ಆಗೆಲ್ಲಾ ಊರಿಗೆ ಒಂದು ಮೆಡಿಕಲ್ ಶಾಪ್ ಇದ್ದರೆ, ಈಗ ಬೀದಿಗೊಂದು ಮೆಡಿಕಲ್ ಶಾಪ್ ಇದೆ. ಈ ಬಿಸಿನೆಸ್ ಎಷ್ಟು ಲಾಭದಾಯಕ ಎನ್ನುವುದಕ್ಕೆ ಇದೇ ಪ್ರತ್ಯಕ್ಷ ನಿದರ್ಶನ. ಅದಕ್ಕೆ ತಕ್ಕ ಹಾಗೆ ಈಗ ಪ್ರತಿಯೊಂದು ಮನೆಗಳಲ್ಲೂ ಕೂಡ ಪ್ರತಿನಿತ್ಯವೂ ಔಷಧಿ ಸೇವಿಸುವಂತಹ ಪೇಷಂಟ್ ಗಳು ಇದ್ದೇ ಇದ್ದಾರೆ.
BP, ಶುಗರ್, PCOD ಮಕ್ಕಳ ಔಷಧಿ, ಗರ್ಭಿಣಿಯರಿಗೆ ಔಷಧಿಗಳು ಸೇರಿ ಕಾಯಿಲೆ ಕಷ್ಟಗಳು ಬಂದ ಕಾರಣದಿಂದ ಔಷಧಿ ಸೇರಿಸುವವರ ಸಂಖ್ಯೆಯು ಇದೆ. ಇನ್ನು ಪಟ್ಟಣ ಹಾಗೂ ನಗರ ಪ್ರದೇಶದಲ್ಲಿ ಕ್ಲಿನಿಕ್ ಗಳ ಮುಂದೆ ಮೆಡಿಕಲ್ ಶಾಪ್ ಗಳ ಮುಂದೆ ಇದ್ದರಂತೂ ಜನರು ಗಿಜಿ ಗಿಜಿ ಎನ್ನುವುದನ್ನು ನೋಡಿರುತ್ತೇವೆ.
ಹಾಗಾಗಿ ನಿಮಗೆ ಈ ಬಗ್ಗೆ ಆಸಕ್ತಿ ಉಂಟಾಗಿದ್ದರೆ ಈ ಬಿಸಿನೆಸ್ ಶುರು ಮಾಡುವುದು ಹೇಗೆ? ಎನ್ನುವ ಮಾಹಿತಿಯನ್ನು ಈ ಲೇಖನದಲ್ಲಿ ವಿವರವಾಗಿ ತಿಳಿಸುತ್ತಿದ್ದೇವೆ. ಎಲ್ಲರೂ ಕಿರಾಣಿ ಅಂಗಡಿ ಇಟ್ಟ ರೀತಿ ಮೆಡಿಕಲ್ ಶಾಪ್ ಇಡಲು ಆಗುವುದಿಲ್ಲ. ಇದಕ್ಕೆ ಕ್ವಾಲಿಫಿಕೇಷನ್ ಮುಖ್ಯ, B.Pharm, M.Pharm, D.Pharm, Pharm.D ಈ ಕೋರ್ಸ್ ಗಳನ್ನು ಪೂರೈಸಿರುವ ಅಭ್ಯರ್ಥಿಗಳು ಮಾತ್ರ ಮೆಡಿಕಲ್ ಶಾಪ್ ತೆರೆಯಬಹುದು ಅಥವಾ ಇವರ ಹೆಸರಿನಲ್ಲಿ ಬೇರೆಯವರು ತೆರೆಯಬಹುದು.
ಈ ಸುದ್ದಿ ಓದಿ:- LPG ಬಳಕೆದಾರರಿಗೆಲ್ಲಾ ಗುಡ್ ನ್ಯೂಸ್, ಸರ್ಕಾರದಿಂದ ಬರೋಬ್ಬರಿ ರೂ.300 ಸಬ್ಸಿಡಿ ನೆರವು, ಪಡೆಯುವುದು ಹೇಗೆ ನೋಡಿ.!
ವರ್ಷಕ್ಕೆ ಅವರಿಗೆ ರೂ.20,000 ದಿಂದ ರೂ.35,000 ಅವರು ಡಿಮ್ಯಾಂಡ್ ಮಾಡುವಷ್ಟು ಹಣ ಕೊಡಬೇಕಾಗುತ್ತದೆ. ಬೇರೆಯವರ ಸರ್ಟಿಫಿಕೇಟ್ ಇಂದ ಶಾಪ್ ನಡೆಸುವುದಾದರೆ ಡ್ರಗ್ ಇನ್ಸ್ಪೆಕ್ಟರ್ ಬಂದಾಗ ನೀವು ಯಾರ ಸರ್ಟಿಫಿಕೇಟ್ ಪಡೆದಿದ್ದೀರ ಅವರು ಕೂಡ ಶಾಪ್ ನಲ್ಲಿ ಇರಬೇಕು. ಇಲ್ಲವಾದಲ್ಲಿ ನಿಮ್ಮ ಲೈಸೆನ್ಸ್ ಕ್ಯಾನ್ಸಲ್ ಆಗಬಹುದು ಅಥವಾ ದೊಡ್ಡ ಮೊತ್ತದ ದಂಡ ಬೀಳಬಹುದು.
ಇದರ ರಿಜಿಸ್ಟ್ರೇಷನ್ ಬಗ್ಗೆ ಹೇಳುವುದಾದರೆ ಎರಡು ರೀತಿಯಾಗಿ ರಿಜಿಸ್ಟ್ರೇಷನ್ ನಡೆಯುತ್ತದೆ. ಶಾಪ್ ರಿಜಿಸ್ಟ್ರೇಷನ್ ಮತ್ತೊಂದು ಬಿಜಿನೆಸ್ ರಿಜಿಸ್ಟ್ರೇಷನ್. ಶಾಪ್ ರಿಜಿಸ್ಟ್ರೇಷನ್ ಮಾಡಿಸುವುದಾದರೆ ಮೆಡಿಕಲ್ ಶಾಪ್ ತೆರೆಯುತ್ತೇವೆ ಎಂದು ರೆಂಟ್ ಅಗ್ರಿಮೆಂಟ್ ಮಾಡಿಕೊಳ್ಳಬೇಕು ರೂ.50 ನ ಬಾಂಡ್ ಪೇಪರ್ ಮೇಲೆ ಬರೆಸಿದರೆ ಆಗುತ್ತದೆ.
ಒಬ್ಬರೇ ಬಿಸಿನೆಸ್ ಮಾಡುವುದಾದರೆ ಬಿಸಿನೆಸ್ ರಿಜಿಸ್ಟ್ರೇಷನ್ ಅವಶ್ಯಕತೆ ಇರುವುದಿಲ್ಲ. ಇಬ್ಬರು ಅಥವಾ ಇಬ್ಬರಿಗಿಂತ ಹೆಚ್ಚು ವ್ಯಕ್ತಿಗಳು ಒಟ್ಟಿಗೆ ಸೇರಿ ಬಿಸಿನೆಸ್ ಮಾಡುವುದಾದರೆ ಬಿಸಿನೆಸ್ ರಿಜಿಸ್ಟ್ರೇಷನ್ ಮಾಡಿಸುವ ಅವಶ್ಯಕತೆ ಇದೆ. ಲೋಕಲ್ ಸೇಲ್ಸ್ ಟ್ಯಾಕ್ಸ್ ಆಫೀಸ್ ನಲ್ಲಿ ಇದನ್ನು ಮಾಡಿಸಬೇಕು.
ಈ ಸುದ್ದಿ ಓದಿ:-ಮನೆಯಲ್ಲಿಯೇ ನೋಟ್ ಬುಕ್ ತಯಾರಿಸಿ ಪ್ರತಿದಿನ ರ4,500 ಲಾಭ ಮಾಡಬಹುದು ತಿಂಗಳಿಗೆ 1,75,000 ಲಾಭ ಪಕ್ಕಾ.!
ಇದಕ್ಕೆ ರೂ.300 ರಿಂದ ರೂ.400 ಖರ್ಚಾಗಬಹುದು, ಲೋಕಲ್ ಆಡಿಟ್ ಆಫೀಸ್ ನಲ್ಲಿ GST ರಿಜಿಸ್ಟ್ರೇಟ್ ಮಾಡಿಸಬೇಕು. ಡ್ರಗ್ ಲೈಸೆನ್ಸ್ ಕೂಡ ಪಡೆದುಕೊಳ್ಳಬೇಕು. ರೀಟೆಲ್ ಡ್ರಗ್ ಲೈಸನ್ಸ್ / ಹೋಲ್ ಸೇಲ್ ಡ್ರಗ್ ಲೈಸನ್ಸ್ (Retail Drug Licence / Wholesale Drug Licence) ಎಂಬ ಎರಡು ವಿಧಾನದಲ್ಲಿ 2 ಲೈಸೆನ್ಸ್ ಇರುತ್ತದೆ.
ಡೈರೆಕ್ಟ್ ಆಗಿ ಕಂಪನಿ ಪಾಯಿಂಟ್ ಕೊಟ್ಟರೆ ಆಗ ಹೋಲ್ ಸೇಲ್ ಆಗಿ ಲೈಸನ್ಸ್ ಪಡೆದುಕೊಳ್ಳಬಹುದು ರೀಟೇಲ್ ನಲ್ಲಿ 19A, 19B, 19C ಎಂಬ ಮೂರು ರೀತಿಯ ಫಾರ್ಮ್ ಇರುತ್ತದೆ. ಇದನ್ನು ಫಿಲ್ ಮಾಡಿ ದಾಖಲೆಗಳನ್ನು ಸಲ್ಲಿಸಬೇಕು. ಈ ವಿಚಾರದ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.