ಇತ್ತೀಚೆಗೆ ಆಸ್ತಿ ವಿಚಾರವಾಗಿ ಕೋರ್ಟು ಕಚೇಕರಿ ಅಲೆಯುವ ಸಮಸ್ಯೆಗಳು ಹೆಚ್ಚಾಗುತ್ತಿದೆ, ಕಾನೂನು ವಿಚಾರಗಳ ಬಗ್ಗೆ ಹಾಗೂ ಆಸ್ತಿ ಮೇಲೆ ಇರುವ ಹಕ್ಕಿನ ಬಗ್ಗೆ ಸರಿಯಾದ ಮಾಹಿತಿ ಸಿಗದೇ ಎಷ್ಟೋ ಜನರು ಮೋಸಕ್ಕೆ ಒಳಗಾಗಿರುತ್ತಾರೆ. ಎಷ್ಟೋ ಬಾರಿ ಕುಟುಂಬ ಕಲಹಕ್ಕೂ ಕೂಡ ಈ ವಿಚಾರ ಕಾರಣ ಆಗಿರುತ್ತದೆ. ಗ್ರಾಮೀಣ ಭಾಗದಲ್ಲಂತೂ ತಂದೆ ಮಕ್ಕಳ ನಡುವೆಯೂ ಸಹ ಈ ರೀತಿ ಆಸ್ತಿ ವಿಚಾರಕ್ಕೆ ಕಲಹ ಆಗಿರುವುದನ್ನು ನಾವು ಕಾಣಬಹುದು.
ಹಲವು ಕೇಸ್ ಗಳಲ್ಲಿ ತಂದೆಯು ಮಕ್ಕಳಿಗೆ ವಿಚಾರವನ್ನು ತಿಳಿಸದೆ ಅವರ ಪಿತ್ರಾರ್ಜಿತ ಆಸ್ತಿಯನ್ನು ಮಾರಿಬಿಟ್ಟಿರುತ್ತಾರೆ. ಅಂತ ಸಮಯದಲ್ಲಿ ಮಕ್ಕಳು ಕಾನೂನಿನಲ್ಲಿ ನಮಗೆ ಇದಕ್ಕೆ ಪರಿಹಾರ ಇದೆಯಾ ಎಂದು ತಿಳಿದುಕೊಳ್ಳಲು ಪರದಾಡುತ್ತಿರುತ್ತಾರೆ. ಅದಕ್ಕೆಲ್ಲ ಪರಿಹಾರ ನೀಡುವ ವಿಷಯ ಈ ಲೇಖನಿ ಅಲ್ಲಿ ಇದೆ ತಿಳಿದುಕೊಳ್ಳಲು ಪೂರ್ತಿಯಾಗಿ ಓದಿ.
ತಂದೆಗೆ ಆಸ್ತಿಯು ಪಿತ್ರಾರ್ಜಿತವಾಗಿ ಬಂದಿದ್ದರೆ, ಮಕ್ಕಳಿಗೂ ಸಹ ಅದರಲ್ಲಿ ಹಕ್ಕು ಖಂಡಿತ ಇರುತ್ತದೆ. ಉತಾರೆ ಪತ್ರದಲ್ಲಿ ತಂದೆ ಹೆಸರು ಮಾತ್ರ ಇರುತ್ತದೆ. ಒಮ್ಮೊಮ್ಮೆ ತಂದೆಯ ಗೌರವಕ್ಕಾಗಿ ಮಕ್ಕಳೇ ದುಡಿದು ತಂದು ಕುಟುಂಬ ಸಾಕುತ್ತಿದ್ದರು ಆಸ್ತಿಪತ್ರದಲ್ಲಿ, ಉತಾರೆ ಪತ್ರ ಮುಂತಾದ ಕಡೆ ತಂದೆ ಹೆಸರನ್ನು ಮಾತ್ರ ಕಾಣಿಸಿರುತ್ತಾರೆ. ಆಗ ಅದನ್ನೇ ಕಾರಣವಾಗಿಟ್ಟುಕೊಂಡ ತಂದೆ ಮಕ್ಕಳಿಗೆ ಮಾಹಿತಿಯನ್ನು ನೀಡದೆ ಅವರ ಗಣನೆಗೂ ತರದೆ ಅವರಿಗೆ ಕಿಂಚಿತ್ತೂ ಸುಳಿವು ಬಿಟ್ಟು ಕೊಡದೆ ಆಸ್ತಿಯನ್ನೆಲ್ಲಾ ಬೇರೆಯವರಿಗೆ ಮಾರಿ ಬಿಟ್ಟಿರುತ್ತಾರೆ.
ಅಂತಹ ಸಮಯದಲ್ಲಿ ತಂದೆ ಮಕ್ಕಳಿಗೆ ಜಗಳ ಆಗಿ ತಂದೆಯಿಂದ ಮನೆ ಬಿಟ್ಟು ದೂರ ಹೋಗುವುದು ಅಥವಾ ತಂದೆಯನ್ನೇ ಮನೆಯಿಂದ ಹೊರ ಹಾಕುವುದು ತಂದೆಯ ಮೇಲೆ ಹಲ್ಲೆ ಮಾಡುವುದು ಇಂತಹವವುಗಳೆಲ್ಲ ಗ್ರಾಮೀಣ ಭಾಗದಲ್ಲಿ ಸರ್ವೇಸಾಮಾನ್ಯವಾಗಿ ನಡೆಯುತ್ತದೆ. ಇದೆಲ್ಲದರ ಬದಲು ಕಾನೂನು ಮೂಲಕ ಹೋಗಿ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು. ಅದಕ್ಕೂ ಮುನ್ನ ಎಷ್ಟೋ ಜನರು ತಮ್ಮ ಗ್ರಾಮಗಳಲ್ಲಿ ಪಂಚಾಯಿತಿ ನಡೆಸಿ ನಾಲ್ಕು ಜನ ಹಿರಿಯರನ್ನು ಸೇರಿಸಿ ಈ ಬಗ್ಗೆ ನ್ಯಾಯ ಕೇಳುತ್ತಾರೆ.
ಒಂದು ವೇಳೆ ಪಂಚಾಯಿತಿಗಳಲ್ಲಿ ಕೊಡುವ ತೀರ್ಪುಗಳು ಸಮಾಧಾನ ತರದೆ ಹೋದರೆ ನಂತರ ನ್ಯಾಯಾಲಯಗಳಿಗೆ ಆ ಪ್ರಕರಣಗಳು ಬರುತ್ತವೆ. ಈ ರೀತಿ ಮುಂದುವರಿಯೋ ಮುನ್ನ ಕಾನೂನಿನಲ್ಲಿ ಇದಕ್ಕೆ ಪರಿಹಾರ ಏನಿದೆ ಎನ್ನುವುದರ ಕುರಿತು ಎಲ್ಲರೂ ಸಹ ಕನಿಷ್ಠ ಜ್ಞಾನ ತಿಳಿದುಕೊಳ್ಳಲೇ ಬೇಕು. ತಂದೆಯು ಉತಾರೆ ಪತ್ರದಲ್ಲಿ ತನ್ನ ಹೆಸರು ಮಾತ್ರ ಇದೆ ಎನ್ನುವ ಕಾರಣಕ್ಕಾಗಿ ಸಂಪೂರ್ಣ ಹಕ್ಕು ತನಗೆ ಮಾತ್ರ ಇದೆ ಎಂದುಕೊಳ್ಳುವುದು ತಪ್ಪು. ಆಸ್ತಿಯಲ್ಲಿ ಮಕ್ಕಳಿಗೂ ಸಹ ಹಕ್ಕು ಇರುತ್ತದೆ ಒಂದು ವೇಳೆ ಅವರು ಈ ರೀತಿ ಮಾಡಿದ್ದಲ್ಲಿ ಮಕ್ಕಳು ಅದರ ಬಗ್ಗೆ ನ್ಯಾಯಾಲಯದಲ್ಲಿ ದಾವೆ ಹೂಡಬಹುದು.
ನೀವು 18 ವರ್ಷಕ್ಕಿಂತ ಮೇಲ್ಪಟ್ಟಿದ್ದರೆ ಈ ರೀತಿ ನಿಮ್ಮ ತಂದೆ ಪಿತ್ರಾರ್ಜಿತ ಆಸ್ತಿಯನ್ನು ನಿಮ್ಮ ಅನುಮತಿ ಇಲ್ಲದೆ ಮಾರಿದ್ದರೆ ಅವರು ಆಸ್ತಿ ಮಾರಿರುವ ದಿನಾಂಕದ ಮೂರು ವರ್ಷಗಳ ಒಳಗೆ ನೀವು ಈ ಕುರಿತು ನ್ಯಾಯಾಲಯದಲ್ಲಿ ದಾವೆ ಹೂಡಬಹದು. ಒಂದು ವೇಳೆ ನೀವು 18 ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲಿ ಇದ್ದಾಗ ಮಾರಿದ್ದರೆ ನಿಮಗೆ 18 ವರ್ಷ ತುಂಬಿದ ಬಳಿಕ 3 ವರ್ಷದ ಒಳಗೆ ಈ ರೀತಿ ನಿಮ್ಮ ತಂದೆ ಆಸ್ತಿ ಮಾರಿರುವ ಕುರಿತು ನ್ಯಾಯಾಲಯದಲ್ಲಿ ದಾವೆ ಹೂಡಿ ನ್ಯಾಯ ಪಡೆಯಬಹುದು.
ಆಗಲೇ ಕೆಲವು ಅನಿವಾರ್ಯ ಕಾರಣಗಳಿಂದ ಈ ರೀತಿ ಮಾರುವ ಸಂದರ್ಭ ಇದ್ದರೆ ನ್ಯಾಯಾಲಯದಲ್ಲಿ ಸಕಾರಣ ನೀಡಿ ಮಕ್ಕಳ ಹೆಸರನ್ನು ಕೂಡ ದಾವೆಯಲ್ಲಿ ಕಾಣಿಸಿ ಮಾರಲು ಅವಕಾಶ ಇದೆ. ಈ ವಿಷಯದ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.