬಾರಿ ಕಿ ಪಿ ಎಂ ಕಿಸಾನ್ ಯೋಜನೆ 13ನೇ ಹಣದ ಕಂತಿನ ಹಣ ಹೋಗಿ ಸಿಕ್ಕಿಲ್ಲ. ಈ ಬಾರಿ ಬಿಡುಗಡೆಯಾದ 2022 ಡಿಸೆಂಬರ್ ಇಂದ 2023 ಮಾರ್ಚ್ ಒಳಗಿನ 13ನೇ ಕಂತಿನ ಹಣ 8,53,80,362 ಮಂದಿಗೆ ಮಾತ್ರ ಸಿಕ್ಕಿದೆ. ಕಳೆದ ಎರಡು ಕಂತುಗಳಿಗೆ ಹೋಲಿಸಿಕೊಂಡರೆ ಈ ಸಂಖ್ಯೆ ದಿಢೀರ್ ಇಳಿಕೆ ಆಗಿದೆ. ಅಂದರೆ ಈ ಯೋಜನೆಯಿಂದ ಬಹಳಷ್ಟು ರೈತರ ಹೆಸರು ಕೈ ಬಿಟ್ಟು ಹೋಗಿರುವುದು ಇದರಿಂದ ಸ್ಪಷ್ಟ ಆಗಿದೆ.
ನೀವು ಸಹ ಇದುವರೆಗಿನ ಪಿಎಂ ಕಿಸಾನ್ ಯೋಜನೆ ಹಣ ಪಡೆದು ಈ ಬಾರಿ ಮಿಸ್ ಮಾಡಿಕೊಂಡಿದ್ದರೆ ಇದರ ಅಧಿಕೃತ ವೆಬ್ಸೈಟ್ಗೆ ಭೇಟಿ ಕೊಟ್ಟು ಬೆನಿಫಿಷಿಯಲ್ ಸ್ಟೇಟಸ್ ಅಥವಾ ಬೆನಿಫಿಶಿಯಲ್ ಲಿಸ್ಟ್ ತೆಗೆದು ಅದರಲ್ಲಿ ನಿಮ್ಮ ರಾಜ್ಯದ ನಂತರ ಜಿಲ್ಲೆಯ, ತಾಲೂಕು ಮತ್ತು ಗ್ರಾಮದ ಹೆಸರನ್ನು ನಮೂದಿಸಿ ಬರುವ ಲಿಸ್ಟ್ ಅಲ್ಲಿ ನಿಮ್ಮ ಹೆಸರಿದೆಯಾ ಎಂದು ಪರೀಕ್ಷಿಸಿಕೊಳ್ಳಬಹುದು.
ಅಥವಾ ನಿಮ್ಮ ಬ್ಯಾಂಕ್ ಖಾತೆ ಪುಸ್ತಕದ ಸ್ಟೇಟ್ಮೆಂಟ್ ತೆಗೆಸಿ ಹಣ ಬಂದಿದೆ, ಇಲ್ಲ ಎನ್ನುವ ವಿಷಯವನ್ನು ಖಚಿತ ಪಡಿಸಿಕೊಳ್ಳಬಹುದು. ಒಂದು ವೇಳೆ ನಿಮ್ಮ ಹೆಸರು ಕೈ ಬಿಟ್ಟು ಹೋಗಿರುವುದು ಸ್ಪಷ್ಟ ಆದಲ್ಲಿ ಈ ಕೂಡಲೇ ಹತ್ತಿರದಲ್ಲಿರುವ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಿ. ನಿಮ್ಮ ಸಮಸ್ಯೆಯನ್ನು ಆದಷ್ಟು ಬೇಗ ಸರಿ ಮಾಡಿಕೊಳ್ಳಿ. ಮುಂದಿನ 14ನೇ ಕಂತಿನ ಹಣವನ್ನು ತಪ್ಪಿಸಿಕೊಳ್ಳಬೇಡಿ. ಈ ಉಪಯುಕ್ತ ಮಾಹಿತಿಯನ್ನು ಹೆಚ್ಚಿನ ರೈತರಿಗೆ ತಲುಪುವಂತೆ ಶೇರ್ ಮಾಡಿ.