Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಕೇಂದ್ರ ಸರ್ಕಾರವು (Indian Government) ಮಹಿಳೆಯರಿಗಾಗಿ ಹಲವು ಯೋಜನೆಗಳನ್ನು ರೂಪಿಸಿದೆ. ಇದರ ಪೈಕಿ ಬಡ ಕುಟುಂಬದ ಮಹಿಳೆಗೂ ಹೊಗೆ ಮುಕ್ತ ಅಡುಗೆ ಮನೆಯಲ್ಲಿ ಅಡುಗೆ ಮಾಡುವ ಅನುಕೂಲವನ್ನು ಉಚಿತವಾದ ಗ್ಯಾಸ್ ಸ್ಟವ್ ಮತ್ತು ಸಿಲಿಂಡರ್ ಕನೆಕ್ಷನ್ ನೀಡುವ ಮೂಲಕ ಕಲ್ಪಿಸಿಕೊಟ್ಟ ಪ್ರಧಾನಮಂತ್ರಿ ಉಜ್ವಲ್ ಯೋಜನೆಯು (Pradana Mantri Ujwal Yojane) ಪ್ರಶಂಸಾರ್ಹ.
ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಕನೆಕ್ಷನ್ ಪಡೆದವರು (free Gas) ಈಗ 450 ರೂಪಾಯಿಗೆ ಸಿಲಿಂಡರ್ ಬುಕ್ ಮಾಡಬಹುದು, ಕೇಂದ್ರ ಸರ್ಕಾರವು ಈ ಯೋಜನೆ ಫಲಾನುಭವಿಗಳಿಗೆ ಸಬ್ಸಿಡಿ ಘೋಷಿಸಿದೆ ಸಬ್ಸಿಡಿ ಹಣವು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ತಲುಪಲಿದೆ.
ಈ ರೀತಿಯ ಸಬ್ಸಿಡಿ ಹಣವನ್ನು ಪಡೆಯಲು ತಪ್ಪದೇ ಪ್ರಧಾನಮಂತ್ರಿ ಉಜ್ವಲ್ ಯೋಜನೆಯಡಿ ಸಿಲಿಂಡರ್ ಕನೆಕ್ಷನ್ ಪಡೆದವರು ತಮ್ಮ ಗ್ಯಾಸ್ e-KYC ಮಾಡಿಸಬೇಕು ಎನ್ನುವ ಆದೇಶವನ್ನು ಕೂಡ ಕೇಂದ್ರ ಸರ್ಕಾರ ಹೊರಡಿಸಿದೆ. ಆ ಪ್ರಕಾರವಾಗಿ ಫ್ರೀ ಗ್ಯಾಸ್ ಪಡೆದವರು ತಪ್ಪದೆ ಗ್ಯಾಸ್ e-KYC ಮಾಡಿಸಿಕೊಳ್ಳಿ.
ಇದರ ಜೊತೆಗೆ ಈ ವಿಚಾರವಾಗಿ ಇರುವ ಮತ್ತೊಂದು ಗುಡ್ ನ್ಯೂಸ್ ಏನೆಂದರೆ, ಪ್ರಧಾನಮಂತ್ರಿ ಉಜ್ವಲ್ ಯೋಜನೆ 2.0 ನಡಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನ ಮಾಡಲಾಗುತ್ತಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು? ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಯಾವ ಸೌಲಭ್ಯಗಳು ಸಿಗುತ್ತವೆ ಎನ್ನುವುದರ ಕುರಿತ ಮಾಹಿತಿ ಹೀಗಿದೆ ನೋಡಿ.
ಅರ್ಜಿ ಸಲ್ಲಿಸಲು ಅರ್ಹತೆಗಳು:-
* ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ 18 ವರ್ಷ ತುಂಬಿದ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬಹುದು
* ಒಂದೇ ಕುಟುಂಬದಲ್ಲಿ ಇನ್ಯಾವುದೇ OMC ಯಿಂದ LPG ಸಂಪರ್ಕ ಇರಬಾರದು.
* SC/ST, ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ), ಅತ್ಯಂತ ಹಿಂದುಳಿದ ವರ್ಗಗಳು (MBC), ಅಂತ್ಯೋದಯ ಅನ್ನ ಯೋಜನೆ (AAY), ಟೀ ಮತ್ತು ಎಕ್ಸ್-ಟೀ ಗಾರ್ಡನ್ ಬುಡಕಟ್ಟುಗಳು, ಅರಣ್ಯವಾಸಿಗಳು, ವಾಸಿಸುವ ಜನರು ದ್ವೀಪಗಳು ಮತ್ತು ನದಿ ದ್ವೀಪಗಳು, SECC ಕುಟುಂಬಗಳು (AHL TIN) ಮುಂತಾದ ಯಾವುದೇ ವರ್ಗಕ್ಕೆ ಸೇರಿದ ಮಹಿಳೆಯು ಅರ್ಜಿ ಸಲ್ಲಿಸಬಹುದು
ಬೇಕಾಗುವ ದಾಖಲೆಗಳು:-
* ಅರ್ಜಿದಾರರ ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆಗಾಗಿ ಆಧಾರ್ ಕಾರ್ಡ್
* ಪಡಿತರ ಚೀಟಿ (BPL / AAY)
* ಬ್ಯಾಂಕ್ ಪಾಸ್ ಬುಕ್ ವಿವರ
* ಮೊಬೈಲ್ ಸಂಖ್ಯೆ
* KYC
ಸಿಗುವ ಸೌಲಭ್ಯಗಳು:-
* ಉಚಿತವಾಗಿ ಗ್ಯಾಸ್ ಸ್ಟವ್
* ಒಂದು ಸಿಲಿಂಡರ್
* ರೆಗುಲೇಟರ್
* ಲೈಟರ್
* ಪ್ರತಿ ಗ್ಯಾಸ್ ಬುಕಿಂಗ್ ಆಗಿ ಸರ್ಕಾರದಿಂದ ಸಬ್ಸಿಡಿ ಹಣ
ಅರ್ಜಿ ಸಲ್ಲಿಸುವ ವಿಧಾನ:-
* ಗೂಗಲ್ ನಲ್ಲಿ LPG GAS free ಎಂದು ಸರ್ಚ್ ಮಾಡಿ ಅಥವಾ ನೇರವಾಗಿ PMUY ಅಧಿಕೃತ ವೆಬ್ಸೈಟ್ https://www.pmuy.gov.in/kn/ujjwala2.html ಲಿಂಕ್ ಕ್ಲಿಕ್ ಮಾಡಿ
* ಮುಖಪುಟದಲ್ಲಿ Click here to apply for New Ujjwala 2.0 connection ಮೇಲೆ ಕ್ಲಿಕ್ ಮಾಡಿ
* ತಕ್ಷಣ ನಿಮಗೆ ಭಾರತದಲ್ಲಿ ಗ್ಯಾಸ್ ಸಂಪರ್ಕ ನೀಡುವ ಕಂಪನಿಗಳಾದ Bharath, Indian, HP ಕಂಪನಿಗಳ ಆಪ್ಷನ್ ಕಾಣುತ್ತದೆ ನಿಮಗೆ ಯಾವ ಕಂಪನಿ ಕನೆಕ್ಷನ್ ಬೇಕು ಅದನ್ನು ಸೆಲೆಕ್ಟ್ ಮಾಡಿ ಕ್ಲಿಕ್ ಮಾಡಿ.
* ಆಗ ನೀವು ಯಾವ ಕಂಪನಿ ಸೆಲೆಕ್ಟ್ ಮಾಡಿದ್ದಿರಾ ಅದರ ವೆಬ್ಸೈಟ್ ಓಪನ್ ಆಗುತ್ತದೆ.
* Type of Connection ಆಪ್ಷನ್ ನಲ್ಲಿ Regular LPG connection or Ujwala 2.0 New connection ಎನ್ನುವ ಆಯ್ಕೆಗಳು ಕಾಣುತ್ತದೆ ಅದರಲ್ಲಿ ಎರಡನೇ ಆಯ್ಕೆಯಾದ Ujjwala 2.0 New Connection ಎನ್ನುವುದನ್ನು ಸೆಲೆಕ್ಟ್ ಮಾಡಿ.
* ನೀಡಿರುವ terms and Conditions ಓದಿಕೊಂಡು Declaration check nox ನಲ್ಲಿ right mark click ಮಾಡಿ,
* ನಂತರ ನಿಮ್ಮ State and District ಸೆಲೆಕ್ಟ್ ಮಾಡಿ showlist ಎನ್ನುವುದರ ಮೇಲೆ ಕ್ಲಿಕ್ ಮಾಡಿ.
* ಆಗ ನಿಮ್ಮ ಜಿಲ್ಲೆಯಲ್ಲಿ ಇರುವ ನೀವು ಆರಿಸಿದ ಎಲ್ಲಾ ಕಂಪನಿಯ ಏಜೆನ್ಸಿಗಳ ಲಿಸ್ಟ್ ಬರುತ್ತದೆ, ಅದರಲ್ಲಿ ನಿಮ್ಮ ಮನೆಗೆ ಸಮೀಪವಾಗಿರುವುದನ್ನು select ಮಾಡಿ, Continue ಮೇಲೆ click ಮಾಡಿ ಅರ್ಜಿ ಸಲ್ಲಿಕೆ ಮುಂದುವರಿಸಬೇಕು.
* ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಬಹುದು ಆದರೆ ತಿಳಿಯದೆ ಇದ್ದರೆ ಈಗ ನಾವು ಮೇಲೆ ತಿಳಿಸಿದ ದಾಖಲೆ ತೆಗೆದುಕೊಂಡು ಹತ್ತಿರದಲ್ಲಿರುವ ಗ್ಯಾಸ್ ಏಜೆನ್ಸಿಗೆ ಹೋದರೆ ಸುಲಭವಾಗಿ ನಿಮಗೆ ಅರ್ಜಿ ಹಾಕಿ ಕೊಡುತ್ತಾರೆ. ಕೊನೆಯಲ್ಲಿ ತಪ್ಪದೇ ಇ-ಸ್ವೀಕೃತಿ ಪ್ರತಿ ತೆಗೆದುಕೊಂಡು ಬನ್ನಿ. ಶೀಘ್ರದಲ್ಲಿ ನಿಮ್ಮ ಮನೆಗೆ ಉಚಿತವಾಗಿ ಗ್ಯಾಸ್ ಕನೆಕ್ಷನ್ ಸಿಗುತ್ತದೆ.