ದುಡಿಯುವ ವಯಸ್ಸಿನಿಂದಲೇ ನಿವೃತ್ತಿ ಜೀವನದ ಬಗ್ಗೆ ಚಿಂತೆ ಮಾಡಬೇಕು ಯಾಕೆಂದರೆ ವಯಸ್ಸಾದ ಮೇಲೆ ಕೂಡ ಹಣದ ಅವಶ್ಯಕತೆ ಇರುತ್ತದೆ ಆದರೆ ದುಡಿಯಲು ಕೆಲಸ ಹಾಗೂ ಶಕ್ತಿ ಇರುವುದಿಲ್ಲ ಆ ಸಮಯದಲ್ಲಿ ಇನ್ನೊಬ್ಬರ ಮೇಲೆ ಅವಲಂಬಿತವಾಗುವ ಬದಲು ಚಿಕ್ಕದಾದ ಹೂಡಿಕೆಯಲ್ಲಿ (Money Invest) ಹಣ ಉಳಿಸಿದ್ದರೆ ವಯಸ್ಸಾದ ಕಾಲಕ್ಕೆ ಅದು ನೆರವಿಗೆ ಬರುತ್ತದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ (PM Narendra M) 2015 ಜೂನ್ 1ರಲ್ಲಿ ಅಟಲ್ ಪೆನ್ಷನ್ ಯೋಜನೆಯನ್ನು (Atal Pension Scheme) ಜಾರಿಗೆ ತಂದರು. ಈ ಯೋಜನೆ ಕುರಿತು ಕೆಲ ಪ್ರಮುಖ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಅಟಲ್ ಪೆನ್ಷನ್ ಯೋಜನೆಯ ಪ್ರಮುಖ ಅಂಶಗಳು:-
● ಭಾರತದ ನಾಗರಿಕರು ಮಾತ್ರ ಈ ಯೋಜನೆ ಪ್ರಯೋಜನ ಪಡೆಯಬಹುದು.
● 18 ರಿಂದ 40 ವರ್ಷಗಳ ನಡುವಿನ ವಯಸ್ಸಿನವರು ಮಾತ್ರ ಅರ್ಹರು.
● ಯೋಜನೆಯಡಿ ಫಲಾನುಭವಿಗಳ ವಯಸ್ಸು 60 ವರ್ಷ ಪೂರ್ಣಗೊಂಡ ನಂತರ ಪ್ರತಿ ತಿಂಗಳು 1,000 ರೂ.ನಿಂದ 5,000 ರೂ.ವರೆಗೆ ಪಿಂಚಣಿ ಪಡೆಯಬಹುದು.
● ಅಟಲ್ ಪಿಂಚಣಿ ಯೋಜನೆಯ ಪ್ರಯೋಜನಗಳನ್ನು ಪಡೆಯಲು ನೀವು ಬ್ಯಾಂಕ್ ಖಾತೆ ಅಥವಾ ಪೋಸ್ಟ್ ಆಫೀಸ್ ಖಾತೆಯನ್ನು (Bank or post office Saving account) ಹೊಂದಿರಬೇಕು. ಈ ಬ್ಯಾಂಕ್ ಖಾತೆಯನ್ನು ನಿಮ್ಮ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ (Aadhar link) ಮಾಡಬೇಕು. ಮಾನ್ಯವಾದ ಮೊಬೈಲ್ ಸಂಖ್ಯೆಯನ್ನು (Mobile num.) ಹೊಂದಿರಬೇಕು.
● ಅಟಲ್ ಪೆನ್ಷನ್ ಯೋಜನೆ ಪ್ರೀಮಿಯಂ (premium auto debit from account) ಮೊತ್ತವನ್ನು ನಿಮ್ಮ ಬ್ಯಾಂಕ್ ಖಾತೆಯಿಂದ ಕಡಿತಗೊಳಿಸಲಾಗುತ್ತದೆ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಇದರ ಕುರಿತಾಗಿ SMS ಸಂದೇಶ ಕೂಡ ಬರುತ್ತದೆ.
● ಮಾಸಿಕ, ತ್ರೈಮಾಸಿಕ ಅಥವಾ ಅರ್ಧ ವಾರ್ಷಿಕವಾಗಿ ಪ್ರೀಮಿಯಂಗಳನ್ನು ಪಾವತಿಸಲು ಆಯ್ಕೆ ಪಡೆಯಬಹುದು.
● ಆದಾಯ ತೆರಿಗೆಯ ಸೆಕ್ಷನ್ 80CCD ನಡಿ ತೆರಿಗೆ ವಿನಾಯಿತಿಯ (tax relaxation) ಸಹ ಸಿಗಲಿದೆ.
● ಒಬ್ಬ ಸದಸ್ಯರ ಹೆಸರಿನಲ್ಲಿ ಕೇವಲ 1 ಖಾತೆಯನ್ನು ತೆರೆಯಲು ಅವಕಾಶ.
● ಸದಸ್ಯನು 60 ವರ್ಷಗಳ ಮೊದಲು ಅಥವಾ ನಂತರ ಮ’ರ’ಣ ಹೊಂದಿದರೆ ಪಿಂಚಣಿ ಮೊತ್ತವನ್ನು ಹೆಂಡತಿಗೆ, ಇಬ್ಬರೂ ಮೃ’ತ ಪಟ್ಟರೆ ನಾಮಿನಿಗೆ (Nominee) ನೀಡಲಾಗುತ್ತದೆ.
● ಕಡಿಮೆ ವಯಸ್ಸಿನಲ್ಲಿ ಹೂಡಿಕೆ ಆರಂಭ ಮಾಡುವುದರಿಂದ ಹೆಚ್ಚು ಲಾಭವನ್ನು ಪಡೆಯಬಹುದು. ಅಸಂಘಟಿತ ವಲಯದಲ್ಲಿ ದುಡಿಯುವವರಿಗೆ ಇದು ಒಂದು ಭದ್ರತೆಯಂತಿರುತ್ತದೆ.
● 18ನೇ ವಯಸ್ಸಿನಲ್ಲಿ ನೀವು ಪ್ರತಿ ತಿಂಗಳು 210 ರೂಪಾಯಿಗಳನ್ನು ಪಾವತಿ ಮಾಡಲು ಆರಂಭಿಸಿದರೆ ಗರಿಷ್ಠ 5000 ರೂಪಾಯಿಯನ್ನು ಮಾಸಿಕ ಪಿಂಚಣಿ ಪಡೆಯಬಹುದು.
● ನೀವು 35 ನೇ ವಯಸ್ಸಿನಲ್ಲಿ ಯೋಜನೆ ಆರಂಭಿಸಿ 5,000 ಗರಿಷ್ಠ ಪಿಂಚಣಿ ಆಯ್ಕೆ ಮಾಡಿದರೆ 25 ವರ್ಷಗಳವರೆಗೆ ನೀವು ಪ್ರತಿ 6 ತಿಂಗಳಿಗೊಮ್ಮೆ 5,323 ರೂ. ಪ್ರೀಮಿಯಂ ಪಾವತಿಸಬೇಕು.
● ನೀವು ತಿಂಗಳಿಗೆ 1,000 ರೂಪಾಯಿ ಪಿಂಚಣಿ ಪಡೆಯಲು ಯೋಜನೆಯನ್ನು ಖರೀದಿಸಿದರೆ 18 ನೇ ವಯಸ್ಸಿನಿಂದ ಹೂಡಿಕೆ ಆರಂಭ ಮಾಡಿದರೆ, ಪ್ರತಿ ತಿಂಗಳಿಗೆ 42 ರೂಪಾಯಿಯನ್ನು ಪಾವತಿಸಬೇಕು.
● ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್‌ಗಳು ಅಟಲ್ ಪೆನ್ಷನ್ ಯೋಜನೆಯ ಸೌಲಭ್ಯ ಒದಗಿಸುತ್ತವೆ. ನಿಮ್ಮ APY ಖಾತೆಯನ್ನು ಪ್ರಾರಂಭಿಸಲು ಹತ್ತಿರದ ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡಬಹುದು, ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಆನ್ಲೈನ್ ನಲ್ಲೂ ಕೂಡ ಯೋಜನೆಗೆ ನೋಂದಣಿಯಾಗಬಹುದು.
● ಅಂಕಿ ಅಂಶಗಳ ಮಾಹಿತಿ ಪ್ರಕಾರ ಈವರೆಗೆ ಅಟಲ್ ಪೆನ್ಷನ್ ಯೋಜನೆಗೆ ಚಂದಾದಾರರಾಗಿರುವ ಒಟ್ಟು ಜನರ ಸಂಖ್ಯೆ 4.01 ಕೋಟಿಯಾಗಿದೆ. ಯೋಜನೆ ಕುರಿತು ಹೆಚ್ಚಿನ ಮಾಹಿತಿಗಾಗಿ ಹತ್ತಿರದಲ್ಲಿರುವ ಬ್ಯಾಂಕ್ ಶಾಖೆಯಲ್ಲಿ ವಿಚಾರಿಸಿ ಅಥವಾ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಡಿ.