ವೋಟರ್ ಐಡಿ (Voter ID) ಒಂದು ಗುರುತಿನ ಚೀಟಿಯಾಗಿ ಬಳಕೆಯಾಗುತ್ತದೆ ಮತ್ತು ಪ್ರತಿಯೊಬ್ಬರೂ ಕೂಡ 18 ವರ್ಷ ಆದ ಮೇಲೆ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿಕೊಂಡು ಈ ಗುರುತಿನ ಚೀಟಿಯನ್ನು ಪಡೆಯಬೇಕು.
ಈಗಷ್ಟೇ ಸರ್ಕಾರ ಇದಕ್ಕಾಗಿ ಆಂದೋಲನ ಕೂಡ ನಡೆಸಿತ್ತು ಇಂದು ನಾವು ಈ ಅಂಕಣದಲ್ಲಿ ಯಾವ ರೀತಿ ಹೊಸ ಮತದಾರರು ಮತದಾರರ ಪಟ್ಟಿಯಲ್ಲಿ (Voter list) ತಮ್ಮ ಹೆಸರು ಸೇರ್ಪಡೆ ಆಗಿದೆಯೇ ಎನ್ನುವುದನ್ನು ಚೆಕ್ ಮಾಡಿಕೊಳ್ಳಬಹುದು ಮತ್ತು ಹೇಗೆ ವೋಟರ್ ಐಡಿ ಕಳೆದುಕೊಂಡವರು ಮತ್ತು ಹೊಸದಾಗಿ ಅರ್ಜಿ ಸಲ್ಲಿಸಿದವರು ಮೊಬೈಲ್ ನಲ್ಲಿಯೇ ಇದನ್ನು ಹೇಗೆ ಡೌನ್ಲೋಡ್ ಮಾಡಿಕೊಳ್ಳಬಹುದು ಎನ್ನುವ ಮಾಹಿತಿಯ ಬಗ್ಗೆ ತಿಳಿಸುತ್ತಿದ್ದೇವೆ.
ವೋಟರ್ ಐಡಿ ಡೌನ್ಲೋಡ್ ಮಾಡುವ ವಿಧಾನ:-
* ನಿಮ್ಮ ಮೊಬೈಲ್ ನಲ್ಲಿ https://voters.esi.gov.in ಲಿಂಕ್ ಕ್ಲಿಕ್ ಮಾಡುವ ಮೂಲಕ ವೋಟರ್ ಸರ್ವಿಸ್ ಪೋರ್ಟಲ್ (Voter Service Portal) ವೆಬ್ಸೈಟ್ ಗೆ ಭೇಟಿ ಕೊಡಿ
* ನೀವು ನಿಮ್ಮ ವೋಟರ್ ಐಡಿ ಕಳೆದುಕೊಂಡು ಮತ್ತೊಮ್ಮೆ ಅದನ್ನು ಡೌನ್ಲೋಡ್ ಮಾಡಿಕೊಳ್ಳಲು ಇಚ್ಚಿಸಿದ್ದರೆ, ವೋಟರ್ ಐಡಿ ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಿದ್ದರೆ ಅಥವಾ ನೀವು ಹೊಸದಾಗಿ ವೋಟರ್ ಐಡಿ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದರೆ
ಮುಖಪುಟ ಓಪನ್ ಆದ ಮೇಲೆ ಅದರಲ್ಲಿ Search in Electroral Roll ಎನ್ನುವ ಆಪ್ಷನ್ ಕಾಣುತ್ತದೆ ಕ್ಲಿಕ್ ಮಾಡಿ.
* Search in Electroral Roll ಇಂಟರ್ ಫೇಸ್ ಓಪನ್ ಆಗುತ್ತದೆ. ಇದರಲ್ಲಿ ಮೂರು ವಿಧಾನದಲ್ಲಿ ನೀವು ನಿಮ್ಮ ವೋಟರ್ ಐಡಿ ಸರ್ಚ್ ಮಾಡಬಹುದು.
1. Search by details ಎನ್ನುವ ಆಪ್ಶನ್ ಇರುತ್ತದೆ ಇದರಲ್ಲಿ ನಿಮ್ಮ ಬಳಿ ವೋಟರ್ ಐಡಿ ಜೆರಾಕ್ಸ್ ಕೂಡ ಇಲ್ಲದಂತೆ ನೀವು ಏನಾದರೂ ನಿಮ್ಮ ದಾಖಲೆ ಕಳೆದುಕೊಂಡಿದ್ದರೆ ನಿಮ್ಮ ಡೀಟೇಲ್ಸ್ ನೀಡುವ ಮೂಲಕ ವೋಟರ್ ಐಡಿ ಸರ್ಚ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದು.
2. ಕೆಲವರ ಬಳಿ ಜೆರಾಕ್ಸ್ ಇರುತ್ತದೆ ಅಥವಾ ವೋಟರ್ ಐಡಿ ಫೋಟೋ ಇರುತ್ತದೆ ಅವರು ಅದರಲ್ಲಿರುವ EPIC No. ಹಾಕಿ State & launguage ಸೆಲೆಕ್ಟ್ ಮಾಡಿ Captcha ನಮೂದಿಸಿ ಸರ್ಚ್ ಮಾಡಬಹುದು
3. ಅಥವಾ ವೋಟರ್ ಐಡಿ ಗೆ Mobile ಲಿಂಕ್ ಮಾಡಿದ್ದರೆ ಮೊಬೈಲ್ ನಂಬರ್ ಹಾಕುವ ಮೂಲಕವೂ ಕೂಡ ಸರ್ಚ್ ಮಾಡಬಹುದು. ನಿಮ್ಮ State & language select ಮಾಡಿ Captcha ನಮೂದಿಸಿ ಮೊಬೈಲ್ ನಂಬರ್ ಹಾಕಿದರೆ ಆ ನಂಬರ್ ಗೆ OTP ಬರುತ್ತದೆ. ಆ OTP ಹಾಕಿ ಸರ್ಚ್ ಮಾಡಬಹುದು.
ಮತದಾರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಇಲ್ಲವೇ ಎನ್ನುವುದನ್ನು ಚೆಕ್ ಮಾಡುವ ವಿಧಾನ:-
* https://voters.eci.gov.in/ ಲಿಂಕ್ ಕ್ಲಿಕ್ ಮಾಡಿ ಪೋರ್ಟಲ್ ಗೆ ಹೋಗಿ
* Voter Service Portal ಓಪನ್ ಆಗುತ್ತದೆ ನಿಮ್ಮ ರಾಜ್ಯವನ್ನು (State) ಸೆಲೆಕ್ಟ್ ಮಾಡಿ ನಂತರ ಜಿಲ್ಲೆಯ ಹೆಸರನ್ನು ಸೆಲೆಕ್ಟ್ ಮಾಡಿ, ನಿಮ್ಮ ವಿಧಾನಕ್ಷೇತ್ರ ಕ್ಷೇತ್ರ (Assembly Constituency) ಯಾವುದು ಎನ್ನುವ ಆಯ್ಕೆಯನ್ನು ನೋಡಿ ಸೆಲೆಕ್ಟ್ ಮಾಡಿ, ನಿಮ್ಮ ಭಾಷೆಯನ್ನು (language ) ಸೆಲೆಕ್ಟ್ ಮಾಡಿ ಕೊಟ್ಟಿರುವ ಕ್ಯಾಪ್ಚವನ್ನು (capcha code) ಸರಿಯಾಗಿ ಫಿಲ್ ಮಾಡಿ.
* ಕ್ಯಾಪ್ಚರ್ ಎಂಟ್ರಿ ಮಾಡಿದ ಮೇಲೆ ಎಂಟರ್ ಕೊಟ್ಟು ಸರ್ಚ್ ಎನ್ನುವ ಬಾಕ್ಸ್ ಗೆ ಹೋಗಿ ನಿಮ್ಮ ಗ್ರಾಮ ಪಂಚಾಯಿತಿ ಹೆಸರನ್ನು ಟೈಪ್ ಮಾಡಿ ಆಗ ನಿಮ್ಮ ಗ್ರಾಮ ಪಂಚಾಯಿತಿ ಎಲ್ಲಾ ವಾರ್ಡ್ ಗಳ ಆಪ್ಷನ್ ಬರುತ್ತದೆ ಅದರಲ್ಲಿ ನಿಮಗೆ ಬೇಕಾದದ್ದನ್ನು ಸೆಲೆಕ್ಟ್ ಮಾಡಿ ಪಕ್ಕದಲ್ಲಿ ಡೌನ್ಲೋಡ್ (draftroll) ಮಾಡಿಕೊಳ್ಳಲು ಇರುವ ಗುರುತನ್ನ ಕ್ಲಿಕ್ ಮಾಡುವ ಮೂಲಕ ಅದರ pdf ಡೌನ್ಲೋಡ್ ಮಾಡಿಕೊಳ್ಳಬಹುದು.
ಅದನ್ನು ಓಪನ್ ಮಾಡಿ ನೋಡಿದರೆ ನಿಮ್ಮ ವಾರ್ಡ್ ಲಿಸ್ಟ್ ಪೂರ್ತಿ ಇರುತ್ತದೆ. ಇದರಲ್ಲಿ ನಿಮ್ಮ ಹೆಸರು ಇದೆಯೇ ಎನ್ನುವುದನ್ನು ಚೆಕ್ ಮಾಡಿ ಮತ್ತು ನೀವು ಯಾವ ಶಾಲೆಯಲ್ಲಿ ಹೋಗಿ ಮತದಾನ ಮಾಡಬೇಕು ಮತ್ತು ಅದರ ಮ್ಯಾಪಿಂಗ್ ಮತ್ತು ಆ ಶಾಲೆಯ ಫೋಟೋ ಇತ್ಯಾದಿ ವಿವರವೂ ಕೂಡ ಇರುತ್ತದೆ.