Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ದೇಶದಲ್ಲಿ 60 ವರ್ಷ ಮೇಲ್ಪಟ್ಟ ವೃದ್ಧರಿಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಜೀವನ ನಿರ್ವಹಣೆಗಾಗಿ ವೃದ್ದಾಪ್ಯ ವೇತನ (old age Pension) ನೀಡಿ ಪೋಷಿಸುತ್ತಿದೆ. ಆರ್ಥಿಕವಾಗಿ ಅಶಕ್ತರಾಗಿರುವ ದುರ್ಬಲರಿಗೆ ಅನುಕೂಲವಾಗಲಿ ಎಂದು ಈ ರೀತಿಯ ಪಿಂಚಣಿ ಯೋಜನೆಗಳನ್ನು (Pension Schemes) ಜಾರಿಗೆ ತಂದಿರುವುದು.
ಆದರೆ ದೇಶದಲ್ಲಿ ಅನುಕೂಲಸ್ಥರು ಕೂಡ 60 ವರ್ಷ ಮೇಲ್ಪಟ್ಟಿರುವ ಕಾರಣ ಕೊಟ್ಟು ಪಿಂಚಣಿ ಪಡೆಯುತ್ತಿದ್ದಾರೆ ಎನ್ನುವುದು ತಿಳಿದು ಬಂದಿದೆ. ಈ ರೀತಿ ಹಣ ಸೋರಿಕೆ ಆಗುವುದನ್ನು ತಡೆಗಟ್ಟಲು ಮತ್ತು ಅನರ್ಹರು ಈ ಸೌಲಭ್ಯಗಳನ್ನು ಪಡೆಯುವುದರಿಂದ ಅಸಲಿ ಫಲಾನುಭವಿಗಳಿಗೆ ವಂಚನೆ ಯಾಗಲಿದೆ ಎನ್ನುವುದನ್ನು ಪರಿಣಿಗಣಿಸಿ ಪಿಂಚಣಿ ಸೌಲಭ್ಯಗಳ ಪ್ರಯೋಜನ ಪಡೆಯಲು ಅರ್ಜಿ ಸಲ್ಲಿಸುವವರಿಗೆ ಆದಾಯ ಮಿತಿ ನಿಗದಿಪಡಿಸಲಾಗಿದೆ.
ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯವು (Directorate of Social Security Schemes and Pensions) ಈ ಕುರಿತಾದ ಪ್ರಕಟಣೆ ಹೊರಡಿಸಿ ಈ ವಿಚಾರ ಹಂಚಿಕೊಂಡಿದೆ. ಪ್ರಸ್ತುತವಾಗಿ APL card ಹೊಂದಿರುವವರಿಗೂ ಕೂಡ ಈ ಪಿಂಚಣಿ ಸಿಗುತ್ತಿದೆ. ಆದರೆ ಇನ್ನು ಮುಂದೆ ನಿಗದಿತ ಆದಾಯಕ್ಕಿಂತ ಹೆಚ್ಚಿನ ಆದಾಯ ಹೊಂದಿರುವವರು ಮಾಸಾಶನ ಪಡೆಯಲಾಗುವುದಿಲ್ಲ.
ಪಿಂಚಣಿಗೆ ಅರ್ಜಿ ಸಲ್ಲಿಸುವಾಗಲೇ ಸ್ವಯಂ ಚಾಲಿತವಾಗಿ ಆದಾಯ ಹೆಚ್ಚಿರುವವರ ಅರ್ಜಿಗಳು ತಿರಸ್ಕೃತಗೊಳ್ಳುವಂತೆ ತಂತ್ರಾಂಶ ಸಿದ್ಧಪಡಿಸಲಾಗಿದೆ. ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಲಯವು ಜಾರಿಗೆ ತಂದಿರುವ ಹೊಸ ನಿಯಮದ ಪ್ರಕಾರ ಕುಟುಂಬದ ವಾರ್ಷಿಕ ಆದಾಯ ರೂ.32,000 ಕ್ಕಿಂತಲೂ ಅಧಿಕವಾಗಿದ್ದರೆ ಅವರು ಪಿಂಚಣಿಗಾಗಿ ಅರ್ಜಿ ಸಲ್ಲಿಸಿದರೆ ಆ ಅರ್ಜಿಗಳು ತಿರಸ್ಕೃತವಾಗುತ್ತವೆ.
ಅರ್ಜಿ ಸಲ್ಲಿಸಲು ಅನೇಕ ದಾಖಲೆಗಳನ್ನು ಕೇಳಲಾಗುತ್ತದೆ. ಇವುಗಳನ್ನು ಸರ್ಕಾರದಿಂದ ಧೃಡೀಕರಿಸಲಾಗಿರುತ್ತದೆ ಮತ್ತು ಸರ್ಕಾರದಿಂದ ಪಡೆದ ದಾಖಲೆಗಳಾಗಿರುವೆ. ಸರ್ಕಾರದ ಎಲ್ಲಾ ಇಲಾಖೆಗಳ ದಾಖಲೆಗೂ ಆಧಾರ್ ಕಾರ್ಡ್ ಲಿಂಕ್ ಆಗಿರುವುದರಿಂದ ಸುಳ್ಳು ಮಾಹಿತಿ ಕೊಟ್ಟು ಪಿಂಚಣಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ.
ಈ ವಿಚಾರದಲ್ಲಿ ಆಧಾರ್ ಕಾರ್ಡ್ ದಾಖಲೆಗಳಿಗೆ ಲಿಂಕ್ ಆಗಿರುವುದು ಬಹಳಷ್ಟು ಅನುಕೂಲವಾಗುತ್ತಿದೆ ಎಂದೇ ಹೇಳಬಹುದಾಗಿದೆ. ಸರ್ಕಾರದ ವಿವಿಧ ಪಿಂಚಣಿ ಯೋಜನೆಗಳಿಂದ ದೇಶದ ಕೋಟ್ಯಂತರ ಫಲಾನುಭವಿಗಳು ಪಿಂಚಣಿ ಪಡೆಯುತ್ತಿದ್ದಾರೆ. ಸದ್ಯಕ್ಕೆ ವೃದ್ಧಾಪ್ಯ ಪಿಂಚಣಿಗೆ ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಮಾತ್ರ ಈ ನಿಯಮ ಅನ್ವಯವಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲ ರೀತಿಯ ಪಿಂಚಣಿ ಪಡೆಯುವವರಿಗೂ ಇದನ್ನು ವಿಸ್ತರಿಸಲಾಗುತ್ತದೆ ಕಾದು ನೋಡಬೇಕಾಗಿದೆ.
ವೃದ್ಯಾಪ್ಯ ಪಿಂಚಣಿ ಯೋಜನೆಯಡಿ ಸಿಗುತ್ತಿರುವ ಸಹಾಯಧನ:-
1. ಕೇಂದ್ರ ಸರ್ಕಾರದ ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ದಾಪ್ಯ ಪಿಂಚಣಿ ಯೋಜನೆಯಡಿ (IGNOAPS) 60 ರಿಂದ 64 ವರ್ಷದ ಒಳಗಿನ ವೃದ್ಧರಿಗೆ ಪ್ರತಿ ತಿಂಗಳು ರೂ.600 ಪಿಂಚಣಿ ಸಿಗುತ್ತದೆ.
2. ಈ ಯೋಜನೆಯಲ್ಲಿ 65 ವರ್ಷ ಮೇಲ್ಪಟ್ಟವರಿಗೆ ರೂ.1000 ಪಿಂಚಣಿ ಸಿಗುತ್ತದೆ.
* ರಾಜ್ಯ ಸರ್ಕಾರದ ಸಂಧ್ಯಾ ಸುರಕ್ಷಾ ಯೋಜನೆಯಡಿ (Sandhya Suraksha) 65 ವರ್ಷ ಮೇಲ್ಪಟ್ಟವರಿಗೆ ಪ್ರತಿ ತಿಂಗಳು ರೂ. 1200 ಸಿಗುತ್ತಿದೆ.
* ಈ ಸೂಕ್ತ ದಾಖಲೆಗಳ ಜೊತೆ ನಾಡಕಚೇರಿಗೆ ಹೋಗಿ ಅರ್ಜಿ ಸಲ್ಲಿಸಬೇಕಿತ್ತು, ಈಗ ಆನ್ಲೈನಲ್ಲಿ ಕೂಡ ಅರ್ಜಿ ಸಲ್ಲಿಸಲು ಅವಕಾಶಗಳಿವೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
* ವೃದ್ಧಾಪ್ಯ ವೇತನ ಪಿಂಚಣಿ ಪಡೆಯಲು ವಯಸ್ಸಿನ ದೃಢೀಕರಣ ಪತ್ರ
* ಅರ್ಜಿದಾರನ ಆಧಾರ್ ಕಾರ್ಡ್
* ಕುಟುಂಬದ ರೇಷನ್ ಕಾರ್ಡ್
* ಆದಾಯ ಪ್ರಮಾಣ ಪತ್ರ
* ಮೊಬೈಲ್ ನಂಬರ್
* ಇತರ ಪ್ರಮುಖ ದಾಖಲೆಗಳು