ಸಾಮಾನ್ಯವಾಗಿ ರೈತನಿಗೆ ಕೃಷಿ ಜೊತೆಗೆ ಕುರಿ, ಕೋಳಿ ಸಾಕಾಣಿಕೆ, ಹೈನುಗಾರಿಕೆ, ಜೇನು ಸಾಕಾಣಿಕೆ, ಪಶುಸಂಗೋಪನೆ ಎಲ್ಲವೂ ಕೂಡ ಕೃಷಿ ಆಧಾರಿತ ಕಸಬುಗಳಾಗಿವೆ. ರೈತನ ಕೃಷಿ ಚಟುವಟಿಕೆಗೆ ಬೇಕಾದ ಸಣ್ಣಪುಟ್ಟ ಖರ್ಚು ವೆಚ್ಚಗಳಿಗೆ ಮತ್ತು ಆತನ ಕುಟುಂಬವನ್ನು ತೂಗಿಸಲು ನಿತ್ಯ ಜೀವನ ನಿರ್ವಹಣೆಗೆ ಈ ಉಪಕಸಬುಗಳಿಂದ ಬರುವ ಹಣವು ನೆರವಾಗುತ್ತದೆ.
ಆದರೆ ಈಗ ಈ ಉಪಕಸುಬುಗಳು ಕೂಡ ಈಗ ಕಮರ್ಷಿಯಲ್ ಗಳಾಗಿವೆ. ಸರ್ಕಾರಗಳಿಂದ ಕೂಡ ಈ ಉದ್ಯಮ ಆರಂಭಿಸುವವರಿಗೆ ಪ್ರೋತ್ಸಾಹ ಸಿಗುತ್ತಿದ್ದು ಸಬ್ಸಿಡಿ ರೂಪದ ಸಾಲ ಸೌಲಭ್ಯ ಮತ್ತು ಇತರ ವಿಶೇಷ ಯೋಜನೆಗಳಿಂದ ನೆರವು ನೀಡಲಾಗುತ್ತಿದೆ. ನೀವು ಇದನ್ನು ಉದ್ಯಮವಾಗಿ ಆರಂಭಿಸುವುದಾದರೆ ಮೂರು ತಿಂಗಳಿಗೆ ನಿಮ್ಮ ಬಂಡವಾಳದ ಎರಡರಷ್ಟು ಹಣ ಗಳಿಕೆ ಮಾಡಿ ಯಾವುದೇ ಕಾರ್ಪೊರೇಟ್ ಕಂಪನಿ ಉದ್ಯೋಗಿಗಿಂತ ಕಡಿಮೆ ಇಲ್ಲದ ಲೈಫ್ ಸ್ಟೈಲ್ ಲೀಡ್ ಮಾಡಬಹುದು.
ಈ ಸುದ್ದಿ ಓದಿ:- 2006 ರ ನಂತರ ಜನಿಸಿದ ಎಲ್ಲಾ ಹೆಣ್ಣು ಮಕ್ಕಳಿಗೂ ಗುಡ್ ನ್ಯೂಸ್. ಸರ್ಕಾರದವತಿಯಿಂದ ಸಿಗಲಿದೆ 1 ಲಕ್ಷ.!
ಕೈ ಕೆಸರಾದರೆ ಬಾಯಿ ಮೊಸರು ಎನ್ನುವ ಗಾದೆಯ ಮಾತಿನಂತೆ ಕಡಾ ಖಂಡಿತವಾಗಿ ಶ್ರಮಕ್ಕೆ ತಕ್ಕ ಪ್ರತಿಫಲ ಯಾವಾಗಲೂ ಇದ್ದೇ ಇರುತ್ತದೆ. ಆದರೆ ಶ್ರದ್ಧೆ ಪ್ರಾಮಾಣಿಕವಾಗಿದ್ದು ನಾವು ನಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಾಗ ಮಾತ್ರ ಇಂತಹ ಲಾಭವನ್ನು ಪಡೆಯಲು ಸಾಧ್ಯ ಮತ್ತು ಈ ಉದ್ಯಮವನ್ನು ರೈತನು ಮಾತ್ರ ಮಾಡಬೇಕು ಎನ್ನುವ ಯಾವುದೇ ನಿಯಮ ಇಲ್ಲ.
ಇದರ ಬಗ್ಗೆ ಸರಿಯಾದ ತರಬೇತಿ ಪಡೆದ ಯಾವುದೇ ವ್ಯಕ್ತಿ ಬೇಕಾದರೂ ಇದನ್ನು ಆರಂಭಿಸಿ ಹಳ್ಳಿಯಲ್ಲೇ ಆಗಲಿ ಪಟ್ಟಣದಲ್ಲೇ ಆಗಲಿ ಇವುಗಳನ್ನು ಮಾಡಬಹುದು. ನೀವೇನಾದರೂ ಈ ಬಗ್ಗೆ ಆಸಕ್ತಿ ಹೊಂದಿದ್ದರೆ ಎಂದು ನಾವು ಈ ಲೇಖನದಲ್ಲಿ ತಿಳಿಸುತ್ತಿರುವ ವಿಚಾರ ಉಪಯೋಗವಾಗಬಹುದು.
ಈ ಸುದ್ದಿ ಓದಿ:-ಕೇವಲ 600 ಗೆ ಛಾವಣಿ ತಂಪು, ರಾತ್ರಿ ಸೆಖೆ ಇಲ್ಲದೆ ಸುಖ ನಿದ್ರೆ ಮಾಡಲು ಈ ಸಿಂಪಲ್ ಟ್ರಿಕ್ ಫಾಲೋ ಮಾಡಿ ಸಾಕು.!
ಯಾಕೆಂದರೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಪಕ್ಕದ ಬೆಟ್ಟದಾಸನಪುರದಲ್ಲಿ ಇದ್ದುಕೊಂಡು ನಾಟಿ ಕೋಳಿ ಸಾಕಾಣಿಕೆ ಮಾಡಿ ವ್ಯಕ್ತಿಯೊಬ್ಬರು ಯಶಸ್ವಿಯಾಗಿರುವ ಸ್ಪೂರ್ತಿದಾಯಕ ವಿಷಯದ ಬಗ್ಗೆ ತಿಳಿಸುತ್ತಿದ್ದೇವೆ.
ಅವರು ಹೇಳುವುದು ಏನೆಂದರೆ ಅವರ ಅನುಭವದ ಪ್ರಕಾರವಾಗಿ ಮೈಸೂರು ನಾಟಿ ಕೋಳಿಗಳು ಎನ್ನುವುದು ಸದ್ಯಕ್ಕೆ ಮಾರ್ಕೆಟಿಂಗ್ ನಲ್ಲಿ ಹೆಚ್ಚು ಬೇಡಿಕೆ ಹೊಂದಿದೆ. ಇವುಗಳ ಮಾಂಸ ರುಚಿಯಾಗಿರುತ್ತದೆ ಮತ್ತು ಹೆಚ್ಚಾಗಿರುತ್ತದೆ ಹಾಗೂ ಇದು ಹೆಸರುವಾಸಿ ಬ್ರಾಂಡ್ ಆಗಿರುವುದರಿಂದ ಕಡಿಮೆ ರಿಸ್ಕ್ ನಲ್ಲಿ ಇವುಗಳನ್ನು ಚೆನ್ನಾಗಿ ಸಾಕಿ ಒಳ್ಳೆ ಲಾಭ ಮಾಡಬಹುದು ಎನ್ನುತ್ತಾರೆ.
ಆರಂಭದಲ್ಲಿ ಇವರಿಗೂ ಕೂಡ ಸಿಟಿಯಲ್ಲಿ ಇದ್ದ ಕಾರಣದಿಂದಾಗಿ ಇದರ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲವಂತೆ ಆದರೆ ಇಂತಹದೊಂದು ಉದ್ಯಮ ಮಾಡಬೇಕು ಎಂದು ಆಸಕ್ತಿ ಇದ್ದ ಕಾರಣ ಇದೇ ಆಸಕ್ತಿ ಮುಂದುವರಿಸಿಕೊಂಡು ಯೂಟ್ಯೂಬ್ ಚಾನೆಲ್ ಒಂದರಲ್ಲಿ ಇದರ ಬಗ್ಗೆ ಮಾಹಿತಿ ತಿಳಿದುಕೊಂಡು ಮತ್ತು ಆ ವ್ಯಕ್ತಿಯನ್ನು ಸಂಪರ್ಕಿಸಿ ತಳಿ ಪಡೆದು ಕಳೆದ ಎರಡು ವರ್ಷಗಳಿಂದ ವರ್ಷಕ್ಕೆ 4 ಬ್ಯಾಚ್ ನಲ್ಲಿ ಕೋಳಿ ಸಾಕಾಣಿಕೆ ಮಾಡುತ್ತಾ ಚೆನ್ನಾಗಿ ಬದುಕುತ್ತಿದ್ದಾರೆ.
ಈ ಸುದ್ದಿ ಓದಿ:-ಬೇಸಿಗೆಗೆ ಫ್ಯಾನ್ ಗಾಳಿ ತಂಪಾಗಿ A/C ತರ ಬರಬೇಕು ಅಂದರೆ ಇಷ್ಟು ಮಾಡಿ ಸಾಕು.!
3-4 ತಿಂಗಳಿನಲ್ಲಿ ಒಂದು ಬ್ಯಾಚ್ ಕ್ಲಿಯರ್ ಆಗುತ್ತಿದ್ದಂತೆ ಮತ್ತೆ ಒಂದು ತಿಂಗಳ ಕಾಲ ಇವರು ಸುಣ್ಣ ಬಣ್ಣ ಹೊಡೆಯುವುದು, ಕ್ಲೀನ್ ಮಾಡುವುದು ಇತ್ಯಾದಿ ಕೆಲಸಗಳಿಗಾಗಿ ಬ್ರೇಕ್ ಕೊಡುತ್ತಾರಂತೆ. ಆ ಸಮಯದಲ್ಲಿ ಮರಿಗಳಿಗೆ ನೀರು ಹಾಕುವುದಕ್ಕೆ, ಜೋಪಾನ ಮಾಡುವುದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಂಡು ಆ ಸಮಯದಲ್ಲಿ ಮೈಸೂರಿನಲ್ಲಿ ಆರ್ಡರ್ ನೀಡುತ್ತಾರಂತೆ.
ಒಂದು ತಿಂಗಳ ಮುಂಚೆ ಅವರಿಗೆ ಆರ್ಡರ್ ನೀಡಿದರೆ ಮರಿಗಳನ್ನು ಸಪ್ಲೈ ಮಾಡುವುದಕ್ಕೆ ಅವರಿಗೂ ಸಮಯವಕಾಶ ತೆಗೆದುಕೊಳ್ಳುತ್ತಾರಂತೆ, ರೈಲಿನಲ್ಲಿ ಕಳುಹಿಸಿಕೊಡುತ್ತಾರಂತೆ. ಆದರೆ ಇವರದ್ದೇ ಸ್ವಂತ ವಾಹನ ಇರುವುದರಿಂದ ಇವರೇ ಹೋಗಿ ತರುತ್ತಾರೆ. ಬಂಡವಾಳದ ಬಗ್ಗೆ ಮಾತನಾಡಿದ ಇವರು ಒಂದು ಕೋಳಿಗೆ 35 ರೂಪಾಯಿಯಂತೆ ತರುತ್ತೇವೆ.
600 ಕೋಳಿಗಳಿಗೆ 3-4 ತಿಂಗಳವರೆಗೆ ಸಾಕಾಣಿಕೆಗೆ, ಫೀಡ್ ಗೆ, ಮೆಡಿಸನ್ ಗೆ, ಲೇಬರ್ ಖರ್ಚು ಇತ್ಯಾದಿ ಎಲ್ಲಾ ಸೇರಿ 80,000 ದಿಂದ ಒಂದು ಲಕ್ಷದವರೆಗೆ ಖರ್ಚಾಗುತ್ತದೆ. ಯಾವುದೇ ಮಾರ್ಕೆಟಿಂಗ್ ರಿಸ್ಕ್ ಇಲ್ಲದೆ ಇದರ ಡಬಲ್ ಆದಾಯ ಬರುತ್ತದೆ ಎಂದು ಹೇಳುತ್ತಾರೆ ಇವರು. ಈ ವಿಚಾರದ ಕುರಿತು ಇನ್ನಷ್ಟು ಮಾಹಿತಿಗಾಗಿ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ಸಲಹೆಗಾಗಿ ಈ ಕೆಳಕಂಡ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಿ.
9900055457 / 9900055459