ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (Unified Payments Interface) ಆಧಾರಿತ ಆಪ್ ಗಳ ಫೋನ್ ಪೇ ಗೂಗಲ್ ಪೇಟಿಎಂ ಮುಂತಾದ ಆಪ್ ಗಳು(Phone pe, Google pe, Paytm) ಭಾರತದಲ್ಲಿ ಡಿಜಿಟಲ್ ಪಾವತಿ (Digital payments) ಕ್ರಾಂತಿಯನ್ನುಂಟು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಭಾರತದಂತಹ ಅಭಿವೃದ್ಧಿ ಶೀಲ ರಾಷ್ಟ್ರದಲ್ಲಿ ಇಂದು ಈ ರೀತಿ UPI ಬಳಕೆ ಜನಪ್ರಿಯವಾಗಿರುವುದು ಇದರ ಬಳಕೆಗೆ ಇರುವ ಸುಲಭ ವಿಧಾನಗಳಿಂದ ಎಂದರೆ ತಪ್ಪಾಗುವುದಿಲ್ಲ. ಇದರ ಮತ್ತೊಂದು ಅನುಕೂಲತೆ ಏನೆಂದರೆ ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಅಭಿವೃದ್ಧಿಪಡಿಸಿದ ತ್ವರಿತ ನೈಜ-ಸಮಯದ ಪಾವತಿ ವ್ಯವಸ್ಥೆಯು ಬಳಕೆದಾರರಿಗೆ ಒಂದೇ ಮೊಬೈಲ್ ಅಪ್ಲಿಕೇಶನ್ನಲ್ಲಿ (one mobile application).
ಈ ಸುದ್ದಿ ಓದಿ:- ಮನೆಯಲ್ಲಿಯೇ ಕುಳಿತು ಮೊಬೈಲ್ ನಲ್ಲಿ ದಿನಕ್ಕೆ 2 ಗಂಟೆ ಕೆಲಸ ಮಾಡಿ 15,000 ಪಡೆಯಿರಿ, ಕನ್ನಡ ಗೊತ್ತಿದ್ದರೆ ಸಾಕು.!
ಬಹು ಬ್ಯಾಂಕ್ ಖಾತೆಗಳನ್ನು (diffrent bank accounts) ಬಳಸಲು ಪರ್ಮಿಷನ್ (Permission) ನೀಡಿದ್ದು. ಹೀಗೆ ಆಯಾ ಕಾಲಘಟ್ಟಕ್ಕೆ ಸಾಕಷ್ಟು ಬಾರಿ ಇದನ್ನು ಅಪ್ಡೇಟ್ ಮಾಡಲಾಗುತ್ತಿದೆ ಹೊಸ ನಿಯಮಗಳನ್ನು ಸೇರಿಸಲಾಗುತ್ತಿದೆ. ಸಾರ್ವಜನಿಕ ಬಳಕೆಗಾಗಿ 2016 ರಲ್ಲಿ ಅಧಿಕೃತವಾಗಿ ಪ್ರಾರಂಭವಾದ UPI ಇಲ್ಲಿಯವರೆಗೆ ಹಲವಾರು ಬಾರಿ ಬದಲಾವಣೆಗಳಿಗೆ (many changes) ಒಳಗಾಗುತ್ತಾ ಬಂದಿದೆ.
ಈ ಅನುಕೂಲತೆಯನ್ನು ಇನ್ನಷ್ಟು ಹೆಚ್ಚಿಸಿ ಮತ್ತು ಸುರಕ್ಷಿತಗೊಳಿಸಿ ಕೆಲ ಅನಾನುಕೂಲತೆಗಳನ್ನು ಸರಿಪಡಿಸಿಕೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಜನವರಿ 1, 2024 ರಿಂದ UPI ಬಳಕೆಗೆ ಅನುಕೂಲವಾಗುವಂತೆ ಕೆಲವು ಹೊಸ ರೂಲ್ಸ್ (new rules) ಅನ್ನು ಪರಿಚಯಿಸಿದೆ. ಅದರ ಕೆಲವು ಪ್ರಮುಖ ಅಂಶಗಳು ಹೀಗಿವೆ ನೋಡಿ.
ಈ ಸುದ್ದಿ ಓದಿ:- 2024 ರಲ್ಲಿ ಮನೆ ಕಟ್ಟಲು ಎಷ್ಟು ಹಣ ಬೇಕಾಗುತ್ತೆ.! ಯಾವುದಕ್ಕೆ ಎಷ್ಟು ಖರ್ಚಾಗುತ್ತೆ, ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
* UPI ನಲ್ಲಿ ಹಣ ಪಾವತಿಗೆ ಮಿತಿ ಇತ್ತು ಈಗ ಈ ಮಿತಿಯನ್ನು ಆಸ್ಪತ್ರೆಗಳು (Hospitals)ಮತ್ತು ಶಿಕ್ಷಣ ಸಂಸ್ಥೆಗಳಿಗೆ(education institute) ಹೆಚ್ಚಿಸಲಾಗಿದೆ. ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಬಂಧಿತ ಪಾವತಿಗಳ ವಹಿವಾಟಿನ ಮಿತಿಯನ್ನು ದಿನಕ್ಕೆ 5 ಲಕ್ಷಕ್ಕೆ ಹೆಚ್ಚಿಸಲಾಗಿದೆ.
* UPI ಬಳಕೆದಾರರು ಈಗ ಪೂರ್ವ ಅನುಮೋದಿತ ಕ್ರೆಡಿಟ್ ಲೈನ್ನ (Credit line)ಪ್ರಯೋಜನವನ್ನು ಪಡೆಯಲು ಪ್ರಾರಂಭಿಸಿದ್ದಾರೆ. ಅಂದರೆ ಬ್ಯಾಂಕ್ ಖಾತೆಯಲ್ಲಿ (Bank account) ಹಣ ಇಲ್ಲದಿದ್ದರೂ ಪಾವತಿ (Payment) ಮಾಡಲು ಸಾಧ್ಯವಾಗುತ್ತದೆ. ಪೂರ್ವ ಅನುಮೋದಿತ ಕ್ರೆಡಿಟ್ ಲೈನ್ ವ್ಯಕ್ತಿಗಳು(Credit line persons) ಮತ್ತು ವ್ಯವಹಾರಗಳಿಗೆ ಸಾಲದ (Bussiness loan) ಲಭ್ಯತೆಯನ್ನು ತರುತ್ತದೆ, ಇದರಿಂದಾಗಿ ದೇಶದ ಆರ್ಥಿಕತೆ ಉತ್ತಮಗೊಳ್ಳುತ್ತಿದೆ.
ಈ ಸುದ್ದಿ ಓದಿ:- ಚೆಕ್ ಬೌನ್ಸ್ ಪ್ರಕರಣಗಳ ಮೇಲೆ ಭಯ ಬೇಡ.! ಈ ಸಮಸ್ಯೆಗೆ ಸುಲಭ ಪರಿಹಾರ ಇಲ್ಲಿದೆ ನೋಡಿ.!
* NPCI ಪ್ರಸ್ತುತ ತನ್ನ ಬೀಟಾ ಹಂತದಲ್ಲಿರುವ UPI ಫಾರ್ ದಿ ಸೆಕೆಂಡರಿ ಮಾರ್ಕೆಟ್ (UPI for the secondary market) ಎನ್ನುವ ಆಪ್ಷನ್ ಪರಿಚಯಿಸಿದೆ. ವ್ಯಾಪಾರ ದೃಢೀಕರಣದ ನಂತರ ಹಣವನ್ನು ನಿರ್ಬಂಧಿಸಲು ಮತ್ತು ಅವುಗಳನ್ನು ಕ್ಲಿಯರಿಂಗ್ ಕಾರ್ಪೊರೇಷನ್ಗೆ (Clearing corporation) ಕಳುಹಿಸಲು ಸೀಮಿತ ಸಂಖ್ಯೆಯ ಗ್ರಾಹಕರಿಗೆ ಈ ಅವಕಾಶ ನೀಡುತ್ತದೆ. ಮಾಧ್ಯಮವು T1 ಆಧಾರದ ಮೇಲೆ ಪಾವತಿಗಳ (T1 based payments) ಇತ್ಯರ್ಥವನ್ನು ಅನುಮತಿಸುತ್ತದೆ.
* ಭೌತಿಕವಾದ ATM ಕಾರ್ಡ್ ಗಳು ಇಲ್ಲದೆ ಇದ್ದರೂ ಕೂಡ UPI ಆಧಾರಿತ ಆಪ್ ಗಳಿಂದ QR ಕೋಡ್ ಗಳನ್ನು ಸ್ಕ್ಯಾನ್ ಮಾಡಿ ಹಣ ವಿತ್ ಡ್ರಾ ಮಾಡಬಹುದು.
* ನಾಲ್ಕು ಗಂಟೆಗಳ ಕೂಲಿಂಗ್ ಅವಧಿಯನ್ನು ಮೊದಲ ಬಾರಿಗೆ ಪಾವತಿ ಮಾಡುವ ಗ್ರಾಹಕರಿಗೆ ನೀಡಲಾಗುತ್ತಿದೆ.
ಈ ಸುದ್ದಿ ಓದಿ:- ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ವತಿಯಿಂದ ಸುಜ್ಞಾನನಿಧಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ.!
RBI ಹೊಸ ಬಳಕೆದಾರರಿಗೆ ಅನಾನುಕೂಲತೆಯಾಗದಿರಲಿ ಎಂದು ರೂ. 2,000 ಕ್ಕಿಂತ ಹೆಚ್ಚು ಮೊತ್ತ ಮೊದಲ ಪಾವತಿಯನ್ನು ಮಾಡುವ ನಾಲ್ಕು ಗಂಟೆಗಳ ಕೂಲಿಂಗ್ ಅವಧಿಯನ್ನು (4hrs cooling durations) ಪ್ರಸ್ತಾಪಿಸಿದೆ, ಒಂದು ವೇಳೆ ಪಾವತಿ ಮಾಡುವ ಸಮಯದಲ್ಲಿ ಸಮಸ್ಯೆಗಳಾಗಿದ್ದರೆ ನಾಲ್ಕು ಗಂಟೆ ಕೂಲಿಂಗ್ ಅವಧಿ ಒಳಗೆ ವಹಿವಾಟನ್ನು ಹಿಂತಿರುಗಿಸಲು (time limited payments returns) ಅಥವಾ ಮಾರ್ಪಡಿಸಲು ಅವಕಾಶ ನೀಡುತ್ತಿದೆ.