ನಾವು ಸೋಲಾರ್ ಸಹಾಯದಿಂದ ಮತ್ತು ವಿದ್ಯುತ್ ಚಾಲಿತ ಮೋಟಾರ್ ಅಥವಾ ಡೀಸೆಲ್ ಮೋಟಾರ್ ಸಹಾಯದಿಂದ ನೀರು ಎತ್ತುವ ಪಂಪ್ ಟೆಕ್ನಾಲಜಿ ಬಗ್ಗೆ ನೋಡಿದ್ದೇವೆ, ಕೇಳಿದ್ದೇವೆ, ತಿಳಿದುಕೊಂಡಿದ್ದೇವೆ. ಹೆಚ್ಚಿನ ಭಾಗದ ರೈತರು ಇವುಗಳನ್ನು ಅನುಸರಿಸುತ್ತಾರೆ. ಆದರೆ ಈಗ ಮಾರುಕಟ್ಟೆಯಲ್ಲಿ ರೈತರಿಗೆ ಅನುಕೂಲತೆ ಮಾಡಿಕೊಡಲಿಂದೇ ಹೊಸ ಟೆಕ್ನಾಲಜಿಯೊಂದನ್ನು ಪರಿಚಯಿಸಲಾಗಿದೆ.
ಈ ಟೆಕ್ನಾಲಜಿಯಿಂದ ಇರುವ ಅನುಕೂಲತೆಗಳ ಜನಪ್ರಿಯತೆ ಕಾರಣದಿಂದ ನಿಧಾನವಾಗಿ ಇದು ಎಲ್ಲಾ ಭಾಗಗಳಲ್ಲೂ ಪ್ರಚಲಿತಕ್ಕೆ ಬರುತ್ತಿದೆ. ಹೈಡ್ರಾಲಿಕ್ ರಾಮ್ ಪಂಪ್ (Hydraulic Ram Pump) ಎನ್ನುವ ಈ ಪಂಪ್ ಹರಿಯುವ ನೀರನ್ನು ಎತ್ತರದ ಸ್ಥಳಕ್ಕೆ ತರುವುದಕ್ಕಾಗಿ ಬಳಸಲಾಗುತ್ತಿದೆ ಮತ್ತು ದೂರದ ಸ್ಥಳದಲ್ಲಿರುವ ನೀರನ್ನು ತರಲು ಕೂಡ ಇದು ಅನುಕೂಲಕ್ಕೆ ಬರುತ್ತಿದೆ.
ಎಷ್ಟು ಅಡಿ ಎತ್ತರದಿಂದ ತರಬಹುದು ಇದು ರೈತನಿಗೆ ಹೇಗೆ ಅನುಕೂಲವಾಗುತ್ತದೆ ಹಾಗಾದರೆ ಇದಕ್ಕೆ ವಿದ್ಯುತ್ ಸೋಲಾರ್ ಯಾವುದು ಬೇಡವೇ ಎನ್ನುವ ಎಲ್ಲಾ ಪ್ರಶ್ನೆಗಳಿಗೂ ಈ ಲೇಖನದಲ್ಲಿ ಉತ್ತರವಿದೆ. ಹೈಡ್ರಾಲಿಕ್ ರ್ಯಾಮ್ ಪಂಪ್ ಹೇಗೆ ರೈತರಿಗೆ ಸಹಾಯ ಮಾಡುತ್ತದೆ ಎಂದರೆ 100 ಅಡಿ ಆಳದಿಂದ ಇದು ನೀರನ್ನು ಪಂಪ್ ಮಾಡುತ್ತದೆ.
ಈ ಸುದ್ದಿ ಓದಿ:- ಮುಂದಿನ 5 ವರ್ಷ ಉಚಿತ ರೇಷನ್.! ಕೇಂದ್ರ ಸರ್ಕಾರದಿಂದ ಬಂಪರ್ ಕೊಡುಗೆ.!
ಇದಕ್ಕೆ ಯಾವುದೇ ಕರೆಂಟ್ ಆಗಲಿ ಅಥವಾ ಸೋಲಾರ್ ಆಗಲಿ ಅಥವಾ ಪೆಟ್ರೋಲ್ ಡೀಸೆಲ್ ಇಂತಹ ಇಂಧನವಾಗಲಿ ಅವಶ್ಯಕತೆ ಇಲ್ಲ. ಆದರೆ ಇದು ಕೃಷಿಗೆ ಬಳಕೆಗೆ ಸಂಪೂರ್ಣ ಮಟ್ಟದಲ್ಲಿ ಅನುಕೂಲತೆಗೆ ಬರುತ್ತದೆ ಎಂದು ಪೂರ್ತಿಯಾಗಿ ಹೇಳಲು ಆಗುವುದಿಲ್ಲ. ಸದ್ಯಕ್ಕೆ ಈ ಟೆಕ್ನಾಲಜಿಯನ್ನು ನೀರಿನ ಸಮಸ್ಯೆ ಬಗೆಹರಿಸಿಕೊಳ್ಳಲು ರೈತ ಬಳಸಬಹುದು ಮುಂದೆ ಇದನ್ನು ಅಭಿವೃದ್ಧಿಪಡಿಸಿ ದೊಡ್ಡ ಪ್ರಮಾಣದಲ್ಲಿ ಇದನ್ನು ಅಳವಡಿಸಿಕೊಂಡಲ್ಲಿ ನಿರೀಕ್ಷಿತ ಸಹಾಯಗಳೆಲ್ಲವೂ ಆಗಬಹುದು.
ಸದ್ಯಕ್ಕೆ ಕಡಿಮೆ ವೆಚ್ಚದಲ್ಲಿ ರೈತನಿಗೆ ಇದು ನೀರಿನ ಸಂಗ್ರಹಕ್ಕೆ ಅನುಕೂಲತೆ ಮಾಡಿ ಕೊಡುತ್ತಿದೆ ಹೇಗೆಂದರೆ ಈ ಪಂಪ್ ಸಹಾಯದಿಂದ ನೀರನ್ನು ಎಳೆದು ತೆಗೆಯಲಾಗುತ್ತದೆ ಆದರೆ ಸುತ್ತಲೂ ನೀರು ಹರಿಯುತ್ತದೆ. ಈ ಹರಿಯುವ ನೀರು ವೇಸ್ಟ್ ಆಗುವುದಿಲ್ಲ ಇದನ್ನು ಪೈಪ್ ಸಹಾಯದಿಂದ ಮತ್ತೊಂದು ಕಡೆ ಶೇಖರಿಸಿ ಅದನ್ನೇ ಬೋರ್ವೆಲ್ ಗೆ ಮತ್ತೆ ಬಿಡಲಾಗುತ್ತದೆ.
ವಾಟರ್ ಡ್ರೈವ್ ಲೈನ್ ಅನ್ನು ವೇಗಗೊಳಿಸಲಾಗುತ್ತದೆ, ರೈತನಿಗೆ ಯಾವುದೇ ಇನ್ವೆಸ್ಟ್ಮೆಂಟ್ ಇಲ್ಲದೆ ನೀರನ್ನು ಸ್ಟೋರ್ ಮಾಡಲು ಇದು ಅನುಕೂಲಕ್ಕೆ ಬರುತ್ತದೆ ಎಂದು ಸುಲಭವಾಗಿ ಅರ್ಥೈಸಬಹುದು. ಇದು ಸಣ್ಣ ಗಾತ್ರದಲ್ಲಿ ಇರುವುದರಿಂದ ಮತ್ತು ಕಡಿಮೆ ಬೆಲೆಗೆ ರೈತನಿಗೆ ಸಿಗುವುದರಿಂದ ನೀರಿನ ಮೂಲದಿಂದ ರೈತ ಬಯಸುವ ಸಂಪನ್ಮೂಲಕ್ಕೆ ನೀರನ್ನು ಹರಿವು ಇರುವ ಸಂದರ್ಭದಲ್ಲಿ ಅಥವಾ ಅದನ್ನು ಮರಳಿ ತನ್ನ ಬೋರವೆಲ್ ಗೆ ಕಳುಹಿಸಲು ಸಹಾಯ ಮಾಡುತ್ತದೆ ಮತ್ತು ಹಲವು ವರ್ಷಗಳ ವರೆಗೆ ಬಾಳಿಕೆ ಬರುವುದರಿಂದ ಒಂದು ಇನ್ವೆಸ್ಟ್ಮೆಂಟ್ ಕಡೆ ತನಕ ರೈತನ ಕೈ ಹಿಡಿಯುತ್ತದೆ.
ಈ ಸುದ್ದಿ ಓದಿ:- ಗೃಹಲಕ್ಷ್ಮಿ ಯೋಜನೆ 7ನೇ ಕಂತಿನ ಹಣ ಸಿಗದೇ ಇದ್ದವರು ಈ ರೀತಿ ಮಾಡಿ.! ಹಣ ಜಮೆ ಆಗುತ್ತೆ.!
ಕೃಷಿಯಲ್ಲಿ ಈ ರೀತಿ ಹೊಸ ಹೊಸ ವಿಧಾನದ ಉಪಯೋಗ ಆಗುತ್ತಲೇ ಇರಬೇಕು ಈಗಾಗಲೇ ದೊಡ್ಡ ದೊಡ್ಡ ಪ್ಲಾಂಟ್ ಗಳನ್ನು ಹೊಂದಿರುವವರು ಮಾತ್ರವಲ್ಲದೆ ಸಣ್ಣ ಪುಟ್ಟ ಕೃಷಿ ಸಹಾಯ ಪಡೆಯುತ್ತಿರುವವರು ಇದನ್ನು ಬಳಕೆ ಮಾಡುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಕರಾವಳಿ ಭಾಗದಲ್ಲಿ ಹೆಚ್ಚಿನ ರೈತರು ಇದನ್ನು ಅಳವಡಿಸಿಕೊಂಡಿದ್ದಾರೆ.
ಕರ್ನಾಟಕದಾದ್ಯಂತ ಯಾವುದೇ ಮೂಲೆಗೆ ಈ ಟೆಕ್ನಾಲಜಿ ತಲುಪಿಸಬೇಕು ಎಂದರೆ ಅಥವಾ ಈ ರೀತಿ ಹೈಡ್ರಾಲಿಕ್ ಪಂಪ್ ಬಗ್ಗೆ ವಿವರಣೆ ಬೇಕು ಈ ಸರ್ವಿಸ್ ಬೇಕು ಎನ್ನುವುದಾದರೆ ಈ ಕೆಳಕಂಡ ಸಂಖ್ಯೆಗಳಿಗೆ ಸಂಪರ್ಕಿಸಿ, ಇನ್ನು ಹೆಚ್ಚಿನ ವಿವರಣೆಗಾಗಿ ವಿಡಿಯೋವನ್ನು ಪೂರ್ತಿಯಾಗಿ ನೋಡಿ.
ಈಶ್ವರ ಮಂಗಲ
98802 98122