Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಪ್ರಪಂಚದ ಎರಡನೇ ಅತೀ ದೊಡ್ಡ ಆರೋಗ್ಯ ಸಮಸ್ಯೆಯಾಗಿ ಲಕ್ವ ಕಾಡುತ್ತಿದೆ. ನಾನಾ ಕಾರಣಗಳಿಂದ ಮನುಷ್ಯನಿಗೆ ಲಕ್ವ ಹೊಡೆಯುತ್ತದೆ. ಇದನ್ನು ಪಾರ್ಶ್ವವಾಯು, ಸ್ಟ್ರೋಕ್, ಪ್ಯಾರಲಿಸಿಸ್ ಎಂದು ಕೂಡ ಕರೆಯುತ್ತಾರೆ. ಈ ರೀತಿ ಪ್ಯಾರಲಿಸಸ್ ಅಟ್ಯಾಕ್ ಗೆ ಒಳಗಾದವರು ಆಸ್ಪತ್ರೆ ಚಿಕಿತ್ಸೆಗಿಂತ ನಾಟಿ ಚಿಕಿತ್ಸೆಯಿಂದ ಬೇಗ ಗುಣವಾಗುತ್ತಾರೆ ಎನ್ನುವುದು ಹಲವರ ನಂಬಿಕೆ.
ಆ ಪ್ರಕಾರವಾಗಿ ಈ ರೀತಿ ಗುಣವಾಗಿರುವ ಉದಾಹರಣೆಯನ್ನು ನಾವು ಕೂಡ ಕೇಳಿರುತ್ತೇವೆ, ನೋಡಿರುತ್ತೇವೆ. ನಮ್ಮ ಕರ್ನಾಟಕ ರಾಜ್ಯದಲ್ಲೂ ಹಲವಾರು ನಾಟಿ ವೈದ್ಯರು ಪ್ರಖ್ಯಾತರಾಗಿದ್ದರೆ, ಆ ಪೈಕಿ ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ನಾಟಿ ವೈದ್ಯ ಹನುಮಂತ ಬೊಮ್ಮೇಗೌಡ ಇವರು ಕೂಡ ಒಬ್ಬರು. ಇವರ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದ್ದು ಇವರ ಕುಟುಂಬವು ಪಾರಂಪರ್ಯವಾಗಿ ಇದನ್ನು ನಡೆಸಿಕೊಂಡು ಬರುತ್ತಿದೆ.
ಇವರ ಅಜ್ಜಿಯವರು ಮಹಾತ್ಮ ಗಾಂಧೀಜಿಯವರಿಗೆ ಸ್ಟ್ರೋಕ್ ಆಗಿದ್ದಾಗ ನಂದಿ ಬೆಟ್ಟದಲ್ಲಿ ಹೋಗಿ ಚಿಕಿತ್ಸೆ ಕೊಟ್ಟಿದ್ದರಂತೆ ಮತ್ತು ಇವರ ತಂದೆ ಅಮಿತಾ ಬಚ್ಚನ್, ವೀರೇಂದ್ರ ಪಾಟೀಲ್ ಇನ್ನು ಅನೇಕ ಚಿಕಿತ್ಸೆ ಕೊಟ್ಟಿದ್ದಾರೆ ಮತ್ತು ಇವರು ಸಹ ರಾಘವೇಂದ್ರ ರಾಜಕುಮಾರ್ ದಲೈಲಾಮ ಮುಂತಾದ ಸೆಲೆಬ್ರಿಟಿಗಳಿಗೆ ಉಪಚರಿಸಿ ಗುಣಪಡಿಸಿರುವ ಹಿನ್ನೆಲೆಯನ್ನು ಇವರ ಕುಟುಂಬ ಹೊಂದಿದೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಬೆಳಂಹಾರ ಎನ್ನುವ ಗ್ರಾಮದಲ್ಲಿ ಈ ನಾಟಿ ವೈದ್ಯರು ಇದ್ದಾರೆ ಇವರ ತಂದೆ ಹೆಸರು ದಿವಂಗತ ಶಿವು ಬೊಮ್ಮೆಗೌಡ ಅವರ ಹೆಸರಿನಲ್ಲಿ ಸ್ಮಾರಕವನ್ನು ಕೂಡ ಕಟ್ಟಿಸಿ ನಾಡಿನ ಮೂಲೆ ಮೂಲೆಗಳಿಂದ ಬರುವ ಲಕ್ವಾ ಪೇಷೆಂಟ್ ಗಳನ್ನು ಗುಣಪಡಿಸುತ್ತಿದ್ದಾರೆ.
ಇಲ್ಲಿಗೆ ಹೋದವರು ಎಂತಹದೇ ಸ್ಟ್ರೋಕ್ ಆಗಿದ್ದರು ನೂರಕ್ಕೆ ನೂರರಷ್ಟು ಗುಣವಾಗುತ್ತಾರೆ ಇತ್ತೀಚಿಗೆ ಖಾಸಗಿ ಯುಟ್ಯೂಬ್ ಚಾನೆಲ್ ಒಂದು ಇವರ ಸಂದರ್ಶನ ಮಾಡಿದ್ದು ಇವರ ಆಸ್ಪತ್ರೆಯ ಬಗ್ಗೆ ಮತ್ತು ಅಲ್ಲಿ ನೀಡುವ ಚಿಕಿತ್ಸೆಗಳ ಬಗ್ಗೆ ಮಾಹಿತಿ ಒದಗಿಸಿದ್ದಾರೆ. ಆ ಚಿಕಿತ್ಸಾಲಯದಲ್ಲಿ ಶುಶ್ರೂಶಕಿಯಾಗಿ ಕೆಲಸ ಮಾಡುವ ಸಿಬ್ಬಂದಿಯ ಜೊತೆಗೂ ಕೂಡ ಮಾತುಕತೆ ನಡೆಸಿ ಕೆಲ ಮಾಹಿತಿಯನ್ನು ಕಲೆ ಹಾಕಿದ್ದಾರೆ.
ಆ ನರ್ಸ್ ಗಳು ಹೇಳುವ ಪ್ರಕಾರ ಕೋಮ ಸ್ಟೇಜ್ ನಲ್ಲಿರುವ ಪೇಷಂಟ್ ಗಳನ್ನು ಕೂಡ ಕರೆದುಕೊಂಡು ಬರುತ್ತಾರೆ , ಯಾವ ಸ್ಥಿತಿಯಲ್ಲಿ ಬಂದರೂ ಬಂದವರಿಗೆ ಇಂತಿಷ್ಟು ದಿನಗಳು ಬರಲೇಬೇಕು ಎನ್ನುವ ನಿಯಮಯೂ ಇಲ್ಲ ಮತ್ತು ಇಂತಿಷ್ಟು ದಿನಗಳಲ್ಲಿ ಗುಣವಾಗುತ್ತಾರೆ ಎಂದು ನೋಡಿದ ತಕ್ಷಣ ಹೇಳಲು ಆಗುವುದಿಲ್ಲ.
ಸಂಪೂರ್ಣ ಗುಣ ಆಗುವವರೆಗೂ ಕೂಡ ಇದ್ದು ಆರೈಕೆ ಮಾಡಿಕೊಂಡು ಹೋಗುತ್ತಾರೆ ಕೆಲವರು ಗುಣವಾಗುತ್ತಿದ್ದಂತೆ ಹೋಗುತ್ತಾರೆ ಮತ್ತು ಅವಶ್ಯಕತೆ ಇದ್ದಾಗ ಬಂದು ಔಷಧಿ ತೆಗೆದುಕೊಂಡು ಹೋಗುತ್ತಾರೆ. ಮನಸ್ಸಿನಲ್ಲಿ ಎಲ್ಲವನ್ನು ಪಾಸಿಟಿವ್ ಆಗಿ ತೆಗೆದುಕೊಂಡು ಹೇಳಿದಿನೆಲ್ಲಾ ಆಕ್ಟಿವ್ ಆಗಿ ಮಾಡುವವರು ಬೇಗ ಗುಣವಾಗುತ್ತಾರೆ. ದುಃಖದಲ್ಲಿ ಇದ್ದವರು ಗುಣವಾಗಲು ಬಹಳ ಸಮಯ ಬೇಕಾಗುತ್ತದೆ ಎಂದು ಹೇಳಿದ್ದಾರೆ.
ಇಲ್ಲಿ ಮಕ್ಕಳಂತೆ ರೋಗಿಗಳನ್ನು ನೋಡಿಕೊಳ್ಳಲಾಗುತ್ತದೆ. ಅವರ ಕುಟುಂಬ ಉಳಿದುಕೊಳ್ಳುವುದಕ್ಕೂ ಕೂಡ ವ್ಯವಸ್ಥೆ ಇದೆ. ಸ್ವಚ್ಛತೆ, ಉಪಚಾರ, ಆರೈಕೆ, ಚಟುವಟಿಕೆಗಳು ಎಲ್ಲವೂ ಕೂಡ ಅಚ್ಚುಕಟ್ಟಾಗಿದ್ದು ನಾಟಿ ವೈದ್ಯರು ಕೊಡುವ ಔಷಧಿಗಳ ಜೊತೆಗೆ ಅಲ್ಲಿರುವ ಇಕ್ವಿಪ್ಮೆಂಟ್ ಗಳಿಂದ ಎಕ್ಸಸೈಜ್ ಮಾಡಿಸಿ ಗುಣಪಡಿಸುತ್ತಾರೆ.
ಇವರನ್ನು ಕ್ರಿಯಾಶೀಲಗೊಳಿಸುವುದಕ್ಕೆ ದೇಹದ ಯಾವ ಭಾಗಗಳು ಪಾಶ್ವ ವಾಯುಪೀಡಿತವಾಗಿದೆ ಆ ಭಾಗಗಳಿಗೆ ಚಟುವಟಿಕೆ ಮಾಡಿಸುವುದಕ್ಕಾಗಿ ಹಲವು ಬಗೆಯ ಯಂತ್ರಗಳು ಕೂಡ ಇಲ್ಲಿ ಇದೆ. ಅವುಗಳಲ್ಲಿ ಹಂತ ಹಂತವಾಗಿ ಪ್ರತಿದಿನವೂ ಬೇರೆ ಬೇರೆ ರೀತಿಯ ಚಟುವಟಿಕೆ ಮಾಡಿಸಿ, ರೋಗಿಗಳನ್ನು ಗುಣಪಡಿಸಿ ಕಳುಹಿಸುವುದೇ ತಮ್ಮ ಗುರಿಯೆನ್ನುವಂತೆ ಇಲ್ಲಿರುವ ವೈದ್ಯರು ಹಾಗೂ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಾರೆ. ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.